ಬುಡಕಟ್ಟು ವ್ಯವಹಾರಗಳ ಸಚಿವಾಲಯ

‘ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ’ ಅಡಿಯಲ್ಲಿ ಲಭ್ಯವಿರುವ ಹಣದಿಂದ ಖರೀದಿ ಪ್ರಾರಂಭಿಸುವಂತೆ ರಾಜ್ಯ ನೋಡಲ್ ಇಲಾಖೆಗಳು ಮತ್ತು ಅನುಷ್ಠಾನ ಏಜೆನ್ಸಿಗಳಿಗೆ ಟ್ರೈಫೆಡ್ ಸೂಚನೆ

Posted On: 11 APR 2020 8:22PM by PIB Bengaluru

ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಲಭ್ಯವಿರುವ ಹಣದಿಂದ ಖರೀದಿ ಪ್ರಾರಂಭಿಸುವಂತೆ ರಾಜ್ಯ ನೋಡಲ್ ಇಲಾಖೆಗಳು ಮತ್ತು ಅನುಷ್ಠಾನ ಏಜೆನ್ಸಿಗಳಿಗೆ ಟ್ರೈಫೆಡ್ ಸೂಚನೆ

 

ಎಂಎಫ್ಪಿ ಯೋಜನೆಗಾಗಿ ಎಂಎಸ್ಪಿ ಅಡಿಯಲ್ಲಿ ಲಭ್ಯವಿರುವ ನಿಧಿಯಿಂದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಿರು ಅರಣ್ಯ ಉತ್ಪನ್ನಗಳನ್ನು (ಎಂಎಫ್ಪಿ) ಖರೀದಿಸಲು ಪ್ರಾರಂಭಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಟ್ರೈಫೆಡ್ ರಾಜ್ಯ ನೋಡಲ್ ಇಲಾಖೆಗಳು ಮತ್ತು ಅನುಷ್ಠಾನ ಏಜೆನ್ಸಿಗಳನ್ನು ತಿಳಿಸಿದೆ. ಮುಖ್ಯ ಕಾರ್ಯದರ್ಶಿಗಳು, ರಾಜ್ಯ ನೋಡಲ್ ಇಲಾಖೆಗಳು ಮತ್ತು ಅನುಷ್ಠಾನ ಏಜೆನ್ಸಿಗಳಿಗೆ ಟ್ರೈಫೆಡ್ ಪ್ರಧಾನ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ ಅವರು ಬರೆದಿರುವ ಪತ್ರದಲ್ಲಿ, ಟ್ರೈಫೆಡ್ ಯುನಿಸೆಫ್ ಸಹಯೋಗದೊಂದಿಗೆ ವನಧನ್ ವಿಕಾಸ ಕೇಂದ್ರಗಳ (ವಿಡಿವಿಕೆಗಳ) ವನಧನ್ ಸ್ವಸಹಾಯ ಗುಂಪು ಸದಸ್ಯರಿಗೆ ಬುಡಕಟ್ಟು ಜನರು ತಮ್ಮ ಕೆಲಸದ ಸಮಯದಲ್ಲಿ ಸಾಮಾಜಿಕ ಅಂತರದ ಕ್ರಮಗಳನ್ನು ಅನುಸರಿಸಲು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ವೆಬಿನಾರ್ ಅಧಿವೇಶನಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಎಲ್ಲಾ ರಾಜ್ಯಗಳ ನೋಡಲ್ ಇಲಾಖೆಗಳು, ಅನುಷ್ಠಾನಗೊಳಿಸುವ ಏಜೆನ್ಸಿಗಳು ವೆಬಿನಾರ್ನಲ್ಲಿ ಭಾಗವಹಿಸುತ್ತಿವೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮೂಲಕ ಕಿರು ಅರಣ್ಯ ಉತ್ಪಾದನೆ (ಎಂಎಫ್ಪಿ) ಮತ್ತು ಎಮ್ಎಫ್ಪಿ ಮೌಲ್ಯ ಸರಪಳಿಯ ಅಭಿವೃದ್ಧಿ ಕುರಿತು  ಬುಡಕಟ್ಟು ವ್ಯವಹಾರಗಳ ಸಚಿವಾಲಯವು ವೈಡ್ 26.02.2019 ರಂದು ಅಧಿಸೂಚನೆ ಹೊರಡಿಸಿ ಮಾರ್ಗಸೂಚಿಗಳನ್ನು ತಿಳಿಸಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಸಹ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಬುಡಕಟ್ಟು ಸಮುದಾಯಗಳ ಮೇಲೆ ಉಂಟಾಗುವ ಪರಿಣಾಮವನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬುಡಕಟ್ಟು ಸಂಗ್ರಹಕಾರರಿಗೆ ಹೆಚ್ಚು ಅಗತ್ಯವಾದ ಜೀವನೋಪಾಯದ ಬೆಂಬಲವನ್ನು ಒದಗಿಸಲು ಮತ್ತು ನಗರ ಪ್ರದೇಶಗಳಿಂದ ಬುಡಕಟ್ಟು ವಾಸಸ್ಥಳಗಳಿಗೆ ಮಧ್ಯವರ್ತಿಗಳ ಸಂಚಾರವನ್ನು ತಪ್ಪಿಸಲು ಎಂಎಫ್ಪಿ ಯೋಜನೆಗಾಗಿ ಎಂಎಸ್ಪಿ ಅಡಿಯಲ್ಲಿ ಎಂಎಫ್ಪಿಗಳ ಖರೀದಿಯನ್ನು ಪ್ರಾರಂಭಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಇದರಿಂದ ಬುಡಕಟ್ಟು ಸಮುದಾಯಗಳಲ್ಲಿ ಕೊರೊನಾ ವೈರಸ್ ಹರಡುವ ಸಂಭವನೀಯತೆಯನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

***



(Release ID: 1613557) Visitor Counter : 160