ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಅರಣ್ಯ ಉಪ ಉತ್ಪನ್ನಗಳನ್ನು ತುರ್ತಾಗಿ ಎಂಎಸ್ ಪಿ ದರದಲ್ಲಿ ಖರೀದಿಸುವಂತೆ ರಾಜ್ಯಗಳ ನೋಡಲ್ ಏಜೆನ್ಸಿಗಳಿಗೆ ಸೂಚಿಸಲು ಶ್ರೀ ಅರ್ಜುನ್ ಮುಂಡ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ

Posted On: 08 APR 2020 4:51PM by PIB Bengaluru

ಅರಣ್ಯ ಉಪ ಉತ್ಪನ್ನಗಳನ್ನು ತುರ್ತಾಗಿ ಎಂಎಸ್ ಪಿ ದರದಲ್ಲಿ ಖರೀದಿಸುವಂತೆ ರಾಜ್ಯಗಳ ನೋಡಲ್ ಏಜೆನ್ಸಿಗಳಿಗೆ ಸೂಚಿಸಲು ಶ್ರೀ ಅರ್ಜುನ್ ಮುಂಡ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ

 

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡ ಅವರು, 15 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಅರಣ್ಯ ಉಪ ಉತ್ಪನ್ನ(ಎಂಎಫ್ ಪಿ)ಗಳನ್ನು ತುರ್ತಾಗಿ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ನೀಡಿ ಖರೀದಿಸುವಂತೆ ರಾಜ್ಯಗಳ ನೋಡಲ್ ಏಜೆನ್ಸಿಗಳಿಗೆ ಸೂಚಿಸಲು ಕೋರಿದ್ದಾರೆ. ಆ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಆಂಧ್ರಪ್ರದೇಶ, ಕೇರಳ, ಮಣಿಪುರ, ನಾಗಾಲ್ಯಾಂಡ್, ಪಶ್ಚಿಮಬಂಗಾಳ, ರಾಜಸ್ತಾನ್, ಒಡಿಶಾ, ಚತ್ತೀಸ್ ಗಢ ಮತ್ತು ಜಾರ್ಖಂಡ್ ಸೇರಿವೆ.

ಅವರು ತಮ್ಮ ಪತ್ರಗದಲ್ಲಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಅನಿರೀಕ್ಷಿತ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸ್ಥಿತಿ ಉದ್ಭವವಾಗಿದೆ, ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಭಾರೀ ತೊಂದರೆಯಾಗಿದೆ. ಈ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದವರು ಸೇರಿದಂತೆ ಬಡವರು ಮತ್ತು ದುರ್ಬಲ ವರ್ಗದವರಿಗೆ ತೀವ್ರ ತೊಂದರೆಯಾಗಿದೆ. ಇದು ಉಪ ಅರಣ್ಯ ಉತ್ಪನ್ನಗಳು(ಎಂಎಫ್ ಪಿ)/ ಮರ ಹುಟ್ಟು ಹೊರತುಪಡಿಸಿ, ಇತರೆ ಅರಣ್ಯ ಉತ್ಪನ್ನ(ಎನ್ ಟಿಎಫ್ ಪಿ) ಕಟಾವು ಋತುಮಾನವಾಗಿದ್ದು, ಹಲವು ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಖಾತ್ರಿಪಡಿಸಲು ಕೆಲವು ಕ್ರಿಯಾಶೀಲ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ಅವರ ಇಡೀ ಆರ್ಥಿಕತೆ ಎಂಎಫ್ ಪಿ/ ಎನ್ ಟಿಎಫ್ ಪಿ ಆಧರಿಸಿದೆ. ಹಾಗಾಗಿ ಅವರ ಜೀವನೋಪಾಯ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಶ್ರೀ ಮುಂಡ ಅವರು, ನಗರ ಪ್ರದೇಶಗಳಿಂದ ಮಧ್ಯವರ್ತಿಗಳು ಆದಿವಾಸಿಗಳು ನೆಲೆಸಿರುವಂತಹ ಸ್ಥಳಗಳಿಗೆ ಹೋಗದಂತೆ ತಡೆಯುವ ಅಗತ್ಯವಿದೆ ಮತ್ತು ಆ ಮೂಲಕ ಬುಡಕಟ್ಟು ಸಮುದಾಯಕ್ಕೆ ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಗಳಲ್ಲಿ ಹಲವು ಯೋಜನೆಗಳಲ್ಲಿ ಅಗತ್ಯ ನಿಧಿಗಳಿವೆ ಮತ್ತು ಅಗತ್ಯಬಿದ್ದರೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಹೆಚ್ಚುವರಿ ನಿಧಿಯನ್ನೂ ಸಹ ಒದಗಿಸಲಾಗುವುದು. ಈ ಎಲ್ಲಾ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಜಿಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಸಚಿವಾಲಯದ ಜೊತೆ ಹಂಚಿಕೊಳ್ಳಬೇಕು. ಯಾವುದೇ ಹೆಚ್ಚಿನ ಬೆಂಬಲ ಅಗತ್ಯಬಿದ್ದರೆ, ಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆ ಒಕ್ಕೂಟ(ಟಿಆರ್ ಐಎಫ್ಇಡಿ)ದ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಬುಡಕಟ್ಟು ಸಮುದಾಯಗಳಲ್ಲಿ ವನ ಧನ ಸ್ವಸಹಾಯ ಗುಂಪುಗಳ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ವನ ಧನ ಯೋಜನೆ(ಪಿಎಂವಿಡಿವೈ) ಅನುಷ್ಠಾನದಿಂದ ಸುಸ್ಥಿರ ಜೀವನೋಪಾಯಗಳ ಸೃಷ್ಟಿಗೆ ಮತ್ತು ಬುಡಕಟ್ಟು ಜನರಲ್ಲಿ ಉದ್ಯಮದ ಉತ್ತೇಜನಕ್ಕೆ ನೆರವಾಗುತ್ತಿದ್ದು, ಇದು ರಾಜ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಸೃಷ್ಟಿಸಿದೆ. 27 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿ ಒಳಗೊಂಡಂತೆ 1205 ವನ ಧನ ವಿಕಾಸ ಕೇಂದ್ರ(ವಿಡಿವಿಕೆಎಸ್)ಗಳ ಸ್ಥಾಪನೆಗೆ ಅನುಮೋದಿಸಲಾಗಿದೆ. ಆ ಮೂಲಕ 3.60 ಲಕ್ಷ ಬುಡಕಟ್ಟು ಜನರನ್ನು ಒಗ್ಗೂಡಿಸಿ ಅವರನ್ನು ಉದ್ಯಮಶೀಲರನ್ನಾಗಿ ಮಾಡುವ ಮಾರ್ಗದತ್ತ ಕೊಂಡೊಯ್ಯಲಾಗುತ್ತಿದೆ.

 

*****

 



(Release ID: 1612301) Visitor Counter : 153