ಹಣಕಾಸು ಸಚಿವಾಲಯ
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಮೂರನೇ ವ್ಯಕ್ತಿ ಮೋಟಾರು ವಾಹನ ವಿಮೆ ಮತ್ತು ಆರೋಗ್ಯ ವಿಮಾ ಪಾವತಿದಾರರಿಗೆ ಪರಿಹಾರ
Posted On:
02 APR 2020 1:13PM by PIB Bengaluru
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಮೂರನೇ ವ್ಯಕ್ತಿ ಮೋಟಾರು ವಾಹನ ವಿಮೆ ಮತ್ತು ಆರೋಗ್ಯ ವಿಮಾ ಪಾವತಿದಾರರಿಗೆ ಪರಿಹಾರ
ಆರೋಗ್ಯ, ಮೋಟಾರು ವಾಹನ ವಿಮಾ ಪಾಲಿಸಿಗಳ ನವೀಕರಣ ಅವಧಿ ಏಪ್ರಿಲ್ 21ರ ವರೆಗೆ ವಿಸ್ತರಣೆ
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೂರನೇ ವ್ಯಕ್ತಿ ಮೋಟಾರು ವಾಹನ ವಿಮೆ ಮತ್ತು ಆರೋಗ್ಯ ವಿಮಾದಾರರಿಗೆ ಪರಿಹಾರವನ್ನು ಘೋಷಿಸಿದೆ. ಹಣಕಾಸು ಸಚಿವಾಲಯ ಏಪ್ರಿಲ್ 1, 2020ರಂದು ಹೊರಡಿಸಿರುವ ಅಧಿಸೂಚನೆಯಂತೆ 2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರ ವರೆಗಿನ ಅವಧಿಯಲ್ಲಿ ನವೀಕರಣ ಮಾಡಬೇಕಾಗಿರುವಂತಹ ಆರೋಗ್ಯ ಮತ್ತು ಮೋಟಾರು ವಾಹನ ವಿಮೆ ಪಾಲಿಸಿಗಳ ಅವಧಿಯನ್ನು ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಘೋಷಿಸಿರುವುದರಿಂದ ಏಪ್ರಿಲ್ 21, 2020ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಇದರ ಅರ್ಥ 2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರೊಳಗೆ ನವೀಕರಣ ಮಾಡಬೇಕಾಗಿದ್ದಂತಹ ಹಾಲಿ ಇದ್ದ ವಿಮಾ ಪಾಲಿಸಿಗಳನ್ನು ಏಪ್ರಿಲ್ 21, 2020ರರೊಳಗೆ ನವೀಕರಣ ಮಾಡಿಕೊಳ್ಳಬಹುದು.
ಮೂರನೇ ವ್ಯಕ್ತಿ ಮೋಟಾರು ವಾಹನ ವಿಮೆ
ನಿಮ್ಮ ಹಾಲಿ ಕಡ್ಡಾಯ ಮೂರನೇ ವ್ಯಕ್ತಿ ಮೋಟಾರು ವಾಹನ ವಿಮಾ ಪಾಲಿಸಿ 2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರೊಳಗೆ ಅವಧಿ ಮುಕ್ತಾಯವಾಗುವುದಿದ್ದರೆ ಮತ್ತು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಆ ನಿಮ್ಮ ಪಾಲಿಸಿಯನ್ನು ನವೀಕರಣ ಮಾಡಲಾಗದಿದ್ದರೆ ಅಂತರ ಮೋಟಾರು ವಾಹನ ವಿಮೆ ಪಾಲಿಸಿಯನ್ನು ನೀವು ಏಪ್ರಿಲ್ 21, 2020ರೊಳಗೆ ನವೀಕರಿಸಿಕೊಳ್ಳಬಹುದು.
ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ,
“2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರ ನಡುವಿನ ಅವಧಿಯಲ್ಲಿ ನವೀಕರಣ ಮಾಡಬೇಕಾಗಿದ್ದ ಮೂರನೇ ವ್ಯಕ್ತಿ ಮೋಟಾರು ವಿಮಾ ಪಾಲಿಸಿಗಳಿಗೆ ದೇಶದಲ್ಲಿನ ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್-19 ಸೋಂಕಿನ ಪರಿಣಾಮ ಪ್ರೀಮಿಯಂ ಹಣ ಪಾವತಿಸಿ, ನವೀಕರಣ ಮಾಡಿಕೊಳ್ಳಲಾಗದೇ ಇದ್ದಂತಹ ಸಂದರ್ಭಗಳಲ್ಲಿ ಅಂತಹ ವಿಮಾದಾರರು 2020ರ ಏಪ್ರಿಲ್ 21ರೊಳಗೆ ಪ್ರೀಮಿಯಂ ಹಣ ಪಾವತಿಸಿ ನವೀಕರಣ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಸಾಂಸ್ಥಿಕ ಮೂರನೇ ವ್ಯಕ್ತಿ ಮೋಟಾರು ವಾಹನ ವ್ಯಾಪ್ತಿ ನವೀಕರಣವಾಗುವವರೆಗೆ ನಿರಂತರವಾಗಿ ಮುಂದುವರಿಯಲಿದೆ”.
ಸಾಮಾನ್ಯ ಆರೋಗ್ಯ ವಿಮಾ ಪಾಲಿಸಿ:
ಅಂತೆಯೇ ನಿಮ್ಮ ಆರೋಗ್ಯ ವಿಮಾ ಪಾಲಿಸಿ 2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರ ಅವಧಿಯಲ್ಲಿ ನವೀಕರಣ ಮಾಡಿಕೊಳ್ಳಲು ಬಾಕಿ ಇದ್ದರೆ ಅಂತಹ ವಿಮೆಗಳನ್ನು 2020ರ ಏಪ್ರಿಲ್ 21ರೊಳಗೆ ನವೀಕರಣ ಮಾಡಿಕೊಳ್ಳಬಹುದಾಗಿದೆ.
ಅಧಿಸೂಚನೆಯಲ್ಲಿರುವಂತೆ, “ದೇಶದಲ್ಲಿನ ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್-19 ಸೋಂಕಿನ ಪರಿಣಾಮ 2020ರ ಮಾರ್ಚ್ 25ರಿಂದ 2020ರ ಏಪ್ರಿಲ್ 14ರ ನಡುವಿನ ಅವಧಿಯಲ್ಲಿ ಯಾವ ಆರೋಗ್ಯ ವಿಮಾ ಪಾಲಿಸಿಗಳನ್ನು ನವೀಕರಣ ಮಾಡಬೇಕಾಗಿತ್ತೋ ಅದಕ್ಕೆ ಪ್ರೀಮಿಯಂ ಹಣ ಪಾವತಿಸಿ, ನವೀಕರಣ ಮಾಡಿಕೊಳ್ಳಲಾಗದೇ ಇದ್ದಂತಹ ಸಂದರ್ಭಗಳಲ್ಲಿ ಅಂತಹ ವಿಮಾದಾರರು 2020ರ ಏಪ್ರಿಲ್ 21ರೊಳಗೆ ಹಣಪಾವತಿಸಿ ನವೀಕರಣ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಆರೋಗ್ಯ ವಿಮಾ ವ್ಯಾಪ್ತಿ ನವೀಕರಣವಾಗುವವರೆಗೆ ನಿರಂತರವಾಗಿ ಮುಂದುವರಿಯಲಿದೆ”.
*********
(Release ID: 1610256)
Visitor Counter : 282