ಆಯುಷ್

ಹೋಮಿಯೋಪತಿ ವೈದ್ಯರಿಗೆ ಟೆಲಿಮೆಡಿಸಿನ್ ಮಾರ್ಗಸೂಚಿಗಳ ಅನುಮೋದನೆ

Posted On: 11 APR 2020 11:52AM by PIB Bengaluru

ಹೋಮಿಯೋಪತಿ ವೈದ್ಯರಿಗೆ ಟೆಲಿಮೆಡಿಸಿನ್ ಮಾರ್ಗಸೂಚಿಗಳ ಅನುಮೋದನೆ

ವಿಶ್ವ ಹೋಮಿಯೋಪತಿ ದಿನದಂದು ಅಂತರರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿದ ಆಯುಷ್ ಸಚಿವ ಶ್ರೀಪಾದ್ ನಾಯಕ್

 

ಹೋಮಿಯೋಪತಿ ಸಂಸ್ಥಾಪಕ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ 265 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವ ಹೋಮಿಯೋಪತಿ ದಿನದಂದು 2020 ಏಪ್ರಿಲ್ 10 ರಂದು ಆಯುಷ್ ಸಚಿವಾಲಯದ ಅಡಿಯಲ್ಲಿ ಹೋಮೊಯೋಪತಿ ಸಂಶೋಧನಾ ಕೇಂದ್ರೀಯ ಮಂಡಳಿ (ಸಿಸಿಆರ್ಹೆಚ್) ಅಂತಾರಾಷ್ಟ್ರೀಯ ವೆಬಿನಾರ್ ಆಯೋಜಿಸಿತ್ತು. ಡಿಜಿಟಲ್ ವೇದಿಕೆಯಲ್ಲಿ ನೇರ ಪ್ರಸಾರವಾದ ವೆಬಿನಾರ್ನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ರಾಜ್ಯ ಸಚಿವ (ಸ್ವತಂತ್ರ ಹೊಣೆ) ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ತಮ್ಮ ಉದ್ಘಾಟನಾ ಭಾಷಣದಲ್ಲಿ, ಹೋಮಿಯೋಪತಿ ವೈದ್ಯರಿಗೆ ಟೆಲಿಮೆಡಿಸಿನ್ ಮಾರ್ಗಸೂಚಿಗಳ ಅನುಮೋದನೆಯನ್ನು ಘೋಷಿಸಿದರು ಮತ್ತು ಅಗತ್ಯವಿದ್ದಲ್ಲಿ ಕೋವಿಡ್ ಕಾರ್ಯಪಡೆಯೊಂದಿಗೆ ಹೊಂದಾಣಿಕೆ ಮಾಡಲು ಆಯುಷ್ ಕಾರ್ಯಪಡೆಗಳನ್ನು ಸಜ್ಜುಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು ಶುಭಾಶಯ ಕೋರಿದರು. ಗ್ರೀಸ್ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಕ್ಲಾಸಿಕಲ್ ಹೋಮಿಯೋಪತಿ ನಿರ್ದೇಶಕ ಪ್ರೊ. (ಡಾ) ಜಾರ್ಜ್ ವಿಥೌಲ್ಕಾಸ್, ಡಾ.ಅನಿಲ್ ಖುರಾನಾ, ಡಿಜಿ (ಪ್ರಭಾರ), ಸಿ.ಸಿ.ಆರ್.ಎಚ್, ಡಾ. ಆರ್.ಕೆ.ಮನ್ ಚಂದ, ನಿರ್ದೇಶಕ ಹೋಮಿಯೋಪತಿ, ಆಯುಷ್, ದೆಹಲಿ ಸರ್ಕಾರ,  ಡಾ. ಸುಭಾಷ್ ಸಿಂಗ್ ಕೋಲ್ಕತ್ತಾದ ಎನ್ಐಹೆಚ್ ನಿರ್ದೇಶಕ, ಆಯುಷ್ ಸಚಿವಾಲಯದ ನಿರ್ದೇಶಕ ಡಾ.ಎಸ್.ಆರ್.ಕೆ ವಿದ್ಯಾರ್ಥಿ, ಭಾರತದ ಡಾ.ವಿ.ಕೆ.ಗುಪ್ತಾ, ಯುಕೆಯ ಡಾ. ರಾಬರ್ಟ್ ವ್ಯಾನ್ ಹಸೆಲೆನ್ಪ್ರೊ.ಆರೋನ್ ತೋ, ಹಾಂಗ್ ಕಾಂಗ್ ಮುಖ್ಯ ಭಾಷಣಕಾರರಾಗಿದ್ದರು. ಹೆಚ್ಚಿನ ಭಾಷಣಕಾರರು COVID 19 ನಿಗ್ರಹದಲ್ಲಿ  ಹೋಮಿಯೋಪತಿಯ ಸಂಭಾವ್ಯತೆಗಳ ಮತ್ತು COVID ರೋಗಿಗಳಿಗೆ ಪ್ರಮಾಣಿತ ಆರೈಕೆಯೊಂದಿಗೆ ಸಹಾಯಕವಾಗಿ ಹೋಮಿಯೋಪತಿ ಬಳಕೆಯ ಬಗ್ಗೆ ಬಗ್ಗೆ ಮಾತನಾಡಿದರು.

https://ci5.googleusercontent.com/proxy/GupN2KZ_O-488ugXCT7EGZz10ogWglUKkyW8ToeDHwnjMJArFU8PBUVX2lPpKnBfMpHgZaRsw1RGZFiAFnzSYd0lq1jUWQlxs1vfhmIAlHUwXABmbkq7=s0-d-e1-ft#https://static.pib.gov.in/WriteReadData/userfiles/image/image0013I43.jpg

ವಿಶ್ವ ಹೋಮಿಯೋಪತಿ ದಿನ 2020 ಅಂಗವಾಗಿ ವೆಬಿನಾರ್ನಲ್ಲಿ ಉದ್ಘಾಟನಾ ಭಾಷಣ ಮಾಡಿದ ರಾಜ್ಯ ಸಚಿವ (ಸ್ವತಂತ್ರ) ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್

https://ci3.googleusercontent.com/proxy/PAoLiC9Shk8_twBNb6HNA0D5Cme4WSG6_vkiCSL7ApCa7i8bMJW8oo2gEONKJ_vlBdqc-yWiGmKNX63Fc3fBBIPCqXRXAUaKd45k-G-E4mgypF_BpH8c=s0-d-e1-ft#https://static.pib.gov.in/WriteReadData/userfiles/image/image002Q5T7.jpg

ಡಬ್ಲ್ಯುಎಚ್ಡಿ 2020, ವೆಬಿನಾರ್ಗೆ ಹಾಜರಾದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು:

ಮೊದಲ ಸಾಲು ಡಾ.ಆರ್.ಕೆ.ಮನ್ ಚಂದ, ನಿರ್ದೇಶಕ, ಆಯುಷ್ ಇಲಾಖೆ ದೆಹಲಿ ಸರ್ಕಾರ, ಡಾ.ಅನಿಲ್ ಖುರಾನಾ, ಡಿಜಿ, ಸಿಸಿಆರ್ಹೆಚ್, ಪ್ರೊ. ಆರನ್ ಟು, ಹಾಂಗ್ಕಾಂಗ್

ಮಧ್ಯದ ಸಾಲು : ಡಾ. ರಾಬರ್ಟ್ ವ್ಯಾನ್ ಹಸ್ಸೆಲೆನ್, ಯುಕೆ, ಡಾ.ಹರ್ಲೀನ್ ಕೌರ್, ವಿಜ್ಞಾನಿ -1, ಸಿಸಿಆರ್ಹೆಚ್ (ಮಾಡರೇಟರ್), ಡಾ.ವಿಕೆ ಗುಪ್ತಾ, ಭಾರತ

ಕೊನೆಯ ಸಾಲು ಡಾ.ಸುಭಾಷ್ ಸಿಂಗ್, ನಿರ್ದೇಶಕ, ಎನ್ಐಹೆಚ್, ಡಾ.ಎಸ್.ಆರ್.ಕೆ ವಿದ್ಯಾರ್ಥಿ, ನಿರ್ದೇಶಕ , ಆಯುಷ್ ಸಚಿವಾಲಯ

***



(Release ID: 1613231) Visitor Counter : 243