ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

iGOT ಇ-ಲರ್ನಿಂಗ್ ವೇದಿಕೆಯ ಮೂಲಕ COVID-19 ವಿರುದ್ಧ ಹೋರಾಡುವವರನ್ನು ಸಶಕ್ತಗೊಳಿಸಲಿರುವ DoPT

Posted On: 08 APR 2020 7:06PM by PIB Bengaluru

iGOT -ಲರ್ನಿಂಗ್ ವೇದಿಕೆಯ ಮೂಲಕ COVID-19 ವಿರುದ್ಧ ಹೋರಾಡುವವರನ್ನು ಸಶಕ್ತಗೊಳಿಸಲಿರುವ DoPT

ಭಾರತದ ಎಲ್ಲಾ ಆರೋಗ್ಯ ಮತ್ತು COVID-19 ಯೋಧರಿಗೆ ತರಬೇತಿ ನೀಡಲು ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ

 

ಎಲ್ಲಾ ಮುಂಚೂಣಿ ಕೆಲಸಗಾರರನ್ನು COVID -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ತರಬೇತಿಯೊಂದಿಗೆ ಸಜ್ಜುಗೊಳಿಸಲು ಕಲಿಕಾ ವೇದಿಕೆಯನ್ನು (https://igot.gov.in) ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಕಟಿಸಿದೆ. ಸಾಂಕ್ರಾಮಿಕ ರೋಗದ ನಂತರದ ಹಂತಗಳಿಗೂ ಸೂಕ್ತ ತರಬೇತಿಯು ಅವರನ್ನು ಸಿದ್ಧಪಡಿಸುತ್ತದೆ. ಇತರ ಸಂಭಾವ್ಯ ಎರಡನೇ ಸಾಲಿನ ಕಾರ್ಯಪಡೆಗೂ COVID-19 ತರಬೇತಿಯನ್ನು ನೀಡುವ ಮೂಲಕ, ಉದ್ಭವಿಸುವ ಸಂದರ್ಭಗಳಿಗೆ ಭಾರತ ಉತ್ತಮವಾಗಿ ಸಿದ್ಧವಾಗಲಿದೆ.

ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ತಂತ್ರಜ್ಞರು, ಸಹಾಯಕ ನರ್ಸಿಂಗ್ ಶುಶ್ರೂಷಕಿಯರು (ಎಎನ್ಎಂ), ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ವಿವಿಧ ಪೊಲೀಸ್ ಸಂಸ್ಥೆಗಳು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ), ನೆಹರೂ ಯುವ ಕೇಂದ್ರ ಸಂಘಟನೆ (ಎನ್ವೈಕೆಎಸ್), ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ಇಂಡಿಯನ್ ರೆಡ್ಕ್ರಾಸ್ ಸೊಸೈಟಿ (ಐಆರ್ಸಿಎಸ್), ಭಾರತ್ ಸ್ಕೌಟ್ಸ್ & ಗೈಡ್ಸ್ (ಬಿಎಸ್ಜಿ) ಮತ್ತು ಇತರ ಸ್ವಯಂಸೇವಕರು ತರಬೇತಿಯ ಗುರಿಯಾಗಿದ್ದಾರೆ.

ವೇದಿಕೆಯು ಕಲಿಯುವ ಪ್ರತಿಯೊಬ್ಬರಿಗೂ ಅವರ ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಅವರ ಆಯ್ಕೆಯ ಯಾವುದೇ ಸಾಧನಕ್ಕೆ ಕ್ಯುರೇಟೆಡ್, ಪಾತ್ರ-ನಿರ್ದಿಷ್ಟ ವಿಷಯವನ್ನು ನೀಡುತ್ತದೆ. ಐಗೋಟ್ ಪ್ಲಾಟ್ಫಾರ್ಮ್ ಅನ್ನು ಜನಸಂಖ್ಯಾ ಪ್ರಮಾಣದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಮುಂಬರುವ ವಾರಗಳಲ್ಲಿ ಸುಮಾರು 1.50 ಕೋಟಿ ಕೆಲಸಗಾರರು ಮತ್ತು ಸ್ವಯಂಸೇವಕರಿಗೆ ತರಬೇತಿ ನೀಡಲಿದೆ. ಒಂಬತ್ತು ಕೋರ್ಸ್ಗಳೊಂದಿಗೆ ಆರಂಭವಾಗುವ ಐಗೋಟ್ ನಲ್ಲಿ ಕೋವಿಡ್ಬಗ್ಗೆ ಪ್ರಾಥಮಿಕ ತಿಳುವಳಿಕೆ, ಐಸಿಯು ಆರೈಕೆ ಮತ್ತು ವಾತಾಯನ ನಿರ್ವಹಣೆ, ಕ್ಲಿನಿಕಲ್ ಮ್ಯಾನೇಜ್ಮೆಂಟ್, ಪಿಪಿಇ ಮೂಲಕ ಸೋಂಕು ತಡೆಗಟ್ಟುವಿಕೆ, ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವಿಕೆ, ಕ್ವಾರಂಟೈನ್ ಮತ್ತು ಐಸೋಲೇಷನ್, ಪ್ರಯೋಗಾಲಯ ಮಾದರಿ ಸಂಗ್ರಹ ಮತ್ತು ಪರೀಕ್ಷೆ, COVID -19 ಪ್ರಕರಣಗಳ ನಿರ್ವಹಣೆ, COVID- 19 ತರಬೇತಿಯಂತಹ ವಿಷಯಗಳಿರುತ್ತವೆ.

ಅದರ ಕಸ್ಟಮೈಸ್ ಮಾಡಿದ ವಿಧಾನದ ಮೂಲಕ COVID-WARRIORS ಇದರಿಂದ ನಿರ್ಣಾಯಕ ವಿಷಯಗಳ ಬಗ್ಗೆ ಕಲಿಯಬಹುದು ಮತ್ತು ಚಾಲ್ತಿಯಲ್ಲಿರುವ ಮತ್ತು ಉದ್ಭವಿಸುವ ಸಂದರ್ಭಗಳಿಗೆ ಸ್ಪಂದಿಸಬಹುದು, ತಮ್ಮನ್ನು ನೈಜ-ಸಮಯದ ರೀತಿಯಲ್ಲಿ ಅಪ್ಡೆಟ್ ಮಾಡಿಕೊಳ್ಳುವ ಮೂಲಕ. ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಕಲಿಕೆಯ ಅನಿಯಮಿತ ವಿನಂತಿಗಳ ಬೇಡಿಕೆಗಳನ್ನು ಪೂರೈಸಲು ವೇದಿಕೆ ಸುಸಜ್ಜಿತವಾಗಿದೆ. ಡೆಸ್ಕ್ಟಾಪ್ ಮತ್ತು ಮೊಬೈಲ್ ಆವೃತ್ತಿಗಳಲ್ಲಿ ಇದನ್ನು ಬಳಸಬಹುದು. ಇದರಿಂದಾಗಿ ಎಲ್ಲರಿಗೂ ಇದು ಲಭ್ಯವಾಗುತ್ತದೆ.

ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರದೇಶ ಸೇವೆ ಮಾಡುವವರನ್ನು ನೋಡಿಕೊಳ್ಳಬೇಕುಹೇಳಿಕೆ ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ದೃಷ್ಟಿಯನ್ನು ವೇದಿಕೆ ಪ್ರತಿಬಿಂಬಿಸುತ್ತದೆ. ಎಲ್ಲಾ ಮುಂಚೂಣಿಯ COVID-19 ಆರೋಗ್ಯ ಯೋಧರ ಶಸ್ತ್ರಾಗಾರದಲ್ಲಿ ಇದೊಂದು ನಿರ್ಣಾಯಕ ಅಸ್ತ್ರವಾಗಿರುತ್ತದೆ. ಅವರ ಅಪ್ಡೆಟೆಡ್ ಜ್ಞಾನ ಮತ್ತು ಸಾಮರ್ಥ್ಯವು ನಮ್ಮ ರಾಷ್ಟ್ರವು COVID-19 ಸಾಂಕ್ರಾಮಿಕ ವಿರುದ್ಧದ ಯುದ್ಧವನ್ನು ಗೆಲ್ಲಲು ಸಹಾಯ ಮಾಡುತ್ತದೆ.

ಅಗತ್ಯಗಳಿಗೆ ಅಳವಡಿಸಲಾದ ಐಗೋಟ್ ಆವೃತ್ತಿಯು (https://igot.gov.in). URL ಲಿಂಕ್ನಲ್ಲಿದೆ.. ಪ್ಲಾಟ್ಫಾರ್ಮ್ ಮೊದಲ ಆವೃತ್ತಿ ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್ಫಾಕ್ಸ್ನೊಂದಿಗೆ ಬಳಸಲು ಲಭ್ಯವಿದೆ, ಮತ್ತು ನಂತರದ ಆವೃತ್ತಿಗಳು ಇತರ ಬ್ರೌಸರ್ಗಳನ್ನು ಬೆಂಬಲಿಸುತ್ತವೆ.

***



(Release ID: 1612451) Visitor Counter : 153