ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೇವಲ 3 ದಿನಗಳಲ್ಲಿ 3700 ಕ್ಕೂ ಹೆಚ್ಚು ಸಲಹೆ ಸ್ವೀಕರಿಸಿದ ‘ಭಾರತ್ ಪಡೇ ಆನ್‌ಲೈನ್’ ಅಭಿಯಾನ
Posted On:
13 APR 2020 5:10PM by PIB Bengaluru
ಕೇವಲ 3 ದಿನಗಳಲ್ಲಿ 3700 ಕ್ಕೂ ಹೆಚ್ಚು ಸಲಹೆ ಸ್ವೀಕರಿಸಿದ ‘ಭಾರತ್ ಪಡೇ ಆನ್‌ಲೈನ್’ ಅಭಿಯಾನ
ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ರವರು 10 ಏಪ್ರಿಲ್ 2020 ರಂದು ಭಾರತದ ಆನ್ ಲೈನ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ವಿಚಾರಗಳ ಕ್ರೌಡ್ ಸೋರ್ಸಿಂಗ್ ಗಾಗಿ ಒಂದು ವಾರದ ಅವಧಿಯ ‘ಭಾರತ್ ಪಡೇ ಆನ್ ಲೈನ್’ ಅಭಿಯಾನ ಪ್ರಾರಂಭಿಸಿದರು
ಟ್ಟಿಟ್ಟರ್ ನಲ್ಲಿ #BharatPadheOnline ಬಳಸಿ @HRDMinistry ಮತ್ತು @DrRPNishank ನಲ್ಲಿ ಮತ್ತು bharatpadheonline.mhrd[at]gmail[dot]com ನಲ್ಲಿ ತಿಳಿಸುವ ಮೂಲಕ 16 ಏಪ್ರಿಲ್ 2020ರವರೆಗೆ ಸಲಹೆಗಳನ್ನು ಹಂಚಿಕೊಳ್ಳಬಹುದು
ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ 10 ಏಪ್ರಿಲ್ 2020ರಂದು ನವದೆಹಲಿಯಲ್ಲಿ ಭಾರತದ ಆನ್‌ಲೈನ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ವಿಚಾರಗಳ ಕ್ರೌಡ್ ಸೋರ್ಸಿಂಗ್ (ಸಾರ್ವಜನಿಕರಿಗೆ ಆಹ್ವಾನ ನೀಡುವುದು) ಗಾಗಿ ಒಂದು ವಾರದ ಅವಧಿಯ ‘ಭಾರತ್ ಪಡೇ ಆನ್‌ಲೈನ್’ ‘ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಅಭಿಯಾನವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಕೇವಲ 3 ದಿನಗಳಲ್ಲಿ ಟ್ವಿಟರ್ ಮತ್ತು ಇ-ಮೇಲ್ ನಲ್ಲಿ 'ಭಾರತ್ ಆನ್‌ಲೈನ್' ಅಭಿಯಾನಕ್ಕಾಗಿ ಎಚ್‌ಆರ್‌ಡಿ ಸಚಿವಾಲಯವು 3700 ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ. ಜನರು ಈ ಉಪಕ್ರಮವನ್ನು ಮೆಚ್ಚುತ್ತಿದ್ದಾರೆ ಮತ್ತು ಆನ್‌ಲೈನ್ ಶಿಕ್ಷಣವನ್ನು ಉತ್ತೇಜಿಸಿದ್ದಕ್ಕಾಗಿ ಸಚಿವಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಭಿಯಾನದ ಸುತ್ತಲಿನ ನಿರೂಪಣೆಯು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಆಯ್ಕೆಯಾಗಿದೆ, ಅದು ಇಂದು ಟ್ವಿಟ್ಟರ್ ನಲ್ಲಿ ಟಾಪ್ ಟೆನ್ ಸ್ಥಾನದಲ್ಲಿ ಪ್ರಚಲಿತದಲ್ಲಿದೆ.
‘ಭಾರತ್ ಪಡೇ ಆನ್‌ಲೈನ್’ ‘ ಅಭಿಯಾನವು ಭಾರತದ ಆನ್‌ಲೈನ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಸಲಹೆಗಳ ಕ್ರೌಡ್ ಸೋರ್ಸಿಂಗ್‌ಗಾಗಿ ಒಂದು ವಾರದ ಅವಧಿಯ ಅಭಿಯಾನವಾಗಿದೆ. ಲಭ್ಯವಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳನ್ನು ಉತ್ತೇಜಿಸುವಾಗ ಆನ್‌ಲೈನ್ ಶಿಕ್ಷಣದ ಅಡೆತಡೆಗಳನ್ನು ನಿವಾರಿಸಲು ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ಸಲಹೆಗಳು / ಪರಿಹಾರಗಳನ್ನು ನೇರವಾಗಿ ಹಂಚಿಕೊಳ್ಳಲು ಭಾರತದ ಎಲ್ಲಾ ಅತ್ಯುತ್ತಮ ಬುದ್ದಿಮತ್ತೆಯನ್ನು ಆಹ್ವಾನಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಏಪ್ರಿಲ್ 16, 2020 ರವರೆಗೆ #BharatPadheOnline ಬಳಸಿ ಸಲಹೆಗಳನ್ನು bharatpadheonline.mhrd[at]gmail[dot]com ಗೆ ಕಳಿಸಬಹುದು ಮತ್ತು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಬಹುದು. ಟ್ವಿಟರ್ ಬಳಸುವಾಗ @HRDMinistry ಮತ್ತು @DrRPNishank ಗೆ ಟ್ಯಾಗ್ ಮಾಡಬೇಕು ಇದರ ಮೂಲಕ ಸಲಹೆಗಳನ್ನು ಸಚಿವಾಲಯಕ್ಕೆ ತಿಳಿಸಬಹುದು.
***
(Release ID: 1614147)
Visitor Counter : 216