ಗೃಹ ವ್ಯವಹಾರಗಳ ಸಚಿವಾಲಯ
ವಲಸೆ ಕಾರ್ಮಿಕರ ಸುರಕ್ಷತೆ, ಆಶ್ರಯ ಮತ್ತು ಆಹಾರ ಭದ್ರತೆ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗಳು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ
Posted On:
16 APR 2020 7:18PM by PIB Bengaluru
ವಲಸೆ ಕಾರ್ಮಿಕರ ಸುರಕ್ಷತೆ, ಆಶ್ರಯ ಮತ್ತು ಆಹಾರ ಭದ್ರತೆ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗಳು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ
ದೇಶದಲ್ಲಿ ಕೋವಿಡ್–19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಮತ್ತು ನಿರಾಶ್ರಿತರ ಕ್ಷೇಮಾಭಿವೃದ್ಧಿಗಾಗಿ ಭಾರತ ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.
ವಲಸೆ ಕಾರ್ಮಿಕರ ಸುರಕ್ಷತೆ, ಆಶ್ರಯ ಮತ್ತು ಆಹಾರ ಭದ್ರತೆ ಕುರಿತು ಗೃಹಸಚಿವಾಲಯ ಹೊರಡಿಸಿದ ವಿವರವಾದ ಮಾರ್ಗಸೂಚಿಗಳ ಪರಿಣಾಮಕಾರಿ ಜಾರಿ ಕುರಿತು ಖಚಿತಪಡಿಸಲು ಕ್ಯಾಬಿನೆಟ್ ಕಾರ್ಯದರ್ಶಿಗಳು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ.
ಎಲ್ಲ ರಾಜ್ಯಗಳು ತಕ್ಷಣ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಬರೆಯಲಾಗಿದೆ. ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮೇಲ್ವಿಚಾರಣೆ ಮತ್ತು ಪರಿಹಾರಕ್ಕಾಗಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಿರದಿದ್ದರೆ ಅವರನ್ನು ನೇಮಿಸಬಹುದಾಗಿದೆ. ಮಹಾನಗರಗಳಲ್ಲಿ ಕಲ್ಯಾಣ ಕ್ರಮಗಳನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಪುರಸಭೆ ಆಯುಕ್ತರಿಗೆ ವಹಿಸಬಹುದಾಗಿದೆ.
ಎಲ್ಲಾ ಜಿಲ್ಲೆಗಳು ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರ ಸಮಗ್ರ ನಮೂದು ಕಾರ್ಯ ಮಾಡಿಕೊಳ್ಳಬಹುದು ಮತ್ತು ಅವರಿಗೆ ಅಗತ್ಯವಿರುವ ಆಹಾರ ಮತ್ತು ಆಶ್ರಯವನ್ನು ಒದಗಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು ಎಂದು ಪತ್ರದಲ್ಲಿ ಬರೆಯಲಾಗಿದೆ.
ಪ್ರತಿಯೊಂದು ಪರಿಹಾರ ಶಿಬಿರ ಹಿರಿಯ ಅಧಿಕಾರಿಗಳ ಸುಪರ್ದಿಯಲ್ಲಿರಬೇಕು ಎಂದು ಪತ್ರದಲ್ಲಿ ನಿರ್ದೇಶಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ಆಹರ ಒದಗಿಸಲು ಸ್ಥಳೀಯ ನಾಗರಿಕ ಸಂಘ ಸಂಸ್ಥೆಗಳು ಮತ್ತು ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆಯ ಜಾಲಗಳ ಸಹಾಯ ಪಡೆಯಬಹುದಾಗಿದೆ. ಅವಶ್ಯಕತೆಯಿರುವವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಮಾನಸಿಕ- ಸಾಮಾಜಿಕ ಸಮಾಲೋಚನೆಯನ್ನು ಸಹ ನೀಡಬಹುದು ಎಂದು ಸಹ ಪತ್ರದಲ್ಲಿ ತಿಳಿಸಲಾಗಿದೆ.
***
(Release ID: 1615251)
Visitor Counter : 155
Read this release in:
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam