ರಕ್ಷಣಾ ಸಚಿವಾಲಯ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ನೆರವು ನೀಡುವಲ್ಲಿ ಮಾಜಿ ಸೈನಿಕರಿಂದ ತಮ್ಮ ಪಾತ್ರದ ನಿರ್ವಹಣೆ

Posted On: 07 APR 2020 12:04PM by PIB Bengaluru

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ನೆರವು ನೀಡುವಲ್ಲಿ ಮಾಜಿ ಸೈನಿಕರಿಂದ ತಮ್ಮ ಪಾತ್ರದ ನಿರ್ವಹಣೆ

 

ಇಡೀ ದೇಶವೇ ಕೊರೋನಾ ವೈರಾಣು (ಕೋವಿಡ್ -19) ವಿರುದ್ಧ ಹೋರಾಟ ಮುಂದುವರಿಸಿರುವಾಗ, ಸೇನೆ, ನೌಕೆ ಮತ್ತು ವಾಯುದಳಕ್ಕೆ ಸೇರಿದ ಮಾಜಿ ಸೈನಿಕರು (ಇಎಸ್.ಎಂ.) ನಾಗರಿಕ ಆಡಳಿತಕ್ಕೆ ನೆರವಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನು ರಕ್ಷಣಾ ಸಚಿವಾಲಯ (ಎಂ.ಓ.ಡಿ.)ಯ ಮಾಜಿ ಸೈನಿಕರ ಕಲ್ಯಾಣ ಇಲಾಖೆ (ಡಿಇಎಸ್.ಡಬ್ಲ್ಯು) ಸಂಯೋಜಿಸುತ್ತಿದೆ. ಹಿರಿಯ ಯೋಧರನ್ನು, 32 ರಾಜ್ಯಗಳ ಸೈನಿಕ ಮಂಡಳಿಗಳ ಜಾಲ ಮತ್ತು ಕೇಂದ್ರೀಯ ಸೈನಿಕ ಮಂಡಳಿಯಿಂದ ರಾಜ್ಯಮಟ್ಟದಲ್ಲಿ ಮತ್ತು 403 ಜಿಲ್ಲಾ ಸೈನಿಕ ಮಂಡಳಿಗಳ ಮೂಲಕ ದೇಶಾದ್ಯಂತ ಸಂಪರ್ಕಿಸಲಾಗುತ್ತಿದೆ.

ಕರ್ನಾಟಕ

ಕರ್ನಾಟಕದಾದ್ಯಂತ ಪ್ರಯತ್ನವನ್ನು ಸಂಘಟಿಸುತ್ತಿರುವ ಬ್ರಿಗೇಡಿಯರ್ ರವಿ ಮುನಿಸ್ವಾಮಿ (ನಿವೃತ್ತ) ಬೆಂಗಳೂರಿನಲ್ಲಿ 45 ಅನುಭವಿ ಬೈಸಿಕಲ್ ಸವಾರರ ತಂಡವನ್ನು ಮುನ್ನಡೆಸುತ್ತಿದ್ದು, ಅವರು ವಾಟ್ಸಾಪ್ ಗುಂಪುಗಳ ಮೂಲಕ ನಗರದಲ್ಲಿನ ವೃದ್ಧಿರಿಗೆ ಮತ್ತು ದುರ್ಬಲರಿಗೆ ಔಷಧಿ ಮತ್ತು ಅಗತ್ಯ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ಇದರ ಜೊತೆಗೆ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಹಾಸನ, ಮೈಸೂರು ಮತ್ತು ಕೊಡಗಿನಲ್ಲಿ ಹಲವಾರು ಮಾಜಿ ಸೈನಿಕರು ಸ್ವಯಂಸೇವಕರಾಗಿ ಆಹಾರ ವಿತರಣೆ ಮತ್ತು ಲಾಕ್-ಡೌನ್ ನಿರ್ವಹಣೆಗೆ ಸಹಕರಿಸುತ್ತಿದ್ದಾರೆ.

ಆಂಧ್ರ ಪ್ರದೇಶ

ಆಂಧ್ರಪ್ರದೇಶದಲ್ಲಿ ಸುಮಾರು 300 ಮಾಜಿ ಸೈನಿಕರು ಸ್ವಯಂ ಸೇವಕರಾಗಿ ಪೊಲೀಸರಿಗೆ ನೆರವಾಗುತ್ತಿದ್ದಾರೆ. ಕೆಲವು ಮಾಜಿ ಸೈನಿಕರ ಸಂಘಟನೆಗಳು ಅಂದರೆ ತಾಡೆಪಲ್ಲಿಗುಡಂ, ಪಶ್ಚಿಮ ಗೋದಾವರಿ ಜಿಲ್ಲಾ ಸಂಘಟನೆಗಳು ಮತ್ತು ಮಂಗಲಗಿರಿಯ 28 ವಾಯು ರಕ್ಷಣಾ ರೆಜಿಮೆಂಟ್ ಗಳ ಇಎಸ್.ಎಂ. ಸಂಘಟನೆಗಳು ಬಡ ಜನರಿಗೆ ಅಗತ್ಯ ಸಾಮಗ್ರಿ ಮತ್ತು ಆಹಾರವನ್ನು ಪೂರೈಸುತ್ತಿವೆ. ಭೀಮುನಿಪಟ್ಟನಂನ ಶ್ರೀ ಚೈತನ್ಯ ಇಎಸ್.ಎಂ. ಸಂಘಟನೆ ಲಾಕ್ ಡೌನ್ ಕ್ರಮದ ಖಾತ್ರಿಗೆ ಪೊಲೀಸರಿಗೆ ನೆರವಾಗುತ್ತಿದೆ.

ಉತ್ತರ ಪ್ರದೇಶ

ಬ್ರಿಗೆಡಿಯರ್ ರವಿ (ನಿವೃತ್ತ) ಪ್ರಕಾರ, ಉತ್ತರ ಪ್ರದೇಶದ 75 ಜಿಲ್ಲೆಗಳ ಜಿಲ್ಲಾ ಸೈನಿಕ ಬೋರ್ಡ್ ಗಳು ಇಎಸ್.ಎಂ.ಗಳ ತಂಡದೊಂದಿಗೆ ದಿನಸಿಯ ವಿತರಣೆ, ಸಮುದಾಯ ಕಣ್ಗಾವಲು ಮತ್ತು ಅಗತ್ಯ ಇರುವವರಿಗೆ ಉಣಬಡಿಸಲು ಸಮುದಾಯ ಅಡುಗೆ ಮನೆಗಳನ್ನು ನಡೆಸುವ ಕುರಿತಂತೆ ನಿಗಾ ಇಡುವುದಕ್ಕೆ ನೆರವಾಗುವುದರ ಜೊತೆಗೆ, ಹಿರಿಯ ಅನುಭವಿ ಇಎಸ್ಎಂಗಳಿಗೂ ನೆರವಾಗುತ್ತಿದೆ. ಅವರುಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸೇನಾ ವೈದ್ಯಕೀಯ ಪಡೆಯಿಂದ ರಾಜ್ಯದಲ್ಲಿ 6,592 ಇಎಸ್.ಎಂ ಗಳನ್ನು ಸಂಪರ್ಕಿಸಿ ಯಾವುದೇ ತುರ್ತು ಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಮಾಡಲಾಗಿದೆ.

ಪಂಜಾಬ್

ದತ್ತಾಂಶ ಸಂಗ್ರಹಣೆ ಮತ್ತು ಸಮುದಾಯ ಕಣ್ಗಾವಲಿಗಾಗಿ ಪಂಜಾಬ್‌ ನ ಪ್ರತಿ ಹಳ್ಳಿಯಲ್ಲೂ ಇರುವ 4,200 ಮಾಜಿ ಸೈನಿಕರನ್ನು ಆಡಳಿತದ ರಕ್ಷಕರಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪಂಜಾಬ್‌ ನ ರಾಜ್ಯ ಸೈನಿಕ ಮಂಡಳಿಯ ನಿರ್ದೇಶಕ ಬ್ರಿಗೇಡಿಯರ್ ಸತೀಂದರ್ ಸಿಂಗ್ (ನಿವೃತ್ತ) ಮಾಹಿತಿ ನೀಡಿದ್ದಾರೆ.

ಛತ್ತೀಸಗಢ

ಛತ್ತೀಸ್‌ಗಢದಲ್ಲಿ ಸ್ಪಂದನೆಯನ್ನು ಸಂಯೋಜಿಸುತ್ತಿರುವ ಏರ್‌ ಕಮಡೋರ್ ಎ ಎನ್ ಕುಲಕರ್ಣಿ, ವಿ.ಎಸ್.ಎಂ. (ನಿವೃತ್ತ), ಅವರು ಬಿಲಾಸ್ಪುರ್, ಜಂಜ್ ಗಿರ್ ಮತ್ತು ಕೋಬ್ರಾ ಗಳಲ್ಲಿ ರಾಜ್ಯ ಪೊಲೀಸರಿಗೆ ನೆರವು ನೀಡಲು ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಇಎಸ್‌.ಎಂಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಶಾನ್ಯ

ಬ್ರಿಗೇಡಿಯರ್ ನರೇನ್ ದತ್ ಜೋಶಿ ಎಸ್.ಎಂ. (ನಿವೃತ್ತ) ಅವರು ಅಸ್ಸಾಂನ 19 ಜಿಲ್ಲೆಗಳಲ್ಲಿ ನೆರವಾಗಲು 300 ಇಎಸ್.ಎಂ. ಸ್ವಯಂಸೇವಕರುಗಳೊಂದಿಗೆ ಸಜ್ಜಾಗಿದ್ದರೆ, ಕರ್ನಲ್ ಗೌತಮ್ ಕುಮಾರ್ ರಾಯ್ (ನಿವೃತ್ತ) ಶಿಲ್ಲಾಂಘ್ ನಲ್ಲಿ 79 ಸ್ವಯಂಸೇವಕರೊಂದಿಗೆ ನಾಗರಿಕ ಆಡಳಿತಕ್ಕೆ ನೆರವಾಗಲು ಅಣಿಯಾಗಿದ್ದಾರೆ. ತ್ರಿಪುರಾದ ಬ್ರಿಗೇಡಿಯರ್ ಜೆ ಪಿ ತಿವಾರಿ (ನಿವೃತ್ತ), ರಾಜ್ಯ ಮತ್ತು ಜಿಲ್ಲಾ ಆಡಳಿತದೊಂದಿಗೆ ಇಎಸ್.ಎಂ. ಸ್ವಯಂಸೇವಕರ ಪಟ್ಟಿಯನ್ನು ಹಂಚಿಕೊಳ್ಳಲಾಗಿದ್ದು, ಯಾವುದೇ ಸವಾಲು ಕೊಟ್ಟರೂ ನಿರ್ವಹಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಾರ್ಖಂಡ್, ಹರಿಯಾಣ, ಉತ್ತರಾಖಂಡ್

ಅದೇ ರೀತಿ ಹರಿಯಾಣದ ಬ್ರಿಗೇಡಿಯರ್ ಪಾಠಕ್ (ನಿವೃತ್ತ) ಮತ್ತು ಉತ್ತರಾಖಂಡದ ಬ್ರಿಗೇಡಿಯರ್ ಕೆ ಬಿ ಚಾಂದ್ (ನಿವೃತ್ತ) ಅವರು ಕೂಡ ತಮ್ಮ ತಮ್ಮ ರಾಜ್ಯಗಳಲ್ಲಿ ಇದನ್ನೇ ಮಾಡಿದ್ದಾರೆ. ಇಡೀ ದೇಶವೇ ಲಾಕ್ ಡೌನ್ ನಲ್ಲಿರುವಾಗ, ಸೇನೆ, ನೌಕೆ ಮತ್ತು ವಾಯು ಪಡೆಯ ನಿವೃತ್ತ ಯೋಧರು ಮತ್ತು ನಿವೃತ್ತ ಯೋಧರ ಸಂಘಟನೆಗಳ ಈ ಸ್ಪಂದನೆ ಮತ್ತು ಸ್ವಯಂಪ್ರೇರಿತ ಸಮುದಾಯದ ಸೇವೆ ಪ್ರಸಂಶನಾರ್ಹವಾಗಿದೆ.

***********

 


(Release ID: 1611952) Visitor Counter : 239