ಹಣಕಾಸು ಸಚಿವಾಲಯ

ಐಎಂಎಫ್ ನ ಅಂತಾರಾಷ್ಟ್ರೀಯ ಹಣಕಾಸು ಮತ್ತು ಆರ್ಥಿ ಸಮಿತಿ (ಐಎಂಎಫ್ ಸಿ) ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್

Posted On: 16 APR 2020 7:40PM by PIB Bengaluru

ಐಎಂಎಫ್ ಅಂತಾರಾಷ್ಟ್ರೀಯ ಹಣಕಾಸು ಮತ್ತು ಆರ್ಥಿ ಸಮಿತಿ (ಐಎಂಎಫ್ ಸಿ) ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್

 

https://ci6.googleusercontent.com/proxy/dIoisgizsdxC-dR1EqGII-P5wqmegcDfx7_EZpT9-cmxg7c-7HgqYfHfk75B5nXMlfipLG-dnOxchncrOc_3U1rP-Xhn0c0pFZW0d3at4zTOQkpB2P0f=s0-d-e1-ft#https://static.pib.gov.in/WriteReadData/userfiles/image/image001K5VW.jpg

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಾರಾಷ್ಟ್ರೀಯ ಹಣಕಾಸು ನಿಧಿ -ಐಎಂಎಫ್ ಸಚಿವರ ಮಟ್ಟದ ಸಮಿತಿ ಅಂತಾರಾಷ್ಟ್ರೀಯ ಹಣಕಾಸು ಮತ್ತು ಆರ್ಥಿಕ ಸಮಿತಿಯ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ಸಭೆಯಲ್ಲಿ ಅಪರೂಪದ ಸಂದರ್ಭ-ಅಸಾಧಾರಣ ಕ್ರಿಯೆಶೀರ್ಷಿಕೆಯಡಿ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರ ಜಾಗತಿಕ ನೀತಿ ವಿಷಯ ಆಧರಿಸಿದಂತೆ ಸಭೆಯಲ್ಲಿ ಚರ್ಚೆಗಳು ನಡೆದವು. ಐಎಂಎಫ್ ಸಿಯ ಸದಸ್ಯರು ಕೋವಿಡ್-19 ಎದುರಿಸಲು ಸದಸ್ಯ ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳು ಮತ್ತು ಕ್ರಿಯೆಗಳ ಬಗ್ಗೆ ಸಮಿತಿಗೆ ವಿವರ ನೀಡಿದರು ಮತ್ತು ಜಾಗತಿಕ ಮಟ್ಟದಲ್ಲಿ ಎದುರಾಗಿರುವ ನಗದು ಕೊರತೆ ಮತ್ತು ಸದಸ್ಯರ ಹಣಕಾಸು ಅಗತ್ಯತೆಗಳನ್ನು ಎದುರಿಸಲು ಐಎಂಎಫ್ ಬಿಕ್ಕಟ್ಟು ಪ್ರತಿಸ್ಪಂದನಾ ಪ್ಯಾಕೇಜ್ ಕುರಿತಂತೆ ಚರ್ಚಿಸಲಾಯಿತು.

ಸಭೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಶ್ರೀಮತಿ ಸೀತಾರಾಮನ್, ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತ ಕೈಗೊಂಡಿರುವ ಹಲವು ಕ್ರಮಗಳು ಮತ್ತು ಬಿಕ್ಕಟ್ಟಿನಿಂದ ಆಗಿರುವ ಪರಿಣಾಮಗಳನ್ನು ತಗ್ಗಿಸಲು ಕೈಗೊಂಡಿರುವ ಕ್ರಮಗಳ ಚಿತ್ರಣವನ್ನು ನೀಡಿದರು. ನಿಟ್ಟಿನಲ್ಲಿ ಅವರು ಭಾರತ ಸರ್ಕಾರ ಆರೋಗ್ಯ ರಕ್ಷಣಾ ಬಲವರ್ಧನೆಗೆ 2 ಬಿಲಿಯನ್ ಡಾಲರ್(15,000 ಕೋಟಿ ರೂ.) ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸಿದರು. ಅಲ್ಲದೆ ಬಡವರು ಹಾಗೂ ದುರ್ಬಲ ವರ್ಗದವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಮಾಜಿಕ ಬೆಂಬಲ ಕ್ರಮಗಳ ಯೋಜನೆಯಲ್ಲಿ 23 ಬಿಲಿಯನ್ ಡಾಲರ್(1.70 ಲಕ್ಷ ಕೋಟಿ ರೂ.) ಪ್ಯಾಕೇಜ್ ಅನ್ನು ಪ್ರಕಟಿಸಿರುವುದು, ನಿಟ್ಟಿನಲ್ಲಿ ಸಾಂಸ್ಥಿಕ ಮತ್ತು ನಿಯಂತ್ರಣ ಕ್ರಮವನ್ನು ಕೈಗೊಂಡಿರುವುದು, ಆರ್ ಬಿಐನ ಹಣಕಾಸು ನೀತಿ ಸಡಿಲಗೊಳಿಸಿರುವುದು ಮತ್ತು ಸಾಲಗಳ ಮರುಪಾವತಿ ಕಂತಿಗೆ ಮೂರು ತಿಂಗಳು ಮುಂದೂಡಿಕೆಗೆ ಅವಕಾಶ ನೀಡಿರುವ ಕ್ರಮಗಳನ್ನು ವಿವರಿಸಿದರು. ಅಲ್ಲದೆ ಹಣಕಾಸು ಸಚಿವರು ಜಾಗತಿಕ ಸಮುದಾಯದ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಇತರೆ ರಾಷ್ಟ್ರಗಳಿಗೆ ಗಂಭೀರ ಅಗತ್ಯ ಔಷಧಗಳನ್ನು ಒದಗಿಸುವ ಮೂಲಕ ತನ್ನ ಪಾತ್ರವನ್ನು ನಿರ್ವಹಿಸಿದೆ ಎಂದು ಐಎಂಎಫ್ ಸಿಗೆ ವಿವರಿಸಿದರು. ಕೋವಿಡ್-19 ಎದುರಿಸಲು ಸಾರ್ಕ್ ರಾಷ್ಟ್ರಗಳಿಗೆ ನೆರವಾಗಲು ಕೋವಿಡ್-19 ತುರ್ತು ನಿಧಿಯನ್ನು ಸ್ಥಾಪಿಸುವ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾರ್ಕ್ ನಾಯಕರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೈಗೊಂಡಿದ್ದರು ಎಂದು ಅವರು ಉಲ್ಲೇಖಿಸಿದರು.

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಐಎಂಎಫ್ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡುವ ಕುರಿತಂತೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಐಎಂಎಫ್ ಹಣಕಾಸು ವ್ಯವಸ್ಥೆ ಮತ್ತು ಅಂತಾರಾಷ್ಟ್ರೀಯ ಹಣಕಾಸಿನಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಸದಾ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಜಾಗತಿಕ ಹಣಕಾಸು ವಿನ್ಯಾಸ ರೂಪಿಸುವಲ್ಲಿ ಅದು ತನ್ನ ಮಹತ್ವದ ಪಾತ್ರವನ್ನು ಮುಂದುವರಿಸಬೇಕು ಎಂದರು.

ಐಎಂಎಫ್ ಸಿ ವರ್ಷಕ್ಕೆ ಎರಡು ಬಾರಿ ಸಭೆ ನಡೆಸಲಿದೆ. ಒಂದು ಅಕ್ಟೋಬರ್ ತಿಂಗಳಲ್ಲಿ ನಿಧಿ ಬ್ಯಾಂಕುಗಳ ವಾರ್ಷಿಕ ಸಮಾವೇಶದ ವೇಳೆ, ಮತ್ತೊಂದು ಏಪ್ರಿಲ್ ವಸಂತ ಋತುವಿನ ಸಮಯದಲ್ಲಿ ನಡೆಸಲಿದೆ. ಸಮಿತಿ ಜಾಗತಿಕ ಆರ್ಥಿಕತೆಗೆ ತೊಂದರೆಯಾಗುವಂತಹ ಸಾಮಾನ್ಯ ಅಂಶಗಳ ಬಗ್ಗೆ ಚರ್ಚಿಸಲಿದೆ ಮತ್ತು ಐಎಂಎಫ್ ಯಾವ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಸಲಹೆ ನೀಡಲಿದೆ. ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಲಾಯಿತು.

***



(Release ID: 1615290) Visitor Counter : 171