ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡಲು ದುರ್ಗಾಪುರ ಸಿಎಸ್ಐಆರ್ - ಸಿಎಮ್‌ಇಆರ್‌ಐನಿಂದ ಸೋಂಕುನಿವಾರಕ ವಾಕ್ ವೇ ಮತ್ತು ರಸ್ತೆ ನೈರ್ಮಲ್ಯೀಕರಣ ಘಟಕ

Posted On: 10 APR 2020 11:52AM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ದುರ್ಗಾಪುರ ಸಿಎಸ್ಐಆರ್ - ಸಿಎಮ್ಇಆರ್ಐನಿಂದ ಸೋಂಕುನಿವಾರಕ ವಾಕ್ ವೇ ಮತ್ತು ರಸ್ತೆ ನೈರ್ಮಲ್ಯೀಕರಣ ಘಟಕ

 

ನೊವೆಲ್ ಕೊರೊನಾವೈರಸ್ (ಕೋವಿಡ್-19) ವಿಶ್ವದಾದ್ಯಂತ ವ್ಯಾಪಕ ವಿನಾಶಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್ಐಆರ್) ಪರಿಹಾರಗಳನ್ನು ಕಂಡುಹಿಡಿಯುವ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದೆ. ಸಿಎಸ್ಐಆರ್ ಮುಖ್ಯ ಎಂಜಿನಿಯರಿಂಗ್ ಲ್ಯಾಬ್ಗಳಲ್ಲಿ ಒಂದಾದ ದುರ್ಗಾಪುರದ ಸಿಎಸ್ಐಆರ್-ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಎಮ್ಇಆರ್) ವೈರಸ್ ಎದುರಿಸುವ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ,

ಸದ್ಯದ ಸಂದರ್ಭದಲ್ಲಿ ಅಗತ್ಯವಾಗಿರುವ ಅಭಿವೃದ್ಧಿಪಡಿಸಿರುವ ಕೆಲವು ತಂತ್ರಜ್ಞಾನಗಳು ಇಲ್ಲಿವೆ:

ಸೋಂಕುನಿವಾರಕ ನಡಿಗೆ ಮಾರ್ಗಗಳು (Disinfection Walkways): ಸೋಂಕುನಿವಾರಕ ವಾಕ್ವೇ ಲಭ್ಯವಿರುವ ಅತ್ಯಂತ ವ್ಯಾಪಕವಾದ ಸೋಂಕುನಿವಾರಕ ವಿತರಣಾ ವ್ಯವಸ್ಥೆಗಳಲ್ಲಿ ಒಂದೆಂದು ಪರಿಗಣಿಸಬಹುದು. ವಾಕ್ವೇ ಗರಿಷ್ಠ ಗುರಿ ವ್ಯಾಪ್ತಿಯನ್ನು ಖಾತ್ರಿಗೊಳಿಸುತ್ತದೆ. ಸೋಂಕುನಿವಾರಕ ನಡಿಗೆ ಮಾರ್ಗಗಳನ್ನು ಐಸೊಲೇಷನ್ / ಕ್ಯಾರೆಂಟೈನ್ ಸೌಲಭ್ಯಗಳು, ಅಧಿಕ ಸಂಖ್ಯೆಯ ಪ್ರಯಾಣಿಕರ ಪ್ರವೇಶ ಸ್ಥಳಗಳು, ವೈದ್ಯಕೀಯ ಕೇಂದ್ರಗಳು ಮತ್ತು ಗಣನೀಯ ಪ್ರಮಾಣದ ಕಾಲ್ನಡಿಗೆಯಿರುವ ಇತರ ಸ್ಥಳಗಳಲ್ಲಿ ನಿಯೋಜಿಸಬಹುದು.

ಎರಡು ವಿಧದ ಸೋಂಕುನಿವಾರಕ ವಾಕ್ವೇಗಳನ್ನು ಸಿಎಸ್ಐಆರ್-ಸಿಎಮ್ಇಆರ್ ಅಭಿವೃದ್ಧಿಪಡಿಸಿದೆ:

  1. ನ್ಯೂಮ್ಯಾಟಿಕ್ ಸೋಂಕು ನಿವಾರಕ ವಾಕ್ವೇ: ಸೋಂಕುನಿವಾರಕ ವಾಕ್ವೇಯ ವಿಧವು ಗರಿಷ್ಠ ಮಂಜಿನ ರಚನೆಯನ್ನು ಖಚಿತಪಡಿಸಿಕೊಳ್ಳಲು ಸಿಕ್ಸ್ ಬಾರ್ ಪ್ರೆಶರ್ ಏರ್ ಸಂಕೋಚಕವನ್ನು ನಿಯೋಜಿಸುತ್ತದೆ. ವಾಕ್ವೇಯ ಎಂಬೆಡೆಡ್ ಸೆನ್ಸರ್ಗಳಿಂದಾಗಿ ಕಾರ್ಯಾಚರಣೆಯ ಸಮಯವನ್ನು 20 ಸೆಕೆಂಡ್ಗಳಿಂದ 40 ಸೆಕೆಂಡುಗಳಲ್ಲಿ ಬದಲಾಯಿಸಬಹುದು. ವಿಧದ ಆರಂಭಿಕ ವೆಚ್ಚವು ಸ್ವಲ್ಪ ಹೆಚ್ಚೆನಿಸದರೂ, ವ್ಯವಸ್ಥೆಯಲ್ಲಿ ಸೋಂಕುನಿವಾರಕವನ್ನು ಗರಿಷ್ಠವಾಗಿ ಬಳಸುವುದರಿಂದ ವ್ಯವಸ್ಥೆಯ ನಿರ್ವಹಣಾ ವೆಚ್ಚವು ತುಂಬಾ ಕಡಿಮೆಯಾಗಿದೆ. ಇದನ್ನು CMERI ನಲ್ಲಿ ಸ್ಥಾಪಿಸಲಾಗಿದೆ ಮತ್ತು CMERI ಇನ್ಸ್ಟಿಟ್ಯೂಟ್ ಮುಖ್ಯ ಗೇಟ್ನಲ್ಲಿನ ವಾಕ್ವೇ 2 ಮೀಟರ್ ಎತ್ತರ 2.1 ಮೀಟರ್ ಉದ್ದ ಮತ್ತು 1 ಮೀಟರ್ ಅಗಲ ಇದೆ.
  2. ಹೈಡ್ರಾಲಿಕ್ ಸೋಂಕು ನಿವಾರಕ ವಾಕ್ವೇ: ಇದು ಅತ್ಯುತ್ತಮವಾದ ಮಂಜಿನ ರಚನೆಯನ್ನು ಖಚಿತಪಡಿಸಿಕೊಳ್ಳಲು 1 ಎಚ್ಪಿ ಒತ್ತಡದ ಮೋಟಾರ್ ಹೈ ವೆಲಾಸಿಟಿ ಪಂಪ್ ಅನ್ನು ಅಗತ್ಯವಾದ ಸೆಟಪ್ ನಳಿಕೆಗಳೊಂದಿಗೆ ನಿಯೋಜಿಸುತ್ತದೆ. ರೂಪಾಂತರದ ಆರಂಭಿಕ ವೆಚ್ಚ ತುಲನಾತ್ಮಕವಾಗಿ ಕಡಿಮೆಯಾಗಿದೆ. ವಾಕ್ವೇಯ ಎಂಬೆಡೆಡ್ ಸೆನ್ಸರ್ಗಳು ವ್ಯವಸ್ಥೆಯ ಕಾರ್ಯಾಚರಣೆಯ ಸಮಯ ಕೇವಲ 20 ಸೆಕೆಂಡ್ಗಳಿಂದ 40 ಸೆಕೆಂಡುಗಳ ವ್ಯಾಪ್ತಿಯಲ್ಲಿರುವುದನ್ನು ಖಚಿತಪಡಿಸುತ್ತದೆ. ವಿಧದ ಸೋಂಕುನಿವಾರಕ ವಾಕ್ವೇಯನ್ನು ಸಿಎಮ್ಇಆರ್ ವೈದ್ಯಕೀಯ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.

ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರ, ದುರ್ಗಾಪುರ ಮಹಾನಗರ ಪಾಲಿಕೆ ಮತ್ತು ದುರ್ಗಾಪುರದ ಈಶ್ವರ್ ಚಂದ್ರ ಪ್ರೌಢಶಾಲೆ ಸೋಂಕುನಿವಾರಕ ವಾಕ್ ವೇ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿವೆ.

 

Description: F:\New folder (5)\Disinfection Walkway 1.jpg

ಸೋಂಕು ನಿವಾರಕ ವಾಕ್ವೇ

Description: C:\Users\USER\Downloads\Press\DMC\untitled-4-2.jpg

ಸೋಂಕುನಿವಾರಕ ವಾಕ್ವೇಗೆ ಭೇಟಿ ನೀಡಿದ ಡಿಎಂಸಿ ಪ್ರತಿನಿಧಿಗಳು

ರಸ್ತೆ ನೈರ್ಮಲ್ಯೀಕರಣ ಘಟಕ:

ಸಿಎಸ್ಐಆರ್- ಸಿಎಮ್ಇಆರ್ ರಸ್ತೆ ನೈರ್ಮಲ್ಯೀಕರಣ ಘಟಕವು ಟ್ರಾಕ್ಟರ್ ಗೆ ಅಳವಡಿಸಲಾದ ವ್ಯವಸ್ಥೆಯಾಗಿದೆ. ರಸ್ತೆ ನೈರ್ಮಲ್ಯೀಕರಣ ಘಟಕವನ್ನು ಹೆಚ್ಚಿನ ಪ್ರಮಾಣದ ದಟ್ಟಣೆ ಮತ್ತು ಸೋಂಕು ಹರಡುವ ಸಾಧ್ಯತೆಗಳಿರುವ ಸುದೀರ್ಘ ಹೆದ್ದಾರಿಗಳು, ಟೋಲ್ ಪ್ಲಾಜಾಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ನಿಯೋಜಿಸಬಹುದು. ಇದನ್ನು ವಸತಿ ಸಂಕೀರ್ಣಗಳು, ಕಚೇರಿ ಸಂಕೀರ್ಣಗಳು, ಕ್ರೀಡಾಂಗಣಗಳು, ಅಪಾರ್ಟ್ಮೆಂಟ್ ಕಟ್ಟಡಗಳು ಇತ್ಯಾದಿಗಳಲ್ಲೂ ನಿಯೋಜಿಸಬಹುದು.

ರಸ್ತೆ ನೈರ್ಮಲ್ಯೀಕರಣ ಘಟಕವು 16 ಅಡಿಗಳಷ್ಟು ವಿಸ್ತಾರವಾಗಿದೆ. ಇದು ಸ್ಯಾನಿಟೈಜರ್ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು 15 ರಿಂದ 35 ಬಾರ್ ಒತ್ತಡವನ್ನು ಬಳಸುತ್ತದೆ. ಸ್ಯಾನಿಟೈಜರ್ನ ಗರಿಷ್ಠ ರೇಡಿಯಲ್ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು 12 ನಳಿಕೆಗಳನ್ನು ಬಳಸಲಾಗುತ್ತದೆ. ವ್ಯವಸ್ಥೆಯು 2000 ರಿಂದ 5000 ಲೀಟರ್ ಟ್ಯಾಂಕ್ ಅನ್ನು 22 ಎಲ್ಎಂಪಿ ಪಂಪ್ನೊಂದಿಗೆ ಬಳಸುತ್ತದೆ, ಇದನ್ನು 75 ಕಿ.ಮೀ.ವರೆಗಿನ ರಸ್ತೆಯನ್ನು ಸ್ವಚ್ಛಗೊಳಿಸಲು ಬಳಸಬಹುದು.

ಅಸನ್ಸೋಲ್ ನಗರ ಪಾಲಿಕೆಯು ಘಟಕದ ಪರಿಶೀಲನೆಯ ನಂತರ ಇಂತಹ ನಾಲ್ಕು ಘಟಕಗಳಿಗೆ ಆದೇಶವನ್ನು ನೀಡಿದೆ. ಅವುಗಳಲ್ಲಿ ಒಂದನ್ನು ಈಗಾಗಲೇ ಅವರಿಗೆ ನೀಡಲಾಗಿದೆ. ದುರ್ಗಾಪುರ ಮಹಾನಗರ ಪಾಲಿಕೆಯೂ ಘಟಕದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ ಮತ್ತು ಕಾರ್ಯವಿಧಾನದ ಮಾತುಕತೆಗಳು ಪ್ರಗತಿಯಲ್ಲಿವೆ. ಕೆಲವು ಎಂಎಸ್ಎಂಇಗಳು ಮತ್ತು ಸಣ್ಣ ಉದ್ಯಮ ಕ್ಲಸ್ಟರ್ಗಳು ಸಹ ಘಟಕದ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿವೆ ಮತ್ತು ಇದಕ್ಕಾಗಿ ಪರಸ್ಪರ ಮಾತುಕತೆಗಳು ನಡೆಯುತ್ತಿವೆ.

Description: untitled-7-5.jpgDescription: Tractor operated road disinfection Spray System.jpg

ಟ್ರಾಕ್ಟರ್ ಚಾಲಿತ ರಸ್ತೆ ಸೋಂಕುನಿವಾರಕ ಸಿಂಪಡಿಸುವಿಕೆಯ ವ್ಯವಸ್ಥೆಯ ಪ್ರದರ್ಶನ

***


(Release ID: 1612863) Visitor Counter : 173