ಇಂಧನ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಿಎಸ್‌ಆರ್ ಚಟುವಟಿಕೆಗಳನ್ನು ನಡೆಸುತ್ತಿರುವ ಪವರ್‌ಗ್ರೀಡ್

Posted On: 14 APR 2020 5:10PM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಿಎಸ್‌ಆರ್ ಚಟುವಟಿಕೆಗಳನ್ನು ನಡೆಸುತ್ತಿರುವ ಪವರ್‌ಗ್ರೀಡ್

 

ಕೋವಿಡ್-19 ಸಾಂಕ್ರಾಮಿಕವು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ.  ರಾಷ್ಟ್ರ ಲಾಕ್ ಡೌನ್ ಆಗಿರುವಾಗ, ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ಉದ್ದಿಮೆಯಾದ ಪವರ್‌ಗ್ರೀಡ್ 24x7 ವಿದ್ಯುತ್ ಪ್ರಸರಣವನ್ನು ಖಾತ್ರಿಪಡಿಸಿಕೊಳ್ಳುವುದಲ್ಲದೆ, ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರಿಗೆ  ನೆರವಾಗಲು ಮಾನವೀಯತೆಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸಿಎಸ್ಆರ್  (ಕಾರ್ಪೊರೇಟ್ಟ ಸಾಮಾಜಿಕ ಜವಾಬ್ದಾರಿ) ಚಟುವಟಿಕೆಗಳನ್ನು ಮೊದಮೊದಲು ಕೈಗೆತ್ತಿಕೊಂಡವರಲ್ಲಿ ಜವಾಬ್ದಾರಿಯುತ ಕಾರ್ಪೊರೇಟ್ ನಾಗರಿಕರಾಗಿ ಪವರ್ ಗ್ರಿಡ್ ಸಂಸ್ಥೆಯು ಸೇರಿದೆ. ಇದು ಪಿ ಎಮ್ ಕೇರ್ಸ್ ನಿಧಿಗೆ 200 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಹೆಚ್ಚುವರಿಯಾಗಿಪವರ್ ಗ್ರಿಡ್ ನ ಎಲ್ಲಾ ಉದ್ಯೋಗಿಗಳು ಪಿ ಎಮ್ ಕೇರ್ಸ್ ನಿಧಿಗೆ ಒಂದು ದಿನದ ಸಂಬಳವನ್ನು ನೀಡಿರುವರು.

ಪಿಎಂ ಕೇರ್ಸ್ ನಿಧಿಗೆ ಹಣಕಾಸಿನ ಕೊಡುಗೆಯ ಜೊತೆಗೆ, ಸಾರ್ವಜನಿಕ ಉದ್ದಿಮೆಯು  ತನ್ನ ಗುತ್ತಿಗೆ ಕಾರ್ಮಿಕರು, ಕಾರ್ಮಿಕರು ಮತ್ತು ನಿರ್ಗತಿಕರಿಗೆ ತನ್ನ ಉಪಕೇಂದ್ರ ತಾಣಗಳು ಮತ್ತು ಪ್ರಸರಣ ಮಾರ್ಗ ಕಚೇರಿಗಳ ಬಳಿ ಆಹಾರ ಪ್ಯಾಕೆಟ್‌ಗಳು/ ದಿನಸಿ ವಸ್ತುಗಳನ್ನು ವಿತರಿಸುತ್ತಿದೆ. ಇದಲ್ಲದೆ, ಈ ಅಗತ್ಯ ವಸ್ತುಗಳು, ಮುಖಗವಸುಗಳು, ಸ್ಯಾನಿಟೈಸರ್‌ಗಳು ಮತ್ತು ಸಾಬೂನುಗಳ ವಿತರಣೆಯನ್ನು ಸಹ ಮಾಡಲಾಗುತ್ತಿದೆ. ದೇಶಾದ್ಯಂತ ಇಲ್ಲಿಯವರೆಗೆ ಸುಮಾರು 81,000 ಫಲಾನುಭವಿಗಳಿಗೆ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ 4.27 ಕೋಟಿ ರೂಪಾಯಿ ಮೌಲ್ಯದ ದಿನಸಿ ಮತ್ತು ಆಹಾರ ವಸ್ತುಗಳನ್ನು ಪೋರೈಸಿದೆ.

ಈ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಪವರ್‌ಗ್ರೀಡ್ ಸಂಸ್ಥೆಯು ಆಸ್ಪತ್ರೆಗಳಿಗೆ ನೆರವು ನೀಡಿದೆ, ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮೂಲಸೌಕರ್ಯಗಳ ರಚನೆಯಾಗಿದೆ.  ಕೋವಿಡ್-19ರ ವಿರುದ್ಧ ಹೋರಾಡಲು ಪಿಪಿಇ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ಇತರ ಆಸ್ಪತ್ರೆ ಉಪಕರಣಗಳನ್ನು ಸಹ ದೇಶದ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಾಗಿದೆ.

ಇದಲ್ಲದೆ, ದೇಶಾದ್ಯಂತ ವಿವಿಧ ಸ್ಥಳಗಳಲ್ಲಿರುವ ಕಚೇರಿಗಳಲ್ಲಿ ಕರ್ತವ್ಯದಲ್ಲಿರುವ ಪವರ್‌ಗ್ರೀಡ್ ತಂಡಗಳು ಈ ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಅಂತರದ ಪ್ರಾಮುಖ್ಯತೆ ಮತ್ತು ಸಾಮಾಜಿಕ ಅಂತರವನ್ನು ಅನುಷ್ಠಾನಗೊಳಿಸುವುದರಿಂದ ಈ ಮಾರಣಾಂತಿಕ ಕಾಯಿಲೆಯ ಹರಡುವಿಕೆಯನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ.

***


(Release ID: 1614578) Visitor Counter : 149