ಕೃಷಿ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ತೋಟದ ಹಂತದಲ್ಲಿ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಹಲವು ಪೂರಕ ಕ್ರಮಗಳು

Posted On: 13 APR 2020 7:24PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ ತೋಟದ ಹಂತದಲ್ಲಿ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಹಲವು ಪೂರಕ ಕ್ರಮಗಳು

ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ 8.31 ಕೋಟಿ ರೈತ ಕುಟುಂಬಗಳಿಗೆ 16,621 ಕೋಟಿ ರೂ. ಬಿಡುಗಡೆ

ಪಿಎಂ-ಜಿಕೆವೈ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 3,985 ಮೆಟ್ರಿಕ್ ಟನ್ ಬೇಳೆ ಕಾಳು ರವಾನೆ

 

ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಲಾಕ್ ಡೌನ್ ಅವಧಿಯಲ್ಲಿ ತೋಟದ ಹಂತದಲ್ಲಿ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಹಲವು ಪೂರಕ ಕ್ರಮಗಳನ್ನು ಕೈಗೊಂಡಿದೆ. ಅದರ ವಿವರಗಳು ಕೆಳಗಿನಂತಿವೆ:

  1. ರಾಷ್ಟ್ರೀಯ ಬೀಜ ಭದ್ರತಾ ಮಿಷನ್ ಅಡಿಯಲ್ಲಿ ರಾಜ್ಯಗಳಿಗೆ ಬೀಜಗಳನ್ನು ಪೂರೈಸಲು ಯೋಜನೆಅಡಿ ಹತ್ತು ವರ್ಷಗಳೊಳಗಿನ ನಾನಾ ತಳಿಗಳ ಬೀಜಗಳಿಗೆ ಸಬ್ಸಿಡಿಯನ್ನು ನೀಡಲಾಗುವುದು. ಇದರಡಿ ಎನ್ಎಫ್ಎಸ್ಎಂನ ಎಲ್ಲಾ ಬೆಳೆಗಳ ವ್ಯಾಪ್ತಿಗೆ ಒಳಪಡುವಂತೆ ಈಶಾನ್ಯ ಭಾಗ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಗುಡ್ಡಗಾಡು ಪ್ರದೇಶಗಳಿಗೆ ಮಾತ್ರ ನಿಜವಾದ ಬೀಜದ ಬೆಲೆಯ ಸಬ್ಸಿಡಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
  2. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಅಡಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ 2020 ಮಾರ್ಚ್ 24ರಿಂದ ಇಲ್ಲಿಯವರೆಗೆ ಸುಮಾರು 8.31 ಕೋಟಿ ರೈತ ಕುಟುಂಬಗಳಿಗೆ 16,621 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ.
  3. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂ-ಜಿಕೆವೈ) ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗಾಗಿ 3,985 ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ರವಾನಿಸಲಾಗಿದೆ.
  4. ಪಂಜಾಬ್ ನಲ್ಲಿ ಪಾರಂಪರಾಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ) ಅಡಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಲಾದ ಎಲೆಕ್ಟ್ರಿಕ್ ವ್ಯಾನ್ ನಲ್ಲಿ ಸಾವಯವ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.
  5. ಮಹಾರಾಷ್ಟ್ರದಲ್ಲಿ 34 ಜಿಲ್ಲೆಗಳ 27,797 ಎಫ್ ಪಿಒಗಳಿಂದ ಆನ್ ಲೈನ್ ಮತ್ತು ನೇರ ಮಾರುಕಟ್ಟೆ ಪದ್ಧತಿಯಲ್ಲಿ 21,11,171 ಕ್ವಿಂಟಾಲ್ ಹಣ್ಣು ಮತ್ತು ತರಕಾರಿ ಮಾರಾಟ.

*****

 



(Release ID: 1614264) Visitor Counter : 166