ಕೃಷಿ ಸಚಿವಾಲಯ

ವೀಡಿಯೊ ಕಾನ್ಫರೆನ್ಸ್ ಮೂಲಕ 2020 ರ ಖಾರಿಫ್ ಬೆಳೆಗಳ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರ ಕೃಷಿ ಸಚಿವರು

Posted On: 16 APR 2020 3:26PM by PIB Bengaluru

ವೀಡಿಯೊ ಕಾನ್ಫರೆನ್ಸ್ ಮೂಲಕ 2020 ರ ಖಾರಿಫ್ ಬೆಳೆಗಳ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರ ಕೃಷಿ ಸಚಿವರು

ಖಾರಿಫ್ ಗುರಿಯನ್ನು ಸಾಧಿಸಲು ಮತ್ತು ರೈತರ ಆದಾಯವನ್ನು ಮಿಷನ್ ರೀತಿಯಲ್ಲಿ ದ್ವಿಗುಣಗೊಳಿಸುವ ಉದ್ದೇಶವನ್ನು ರಾಜ್ಯಗಳು ಹೊಂದಿರಬೇಕು: ಶ್ರೀ ನರೇಂದ್ರ ಸಿಂಗ್ ತೋಮರ್

2020-21ನೇ ಸಾಲಿನ ಆಹಾರ ಧಾನ್ಯಗಳ ಉತ್ಪಾದನಾ ಗುರಿಯನ್ನು 298.0 ಮಿಲಿಯನ್ ಟನ್‌ಗಳಿಗೆ ನಿಗದಿಪಡಿಸಲಾಗಿದೆ

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಮಗಳು, ಬಡವರು ಮತ್ತು ರೈತರುತೊಂದರೆ ಅನುಭವಿಸದಂತೆ ಪ್ರಧಾನಮಂತ್ರಿಗಳು ಖಚಿತಪಡಿಸಿದ್ದಾರೆ”: ಶ್ರೀ ತೋಮರ್

 

ಎಲ್ಲಾ ರಾಜ್ಯಗಳು ಖಾರಿಫ್ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವುದನ್ನು ಮಿಷನ್ ರೀತಿಯಲ್ಲಿ  ತೆಗೆದುಕೊಳ್ಳಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ವೀಡಿಯೊ ಸಮಾವೇಶದ ಮೂಲಕ ಖಾರಿಫ್ ಬೆಳೆಗಳ 2020 ರ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳು ಎದುರಿಸುತ್ತಿರುವ ಯಾವುದೇ ಅಡೆತಡೆಗಳನ್ನು ಭಾರತ ಸರ್ಕಾರ ತೊಡೆದುಹಾಕುತ್ತದೆ ಎಂದು ರಾಜ್ಯಗಳಿಗೆ ಭರವಸೆ ನೀಡಿದರು.

ಲಾಕ್ ಡೌನ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖಾರಿಫ್ ಕೃಷಿಗೆ ಸನ್ನದ್ಧತೆಯ ಬಗ್ಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವುದು ಮತ್ತು ರಾಜ್ಯಗಳೊಂದಿಗೆ ಸಮಾಲೋಚಿಸುವ ಹಂತಗಳನ್ನು ಪಟ್ಟಿ ಮಾಡುವುದು ರಾಷ್ಟ್ರೀಯ ಖಾರಿಫ್ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು.

ಕೊರೊನಾವೈರಸ್‌ನಿಂದ ಉಂಟಾಗುವ ಅಸಾಧಾರಣ ಪರಿಸ್ಥಿತಿಯನ್ನು ಕೃಷಿ ವಲಯವು ಹೋರಾಟದ ಮನೋಭಾವದಿಂದ ಎದುರಿಸಬೇಕಾಗಿದೆ ಮತ್ತು ಪ್ರತಿಯೊಬ್ಬರೂ ಈ ಸಂದರ್ಭಕ್ಕನುಸಾರವಾಗಿ ಕೆಲಸ ಮಾಡಬೇಕಾಗಿದೆ ಎಂದು ಶ್ರೀ ತೋಮರ್ ಹೇಳಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಮಗಳು ಬಡವರು ಮತ್ತು ರೈತರುತೊಂದರೆ ಅನುಭವಿಸದಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಖಚಿತಪಡಿಸಿದ್ದಾರೆ ಎಂದು ಅವರು ಹೇಳಿದರು. ಪಿಎಂ ಫಸಲ್ ಬೀಮಾ ಯೋಜನೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಎಂಬ ಎರಡು ಯೋಜನೆಗಳನ್ನು ಪ್ರತಿ ರೈತರಿಗೂ ವಿವರಿಸಬೇಕು ಎಂದು ಶ್ರೀ ತೋಮರ್ ರಾಜ್ಯಗಳನ್ನು ಒತ್ತಾಯಿಸಿದರು.

 

ಲಾಕ್ ಡೌನ್ ನಿಂದಾಗಿ ಕೃಷಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಖಿಲ ಭಾರತ ಕೃಷಿ ಸಾರಿಗೆ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ರಾಜ್ಯಗಳಿಗೆ ಮಾಹಿತಿ ನೀಡಿದರು. ಇ-ನಾಮ್ ಅನ್ನು ವ್ಯಾಪಕವಾಗಿ ಬಳಸುವಂತೆ ಕೇಳಿಕೊಂಡರು. ಸಾಮಾಜಿಕ ಅಂತರ ಮತ್ತು ಸಾಮಾಜಿಕ ಜವಾಬ್ದಾರಿ ಮಾನದಂಡಗಳನ್ನು ಖಾತರಿಪಡಿಸಿಕೊಂಡು  ಕೃಷಿ ಕ್ಷೇತ್ರಕ್ಕೆ ಕೇಂದ್ರ ಗೃಹ ಸಚಿವಾಲಯದ ವಿನಾಯಿತಿ ಮತ್ತು  ಪರಿಹಾರಗಳನ್ನು ಜಾರಿಗೆ ತರಲು ಶ್ರೀ ತೋಮರ್ ರಾಜ್ಯಗಳಿಗೆ ಕರೆ ನೀಡಿದರು.

2020-21ನೇ ಸಾಲಿನ ಆಹಾರ ಧಾನ್ಯಗಳ ಉತ್ಪಾದನೆಯ ಗುರಿಯನ್ನು 298.0 ದಶಲಕ್ಷ ಟನ್‌ಗಳಿಗೆ ನಿಗದಿಪಡಿಸಲಾಗಿದೆ. 2019-20ನೇ ಹಣಕಾಸು ವರ್ಷದಲ್ಲಿ, ಮುಖ್ಯವಾಗಿ ಪ್ರದೇಶದ ವ್ಯಾಪ್ತಿ ಹೆಚ್ಚಳ ಮತ್ತು ವಿವಿಧ ಬೆಳೆಗಳ ಉತ್ಪಾದಕತೆಯಿಂದಾಗಿ. ಆಹಾರ ಧಾನ್ಯ ಉತ್ಪಾದನಾ ಗುರಿಯಾದ 291.10 ದಶಲಕ್ಷ ಟನ್‌ಗಳ  ಬದಲು ಸುಮಾರು 292 ದಶಲಕ್ಷ ಟನ್‌ಗಳಷ್ಟು ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ,

ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕೃಷಿ ಸಚಿವ ಶ್ರೀ ಪರ್ಶೋತ್ತಂ ರೂಪಾಲಾ, ಪ್ರಧಾನಿ ಫಸಲ್ ಬೀಮಾ ಯೋಜನೆಯ ಪ್ರಯೋಜನಗಳನ್ನು ರೈತರಿಗೆ ವಿವರಿಸಬೇಕು. ನಮ್ಮ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವು ಅನೇಕ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಅಂಶವಾಗಿದೆ ಎಂದು ಶ್ರೀ ರೂಪಾಲ ಹೇಳಿದರು. ಕಳೆದ ವರ್ಷ (2018-19) ದಾಖಲೆಯ ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೊಂದಿದ್ದಲ್ಲದೆ, ದೇಶವು ಸುಮಾರು 25.49 ದಶಲಕ್ಷ ಹೆಕ್ಟೇರ್ ಪ್ರದೇಶದಿಂದ ಸುಮಾರು 313.85 ಮಿಲಿಯನ್ ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಿದೆ, ಇದು ಒಟ್ಟು ವಿಶ್ವದ ಹಣ್ಣುಗಳ ಉತ್ಪಾದನೆಯ ಸುಮಾರು 13 ಪ್ರತಿಶತದಷ್ಟಿದೆ. ಚೀನಾದ ನಂತರ ಭಾರತವು ತರಕಾರಿಗಳನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ರಾಜ್ಯ ಸಚಿವ (ಕೃಷಿ) ರಾದ  ಶ್ರೀ ಕೈಲಾಶ್ ಚೌಧರಿ ತಮ್ಮ ಭಾಷಣದಲ್ಲಿ, ಪ್ರಸ್ತುತ ಹವಾಮಾನ ವೈಪರೀತ್ಯದ ಜೊತೆಗೆ ಮಳೆ ಸುರಿಯುವಿಕೆಯ ಬದಲಾವಣೆಯೊಂದಿಗೆ, 2018-19ರಲ್ಲಿ ದಾಖಲೆಯ ಆಹಾರ ಧಾನ್ಯಗಳ  ಉತ್ಪಾದನೆಯು ಸುಮಾರು 285 ದಶಲಕ್ಷ ಟನ್ ಆಗಿದ್ದು 2019-20ರ ಅವಧಿಯಲ್ಲಿ ಟನ್ ಇದು ಇನ್ನೂ 292 ದಶಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯು ಗಮನಾರ್ಹವಾಗಿದೆ. ವೈವಿಧ್ಯಮಯ ಸುಧಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮರ್ಪಿತ ಮತ್ತು ಸಂಘಟಿತ ಪ್ರಯತ್ನಗಳು ಸೇರಿದಂತೆ ವಿವಿಧ ತಾಂತ್ರಿಕ ಪ್ರಗತಿಯಿಂದಾಗಿ ಇವೆಲ್ಲವೂ ಸಾಧ್ಯವಾಯಿತು ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಆಹಾರದಲ್ಲಿ ಹೆಚ್ಚುವರಿ ಆಗಿದ್ದರೂ, ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಚುರುಕುಗೊಳಿಸಬೇಕಾಗಿದೆ ಎಂದು ಕೃಷಿ ಕಾರ್ಯದರ್ಶಿ ಗಳಾದ (ಸಹಕಾರ ಮತ್ತು ರೈತ ಕಲ್ಯಾಣ) (ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ) ಶ್ರೀ ಸಂಜಯ್ ಅಗರ್‌ವಾಲ್ ಹೇಳಿದರು.  ಗ್ರಾಮೀಣ ಪ್ರದೇಶಗಳಲ್ಲಿ. ಬೆಳೆಗಳ ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಚಿವಾಲಯ ಕೈಗೊಂಡ ಪ್ರಮುಖ ಹೊಸ ಉಪಕ್ರಮಗಳ ಬಗ್ಗೆ ಅವರು ಭಾಗವಹಿಸಿದವರಿಗೆ ತಿಳಿಸಿದರು.  ಪ್ರಮುಖ ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ (ನೀರಾವರಿ) ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಪರ್ ಡ್ರಾಪ್ ಮೋರ್ ಕ್ರಾಪ್ ಪ್ರತಿ ಹನಿಗೆ ಹೆಚ್ಚು ಬೆಳೆಘೋಷವಾಕ್ಯದಂತೆ ಹನಿ ಮತ್ತು ಸಿಂಪಡಿಸುವ ನೀರಾವರಿ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ನೀರು ಮತ್ತು ರಸಗೊಬ್ಬರ ಬಳಕೆಯ ದಕ್ಷತೆಯನ್ನು ಸುಧಾರಿಸುವುದು, ಪರಂಪರಾಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ), ಪರಿಷ್ಕೃತ ರೈತ ಸ್ನೇಹಿ ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ)”, ರೈತರಿಗೆ ಎಲೆಕ್ಟ್ರಾನಿಕ್ ಆನ್‌ಲೈನ್ ವ್ಯಾಪಾರ ವೇದಿಕೆಯನ್ನು ಒದಗಿಸುವ ಇ-ನಾಮ್ ಉಪಕ್ರಮ, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ( ಪಿಎಂ-ಕಿಸಾನ್) ಯೋಜನೆ, ಪ್ರಧಾನ್ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ (ಪಿಎಂ-ಕೆಪಿವೈ) ಯ ಕೇಂದ್ರ ವಲಯ ಯೋಜನೆ ಪರಿಚಯ, ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತು ಬೆಳೆಗಳಿಗೆ ರೈತರಿಗೆ ಎಂಎಸ್‌ಪಿ ಖಾತ್ರಿಪಡಿಸಿಕೊಳ್ಳಲು ಪಿಎಂ-ಆಶಾ ಯೋಜನೆಯನ್ನು ಪ್ರಾರಂಭಿಸುವುದು ಮತ್ತು ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ.ಕೃಷಿ ನಿರ್ವಹಣೆಗೆ ಸಲಹಾ / ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನೇರ ಮಾರುಕಟ್ಟೆಗಾಗಿ ವಿವಿಧ ನಿಬಂಧನೆಗಳ ಜೊತೆಗೆ ಉತ್ಪಾದನಾ ವೆಚ್ಚದ ಕನಿಷ್ಠ 2 ಪಟ್ಟು ಬೆಲೆಯಿಂದ ರೈತರಿಗೆ ಉತ್ತಮ ಆರ್ಥಿಕ ಲಾಭವನ್ನು ಖಾತ್ರಿಪಡಿಸಿಕೊಳ್ಳಲು  ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವುದು ಎಂದು ಎಲ್ಲಾ ಉಪಕ್ರಮಗಳ ಬಗ್ಗೆ ತಿಳಿಸಿದರು.

ವಿಶೇಷವಾಗಿ ಸಾಂಕ್ರಾಮಿಕ ಲಾಕ್ ಡೌನ್ ಸಮಯದಲ್ಲಿ ಖಾರಿಫ್ ಋತುವಿನಲ್ಲಿ ಬೆಳೆ ನಿರ್ವಹಣೆಯ ಕಾರ್ಯತಂತ್ರಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡುತ್ತಾ ಕೃಷಿ ಆಯುಕ್ತ ಡಾ.ಎಸ್. ಕೆ. ಮಲ್ಹೋತ್ರಾ ರವರು ಕೃಷಿ ಮಾಡಬಹುದಾದ/ ಕೃಷಿ ಭೂಮಿಯು ಕಳೆದ ಎರಡು ದಶಕಗಳಲ್ಲಿ (1988-89 ರಿಂದ 2018-19) ಸುಮಾರು 2.74 ಮಿಲಿಯನ್ ಹೆಕ್ಟೇರ್ ಕಡಿಮೆಯಾಗಿದೆ. ಆದಾಗ್ಯೂ, ಅದೇ ಅವಧಿಯಲ್ಲಿ ಒಟ್ಟು ಬೆಳೆದ ಪ್ರದೇಶವು 182.28 ದಶಲಕ್ಷ ಹೆಕ್ಟೇರ್‌ನಿಂದ 196.50 ದಶಲಕ್ಷ ಹೆಕ್ಟೇರ್‌ಗೆ ಏರಿದೆ, ನಿವ್ವಳ ವಿಸ್ತೀರ್ಣವು 140 ದಶಲಕ್ಷ ಹೆಕ್ಟೇರ್‌ನಲ್ಲಿ ಬದಲಾಗದೆ ಉಳಿದಿದೆ. ವಿವಿಧ ತಾಂತ್ರಿಕ ಮತ್ತು ನೀತಿ ಮಧ್ಯಸ್ಥಿಕೆಗಳಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯು ಇದೇ ಅವಧಿಯಲ್ಲಿ 169.92 ದಶಲಕ್ಷ ಟನ್‌ಗಳಿಂದ 284.96 ದಶಲಕ್ಷ ಟನ್‌ಗಳಿಗೆ ಏರಿದೆ ಎಂದು ಅವರು ಉಲ್ಲೇಖಿಸಿದರು.

ರಬಿ ಬೆಳೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ರಾಜ್ಯಗಳು ಗ್ರಾಮ / ಬ್ಲಾಕ್ ಮಟ್ಟದಲ್ಲಿ ಪಡೆಯವುದನ್ನು ಖಾತ್ರಿಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಏಕೆಂದರೆ ರೈತರಿಗೆ ಲಾಕ್ ಡೌನ್ ಕಾರಣದಿಂದಾಗಿ ಬ್ಲಾಕ್ ನಿಂದ ಹೊರಬರಲು ಅವಕಾಶವಿಲ್ಲ. ಇದಲ್ಲದೆ, ಎಲ್ಲಾ ರಾಜ್ಯಗಳು ರೈತರಿಂದ ನೇರ ಮಾರುಕಟ್ಟೆ / ಬೆಳೆ ಉತ್ಪನ್ನಗಳನ್ನು ಖರೀದಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಎಲ್ಲಾ ರಾಜ್ಯಗಳಿಗೆ ಸಲಹಾ/ ಮಾರ್ಗಸೂಚಿಗಳನ್ನು ನೀಡಲಾಗಿದೆ ಮತ್ತು ದೇಶಾದ್ಯಂತ ಗ್ರಾಮ/ ಬ್ಲಾಕ್ ಮಟ್ಟಗಳಲ್ಲಿ ಕೃಷಿ ಸಂಬಂಧಿತ ವಸ್ತುಗಳು ಸಮಯೋಚಿತವಾಗಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಬೀಜಗಳು ಮತ್ತು ರಸಗೊಬ್ಬರಗಳನ್ನು ತುಂಬಿದ ಟ್ರಕ್‌ಗಳು/ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರೈತರಿಗೆ ಎಲೆಕ್ಟ್ರಾನಿಕ್ ಆನ್‌ಲೈನ್ ವ್ಯಾಪಾರ ವೇದಿಕೆ ಮತ್ತು ರೈತರಿಗೆ ಉತ್ತಮ ಆರ್ಥಿಕ ಲಾಭವನ್ನು ಒದಗಿಸಲು ಸರ್ಕಾರ ಇ-ನಾಮ್ ವ್ಯವಸ್ಥೆಯನ್ನು ಬಲಪಡಿಸಿದೆ.

ಕಳೆದ ದಶಕಗಳಲ್ಲಿ ಹಲವಾರು ಪ್ರಯತ್ನಗಳ ಹೊರತಾಗಿಯೂ, ಹೆಚ್ಚಿನ ಕೃಷಿ ಪ್ರದೇಶವು ಇನ್ನೂ ಮಳೆಗಾಲವನ್ನು ಅವಲಂಬಿಸಿದೆ ಮತ್ತು ಮಳೆಗಾಲದ ವೈಫಲ್ಯದ ಸಂದರ್ಭದಲ್ಲಿ, ರೈತರು ತಮ್ಮ ಬೆಳೆಗಳ ಉಳಿವಿಗಾಗಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ ಯೋಜನೆ” (ಪಿಎಂಕೆಎಸ್‌ವೈ) ಯನ್ನು ನೀರಿನ ವ್ಯರ್ಥವನ್ನು ಕಡಿಮೆ ಮಾಡಲು ಕೃಷಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಿಲು, ನಿಖರತೆಯ ನೀರಾವರಿ ಅಳವಡಿಕೆ ಮತ್ತು ಇತರ ನೀರು ಉಳಿಸುವ ತಂತ್ರಜ್ಞಾನಗಳಿಂದ ಮತ್ತು ಕೃಷಿ ಪ್ರದೇಶವನ್ನು ಖಚಿತ ನೀರಾವರಿ ಅಡಿಯಲ್ಲಿ ವಿಸ್ತರಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ,

ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಮಿಷನ್ (ಎನ್‌ಎಫ್ ಮತ್ತು ಎನ್‌ಎಸ್‌ಎಂ) ನ  ಪೂರ್ವ ಯೋಜನೆ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಕ್ರಿಯಾ ಯೋಜನೆ (ಎಸ್‌ಎಪಿ) ಯ ಸ್ವರೂಪವನ್ನು ಸರಳೀಕರಿಸಲಾಗಿದೆ ಮತ್ತು ಸುಮಾರು ಒಂದು ಪುಟಕ್ಕೆ ಇಳಿಸಲಾಗಿದೆ, ಇದರಿಂದಾಗಿ ರಾಜ್ಯಗಳು ಎಸ್‌ಎಪಿಗಳನ್ನು ಸಿದ್ಧಪಡಿಸಬಹುದು ಮತ್ತು ನಂತರ ಭಾರತ ಸರ್ಕಾರಕ್ಕೆ ಸಲ್ಲಿಸಬಹುದು ಕನಿಷ್ಠ ಪ್ರಯತ್ನಗಳೊಂದಿಗೆ ಸಮರ್ಥ ಪ್ರಾಧಿಕಾರದ ಅನುಮೋದನೆ. ಎನ್ಎಫ್ ಮತ್ತು ಎನ್ಎಸ್ಎಂ ಮುಖ್ಯವಾಗಿ ಆಹಾರ ಧಾನ್ಯಗಳ ಉತ್ಪಾದನೆಗೆ ಅವಶ್ಯಕವಾಗಿದೆ ಮತ್ತು ಇದನ್ನು ದೇಶಾದ್ಯಂತ ರಾಜ್ಯ ಕೃಷಿ ಇಲಾಖೆಗಳ ಮೂಲಕ ಯೋಜಿತ ಕ್ರಮದಲ್ಲಿ ಜಾರಿಗೆ ತರಲಾಗುತ್ತದೆ.

ಎಸ್ ಎ ಪಿ ಗಳನ್ನು ಸ್ವೀಕರಿಸಿದ ನಂತರ, ಅದನ್ನು ಒಂದು ವಾರದ ಸಮಯದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅನುಷ್ಠಾನಗೊಳಿಸುವ ವಿಭಾಗಗಳಿಗೆ ಅನುಮೋದನೆಯನ್ನು ತಿಳಿಸಲಾಗುತ್ತದೆ.  ಪ್ರಾಜೆಕ್ಟ್ ಮಾನಿಟರಿಂಗ್ ತಂಡವು ಎಸ್‌ಎಪಿಗಳನ್ನು ರೂಪಿಸುವಲ್ಲಿ ಮಾರ್ಗದರ್ಶನ ಮಾಡಲು ಮತ್ತು ಕ್ಷೇತ್ರ ಭೇಟಿ ಮತ್ತು ರೈತರ ಸಂವಹನದ ಮೂಲಕ ಮೇಲ್ವಿಚಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಸ್ತಿತ್ವದಲ್ಲಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಚಟುವಟಿಕೆಗಳ ಜಿಯೋ-ಟ್ಯಾಗಿಂಗ್ ಅನ್ನು ಸಹ ಕೈಗೊಳ್ಳಲಾಗುತ್ತದೆ.

ವಿಶೇಷ ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿ (ಕೃಷಿ) ಮತ್ತು ಡಿಎಸಿ ಮತ್ತು ಎಫ್‌ಡಬ್ಲ್ಯೂ, ಐಸಿಎಆರ್‌ನ ಹಿರಿಯ ಅಧಿಕಾರಿಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೃಷಿ ಕ್ಷೇತ್ರಗಳಲ್ಲಿ ಖಾರಿಫ್ ಋತುವಿನಲ್ಲಿ ಪ್ರದೇಶ ವ್ಯಾಪ್ತಿ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಆಯಾ ರಾಜ್ಯಗಳಲ್ಲಿ ಕೈಗೊಳ್ಳಬೇಕಾದ ಸಾಧನೆ, ಸವಾಲುಗಳು ಮತ್ತು ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಕೃಷಿ ಉತ್ಪಾದನಾ ಆಯುಕ್ತರು ಮತ್ತು ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಐದು ಗುಂಪುಗಳಲ್ಲಿ ಸಂವಾದ ಅಧಿವೇಶನವನ್ನು ಆಯೋಜಿಸಲಾಗಿತ್ತು.

***(Release ID: 1615310) Visitor Counter : 375