ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತ ಡಿ ಡಿ ವೀಕ್ಷಿಸುತ್ತಿದೆ, ಭಾರತ ಕೊರೊನಾ ವಿರುದ್ಧ ಸೆಣಸುತ್ತಿದೆ

Posted On: 02 APR 2020 7:20PM by PIB Bengaluru

ಭಾರತ ಡಿ ಡಿ ವೀಕ್ಷಿಸುತ್ತಿದೆ, ಭಾರತ ಕೊರೊನಾ ವಿರುದ್ಧ ಸೆಣಸುತ್ತಿದೆ

 

ಡಿಡಿ ನ್ಯಾಷನಲ್ ಮತ್ತು ಡಿಡಿ ಭಾರತಿ ಲಾಕ್ ಡೌನ್ ಅವಧಿಯಲ್ಲಿ ತನ್ನ ಮೇರು ಹಳೆಯ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದ್ದು, ರಾಷ್ಟ್ರೀಯ ಪ್ರಸಾರ ವಾಹಿನಿ ದೂರದರ್ಶನ ಮತ್ತೆ ತನ್ನ ಸ್ಥಾನವನ್ನು ಪುನರ್ ಬಲವರ್ಧಿಸಿಕೊಂಡಿದೆ. ಭಾರತೀಯ ಪ್ರಸಾರ ಶ್ರೋತೃಗಳ ಸಂಶೋಧನಾ ಮಂಡಳಿ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ -ಬಾರ್ಕ್)ಯ ಇತ್ತೀಚಿನ ವರದಿಯ ಪ್ರಕಾರಹಳೆಯ ಮಹೋನ್ನತ ಕೃತಿಗಳನ್ನು ಪ್ರಸಾರ ಮಾಡುವ ಮೂಲಕ ಜನರು ತಾವಾಗಿಯೇ ಮನೆಯಲ್ಲಿ ಉಳಿಯುವಂತೆ ಮಾಡಲು  ಸಹಾಯ ಮಾಡುವ ಉದ್ದೇಶವನ್ನು ದೂರದರ್ಶನ ಸಾಧಿಸಿದೆ. ಬಾರ್ಕ್ ಪ್ರಕಾರ, ರಾಮಾಯಣದ ಮರು ಪ್ರಸಾರ, ಬಾರ್ಕ್ ಟಿ.ವಿ. ವೀಕ್ಷಕರ ಮಾನದಂಡ ಆರಂಭಿಸಿದ  2015 ರಿಂದೀಚೆಗೆ ಹಿಂದಿ ಜಿಇಸಿ ಪ್ರದರ್ಶನಕ್ಕೆ ಹಿಂದೆಂದೂ ಕಾಣದಂಥ ಅತಿ ಹೆಚ್ಚು ರೇಟಿಂಗ್ ತಂದುಕೊಟ್ಟಿದೆ. 

ಕೋವಿಡ್-19 ಮಹಾಮಾರಿಯನ್ನು ನಿಗ್ರಹಿಸಲು ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಸಾರ ಸೇವೆಗಳ ದೂರದರ್ಶನ 80ರ ದಶಕದ ಪೌರಾಣಿಕ ಧಾರಾವಾಹಿ ರಾಮಾಯಣ ಮತ್ತು ಮಹಾಭಾರತ ಮರು ಪ್ರಸಾರಕ್ಕೆ ನಿರ್ಧರಿಸಿತು. ಈ ಮಹಾಕಾವ್ಯಗಳ ಮರು ಪ್ರಸಾರಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದ್ದಾಗ, ಮನೆಯಲ್ಲಿಯೇ ಇರುವ ವೀಕ್ಷಕರಿಗೆ ಮನರಂಜನೆ ಒದಗಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಯಿತು. ಅದೇ ರೀತಿ ಸಾರ್ವಜನಿಕರ ಬೇಡಿಕೆಯ ಆಧಾರದ ಮೇಲೆ, ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆ ತನ್ನ ಜನಪ್ರಿಯ ಧಾರಾವಾಹಿಗಳಾದ ಶಕ್ತಿಮಾನ್, ಶ್ರೀಮಾನ್ ಶ್ರೀಮತಿ, ಚಾಣಕ್ಯ, ದೇಖ್ ಭಾಯ್ ದೇಖ್, ಬುನಿಯಾದ್, ಸರ್ಕಸ್ ಮತ್ತು ಬ್ಯೋಮಕೇಶ್ ಭಕ್ಷಿಯನ್ನು ಡಿಡಿ ನ್ಯಾಷನಲ್ ನಲ್ಲಿ ಮತ್ತು ಡಿಡಿ ಭಾರತಿಯಲ್ಲಿ ಮಹಾಭಾರತ ಸೇರಿದಂತೆ ಅಲೀಫ್ ಲೈಲಾ, ಉಪನಿಷದ್ ಗಂಗಾವನ್ನು  ಮರು ಪರಿಚಯಿಸುತ್ತಿದೆ.

ಡಿಡಿ ನ್ಯಾಷನಲ್ ನಲ್ಲಿ 2020ರ ಮಾರ್ಚ್ 28ರ ಶನಿವಾರದಿಂದ, ಎರಡೂ ಮಹಾಕಾವ್ಯಗಳ ತಲಾ ಎರಡು ಸಂಚಿಕೆಗಳನ್ನು ಪ್ರತಿನಿತ್ಯ ಮರು ಪ್ರಸಾರ ಆರಂಭಿಸಿದ ತರುವಾಯ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆಗೆ ಸಾಕಷ್ಟು ಪ್ರಸಿದ್ಧ ವ್ಯಕ್ತಿಗಳ ಜೊತೆಗೆ ಸಾಮಾಜಿಕ ತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಹೋನ್ನತ ಧಾರಾವಾಹಿಗಳ ಪ್ರಮುಖ ತಾರೆಯರು (ಪಾತ್ರಧಾರಿಗಳು) ತಮ್ಮ ಸ್ವಂತ ವಿಡಿಯೋಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಹಾಕುವ ಮೂಲಕ ದೂರದರ್ಶನದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದು, ಮತ್ತೆ ದೂರದರ್ಶನದಲ್ಲಿ ಆ ಧಾರಾವಾಹಿ ವೀಕ್ಷಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ. ರಾಮಾಯಣ ಪ್ರತಿನಿತ್ಯ ಡಿಡಿ ನ್ಯಾಷನಲ್ ನಲ್ಲಿ ಪುನರಾವರ್ತನೆ ಇಲ್ಲದೆ ಬೆಳಗ್ಗೆ 9 ಮತ್ತು ರಾತ್ರಿ 9ಕ್ಕೆ ಪ್ರಸಾರವಾಗುತ್ತಿದ್ದರೆ, ಮಹಾಭಾರತ ಧಾರಾವಾಹಿಯ ಎರಡು ಸಂಚಿಕೆಗಳು ಮಧ್ಯಾಹ್ನ 12 ಗಂಟೆ ಮತ್ತು ರಾತ್ರಿ 7 ಗಂಟೆಗೆ ಡಿಡಿ ಭಾರತಿಯಲ್ಲಿ ನಿತ್ಯ ಪ್ರಸಾರವಾಗುತ್ತಿವೆ. ಡಿಡಿ ನ್ಯಾಷನಲ್ ನಲ್ಲಿ ಮನರಂಜನೆಯ ಸರಣಿಯೇ ಇದ್ದು, ಮಧ್ಯಾಹ್ನ 3 ಗಂಟೆಗೆ ಸರ್ಕಸ್, ಸಂಜೆ 4 ಗಂಟೆಗೆ ಶ್ರೀಮಾನ್ ಶ್ರೀಮತಿ, 5ಗಂಟೆಗೆ ಬುನಿಯಾದ್ ಪ್ರಸಾರವಾಗುತ್ತಿದೆ.ಡಿಡಿ ನ್ಯಾಷನಲ್ ನಲ್ಲಿ ಸಂಜೆ 6 ಗಂಟೆಗೆ ದೇಖ್ ಭಾಯ್ ದೇಖ್, ನಂತರ 8 ಗಂಟೆಗೆ ಶಕ್ತಿಮಾನ್ ಹಾಗೂ ರಾತ್ರಿ 9 ಗಂಟೆಗೆ ರಾಮಾಯಣ ಪ್ರಸಾರವಾಗಲಿದ್ದು, ಜನಪ್ರಿಯ ಧಾರಾವಾಹಿ ಚಾಣಕ್ಯ ರಾತ್ರಿ 10ಗಂಟೆಗೆ ಪ್ರಸಾರವಾಗುವುದರೊಂದಿಗೆ ದಿನದ ಮನರಂಜನೆ ಕೊನೆಯಾಗಲಿದೆ. ದೂರದರ್ಶನವು ಡಿಡಿ ಭಾರತಿಯಲ್ಲಿ ಬೆಳಗ್ಗೆ 10.30ಕ್ಕೆ ಅಲೀಫ್ ಲೈಲಾ, ಮತ್ತು ಸಂಜೆ 6 ಗಂಟೆಗೆ ಉಪನಿಷದ್ ಗಂಗಾ ಪ್ರಸಾರ ಮಾಡುತ್ತಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು ಮನೆಯಲ್ಲೇ ಇರುವುದರಿಂದ ದೂರದರ್ಶನ ವಿಷಯಾಸಕ್ತಿ ಮತ್ತು ವೀಕ್ಷಕರ ಸಂಖ್ಯೆಯಲ್ಲಿನ ಗಮನಾರ್ಹ ಹೆಚ್ಚಳವು ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್‌ ಡೌನ್ ಅನ್ನು ಯಶಸ್ವಿಗೊಳಿಸುವತ್ತ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಸಾರ್ವಜನಿಕ ಪ್ರಸಾರವನ್ನು ಶಕ್ತಗೊಳಿಸಿದೆ.



(Release ID: 1610888) Visitor Counter : 181