ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಿಎಸ್ಐಆರ್- ಕೇಂದ್ರೀಯ ಎಲೆಕ್ಟ್ರೋ ಕೆಮಿಕಲ್ ಸಂಶೋಧನಾ ಸಂಸ್ಥೆ (ಸಿಎಸ್ಐಆರ್-ಸಿಇಸಿಆರ್ ಐ) ಉದ್ಯಮದೊಂದಿಗೆ ಜೊತೆಗೂಡಿ ವೈಯಕ್ತಿಕ ರಕ್ಷಣಾ ಉಪಕರಣಗಳ ಉತ್ಪಾದನೆ

Posted On: 08 APR 2020 11:27AM by PIB Bengaluru

ಸಿಎಸ್ಐಆರ್- ಕೇಂದ್ರೀಯ ಎಲೆಕ್ಟ್ರೋ ಕೆಮಿಕಲ್ ಸಂಶೋಧನಾ ಸಂಸ್ಥೆ (ಸಿಎಸ್ಐಆರ್-ಸಿಇಸಿಆರ್ ಐ) ಉದ್ಯಮದೊಂದಿಗೆ ಜೊತೆಗೂಡಿ ವೈಯಕ್ತಿಕ ರಕ್ಷಣಾ ಉಪಕರಣಗಳ ಉತ್ಪಾದನೆ

ಆಸಕ್ತಿಕರ ಗ್ರಾಮೀಣ ಮಹಿಳೆಯರಿಗಾಗಿ ಮಾಸ್ಕ್ ತಯಾರಿಕೆ ಬಗ್ಗೆ ಡಿಜಿಟಲ್ ತರಬೇತಿ

 

ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿಯ ಈ ಸಂದರ್ಭದಲ್ಲಿ ಸಿಎಸ್ಐಆರ್ ವಿಶೇಷ ಪ್ರಯತ್ನಗಳನ್ನು ಕೈಗೊಂಡಿದೆ, ಅದು ತನ್ನ ತಮಿಳುನಾಡಿನ ಕಾರೈಕುಡಿಯಲ್ಲಿರುವ ಸಿಎಸ್ಐಆರ್-ಸಿಇಸಿಆರ್ ಐ(ಕೇಂದ್ರೀಯ ಪೆಟ್ರೋ ಕೆಮಿಕಲ್ ಸಂಶೋಧನಾ ಸಂಸ್ಥೆ)ನಿಂದ ಕೋವಿಡ್-19 ನಿಯಂತ್ರಣಕ್ಕೆ ತನ್ನ ವೈಜ್ಞಾನಿಕ ಸೇವೆಯ ಮೂಲಕ ಸಮಾಜಕ್ಕೆ ಸಹಾಯ ಮಾಡಲು ಮುಂದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸ್ಯಾನಿಟೈಸರ್, ಆಸ್ಪತ್ರೆಗೆ ನೆರವಾಗುವ ಉಪಕರಣಗಳು ಮತ್ತು ವೈಯಕ್ತಿಕಾ ರಕ್ಷಣಾ ಉಪಕರಣ(ಪಿಪಿಇ) ಅವುಗಳು ಅತ್ಯಗತ್ಯ. ಆ ನಿಟ್ಟಿನಲ್ಲಿ ಸಿಎಸ್ಐಆರ್-ಸಿಇಸಿಆರ್ ಐ, ಸರಣಿ ಪ್ರಯೋಗಗಳ ಮೂಲಕ ಪಿಪಿಇಗಳನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಸೊಲ್ಯೂಷನ್ಸ್ ಸೇರಿದೆ. ಡಬ್ಲ್ಯೂಎಚ್ಒ ಶಿಫಾರಸ್ಸಿನಂತೆ(ಐಎಸ್ಒ/ಪ್ರೊಪೊನಾಲ್ 75%, ಗ್ಲೈಸೋರೆಲ್ 1.45%, ಹೈಡ್ರೋಜನ್ ಪೆರೋಕ್ಸೈಡ್ 0.125% ಮತ್ತು ಲೆಮನ್ ಗ್ರಾಸ್ ಆಯಿಲ್ ಹಾಗೂ ಸುಗಂಧ ದ್ರವ್ಯಗಳು)ಅಭಿವೃದ್ಧಿಪಡಿಸಲಾಗಿದೆ. ಕೊಬ್ಬರಿ ಎಣ್ಣೆ ಮತ್ತು ಸೋಡಿಯಂ ಹೈಪೊಕ್ಲೋರೈಟ್ ಆಧಾರಿತ ಕೈ ತೊಳೆಯುವ ಪರಿಹಾರಗಳನ್ನು ಮತ್ತು ಸೋಂಕು ನಿವಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ದ್ರಾವಕಗಳು ಕಂಟೈನರ್ ಗಳಲ್ಲಿ ತುಂಬಿ ಅವುಗಳ ಮೇಲೆ ಮಾಹಿತಿಯನ್ನು ಅಂಟಿಸಿ, ಅಗತ್ಯವಿರುವ ಸಂಸ್ಥೆಗಳಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ.

ಈವರೆಗೆ ಸುಮಾರು 350 ಲೀಟರ್ ಹ್ಯಾಂಡ್ ಸ್ಯಾನಿಟೈಸರ್, 250 ಲೀಟರ್ ಹ್ಯಾಂಡ್ ವಾಶ್ ಸೊಲ್ಯೂಶನ್ಸ್ ಮತ್ತು 1000 ಲೀಟರ್ ಹೈಪೊ-ಡಿಸ್ ಇನ್ಫೆಕ್ಟೆಂಟ್ಸ್ ವಿತರಿಸಲಾಗಿದೆ. ಕಾರೈಕುಡಿ ಮಹಾನಗರ ಪಾಲಿಕೆ, ದೇವಕೊಟ್ಟೈ ಮುನಿಸಿಪಲ್ ಕಾರ್ಪೊರೇಷನ್, ಶಿವಗಂಗಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕಾರೈಕುಡಿ ಸರ್ಕಾರಿ ಆಸ್ಪತ್ರೆ, ಶಿವಗಂಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮತ್ತು ಕಾರೈಕುಡಿ ಸುತ್ತಮುತ್ತ ಪೊಲೀಸ್ ಠಾಣೆಗಳು, ಸಕ್ಕೊತೈ, ಕೊಟ್ಟಿಯಾರ್, ಆರ್,ಎಸ್. ಪಟ್ಟಿನಮ್, ನೆರ್ ಕುಪ್ಪೈ ಸುತ್ತಮುತ್ತಲ ಪ್ರಾಥಮಿಕ ಕೇಂದ್ರಗಳು, ಪಂಚಾಯಿತಿ ಒಕ್ಕೂಟಗಳು, ಹಲವು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ದ್ರಾವಕಗಳನ್ನು ವಿತರಣೆ ಮಾಡಲಾಗಿದೆ. ಕೋವಿಡ್-19 ಸ್ಥಿತಿಗತಿ ಸಾಮಾನ್ಯಕ್ಕೆ ಮರಳುವವರೆಗೆ ಈ ವಿತರಣೆಯನ್ನು ಮುಂದುವರಿಸುವ ಯೋಜನೆಯನ್ನು ಸಿಇಸಿಆರ್ ಐ ಹೊಂದಿದೆ.

ಅಲ್ಲದೆ ಸಿಎಸ್ಐಆರ್-ಸಿಇಸಿಆರ್ ಐ, ಆಸಕ್ತ ಗ್ರಾಮೀಣ ಮಹಿಳೆಯರಿಗೆ ನೆರವಾಗಲು ಮಾಸ್ಕ್ ಗಳನ್ನು ತಯಾರಿಸುವ ಕುರಿತು ಡಿಜಿಟಲ್ ತರಬೇತಿಯನ್ನು ಆರಂಭಿಸಿದೆ. ಇದರಿಂದ ಆ ಮಹಿಳೆಯರು ತಮ್ಮ ಸುತ್ತಮುತ್ತಲ ಅಗತ್ಯತೆಗಳನ್ನು ಈಡೇರಿಸಬಹುದಾಗಿದೆ. ಮತ್ತೊಂದೆಡೆ ಸಿಎಸ್ಐಆರ್-ಸಿಇಸಿಆರ್ ಐ ಡಿಸ್ಪೆನ್ಸರಿ ಸಿಬ್ಬಂದಿಯನ್ನು ರಕ್ಷಿಸಲು 3ಡಿ ಪ್ರಿಂಟೆಡ್ ಮುಖ ಕವಚ ಮತ್ತು ಮರುಬಳಕೆ ಮಾಡಬಹುದಾದಂತಹ ಆಯ್ಕೆಯುಳ್ಳ ವಸ್ತುಗಳನ್ನು ಕೊಡುಗೆಯಾಗಿ ನೀಡಿದೆ. ಇದರಿಂದಾಗಿ ಸಿಬ್ಬಂದಿ ಕೆಮ್ಮು, ಶೀತ, ನೆಗಡಿ, ಸೀನುವ ರೋಗಿಗಳಿಂದ ತಮ್ಮನ್ನು ಪರಿಣಾಮಕಾರಿಯಾಗಿ ರಕ್ಷಿಸಿಕೊಳ್ಳಬಹುದಾಗಿದೆ.

ಸಿಎಸ್ಐಆರ್-ಸಿಇಸಿಆರ್ ಐ, ಉದ್ಯಮದ ಜೊತೆಗೂಡಿ, ಭಾರೀ ಉತ್ಪಾದನೆಗೆ ಮುಂದಾಗಿದ್ದು, ಅದು ಮುಖ ಕವಚಗಳ ರಕ್ಷಣೆಗೆ ಬೆಂಗಳೂರಿನ 3ಡಿ ಲೈಕನ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಸಿಎಸ್ಐಆರ್-ಸಿಇಸಿಆರ್ ಐ, ಅತ್ಯಲ್ಪ ಅವಧಿಯಲ್ಲಿಯೇ ವೈರಾಣುಗಳಿಂದ ಪರಿಣಾಮಕಾರಿಯಾಗಿ ರಕ್ಷಿಸುವಂತಹ ಸುಧಾರಿತ ಮುಖ ರಕ್ಷಾ ಕವಚವನ್ನು ಅಭಿವೃದ್ಧಿಗೊಳಿಸಲು ಬದ್ಧವಾಗಿದೆ. ಅಲ್ಲದೆ ಸಿಎಸ್ಐಆರ್-ಸಿಇಸಿಆರ್ ಐ ತನ್ನ ಒಂದು ಹೆಸರಾಂತ ತಂತ್ರಜ್ಞಾನ ಎಲೆಕ್ಟ್ರೋ ಕೆಮಿಕಲ್ ಸಿಂಥಸಿಸ್ ಆಫ್ ಹೈಪೋ ಕ್ಲೋರೈಟ್(ಸೋಂಕು ನಿವಾರಕ)ಅನ್ನು ವರ್ಗಾವಣೆ ಮಾಡಿದೆ. ಇದರಿಂದ ಎಂಎಸ್ಎಂಇಗಳು ದೊಡ್ಡ ಪ್ರಮಾಣದಲ್ಲಿ ಸೋಂಕು ನಿವಾರಣಾ ಸಿಂಪಡಣೆ ದ್ರಾವಕಗಳನ್ನು ಉತ್ಪಾದಿಸಬಹುದಾಗಿದ್ದು, ಅದನ್ನು ಸಾರ್ವಜನಿಕ ಸ್ಥಳಗಳು, ಆಸ್ಪತ್ರೆ ಮತ್ತಿತರ ಕಡೆ ಬಳಸಬಹುದಾಗಿದೆ. ಈ ಮೂಲಕ ಸಿಎಸ್ಐಆರ್-ಸಿಇಸಿಆರ್ ಐ ಸಮಾಜದ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ ಮತ್ತು ಸಮಾಜದ ಆಶೋತ್ತರಗಳನ್ನು ಈಡೇರಿಸುವ ಕಾಯಕದಲ್ಲಿ ತೊಡಗಿದೆ. ಅಲ್ಲದೆ ಪಾರಂಪರಿಕ ನಗರ ಕಾರೈಕುಡಿಯಲ್ಲಿ ಸಿಎಸ್ಐಆರ್-ಸಿಇಸಿಆರ್ ಐ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ ಮತ್ತು ನಗದು ಹಾಗೂ ಭೂಮಿಯನ್ನು ದಾನ ನೀಡಿದ ಪರೋಪಕಾರಿ ಡಾ. ಆರ್. ಎಂ. ಅಳಗಪ್ಪ ಚೆಟ್ಟಿಯಾರ್ ಅವರ ಕನಸನ್ನು ನನಸು ಮಾಡುವ ಕಾಯಕದಲ್ಲಿ ತೊಡಗಿದೆ.

ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್) ಅಧೀನದಲ್ಲಿ ಬರುವ ಅತ್ಯಂತ ಪ್ರಮುಖ ಸಂಶೋಧನಾ ಸಂಸ್ಥೆ, ಸಿಎಸ್ಐಆರ್ – ಕೇಂದ್ರೀಯ ಎಲೆಕ್ಟ್ರೋ ಕೆಮಿಕಲ್ ಸಂಶೋಧನಾ ಸಂಸ್ಥೆ(ಸಿಇಸಿಆರ್ ಐ), ಎಲೆಕ್ಟ್ರೋ ಕೆಮಿಕಲ್ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲ ಆಯಾಮಗಳ ಸಮಸ್ಯೆಗಳತ್ತ ಗಮನಹರಿಸುತ್ತಿದೆ. ಕೊರ್ರಿಸನ್ ವಿಜ್ಞಾನ ಮತ್ತು ತಂತ್ರಜ್ಞಾನ, ಎಲೆಕ್ಟ್ರೋ ಕೆಮಿಕಲ್ ಇಂಧನ ಮೂಲಗಳು, ಎಲೆಕ್ಟ್ರೋ ಕೆಮಿಕಲ್ ಭೌತ ವಿಜ್ಞಾನ, ಎಲೆಕ್ಟ್ರೋ ಆರ್ಗ್ಯಾನಿಕ್ ಮತ್ತು ಎಲೆಕ್ಟ್ರೋ ಇನಾರ್ಗ್ಯಾನಿಕ್ ಕೆಮಿಕಲ್ಸ್, ಎಲೆಕ್ಟ್ರೋಡಿಕ್ಸ್ ಮತ್ತು ಎಲೆಕ್ಟ್ರೋ ಕ್ಯಾಟಲಿಸಿಸ್, ಎಲೆಕ್ಟ್ರೋ ಮೆಟಲರ್ಜಿ, ಎಲೆಕ್ಟ್ರೋ ಪ್ಲಾಟಿಂಗ್ ಮತ್ತು ಮೆಟಲ್ ಫಿನಿಶಿಂಗ್ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಎಲೆಕ್ಟ್ರೋ ಕೆಮಿಕಲ್ ವಿಜ್ಞಾನ ಮತ್ತು ತಂತ್ರಜ್ಞಾನದ ವಲಯದಲ್ಲಿ ಅನ್ವೇಷಣೆಗಳು ಮತ್ತು ಹೊಸ ಹಾಗೂ ಸುಧಾರಿತ ಉತ್ಪನ್ನಗಳು ಹಾಗೂ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಸಿಎಸ್ಐಆರ್-ಸಿಇಸಿಆರ್ ಐ ನೇರ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಸಿಎಸ್ಐಆರ್-ಸಿಇಸಿಆರ್ ಐ, ಭಾರತದ ಹೊರಗೆ ಮತ್ತು ಒಳಗೆ ಹಲವು ಖಾಸಗಿ ಕಂಪನಿಗಳು ಮತ್ತು ಪ್ರಯೋಗಾಲಯಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡು, ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ.

ಸಿಎಸ್ಐಆರ್-ಸಿಇಸಿಆರ್ ಐ ಭಾರತೀಯ ಉದ್ಯಮಕ್ಕೆ ಸರ್ವೇ ಕಾರ್ಯಗಳನ್ನು ನಡೆಸುವ ಮೂಲಕ ಯೋಜನೆಗಳಿಗೆ ಸಲಹಾ ಸಂಸ್ಥೆಯಾಗಿಯೂ ನೆರವು ನೀಡುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಸಿಇಸಿಆರ್ ಐ ನಾಲ್ಕು ವರ್ಷದ ಬಿ.ಟೆಕ್ ಕೋರ್ಸ್ ಗಳನ್ನು ನಡೆಸುತ್ತಿದೆ. ರಾಸಾಯನಿಕ ಮತ್ತು ಎಲೆಕ್ಟ್ರೋ ಕೆಮಿಕಲ್ ಇಂಜಿನಿಯರಿಂಗ್ ಅಲ್ಲದೆ ತನ್ನ ವೈಜ್ಞಾನಿಕ ಮತ್ತು ಅನ್ವೇಷಣಾ ಸಂಶೋಧನಾ ಅಕಾಡೆಮಿ(ಎಸಿಎಸ್ಐಆರ್) ನೊಂದಿಗೆ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳಿಗೂ ನೆರವು ನೀಡುತ್ತಿದೆ. ಅಲ್ಲದೆ ಸಿಎಸ್ಐಆರ್-ಸಿಇಸಿಆರ್ ಐ ‘ಭಾರತೀಯ ಯುವಕರಿಗೆ ಅನುಕೂಲವಾಗುವಂತೆ ಜಿಗ್ಯಾಸ ಕಾರ್ಯಕ್ರಮ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ.

 

*****

 

 


(Release ID: 1612216)