ಚುನಾವಣಾ ಆಯೋಗ

COVID-19 ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಯನ್ನು ಮತ್ತೆ ಮುಂದೂಡಿದ ಚುನಾವಣಾ ಆಯೋಗ

Posted On: 03 APR 2020 8:23PM by PIB Bengaluru

COVID-19 ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಯನ್ನು ಮತ್ತೆ ಮುಂದೂಡಿದ ಚುನಾವಣಾ ಆಯೋಗ

ಹೊಸ ದಿನಾಂಕವನ್ನು ನಂತರ ಘೋಷಿಸಲಾಗುವುದು

 

ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಪ್ರಸ್ತುತ ಅನಿರೀಕ್ಷಿತ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಭಾರತದ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ, ಜನಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 153ರಡಿ ಅವಧಿ ಮೀರಿರುವ ಏಳು ರಾಜ್ಯಗಳ 18 ರಾಜ್ಯಸಭೆ ಸ್ಥಾನಗಳ ಚುನಾವಣೆಯನ್ನು ಮತ್ತೆ ಮುಂದೂಡಿದೆ.

25.02.2020 ಮತ್ತು ಮಾರ್ಚ್ 6, 2020 ಅಧಿಸೂಚನೆಯಲ್ಲಿ, 17 ರಾಜ್ಯಗಳಿಂದ ರಾಜ್ಯಸಭೆಯ 55 ಸ್ಥಾನಗಳನ್ನು ಭರ್ತಿ ಮಾಡಲು ಭಾರತದ ಚುನಾವಣಾ ಆಯೋಗವು ಚುನಾವಣೆಗಳನ್ನು ಘೋಷಿಸಿತ್ತು.. ನಾಮಪತ್ರ ವಾಪಸಾತಿಯ ಕೊನೆಯ ದಿನಾಂಕವಾದ18.03.2020 ರಂದು ಆಯಾ ಚುನಾವಣಾ ಅಧಿಕಾರಿಗಳು 10 ರಾಜ್ಯಗಳಿಂದ 37 ಸ್ಥಾನಗಳನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು. ನಂತರ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ ಬಂದ ವರದಿಗಳ ಪ್ರಕಾರ, ಆಂಧ್ರಪ್ರದೇಶ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ ಮತ್ತು ರಾಜಸ್ಥಾನ ರಾಜ್ಯಗಳಿಂದ 18 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 26.03.2020 ರಂದು ನಡೆಯಬೇಕಿತ್ತು ಮತ್ತು ಚುನಾವಣಾ ಪ್ರಕ್ರಿಯೆ 30 ಮಾರ್ಚ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು.

ಉಳಿದ 18 ಸ್ಥಾನಗಳ ಅವಧಿಯ ಸಿಂಧುತ್ವ ಹೀಗಿದೆ:

.  09.04.2020

i.          ಆಂಧ್ರಪ್ರದೇಶ -            04

ii.         ಜಾರ್ಖಂಡ್ -                02

iii.        ಮಧ್ಯಪ್ರದೇಶ -            03

iv.        ಮಣಿಪುರ -                  01

v.         ರಾಜಸ್ಥಾನ್ -               03

vi.        ಗುಜರಾತ್ -                04

               17

ಬಿ.  12.04.2020

i.          ​​​​ಮೇಘಾಲಯ -      01

              ಒಟ್ಟು18

 

COVID-19 ರಿಂದಾಗಿ ಉದ್ಭವಿಸಿರುವ ಅನಿರೀಕ್ಷಿತ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಮತ್ತು ಜನಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 153 ಅನ್ನು ಗಮನದಲ್ಲಿಟ್ಟುಕೊಂಡು ಮತದಾನದ ದಿನದಂದು ಮತದಾನದ ಅಧಿಕಾರಿಗಳು, ರಾಜಕೀಯ ಪಕ್ಷಗಳ ಏಜೆಂಟರು, ಅಧಿಕಾರಿಗಳು ಮತ್ತು ಆಯಾ ಶಾಸಕಾಂಗ ಸಭೆಗಳ ಸದಸ್ಯರ ಚಲನೆ ಮತ್ತು ಒಟ್ಟುಗೂಡಿಸುವಿಕೆಯನ್ನು ಒಳಗೊಂಡಿರುವುದರಿಂದ, ಸಾರ್ವಜನಿಕ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಬಹುದು ಮತ್ತು ಸಾರ್ವಜನಿಕ ಆರೋಗ್ಯ ಅಪಾಯವನ್ನುಸೃಷ್ಟಿಸಬಹುದು ಎಂದು ಪರಿಗಣಿಸಿ 24.03.2020 ಅಧಿಸೂಚನೆಯಲ್ಲಿ ಭಾರತದ ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಮುಂದೂಡುವುದು ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಅವಧಿಯನ್ನು ವಿಸ್ತರಿಸಿತ್ತು.

ಆಯೋಗವು ಈಗ ಎಲ್ಲಾ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಪರಿಶೀಲಿಸಿದೆ. ಸಾರ್ವಜನಿಕ ಸುರಕ್ಷತೆಯ ನಿರ್ವಹಣೆ ಮತ್ತು ಆರೋಗ್ಯದ ಅಪಾಯವನ್ನು ತಪ್ಪಿಸಲು ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸುವುದು ಕಾರ್ಯಸಾಧುವಲ್ಲ ಎಂದು ತೀರ್ಮಾನಿಸಿದೆ.

ಆಯಾ ಚುನಾವಣಾ ಅಧಿಕಾರಿಗಳಿಂದ ಈಗಾಗಲೇ ಪ್ರಕಟವಾಗಿರುವ ಅಭ್ಯರ್ಥಿಗಳ ಪಟ್ಟಿಯು ಅಧಿಸೂಚನೆಗಳ ಪ್ರಕಾರ ಮಾನ್ಯವಾಗಿರುತ್ತದೆ. ಈ ದ್ವೈವಾರ್ಷಿಕ ಚುನಾವಣೆಗಳಿಗೆ ಮತದಾನ ಮತ್ತು ಮತ ಎಣಿಕೆಯ ಹೊಸ ದಿನಾಂಕವನ್ನು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಸೂಕ್ತ ಸಮಯದಲ್ಲಿ ತಿಳಿಸಲಾಗುವುದು.



(Release ID: 1610883) Visitor Counter : 317