ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕೋವಿಡ್-19 ಕಾರಣದಿಂದಾಗಿ ಸಾವು ಸಂಭವಿಸಿದ ಸಂದರ್ಭದಲ್ಲಿ, ಒಂದು ಲಕ್ಷಕ್ಕೂ ಹೆಚ್ಚು ಎಫ್‌ಸಿಐ ಉದ್ಯೋಗಿಗಳಿಗೆ ಎಕ್ಸ್-ಗ್ರೇಟಿಯಾ ಪರಿಹಾರ ನೀಡಲು ಸರ್ಕಾರದ ಅನುಮೋದನೆ

Posted On: 10 APR 2020 7:39PM by PIB Bengaluru

ಕೋವಿಡ್-19 ಕಾರಣದಿಂದಾಗಿ ಸಾವು ಸಂಭವಿಸಿದ ಸಂದರ್ಭದಲ್ಲಿ, ಒಂದು ಲಕ್ಷಕ್ಕೂ ಹೆಚ್ಚು ಎಫ್‌ಸಿಐ ಉದ್ಯೋಗಿಗಳಿಗೆ ಎಕ್ಸ್-ಗ್ರೇಟಿಯಾ ಪರಿಹಾರ ನೀಡಲು ಸರ್ಕಾರ ಅನುಮೋದನೆ

 

ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯ ಮಧ್ಯೆ ದೇಶಾದ್ಯಂತ ಆಹಾರ ಧಾನ್ಯಗಳನ್ನು ಪೂರೈಸಲು 24x7 ಕೆಲಸ ಮಾಡುತ್ತಿರುವ 80,000 ಕಾರ್ಮಿಕರು ಸೇರಿದಂತೆ 1,08,714 ಕಾರ್ಮಿಕರು ಮತ್ತು ಭಾರತದ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳಿಗೆ ಎಕ್ಸ್-ಗ್ರೇಟಿಯಾ ಪರಿಹಾರ ನೀಡುವ ಪ್ರಸ್ತಾಪವನ್ನು ಸರ್ಕಾರ ಅನುಮೋದಿಸಿದೆ.

ಪ್ರಸ್ತುತ, ಎಫ್‌ಸಿಐ ನೌಕರರ ಕುಟುಂಬಗಳು ಭಯೋತ್ಪಾದಕರ ದಾಳಿ, ಬಾಂಬ್ ಸ್ಫೋಟ, ಜನಸಮೂಹದ ದಾಳಿ ಅಥವಾ ನೈಸರ್ಗಿಕ ವಿಕೋಪದಿಂದಾದ ಸಾವಿನ ಸಂದರ್ಭದಲ್ಲಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ, ಆದರೆ ಎಫ್‌ಸಿಐನ ನಿಯಮಿತ ಮತ್ತು ಗುತ್ತಿಗೆ ಕಾರ್ಮಿಕರನ್ನು ಅದರ ನಿಬಂಧನೆಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಕೊರೊನಾವೈರಸ್ ಕೋವಿಡ್-19 ಸೋಂಕಿನ ಬೆದರಿಕೆಯ ನಡುವೆಯೂ ದಣಿವೆಯ ಅರಿವಿಲ್ಲದೆ ಕೆಲಸ ಮಾಡುತ್ತಿರುವ ಎಫ್‌ಸಿಐನ ಎಲ್ಲಾ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಎಕ್ಸ್-ಗ್ರೇಟಿಯಾ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಅದರ ನಿಬಂಧನೆಗಳ ಪ್ರಕಾರ, 2020 ರ ಮಾರ್ಚ್ 24 ರಿಂದ 2020 ರ ಸೆಪ್ಟೆಂಬರ್ 23 ರವರೆಗಿನ ಆರು ತಿಂಗಳ ಅವಧಿಯಲ್ಲಿ, ಎಫ್ಸಿಐಯೊಂದಿಗೆ ಕರ್ತವ್ಯದಲ್ಲಿದ್ದಾಗ ಕೋವಿಡ್ -19 ಸೋಂಕಿನಿಂದ ಯಾರಾದರೂ ಸತ್ತರೆ, ನಿಯಮಿತ ಎಫ್ಸಿಐ ಕಾರ್ಮಿಕ 15 ಲಕ್ಷ ರೂಪಾಯಿಗಳ ಪರಿಹಾರ ಪಡೆಯುತ್ತಾರೆ, ಗುತ್ತಿಗೆ ಕಾರ್ಮಿಕ 10 ಲಕ್ಷ ವಿಮೆ, ವರ್ಗ -1 ಅಧಿಕಾರಿಗಳು ರೂ.35 ಲಕ್ಷವರ್ಗ -2 - ರೂ .30 ಲಕ್ಷ ಮತ್ತು ವರ್ಗ -3 ಮತ್ತು -4 ಕೆಲಸಗಾರರು - ರೂ .25 ಲಕ್ಷ ಪಡೆಯುತ್ತಾರೆ.

ಇದನ್ನು ಘೋಷಿಸಿದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು, ಈ ಬಿಕ್ಕಟ್ಟಿನ ಸಮಯದಲ್ಲಿ ಸಾಮಾನ್ಯ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ನಮ್ಮ ಕೊರೊನಾ-ಯೋಧರಿಗೆ ಸಾಧ್ಯವಿರುವ ಎಲ್ಲ ಭದ್ರತೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

***



(Release ID: 1613166) Visitor Counter : 193