ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಪಿಸಿಎಂಸಿ ನಗರಪಾಲಿಕೆ ಕೈಗೊಂಡ ತಂತ್ರಗಳು ಮತ್ತು ಪರಿಹಾರಗಳು

Posted On: 14 APR 2020 3:15PM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಪಿಸಿಎಂಸಿ ನಗರಪಾಲಿಕೆ ಕೈಗೊಂಡ ತಂತ್ರಗಳು ಮತ್ತು ಪರಿಹಾರಗಳು

 

ಪಿಂಪ್ರಿ ಚಿಂಚ್‌ ವಾಡ್ ಪುಣೆಯ ನಗರದ ಉಪನಗರವಾಗಿದ್ದು ಕೈಗಾರಿಕಾ ಕೇಂದ್ರವಾಗಿ ಮತ್ತು ಮುಖ್ಯವಾಗಿ ಪುಣೆಗೆ ಪೂರಕವಾಗಿ ಬೆಳೆದ ಈ ನಗರವು ಈಗ ಪ್ರಮುಖ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿ ಹೊರಹೊಮ್ಮಿದೆ. ಕಳೆದ ಕೆಲವು ವರ್ಷಗಳಲ್ಲಿ ಪಿಂಪ್ರಿಯಲ್ಲಿ ಜನಸಂಖ್ಯೆ ಮತ್ತು ವಸತಿಗಳಲ್ಲಿ ಏರಿಕೆ ಕಂಡುಬಂದಿದೆ. ಜನಸಂಖ್ಯೆಯ ಹೆಚ್ಚಳದ ಜೊತೆಗೆ, ತ್ಯಾಜ್ಯ ಉತ್ಪಾದನೆಯಲ್ಲಿ ಹೆಚ್ಚಳವುಂಟಾಗುತ್ತದೆ. ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಸೇವೆಗಳಲ್ಲಿ ನಂಬಲಸಾಧ್ಯವಾದ ಉತ್ತಮ ಪ್ರದರ್ಶನ ನೀಡಿದೆ. ತೀರಾ ಇತ್ತೀಚೆಗೆ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಪಿಸಿಎಂಸಿ ತ್ವರಿತ ಮತ್ತು ಜಾಗರೂಕತೆಯ ಕಾರ್ಯಗಳನ್ನು ಕೈಗೊಂಡಿದೆ.

ವೈರಸ್ ಹರಡುವುದನ್ನು ನಿಯಂತ್ರಿಸಲು ಪಿಸಿಎಂಸಿ ಹಲವಾರು ನವೀನ ಮತ್ತು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿದೆ. ಆದರೆ ಮಾಡಬೇಕಾದ ಘಟನೆಗಳು, ಪ್ರಗತಿಗಳು ಮತ್ತು ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿ ಇಲ್ಲದೆ ಯುದ್ಧ ಮಾಡುವುದು ನಿರರ್ಥಕ. ಇದನ್ನು ಗಮನದಲ್ಲಿಟ್ಟುಕೊಂಡು ಪಿಸಿಎಂಸಿಯು ಯೋಜನಾ ಕೊಠಡಿಯೊಂದನ್ನು ಸ್ಥಾಪಿಸಲು ನಿರ್ಧರಿಸಿತು. ಪಿಂಪ್ರಿ ಚಿಂಚ್‌ವಾಡ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಪಿಸಿಎಂಸಿಯಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಕೋಣೆಯನ್ನು ಸ್ಥಾಪಿಸಲಾಗಿದೆ ಮತ್ತು ಇದು ಜಿಐಎಸ್ ಮ್ಯಾಪಿಂಗ್, ಡೇಟಾ ವಿಶ್ಲೇಷಣೆ, ನಿರ್ಬಂಧಿತ ಮನೆಗಳ ಮೇಲ್ವಿಚಾರಣೆ ಮುಂತಾದ ಸಾಧನಗಳನ್ನು ಬಳಸುತ್ತದೆ. ಸಂಬಂಧಪಟ್ಟ ನಾಗರಿಕರನ್ನು ನೇರವಾಗಿ ತಲುಪಲು ಪ್ರೋತ್ಸಾಹಿಸಲು ಸಹಾಯವಾಣಿ ಸಂಖ್ಯೆಯನ್ನು ಸಹ ಸ್ಥಾಪಿಸಲಾಗಿದೆ. ಅಧಿಕಾರಿಗಳು. ಈ ಎಲ್ಲಾ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ವೃತ್ತಿಪರರಿಂದ ಉತ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ವಾರ್ ರೂಮ್ (ಯೋಜನಾ ಕೊಠಡಿ) ಅನ್ನು ಬಳಸಲಾಗುತ್ತಿದೆ. ಆನ್‌ಲೈನ್ ಕ್ಷೇತ್ರದಲ್ಲಿ ನಕಲಿ ಸುದ್ದಿಗಳು ಪ್ರಾಬಲ್ಯ ಹೊಂದಿರುವಾಗ, ವಿಶೇಷವಾಗಿ ಸೂಕ್ಷ್ಮವಾಗಿರುವ ಸಮಯದಲ್ಲಿ ಇದು ಬಹಳ ಮುಖ್ಯವಾಗಿದೆ.

ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಪಿಸಿಎಂಸಿ ನಗರಪಾಲಿಕೆಯು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದೆ. ಅಪ್ಲಿಕೇಶನ್‌ ಗಳ ಬಳಕೆಯಿಂದ ಹಿಡಿದು ಜಿಐಎಸ್ ಉಪಕರಣಗಳು ಮತ್ತು ಮಾನಿಟರಿಂಗ್ ಡ್ಯಾಶ್‌ಬೋರ್ಡ್ ಬಳಸಿ ಮಾನಿಟರಿಂಗ್‌ವರೆಗೆ, ನಗರದ ಕೋವಿಡ್ ಪರಿಸ್ಥಿತಿಯ ಸರಿಯಾದ ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್‌ಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪಿಸಿಎಂಸಿಗೆ ಸಾಧ್ಯವಾಗಿದೆ. ಪರಿಣಾಮಕಾರಿಯಾದ ಕಾರ್ಯವು ಮಹಾನಗರ ಪಾಲಿಕೆಯಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗುತ್ತದೆ.

ಆನ್‌ಲೈನ್ ಅಸೆಸ್ಮೆಂಟ್ ಫಾರ್ಮ್ ಪಿಸಿಎಂಸಿಯ ತಂತ್ರಜ್ಞಾನ ಶಸ್ತ್ರಾಗಾರದಲ್ಲಿ ಲಭ್ಯವಿರುವ ಎಲ್ಲಾ ಡಿಜಿಟಲ್ ಪರಿಹಾರಗಳಲ್ಲಿ, ಪಿಸಿಎಂಸಿ ಸ್ಮಾರ್ಟ್ ಸಾರಥಿ ಮೊಬೈಲ್ ಅಪ್ಲಿಕೇಶನ್ ನಿಜವಾಗಿಯೂ ಪ್ರಮುಖವಾಗಿದೆ. ಮೊದಲನೆಯದಾಗಿ, ಈ ಅಪ್ಲಿಕೇಶನ್ ಕೋವಿಡ್-19 ಸ್ವಯಂ-ಮೌಲ್ಯಮಾಪನ ಪರೀಕ್ಷೆಯನ್ನು ಹೊಂದಿದೆ. ಪಿಸಿಎಂಸಿ ಪ್ರದೇಶದಲ್ಲಿ ವಾಸಿಸುವ ನಾಗರಿಕರಿಗೆ ಇದು ಆನ್‌ಲೈನ್ ನಲ್ಲಿ ಸ್ವಯಂ ಮೌಲ್ಯಮಾಪನ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಯನ್ನು "ಅಪಾಯದ ಮೌಲ್ಯಮಾಪನದ ಮಟ್ಟದ ಮಾನದಂಡ" ದ ಸುತ್ತಲೂ ರೂಪಿಸಲಾಗಿದೆ, ಅದರ ಮೂಲಕ ಪ್ರಶ್ನೆಗಳಿಗೆ ಬಂದ ಉತ್ತರಗಳನ್ನು ಅವಲಂಬಿಸಿ ಯಾವುದೇ ನಾಗರಿಕರ ಆರೋಗ್ಯದ ಅಪಾಯವನ್ನು ಗುರುತಿಸಬಹುದು. ಈ ಪರೀಕ್ಷೆಯು ನಾಗರಿಕರಿಗೆ ಮಾತ್ರವಲ್ಲದೆ ಪಾಲಿಕೆಗೂ ಪ್ರಯೋಜನಕಾರಿಯಾಗಿದೆ ಏಕೆಂದರೆ ಯುಎಲ್‌ಬಿ ಆನ್‌ಲೈನ್‌ನಲ್ಲಿ ಡೇಟಾವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಬಲ್ಲದು, ನಂತರ ಕ್ರಿಯಾ ಯೋಜನೆಯನ್ನು ವಿನ್ಯಾಸಗೊಳಿಸಲು ಸರಿಯಾಗಿ ವಿಶ್ಲೇಷಿಸಬಹುದು ಮತ್ತು ಅಪಾಯಗಳನ್ನು ತಗ್ಗಿಸಲು ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಎರಡನೆಯದಾಗಿ, ಈ ಅಪ್ಲಿಕೇಶನ್ ಕ್ವಾರಂಟೈನ್ ಮೂವ್ ಮೆಂಟ್ ಚೆಕ್ ಅನ್ನು ಹೊಂದಿದೆ. ನಿರ್ಬಂಧಿತ ರೋಗಿಗಳನ್ನು ಗುರುತಿಸುವ ಉದ್ದೇಶದಿಂದ ಮತ್ತು ಅವರು ಇರುವ ಭೌಗೋಳಿಕ ಸ್ಥಳವನ್ನು ಸಮೀಕ್ಷೆ ಮಾಡಲು ಇದು ಒಂದು ಮಾರ್ಗವಾಗಿದೆ. ರೋಗಿಯ ಸ್ಥಳವು ಗುರುತಿಸಲಾದ ಸ್ಥಳದಿಂದ (ಪ್ರಸ್ತುತ ಸ್ಥಳ) 100 ಮೀಟರ್‌ಗಿಂತ ಹೆಚ್ಚಾಗಿದ್ದರೆ, ಆ ಪ್ರದೇಶದ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರಿಗೆ ಸ್ವಯಂಚಾಲಿತವಾಗಿ ಹೊಸ ಮಾಹಿತಿ ಕಳುಹಿಸಲಾಗುತ್ತದೆ. ಮೂರನೆಯದಾಗಿ, ಪಿಸಿಎಂಸಿ ಈ ಆ್ಯಪ್ ಮೂಲಕ ಅಭಿಯಾನವೊಂದನ್ನು ಪ್ರಾರಂಭಿಸಿದೆ. ಈ ಅಭಿಯಾನದ ಮೂಲಕ, ಪರಿಹಾರ ಕಾರ್ಯಗಳಿಗೆ ಸ್ವಯಂಸೇವಕರಾಗಿ ಸೇವೆ ಮಾಡಲು ನಾಗರಿಕರಿಗೆ ಮನವಿ ಮಾಡಲಾಗುತ್ತಿದೆ. ಈ ಆನ್‌ಲೈನ್ ಅಭಿಯಾನವು ಸ್ವಯಂಸೇವಕರ ಮಾಹಿತಿಯನ್ನು ಸಂಗ್ರಹಿಸುತ್ತದೆ, ಇದು ಪಿಸಿಎಂಸಿಯ ಮುಂದಿನ ಕ್ರಿಯಾ ಯೋಜನೆಗಳಿಗೆ ಸಹಕಾರಿಯಾಗುತ್ತದೆ. ಕೊನೆಯದಾಗಿ ಮತ್ತು ಮುಖ್ಯವಾಗಿ, ಅಪ್ಲಿಕೇಶನ್ ‘ನಿಯರ್ ಮಿ’ (ನನ್ನ ಹತ್ತಿರವಿರುವ) ವೈಶಿಷ್ಟ್ಯದೊಂದಿಗೆ ಇರುತ್ತದೆ. ಇದು ಕಾರ್ಯನಿರ್ವಹಿಸುತ್ತಿರುವ ಮತ್ತು ನಾಗರಿಕರಿಗೆ ಲಭ್ಯವಾಗುವ ಹತ್ತಿರದ ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಮಾರುಕಟ್ಟೆಗಳು ಮುಂತಾದ ಸ್ಥಳಗಳನ್ನು. ತೋರಿಸುತ್ತದೆ. ಹಾಗೆಯೇ ಉಚಿತ ಆಹಾರ ವಿತರಣಾ ಕೇಂದ್ರಗಳ ಸ್ಥಳ ಮತ್ತು ಅಗತ್ಯವಿರುವ ಜನರಿಗೆ ಆಶ್ರಯ ಸೌಲಭ್ಯಗಳ ಮಾಹಿತಿಯನ್ನು ಸಹ ತೋರಿಸುತ್ತದೆ. ಪ್ರಸ್ತುತ, 40+ ಉಚಿತ ಆಹಾರ ವಿತರಣಾ ಕೇಂದ್ರಗಳು, 9 ಹೋಮ್ ಶೆಲ್ಟರ್‌ಗಳು, 35+ ತುರ್ತು ಔಷಧಾಲಯಗಳು, ಮನೆಗೆ ದಿನಸಿಯನ್ನು ತಲುಪಿಸುವ 50+ಅಂಗಡಿಗಳನ್ನು ಪಟ್ಟಿ ಮಾಡಲಾಗಿದೆ. ಕೋವಿಡ್ -19 ಪರೀಕ್ಷೆ ಮತ್ತು ಚಿಕಿತ್ಸೆಗೆ ಅಧಿಕೃತ ಆಸ್ಪತ್ರೆಗಳ, ದಿನಸಿ, ಔಷಧಿಗಳು, ತರಕಾರಿಗಳು ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವ ಅಂಗಡಿಗಳ ವಿಳಾಸ ಮತ್ತು ಸಂಪರ್ಕದ ವಿವರಗಳಂತಹ ಹೆಚ್ಚಿನ ಮಾಹಿತಿಯನ್ನು ಈ ವಿಭಾಗದಲ್ಲಿ ಸೇರಿಸಲು ಪಿಸಿಎಂಸಿ ಯೋಜಿಸುತ್ತಿದೆ.

ನಾಗರಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವರು ಮತ್ತು ಮನೆಯೊಳಗೇ ಇರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾದರೂ, ಮುಂಚೂಣಿಯಲ್ಲಿ ಕೆಲಸ ಮಾಡುವ ಜನರನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ, ನಮ್ಮ ಸ್ವಚ್ಛತಾ ವಾರಿಯರ್ಸ್ ರಕ್ಷಣೆಗಾಗಿ, ಎಲ್ಲಾ ನೈರ್ಮಲ್ಯ ಕಾರ್ಮಿಕರಿಗೆ ವಿಶೇಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸಲು ಅನುಕೂಲವನ್ನು ಪಿಸಿಎಂಸಿ ಮಾಡಿದೆ. ಇದರೊಂದಿಗೆ, ನೈರ್ಮಲ್ಯ ಸಿಬ್ಬಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕುನಿವಾರಕ ಕಾರ್ಯವನ್ನು ನಡೆಸುವುದು ಮತ್ತು ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮತ್ತು ತ್ಯಾಜ್ಯವನ್ನು ನಿರ್ವಹಿಸುವ ಬಗ್ಗೆ ಮಾರ್ಗಸೂಚಿಗಳು ಮತ್ತು ಎಸ್‌ಒಪಿಗಳನ್ನು ಒದಗಿಸುವುದರೊಂದಿಗೆ ನಿಯಮಿತ ಸೂಚನೆಗಳನ್ನು ನೀಡಲಾಗಿದೆ.

ಪಿಸಿಎಂಸಿ ನಿಯಮಿತವಾಗಿ ಸಾಮಾಜಿಕ ಮಾಧ್ಯಮ, ಸ್ಥಳೀಯ ಮಾಧ್ಯಮ - ಮುದ್ರಣ ಮತ್ತು ಟಿವಿಗಳ ಮೂಲಕ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮತ್ತು ಅವರ ಚಟುವಟಿಕೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಹರಡುತ್ತಿದೆ. ಇದರೊಂದಿಗೆ, ಎಲ್ಲಾ ಕಸ ಸಂಗ್ರಹಿಸುವ ವಾಹನಗಳಿಗೆ ಧ್ವನಿವರ್ದಕ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಕೋವಿಡ್ ಜಾಗೃತಿ, ಮುನ್ನೆಚ್ಚರಿಕೆ, ನೈರ್ಮಲ್ಯ ನಿರ್ವಹಣೆ, ಸರ್ಕಾರಿ ಸಲಹೆಗಳು ಇತ್ಯಾದಿಗಳನ್ನು ಒಳಗೊಂಡಿರುವ ಹಲವಾರು ವಿಷಯಗಳ ಕುರಿತು ಆಡಿಯೊ ತುಣುಕುಗಳನ್ನು ಬಿತ್ತರಿಸಲು ಅವುಗಳನ್ನು ಬಳಸಲಾಗುತ್ತಿದೆ. ಇದು ಪಿಸಿಎಂಸಿಯು ತನ್ನ ನಾಗರಿಕರನ್ನು ಕೋವಿಡ್-19 ಬಗ್ಗೆ ತಿಳಿಸಲು ಮತ್ತು ಭೀತಿಯಿಂದ ರಕ್ಷಿಸಲು ತನ್ನನ್ನು ಮುಡಿಪಾಗಿರಿಸಿಕೊಂಡಿರುವುದನ್ನು ಇದು ತೋರಿಸುತ್ತದೆ.

ಪಿಂಪ್ರಿ ಯಾವಾಗಲೂ ವೈವಿಧ್ಯಮಯ ಮತ್ತು ಬಹುತ್ವದ ಮನೋಭಾವ ಹೊಂದಿರುವ ಬಗ್ಗೆ ಹೆಮ್ಮೆ ಹೊಂದಿದೆ. ಮಹಾರಾಷ್ಟ್ರದ ಈ ಉಪನಗರವು ಜಾಗತಿಕ ಸಾಂಕ್ರಾಮಿಕದ ಮಧ್ಯೆ ತನ್ನ ಉತ್ತಮ ವಾತಾವರಣವನ್ನು ನಿರ್ವಹಿಸಿಕೊಂಡಿರುವುದು ಮತ್ತು ಎಲ್ಲಾ ಪ್ರಯತ್ನಗಳಲ್ಲಿ ಸ್ವಚ್ಛತಾ ಮತ್ತು ಸ್ವಸ್ಥತೆಯ ಸಂಸ್ಕೃತಿಯನ್ನು ನಿಜವಾಗಿಯೂ ತನ್ನದಾಗಿಸಿಕೊಂಡಿರುವುದು ಸಂತಸದ ವಿಷಯವಾಗಿದೆ.

***



(Release ID: 1614472) Visitor Counter : 210