ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್‌-19 ಸೋಂಕಿನ ನಡುವೆಯೂ ರೈತರಿಗಾಗಿ ರಸಗೊಬ್ಬರಗಳ ಉತ್ಪಾದನೆ, ಸಾಗಾಟ ಮತ್ತು ಲಭ್ಯತೆಯ ಮೇಲೆ ಸೂಕ್ಷ್ಮ ಗಮನಹರಿಸುತ್ತಿರುವ ರಸಗೊಬ್ಬರ ಇಲಾಖೆ

Posted On: 16 APR 2020 3:08PM by PIB Bengaluru

ಕೋವಿಡ್‌-19 ಸೋಂಕಿನ ನಡುವೆಯೂ ರೈತರಿಗಾಗಿ ರಸಗೊಬ್ಬರಗಳ ಉತ್ಪಾದನೆ, ಸಾಗಾಟ ಮತ್ತು ಲಭ್ಯತೆಯ ಮೇಲೆ ಸೂಕ್ಷ್ಮ ಗಮನಹರಿಸುತ್ತಿರುವ ರಸಗೊಬ್ಬರ ಇಲಾಖೆ

 

ಕೊವಿಡ್‌-19 ಸೋಂಕು ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಂಟು ಮಾಡುತ್ತಿದ್ದು, ಇದನ್ನು ಎದುರಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ, ಶ್ರೀ ಮನ್ಸುಖ್ ಮಾಂಡವಿಯಾ ಮತ್ತು ರಸಗೊಬ್ಬರಗಳ ಕಾರ್ಯದರ್ಶಿ ಶ್ರೀ ಚಬಿಲೇಂದ್ರ ರೌಲ್ ಅವರು ರಸಗೊಬ್ಬರಗಳ ಉತ್ಪಾದನೆ ಮತ್ತು ವಿತರಣಾ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸಿ ಪರಿಶೀಲಿಸುತ್ತಿದ್ದಾರೆಇಲಾಖೆಯಲ್ಲಿನ ಉನ್ನತ ಮಟ್ಟದ ಮಧ್ಯಸ್ಥಿಕೆಗಳು ದೇಶದಾದ್ಯಂತ ರೈತರಿಗೆ ಅಗತ್ಯವಾದ ರಸಗೊಬ್ಬರಗಳು ಲಭ್ಯವಾಗುತ್ತಿರುವುದನ್ನು ಖಾತ್ರಿಪಡಿಸುತ್ತಿವೆ. ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿನ ಯಾವುದೇ ಸಮಸ್ಯೆಯನ್ನು ಎದುರಿಸಲು ಇಲಾಖೆಯು ನೈಜ ಸಮಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. ಸಮರ್ಪಕ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ವಿವಿಧ ಏಜೆನ್ಸಿಗಳೊಂದಿಗೆ ಸಂಪೂರ್ಣ ಸಮನ್ವಯವನ್ನು ಏರ್ಪಡಿಸಿಕೊಂಡಿವೆ.

ರೈತರಿಗೆ ರಸಗೊಬ್ಬರದ ಪೂರೈಕೆಯನ್ನು ಕಾಪಾಡಿಕೊಳ್ಳುವ ಸರ್ಕಾರದ ಬದ್ಧತೆಯ ಬಗ್ಗೆ ಮಾತನಾಡಿದ ಶ್ರೀ ಸದಾನಂದ ಗೌಡ ಅವರು, "ಈಗಿರುವಂತೆ ಲಭ್ಯತೆಯು ಉತ್ತಮವಾಗಿರಲಿದೆ" ಎಂದು ಹೇಳಿದ್ದಾರೆ.

ರಸಗೊಬ್ಬರಗಳ ಇಲಾಖೆ (ಡಿಒಎಫ್)ಯು ಅಂತರ ಸಚಿವಾಲಯದ ಮಟ್ಟದಲ್ಲಿ  ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ. ಅಗತ್ಯವಿರುವ ಸಂದರ್ಭದಲ್ಲಿ ಹಾಗೂ ಕಾರ್ಯಾಚರಣೆಯ ನಿರ್ಬಂಧಗಳನ್ನು ಪರಿಹರಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮುಂದಾಗಿದೆ

ಘಟಕಗಳು ಮತ್ತು ಬಂದರುಗಳಿಂದ ರಸಗೊಬ್ಬರಗಳ ಸುಗಮ ಚಲನೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಲಾಕ್ಡೌನ್ನಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಡಿದಿಟ್ಟಿದ್ದ ರಸಗೊಬ್ಬರಗಳ ವಿವರಗಳನ್ನು ಒದಗಿಸುವಂತೆ ಎಲ್ಲ ರಸಗೊಬ್ಬರ ಕಂಪನಿಗಳಿಗೆ ಡಿಒಎಫ್ ಸಲಹೆ ನೀಡಿದೆ. ಹಿಡಿದಿಟ್ಟುಕೊಂಡಿರುವ ರೇಕ್ಗಳನ್ನು ಇಳಿಸಲು ರೈಲ್ವೆ ಸಚಿವಾಲಯ ಮತ್ತು ಆಯಾ ರಾಜ್ಯಗಳ ಕೃಷಿ ಇಲಾಖೆಗಳ ಜತೆಗೆ ಸಂಘಟಿತ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತಿದಿನ ಹಾಗೂ ಪ್ರತಿಗಂಟೆಗೊಮ್ಮೆ ತೀವ್ರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಹತ್ತಿರದ ಘಟಕಗಳಲ್ಲಿ ಹೆಚ್ಚುವರಿಯಾಗಿ ರಸಗೊಬ್ಬರವನ್ನು ಸಂಗ್ರಹಿಸಬಹುದಾದ ಸಾಧ್ಯತೆಯನ್ನು ಪರಿಶೋಧಿಸಲು ಸೂಚಿಸಲಾಗಿದೆ.

ರಸಗೊಬ್ಬರಗಳ ಆದ್ಯತೆಯ ಮೇರೆಗೆ ಹಡಗನ್ನು ಸಾಗಿಸುವ ಪ್ರಕ್ರಿಯೆಗೆ ಶಿಪ್ಪಿಂಗ್ ಸಚಿವಾಲಯದೊಂದಿಗೆ ಡಿಒಎಫ್ ಸಮನ್ವಯ ಸಾಧಿಸುತ್ತಿದೆ. ಬಂದರುಗಳಲ್ಲಿ ರಸಗೊಬ್ಬರಗಳನ್ನು ಇಳಿಸಲು ಮತ್ತು ಹಾಗೂ ಹಡಗುಗಳ ಚಲನೆಗೂ ಅನುಮತಿ ಪಡೆಯುತ್ತಿದೆ.

ರಸಗೊಬ್ಬರ ಅಗತ್ಯ ಸರಕಾಗಿದ್ದು, ಅವು ನಿರಂತರವಾಗಿ ಚಲನೆಯಲ್ಲಿರಬೇಕೆಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೃಷಿ ಇಲಾಖೆಗಳು ಹಾಗೂ ಮುಖ್ಯ ಕಾರ್ಯದರ್ಶಿಗಳನ್ನು ಕೋರಲಾಗಿದೆ. ಲಾಜಿಸ್ಟಿಕ್ ಸರಪಳಿಯನ್ನು ಸುಗಮವಾಗಿ ನಡೆಸಲು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯವನ್ನು ಸ್ಥಾಪಿಸಲು ಮತ್ತು ಒಂದೇ ಸ್ಥಳಗಳಿಗೆ ಅನೇಕ ಕುಂಟೆ(ರೇಕ್‌)ಗಳು ರವಾನೆಯಾಗುವುದನ್ನು ತಪ್ಪಿಸಲು ಎಲ್ಲ ರಸಗೊಬ್ಬರ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ. ಮೂಲಕ ನೆಲಮಟ್ಟದ ಸಮನ್ವಯವನ್ನು ಸಾಧಿಸಲಾಗುತ್ತಿದೆ. ಎಲ್ಲ ಕಾರ್ಯಾಚರಣೆಗಳು ಆರೋಗ್ಯ ನೈರ್ಮಲ್ಯ ಮತ್ತು ಸಾಮಾಜಿಕ ಅಂತರದ ಶಿಷ್ಟಾಚಾರಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರ ಹೊರಡಿಸಿದ ವಿವಿಧ ನಿರ್ದೇಶನಗಳಿಗೆ ಅನುಗುಣವಾಗಿ ರಸಗೊಬ್ಬರಗಳ ಇಲಾಖೆಯು ಎಲ್ಲ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ, ನೈರ್ಮಲ್ಯ ಅಭ್ಯಾಸಗಳು ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತ್ತು ರಸಗೊಬ್ಬರ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಗಿದೆ.

ರಸಗೊಬ್ಬರ ಕ್ಷೇತ್ರದಲ್ಲಿ ಮಧ್ಯಮಾವಧಿಯಿಂದ ದೀರ್ಘಾವಧಿಯವರೆಗೆ ಬೆಳವಣಿಗೆಯನ್ನು ಪುನರ್ಸ್ಥಾಪಿಸಲು ಮತ್ತು ಅನುಷ್ಠಾನದ ಮೇಲ್ವಿಚಾರಣೆಗೆ ಪ್ರಮುಖ ಸುಧಾರಣೆಗಳಿಗಾಗಿ ಮತ್ತು ಇತರ ಉಪಕ್ರಮಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.

ಸಾಮಾಜಿಕ ಜವಾಬ್ದಾರಿಯ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಮತ್ತು ಅದರ ದುಷ್ಪರಿಣಾಮಗಳನ್ನು ತಗ್ಗಿಸುವಿಕೆಗೆ ಸಹಾಯ ಮಾಡಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ತಮ್ಮ ಸಿಎಸ್ಆರ್ ಬಜೆಟ್ನಿಂದ ದೇಣಿಗೆ ನೀಡುವಂತೆ ಮನವಿ ಸಲ್ಲಿಸಿದರು. ಭಾರತ ಸರ್ಕಾರವು ರಚಿಸಿರುವ ಪಿಎಂ ಕೇರ್‌ ನಿಧಿಗೆ ದೇಣಿಗೆ ನೀಡುವಂತೆ ಅವರು  ಮನವಿ ಮಾಡಿದರು. ಇಲ್ಲಿಯವರೆಗೆ, ಸಾರ್ವಜನಿಕ ವಲಯದ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಪಿಎಂ ಕೇರ್‌ ನಿಧಿಗೆ ಸುಮಾರು 45 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದಾರೆ.

ತಮ್ಮ ಸಂಬಳದಿಂದ ಉದಾರವಾಗಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವಂತೆ ರಸಗೊಬ್ಬರ ಇಲಾಖೆಯ ಸಿಬ್ಬಂದಿಗೆ ಮತ್ತು ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸಿಪಿಎಸ್ ಸಿಬ್ಬಂದಿಗೆ ಮನವಿ ಮಾಡಲಾಗಿದೆ.

ಇದಲ್ಲದೆ, ಕೋವಿಡ್19 ಪೀಡಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಸಿದ್ಧತೆ ಕುರಿತು  ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಹೊರಡಿಸಿದ ಸಲಹೆಗಳನ್ನು ಎನ್ಎಫ್ಎಲ್ ಮತ್ತು ಆರ್ಸಿಎಫ್ಸೂಚಿಸಲಾಗಿದೆ. ಡಿಒಎಫ್ ಅಡಿಯಲ್ಲಿರುವ ಎರಡು ಸಿಪಿಎಸ್ಯುಗಳು ತಮ್ಮದೇ ಆದ ಆಸ್ಪತ್ರೆಗಳನ್ನು ಹೊಂದಿವೆ.

***



(Release ID: 1615248) Visitor Counter : 177