ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಕೋವಿಡ್ -19 ಭೀತಿಯ ನಡುವೆ ಹೇಗೆ ಸುರಕ್ಷಿತವಾಗಿರಬೇಕೆಂಬ ಬಗ್ಗೆ ಯುಜಿಸಿ, ಎಐಸಿಟಿಇ, ಎನ್ ಸಿಟಿಇ, ಎನ್ ಸಿಇಆರ್ ಟಿ ಮತ್ತು ಕೆವಿಎಸ್ ಗಳಿಗೆ ಪತ್ರ

Posted On: 03 APR 2020 3:27PM by PIB Bengaluru

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಕೋವಿಡ್ -19 ಭೀತಿಯ ನಡುವೆ ಹೇಗೆ ಸುರಕ್ಷಿತವಾಗಿರಬೇಕೆಂಬ ಬಗ್ಗೆ ಯುಜಿಸಿ, ಎಐಸಿಟಿಇ, ಎನ್ ಸಿಟಿಇ, ಎನ್ ಸಿಇಆರ್ ಟಿ ಮತ್ತು ಕೆವಿಎಸ್ ಗಳಿಗೆ ಪತ್ರ

 

ಕೋವಿಡ್ -19 ಭೀತಿಯ ನಡುವೆ ಹೇಗೆ ಸುರಕ್ಷಿತವಾಗಿರಬೇಕೆಂಬ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಯುಜಿಸಿ, ಎಐಸಿಟಿಇ, ಎನ್ ಸಿಟಿಇ, ಎನ್ ಸಿಇಆರ್ ಟಿ ಮತ್ತು ಕೆವಿಎಸ್ ಗಳಿಗೆ ಪತ್ರ ಬರೆದಿದೆ. ಈ ಸಂಘಟನೆಗಳಿಗೆ ಬರೆದಿರುವ ಪತ್ರದಲ್ಲಿ, ಎಚ್ ಆರ್ ಡಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಕೋವಿಡ್-19 ವಿರುದ್ಧ ಹೋರಾಡಲು ಭಾರತ ಸರ್ಕಾರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ‘ಆರೋಗ್ಯಸೇತು’ ಆಪ್ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ್ದಾರೆ. ಈ ಆಪ್ ಸಾರ್ವಜನಿಕರಿಗೆ ತಮಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಸುತ್ತದೆ.  ಅದು ಬ್ಲೂಟೂತ್ ತಂತ್ರಜ್ಞಾನ, ಆಲ್ಗೋರಿತಮಸ್ ಮತ್ತು ಕೃತಕ ಬುದ್ಧಿಮತ್ತೆ ಬಳಸಿ, ಇತರರೊಡನೆ ಸಂವಾದ ನಡೆಸಿದ ಆಧಾರದ ಮೇಲೆ ಲೆಕ್ಕಾಚಾರ ಹಾಕುತ್ತದೆ. ಇದು ವಿದ್ಯಾರ್ಥಿಗಳಿಗೆ, ಬೋಧಕ/ಶಿಕ್ಷಕರು ಮತ್ತು ಅವರ ಕುಟುಂಬದವರಿಗೆ ಸಹಾಯಕವಾಗುತ್ತದೆ. ಈ ಆಪ್ ಅನ್ನು ಕೆಳಗಿನ ಲಿಂಕ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಐ ಒ ಎಸ್ ಹ್ಯಾಂಡ್ ಸೆಟ್ ಗಳಿಗಾದರೆ: itms-apps://itunes.apple.com/app/id505825357

ಅಂಡ್ರಾಯಿಡ್ ಮೊಬೈಲ್ ಗಳಿಗಾದರೆ : https://play.google.com/store/apps/details?id=nic.goi.arogyasetu

ಅಲ್ಲದೆ, ಆಯುಷ್ ಸಚಿವಾಲಯ ಸ್ವಯಂ ರಕ್ಷಣೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಶಿಷ್ಟಾಚಾರ ಅಥವಾ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದು, ಅದು ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ, ಬೋಧಕ ಸಿಬ್ಬಂದಿಗೆ, ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆ ನೆರವಾಗಲಿದೆ.

ಸ್ವಯಂ ರಕ್ಷಣೆಗೆ ಆಯುರ್ವೇದದ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳಿಗೆ ಇಲ್ಲಿ ಕ್ಲಿಕ್ ಮಾಡಿ  

ಅಲ್ಲದೆ, ಪತ್ರದಲ್ಲಿ ಪ್ರಧಾನಮಂತ್ರಿ ಅವರು ಸಲಹೆ ಮಾಡಿರುವಂತೆ, 2020ರ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಸರಿಯಾಗಿ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಮೊಂಬತ್ತಿ, ದೀಪ ಅಥವಾ ಮೊಬೈಲ್ ನ ಟಾರ್ಚ್ ಲೈಟ್ ಅನ್ನು ಆನ್ ಮಾಡಿ, ಆ ಮೂಲಕ ಬೆಳಕಿನ ಶಕ್ತಿಯನ್ನು ತೋರಿಸಬೇಕು ಮತ್ತು ನಾವೆಲ್ಲಾ ಒಟ್ಟಾಗಿ ಹೋರಾಟ ನಡೆಸುತ್ತಿದ್ದೇವೆಂದು ಸಾಬೀತುಪಡಿಸಬೇಕೆಂದು ಹೇಳಲಾಗಿದೆ.ಆದರೆ ಮನೆಯ ಹೊರಗೆ, ರಸ್ತೆಗಳಲ್ಲಿ ಅಥವಾ ಕಾಲೋನಿಗಳಲ್ಲಿ ಅಥವಾ ಇನ್ನಿತರ ಕಡೆ ಗುಂಪು ಗುಂಪಾಗಿ ಯಾರೊಬ್ಬರೂ ಸೇರುವಂತಿಲ್ಲ ಎಂದೂ ಸಹ ತಿಳಿಸಲಾಗಿದೆ.

  

*****



(Release ID: 1610768) Visitor Counter : 194