ರಕ್ಷಣಾ ಸಚಿವಾಲಯ
ಭಾರತವು ಕೋವಿಡ್-19 ವಿರುದ್ಧ ಹೋರಾಡುತ್ತಿದೆ - ಗೋವಾ ನೌಕಾ ಪ್ರದೇಶವು ಅಗತ್ಯವಿರುವವರಿಗೆ ನೆರವನ್ನು ನೀಡುತ್ತದೆ
Posted On:
03 APR 2020 8:32PM by PIB Bengaluru
ಭಾರತವು ಕೋವಿಡ್-19 ವಿರುದ್ಧ ಹೋರಾಡುತ್ತಿದೆ - ಗೋವಾ ನೌಕಾ ಪ್ರದೇಶವು ಅಗತ್ಯವಿರುವವರಿಗೆ ನೆರವನ್ನು ನೀಡುತ್ತದೆ
ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟುವ ಪ್ರಯತ್ನಗಳಲ್ಲಿ ಮತ್ತು ಸಂಕಷ್ಟದಲ್ಲಿರುವ ಜನರನ್ನು ನೆರವನ್ನು ನೀಡುವಲ್ಲಿ, ಗೋವಾ ನೌಕಾ ಪ್ರದೇಶವು ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಆಹಾರ ಮತ್ತು ಅಗತ್ಯ ಸಾಮಗ್ರಿಗಳ ವಿತರಣೆಯ ಮೂಲಕ ಸ್ಥಳೀಯರಿಗೆ ಸಹಾಯ ಹಸ್ತ ಚಾಚುತ್ತಲೇ ಇದೆ.
ಏಪ್ರಿಲ್ 1 ರಂದು, ಗೋವಾ ನೌಕಾ ಪ್ರದೇಶದ ಪ್ರಧಾನ ಕಛೇರಿ ಮಾಂಗೋರ್ ಬೆಟ್ಟದ ಕೌನ್ಸಿಲರ್ ಜೊತೆಗೂಡಿ ಗಾಂಧಿನಗರದಲ್ಲಿ ದೈನಂದಿನ ಕೆಲಸದವರು, ವಲಸೆ ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿತು. 200 ಕುಟುಂಬಗಳಿಗೆ ಸುಮಾರು 1000 ಕೆಜಿ ಅಗತ್ಯ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಹೆಚ್ಚುವರಿಯಾಗಿ, ಅಗತ್ಯವಿರುವ ಕುಟುಂಬಗಳಿಗೆ ವಿತರಿಸಲು 600 ಕೆಜಿ ನಿತ್ಯೋಪಯೋಗಿ ವಸ್ತುಗಳನ್ನು ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಶ್ರೀ ಮಿಲಿಂದ್ ನಾಯಕ್ ಅವರಿಗೆ ಹಸ್ತಾಂತರಿಸಲಾಯಿತು.
ಈ ವಾರದ ಆರಂಭದಲ್ಲಿ, ರಕ್ಷಣಾ ಭದ್ರತಾ ದಳದ (ಡಿಎಸ್‌ಸಿ) ಜವಾನ್‌ಗಳು ಮತ್ತು ಐಎನ್ಎಸ್ ಹಂಸಾ ದ ಭಾರತೀಯ ನೌಕಾಪಡೆಯ ಸಿಬ್ಬಂದಿ ಗೋವಾದಲ್ಲಿನ ವಾಸ್ಕೊ ರೈಲ್ವೆ ನಿಲ್ದಾಣ, ಬೊಗ್ಡಾ ಮತ್ತು ರಾಮ್ ಮಂದಿರದಲ್ಲಿ ಸುಮಾರು 320 ಜನರಿಗೆ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದ್ದರು.
(Release ID: 1610993)