ರಕ್ಷಣಾ ಸಚಿವಾಲಯ

ಮುಂಬೈನ ನೌಕಾ ಡಾಕ್ ಯಾರ್ಡ್ ನಿಂದ ಕಡಿಮೆ ದರದ ತಾಪಮಾನ ಗನ್ ವಿನ್ಯಾಸ

Posted On: 02 APR 2020 11:25AM by PIB Bengaluru

ಮುಂಬೈನ ನೌಕಾ ಡಾಕ್ ಯಾರ್ಡ್ ನಿಂದ ಕಡಿಮೆ ದರದ ತಾಪಮಾನ ಗನ್ ವಿನ್ಯಾಸ

 

ಮುಂಬೈನ ನೌಕಾ ಡಾಕ್ ಯಾರ್ಡ್ ತನ್ನ ಅಂಗಳದ ಪ್ರವೇಶ ದ್ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ತಪಾಸಣೆ ಮಾಡಲು ದ್ವಾರದಲ್ಲಿರುವ ಭದ್ರತಾ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆ ಮಾಡಲು  ತನ್ನದೇ ಆದ ಕೈಯಲ್ಲಿ ಹಿಡುಯುವಂಥ ಐಆರ್ ಆಧಾರಿತ ತಾಪಮಾನ ಸಂವೇದಕವನ್ನು ವಿನ್ಯಾಸಗೊಳಿಸಿದೆ. ಆಂತರಿಕವಾಗಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು ರೂ.1000/-ವೆಚ್ಚದಲ್ಲಿ (ಇದು ಮಾರುಕಟ್ಟೆಯಲ್ಲಿ ಲಭಅಯವಿರುವ ತಾಪಮಾನದ ಸಂವೇದಕಗಳ ದರದ ಒಂದು ಭಾಗವಷ್ಟೇ ಆಗಿದೆ.) ಈ ಸಾಧನ ಉತ್ಪಾದಿಸಲಾಗಿದೆ.

ಪ್ರಸ್ತುತ ಕೋವಿಡ್ -19 ಮಹಾಮಾರಿ ಇತ್ತೀಚಿನ ದಿನಗಳಲ್ಲಿ ವಿಶ್ವ ಕಂಡ ಅತಿ ದೊಡ್ಡ ವೈದ್ಯಕೀಯ ತುರ್ತುಸ್ಥಿತಿಗೆ ಕಾರಣವಾಗಿದೆ. ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಬೃಹತ್ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿನ ವೈದ್ಯಕೀಯ ಮೂಲಸೌಕರ್ಯವನ್ನು ಅಂತಿಮ ಪರೀಕ್ಷೆಗೆ ಒಡ್ಡುತ್ತಿದೆ. 285 ವರ್ಷಗಳಷ್ಟು ಹಳೆಯದಾದ ಪಶ್ಚಿಮ ನೌಕಾ ಕಮಾಂಡ್ (ಡಬ್ಲ್ಯು.ಎನ್.ಸಿ.)ನ ನೌಕಾ ಡಾಕ್ ಯಾರ್ಡ್ (ಎನ್.ಡಿ.) ಆವರಣಕ್ಕೆ ಪ್ರತಿ ನಿತ್ಯ ಸರಾಸರಿ ಸುಮಾರು 20,000 ಸಿಬ್ಬಂದಿ ಒಳಪ್ರವೇಶಿಸುತ್ತಾರೆ. ಕೋವಿಡ್ -19ರ ಹಿನ್ನೆಲೆಯಲ್ಲಿ, ಕೋವಿಡ್ -19 ಪಸರಿಸದಂತೆ ಕ್ರಮ ವಹಿಸಲು ಪಶ್ಚಿಮ ಪ್ಲೀಟ್ ಮತ್ತು ಡಾಕ್ ಯಾರ್ಡ್ ಪ್ರದೇಶದಲ್ಲಿ ಪ್ರವೇಶಿಸುವ ಈ ಸಿಬ್ಬಂದಿಯ ಪ್ರಾಥಮಿಕ ತಪಾಸಣೆ ಅಗತ್ಯವಾಗಿದೆ. ಸಂಭಾವ್ಯತೆಯ ಪರೀಕ್ಷೆಯೆಂದರೆ ವ್ಯಕ್ತಿಯ ದೇಹದ ತಾಪಮಾನವನ್ನು ಅವರನ್ನು ಸ್ಪರ್ಶಿಸದೆ ತಿಳಿಯುವ ಪದ್ಧತಿ ಅತ್ಯಂತ ಪ್ರಥಮಾದ್ಯವಾಗಿದೆ.   

ಕೋವಿಡ್ ಕಾಣಿಸಿಕೊಂಡಾಗಿನಿಂದ, ಸಂಪರ್ಕ ರಹಿತ ಥರ್ಮೋಮೀಟರ್ ಅಥವಾ ತಾಪಮಾನದ ಗನ್ ಗಳ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದು, ಅತಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಇದರ ಕೊರತೆ ಮತ್ತು ದೊಡ್ಡ ಸಂಖ್ಯೆಯ ಅಗತ್ಯದ ಹಿನ್ನೆಲೆಯಲ್ಲಿ ಎನ್.ಡಿ. (ಮುಂಬೈ) ತಾನೇ ಸ್ವತಃ ತನ್ನದೇ ಆದ ಕೈಯಲ್ಲಿ ಹಿಡಿಯಬಹುದಾದ ಐ.ಆರ್. ಆಧಾರಿತ 0.02 ಡಿಗ್ರಿ ಸೆಲ್ಸಿಯಸ್ ನಿಖರತೆಯೊಂದಿಗೆ ತಾಪಮಾನ ಸೆನ್ಸಾರ್ ವಿನ್ಯಾಸ ಮಾಡಿ ಅಭಿವೃದ್ಧಿಗೊಳಿಸಿದೆ. ಸಂಪರ್ಕ ರಹಿತವಾದ ಈ ಥರ್ಮಾಮೀಟರ್ ಇನ್ಫ್ರಾರೆಡ್ ಸೆನ್ಸಾರ್ ಮತ್ತು ಎಲ್.ಇ.ಡಿ. ಡಿಸ್ ಪ್ಲೇ ಸಹಿತ ಮೈಕ್ರೋ ಕಂಟ್ರೋಲರ್ ಅನ್ನೂ ಒಳಗೊಂಡಿದ್ದು, 9 V ಬ್ಯಾಟರಿಯ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಈ ಉಪಕ್ರಮವು ಯಾರ್ಡ್ ನ ಪ್ರವೇಶ ದ್ವಾರದಲ್ಲೇ ದೊಡ್ಡ ಸಂಖ್ಯೆಯ ಸಿಬ್ಬಂದಿಯ ತಪಾಸಣೆ ನಡೆಸಲು ಅವಕಾಶ ನೀಡಲಿದ್ದು, ಆ ಮೂಲಕ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆ ಮಾಡಲಿದೆ.

ಡಾಕ್ ಯಾರ್ಡ್ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಈ ಸಾಧನಗಳ ಉತ್ಪಾದನೆಯ ತನ್ನ ಸಾಮರ್ಥ್ಯವನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅಗತ್ಯ ಸಾಧನಗಳ ಸಂಗ್ರಹಣೆ ಪ್ರಗತಿಯಲ್ಲಿದೆ.



(Release ID: 1610207) Visitor Counter : 150