ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಜಮ್ಮುಮತ್ತು ಕಾಶ್ಮೀರ ಹಾಗೂ ಲಡಾಖ್‌ನ ದೂರ ಪ್ರದೇಶಗಳಿಗೆ ವಿಶೇಷ ಅಂಚೆ ವ್ಯವಸ್ಥೆ

Posted On: 15 APR 2020 4:48PM by PIB Bengaluru

ಜಮ್ಮುಮತ್ತು ಕಾಶ್ಮೀರ ಹಾಗೂ ಲಡಾಖ್ ದೂರ ಪ್ರದೇಶಗಳಿಗೆ ವಿಶೇಷ ಅಂಚೆ ವ್ಯವಸ್ಥೆ

ಪಿಂಚಣಿದಾರರಿಗೆ ಮನೆ ಬಾಗಿಲಿಗೇ ಪಿಂಚಣಿ ವಿತರಿಸುತ್ತಿರುವ ಅಂಚೆ ಕಚೇರಿಗಳು

 

ಕೋವಿಡ್ -19 ವಿರುದ್ಧ ಹೋರಾಟದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು ಅಂಚೆ ಕಚೇರಿಗಳಲ್ಲಿ ಜನಸಂದಣಿಯನ್ನು ತಡೆಗಟ್ಟುವ ಉದ್ದೇಶದಿಂದ, ಅಂಚೆ ಕಚೇರಿಗಳು ಹೆಚ್ಚು ವಯಸ್ಸಾದ ಪಿಂಚಣಿದಾರರಿಗೆ ಪಿಂಚಣಿಯನ್ನು ಬಾಗಿಲಿಗೇ ತಲುಪಿಸಲು ಕ್ರಮಗಳನ್ನು ಕೈಗೊಂಡಿವೆ. ಕೋವಿಡ್ -19 ಸವಾಲಿನ ಕಾಲದಲ್ಲಿ ಅಂಚೆ ಕಚೇರಿಗಳು ತಮ್ಮ ಸೇವೆಗಳನ್ನು ಸಮಾಜಕ್ಕೆ ಒದಗಿಸುತ್ತಿವೆ. ಆರ್ಥಿಕ, ಆರೋಗ್ಯ ಆರೈಕೆ ಮತ್ತಿತರ ಕಲ್ಯಾಣ ಅಗತ್ಯಗಳನ್ನು ಪೂರೈಸಲು ಜನಸಾಮಾನ್ಯರನ್ನು ತಲುಪಲು ರಾಜ್ಯ/ ಸ್ಥಳೀಯ ಆಡಳಿತದ ಪ್ರಯತ್ನಗಳಿಗೆ ಇವು ಪೂರಕವಾಗಿ ಪ್ರಯತ್ನಿಸುತ್ತಿವೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಅಂಚೆ ಕಚೇರಿಗಳನ್ನು ಹಣಕಾಸಿನ ವಹಿವಾಟಿಗೆ ಅನುಕೂಲ ಕಲ್ಪಿಸುವ ಪ್ರಾಥಮಿಕ ಉದ್ದೇಶದಿಂದ ತೆರೆಯಲಾಗುತ್ತಿದೆ. ಇದರಿಂದ ಸುಲಭವಾಗಿ ಹಣ ಹಿಂಪಡೆಯುವುದು ಮತ್ತು ಹಣವನ್ನು ಠೇವಣಿ ಇಡಲು ಸಾಧ್ಯವಾಗುವುದರಿಂದ ಜನರು ತಮ್ಮ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಹಣದ ಹರಿವನ್ನು ಹೊಂದಬಹುದು. ನಿಟ್ಟಿನಲ್ಲಿ, ಅಂಚೆ ಕಚೇರಿಗಳಲ್ಲಿ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ಸಹ ಸಕ್ರಿಯಗೊಳಿಸಲಾಗಿದೆ. ಇದರಿಂದ ಯಾವುದೇ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಜನರು ಯಾವುದೇ ಅಂಚೆ ಕಚೇರಿಯಿಂದ ತಿಂಗಳಿಗೆ 10000 / - ರೂ ವರೆಗೆ ಹಿಂಪಡೆಯಬಹುದು. ಆದರೆ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಿರಬೇಕು.

https://ci4.googleusercontent.com/proxy/r_DxtrqkUm7rqBGE-EaMfRvFgq1bC7DskWnOqw-OYmYW7ypPKGivF0IdwEM6kb3Jg15aFO2JA8zg-KlqZdm8c8b0Sjec2Sj5q_Aw-VMHI1JSr2Qv_ADy=s0-d-e1-ft#https://static.pib.gov.in/WriteReadData/userfiles/image/image0016J43.jpg

ಬಾರಾಮುಲ್ಲಾದಲ್ಲಿ ಮನೆ ಬಾಗಿಲಿಗೆ ಪಿಂಚಣಿ ಪಾವತಿ ವ್ಯವಸ್ಥೆ

https://ci4.googleusercontent.com/proxy/JGYNxwi9jYWAa-icbvtb9bwdtfUgUyCKEyOrLn_e5C_qUHymDXuj-G_qLoPD78RofyXnrQlKaWA6mfPGIaarwAdX902-dbGFrV6VS0lWQtw7zJXNOm8k=s0-d-e1-ft#https://static.pib.gov.in/WriteReadData/userfiles/image/image002C0V2.jpg

ಜಮ್ಮು ತಾವಿಯಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿರುವ ಗ್ರಾಹಕರು

 

ಆದ್ಯತೆಯ ಅಂಚೆಗಳಾದ ಸ್ಪೀಡ್ ಪೋಸ್ಟ್, ನೋಂದಾಯಿತ ಪೋಸ್ಟ್ ಇತ್ಯಾದಿಗಳನ್ನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೆಶದ ದೂರದ ಮತ್ತು ಗಡಿ ಪ್ರದೇಶಗಳಿಗೆ ಸುಗಮವಾಗಿ ರವಾನಿಸಲು ವಿಶೇಷ ಅಂಚೆ ವ್ಯವಸ್ಥೆ ಮಾಡಲಾಗಿದೆ.

https://ci5.googleusercontent.com/proxy/90sAweWnhzq2Pny0AY3-bvOsGxu4jKz4STs6jmrQ9mcPn7GAljhve2rb8i2NLDuor8cZVC_tAQkRkrNv6N-LCI-AyNA8l2ADXUwiqNto-38nYzuIMQgR=s0-d-e1-ft#https://static.pib.gov.in/WriteReadData/userfiles/image/image003U99U.jpg

 

ಲಡಾಕ್ನಲ್ಲಿ ಪ್ರಸಾರ ಮತ್ತು ಅಂಚೆ ವಿನಿಮಯ

ಅಂಚೆ ಕಚೇರಿಯು ತನ್ನ ಸಾಮಾಜಿಕ ಬಾಧ್ಯತೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸಮಾಜದ ಬಡ ಮತ್ತು ದುರ್ಬಲ ವರ್ಗಕ್ಕೆ ಪರಿಹಾರ ಮತ್ತು ಸಹಾಯವನ್ನು ನೀಡುವ ಅಗತ್ಯತೆಯ ಬಗ್ಗೆ ತಿಳಿದಿದೆ. ರಾಜ್ಯ/ ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯದಲ್ಲಿ ಸಾರ್ವಜನಿಕರಿಗೆ ಮುಖಗವಸುಗಳು, ಸ್ಯಾನಿಟೈಜರ್ಗಳು ಮತ್ತು ಸಾಬೂನು ಮುಂತಾದ ಪಡಿತರ ಮತ್ತು ರಕ್ಷಣಾ ಸಾಧನಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಆಹಾರ, ಔಷಧಿ ಮತ್ತಿತರ ವಸ್ತುಗಳ ವಿತರಣೆಯಲ್ಲಿ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸಲು ಇಲಾಖೆಯ ವಾಹನಗಳನ್ನು ಜಿಲ್ಲಾ/ ಪುರಸಭೆ ಅಧಿಕಾರಿಗಳ ಬಳಕೆಗೆ ಇರಿಸಲಾಗಿದೆ. ಅಂಚೆ ಕಚೇರಿ ಆವರಣದ ನೈರ್ಮಲ್ಯೀಕರಣವನ್ನು ಪುರಸಭೆ ಅಧಿಕಾರಿಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ.

https://ci4.googleusercontent.com/proxy/ZWJ_Y7jUYpBaKjIndgieWf0YfMfEjVDvoO-3JK5c6WPchu0pyH57RrLi7Fw4PDPysIxqIRgComocXmY8Jan4jmKUp_-o0hzuDm3doJtAeWcanMYwUZzi=s0-d-e1-ft#https://static.pib.gov.in/WriteReadData/userfiles/image/image004LBOZ.jpg

ಪಡಿತರ ವಿತರಣೆ

https://ci6.googleusercontent.com/proxy/g_Q_P11AzCXfqcGH1DfsNu0YcrHM-IBEG1Br1MIJ6MdlW9VAvTxFN981UkaKbMbJFoVLuxktv--97DsDaSyuP4xRpvnXJ1Zg2mgH1bB0czA3E7Dd-wUb=s0-d-e1-ft#https://static.pib.gov.in/WriteReadData/userfiles/image/image0052JYV.jpg

ಅಂಚೆ ಕಚೇರಿಯ ನೈರ್ಮಲ್ಯೀಕರಣ

***(Release ID: 1614956) Visitor Counter : 78