PIB Headquarters

ಕೋವಿಡ್  ಸಂಬಂಧಿಸಿದಂತೆ ಪಿ ಐ ಬಿ ದೈನಂದಿನ ವೈದ್ಯಕೀಯ ವರದಿ 1.4.2020

Posted On: 01 APR 2020 6:26PM by PIB Bengaluru

ಕೋವಿಡ್  ಸಂಬಂಧಿಸಿದಂತೆ ಪಿ ಐ ಬಿ ದೈನಂದಿನ ವೈದ್ಯಕೀಯ ವರದಿ 1.4.2020

  

ಕೋವಿಡ್ -19 ಅಪ್ ಡೇಟ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತ ಇತ್ತೀಚಿನ ವರದಿಗಳು ಮತ್ತು ದೇಶದಲ್ಲಿ ಕೋವಿಡ್ -19ರ ತಡೆಗೆ ಮತ್ತು ನಿಯಂತ್ರಣಕ್ಕೆ ಹಾಗೂ ನಿರ್ವಹಣೆಗೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು,  

ಈವರೆಗೆ 1637 ಪ್ರಕರಣಗಳು ದೃಢಪಟ್ಟಿದ್ದು, 38 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 376 ಹೊಸ ಪ್ರಕರಣಗಳು ದೃಢಪಟ್ಟಿದ್ದು, 3 ಹೊಸ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. 132 ಜನರು ಗುಣಮುಖರಾಗಿದ್ದಾರೆ/ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  https://pib.gov.in/PressReleseDetail.aspx?PRID=1609932.

ರಾಜ್ಯಗಳ ಮುಖ್ಯಕಾರ್ಯದರ್ಶಿ/ಡಿಜಿಪಿಗಳೊಂದಿಗೆ ಸಂಪುಟ ಕಾರ್ಯದರ್ಶಿಯವರ ವಿಡಿಯೋ ಸಂವಾದ

·         ತಬ್ಲಿಘಿ ಜಮಾತ್ ನಲ್ಲಿ  ಭಾಗವಹಿಸಿದ್ದವರ ತೀವ್ರ ಸಂಪರ್ಕದ ಬಗ್ಗೆ ರಾಜ್ಯಗಳು ಸಂವೇದನಾಶೀಲವಾಗಿವೆಏಕೆಂದರೆ ಇದು ಕೋವಿಡ್-19 ನ ನಿಯಂತ್ರಣ ಪ್ರಯತ್ನಗಳ ಅಪಾಯವನ್ನು ಹೆಚ್ಚಿಸಿದೆ. ಸಂಪರ್ಕಿತರ ಪತ್ತೆ ಪ್ರಕ್ರಿಯೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

·         ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ ವಿದೇಶೀಯರು ವೀಸಾ ಷರತ್ತುಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ವಿದೇಶೀಯರು ಮತ್ತು ಕಾರ್ಯಕ್ರಮ ಸಂಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆ ರಾಜ್ಯಗಳಿಗೆ ಸೂಚಿಸಲಾಗಿದೆ.

·         ಮುಂದಿನ ವಾರದೊಳಗಾಗಿ ಪಿಎಂ ಗರೀಬ್ ಕಲ್ಯಾಣ್ ಯೋಜನೆಯನ್ನು ಜಾರಿಮಾಡಲೂ ರಾಜ್ಯಗಳಿಗೆ ಸೂಚಿಸಲಾಗಿದೆ. ಇದು ಫಲಾನುಭವಿಗಳಿಗೆ ಬೃಹತ್ ಮೊತ್ತದ ನಗದು ವರ್ಗಾವಣೆಯನ್ನು ಒಳಗೊಂಡಿದೆ. ಇದನ್ನು ಸಾಮಾಜಿಕ ಅಂತರದ ಖಾತ್ರಿಯೊಂದಿಗೆ ಆಯೋಜಿಸಬೇಕು.

·         ದೇಶದಾದ್ಯಂತ ಲಾಕ್ ಡೌನ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿರುವುದನ್ನೂ ಗಮನಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಾರಾಜ್ಯ ಸರಕು ಸಾಗಣೆಗೆ ಯಾವುದೇ ಅಡ್ಡಿ ಇಲ್ಲದಂತೆ  ಖಾತ್ರಿಪಡಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಯಿತು.

·         ಅತ್ಯಗತ್ಯ ವಸ್ತುಗಳ ಉತ್ಪಾದನೆಯನ್ನು ಖಾತ್ರಿಪಡಿಸಬೇಕು. ಅಂತ ವಸ್ತುಗಳ ಪೂರೈಕೆ ಸರಪಣಿಯನ್ನೂ ಖಚಿತಪಡಿಸಬೇಕು ಎಂದು ಸೂಚಿಸಲಾಯಿತು.

https://pib.gov.in/PressReleseDetail.aspx?PRID=1609874

ವೈದ್ಯಕೀಯ ಸರಕು ಸಾಗಣೆಗೆ 74ವಿಮಾನ

ದೇಶದಾದ್ಯಂತ ವೈದ್ಯಕೀಯ ಸರಕುಗಳ ಸಾಗಣೆಗೆ  ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಜೀವಸೆಲೆಯ ಉಪಕ್ರಮದ ಅಡಿಯಲ್ಲಿ ಇಲ್ಲಿಯವರೆಗೆ 74 ವಿಮಾನಗಳ ಕಾರ್ಯಾಚರಣೆ ಮಾಡಲಾಗಿದೆ. ಒಟ್ಟು 37.63 ಟನ್ ಗಳಷ್ಟು ಸರಕುಗಳನ್ನು ಈ ದಿನಾಂಕದವರೆಗೆ ಸಾಗಿಸಲಾಗಿದ್ದು, ಈ ಪೈಕಿ 22 ಟನ್ ಗಳಿಗೂ ಹೆಚ್ಚು ಸರಕನ್ನು 31ನೇ ಮಾರ್ಚ್ 2020ರಂದು ಸಾಗಿಸಲಾಗಿದೆ.

https://pib.gov.in/PressReleseDetail.aspx?PRID=1609901

ಮಾಧ್ಯಮಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ

ಮುದ್ರಣವಿಧ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳಿಗೆ ಬಲವಾದ ಜವಾಬ್ದಾರಿಯನ್ನು ನಿರ್ವಹಿಸುವಂತೆ ಮತ್ತು ಭಯವನ್ನು ಉಂಟುಮಾಡುವ ಸಾಮರ್ಥ್ಯವಿರುವ ಯಾವುದೇ ಪರಿಶೀಲಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದೆ.

https://pib.gov.in/PressReleseDetail.aspx?PRID=1609887

ಐಐಟಿ ನಿರ್ದೇಶಕರುಗಳನ್ನು ಭೇಟಿ ಮಾಡಿದ ಎಚ್.ಆರ್.ಡಿ. ಸಚಿವರು

ತಮ್ಮ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯ ಕಾಳಜಿ ವಹಿಸುವಂತೆ 23 ಐಐಟಿಗಳ ನಿರ್ದೇಶಕರುಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ನಿರ್ದೇಶಿಸಿದ್ದಾರೆ. ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಆನ್ ಲೈನ್ ಕೋರ್ಸ್ ಗಳ ವ್ಯಾಪ್ತಿಗೆ ತರುವುದನ್ನು ಖಾತ್ರಿ ಪಡಿಸುವಂತೆಯೂ ನಿರ್ದೇಶಿಸಿದರು.

https://pib.gov.in/PressReleseDetail.aspx?PRID=1609932

ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಲೆ ಮತ್ತು ಸಂಪನ್ಮೂಲದ ನಿಗಾ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್.ಪಿಪಿಎ) ಬೆಲೆ ನಿಗಾ ಮತ್ತು ಸಂಪನ್ಮೂಲ ಘಟಕ (ಪಿಎಂಆರ್.ಯು) ಸ್ಥಾಪನೆ ಮಾಡಿರುವ 12ನೇ ರಾಜ್ಯವಾಗಿದೆ. ಪಿಎಂಆರ್.ಯು ಎನ್.ಪಿ.ಪಿ.ಎ ಮತ್ತು ರಾಜ್ಯ ಔಷಧ ನಿಯಂತ್ರಕರಿಗೆ ಕೈಗೆಟಕುವ ದರದಲ್ಲಿ ಔಷಧಗಳ ಲಭ್ಯತೆಯ ಖಾತ್ರಿಪಡಿಸಿಕೊಳ್ಳಲು ನೆರವಾಗಲಿದೆ.

https://pib.gov.in/PressReleseDetail.aspx?PRID=1609855

ಕೋವಿಡ್ ವಿರುದ್ಧ ಸಿಪೆಟ್ ಕಾರ್ಯಾಚರಣೆ

ಕೋವಿಡ್ -19 ಮಹಾಮಾರಿ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಒಂದು ಸಂಸ್ಥೆಯಾದ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರೀಯ ಸಂಸ್ಥೆ ವಿವಿಧ ರಾಜ್ಯಗಳಲ್ಲಿ ಸೌಲಭ್ಯಗಳ ಮೂಲಕ ಸಮುದಾಯದ ಯೋಗಕ್ಷೇಮಕ್ಕಾಗಿ ಉದಾತ್ತ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

https://pib.gov.in/PressReleseDetail.aspx?PRID=1609831

ರಸಗೊಬ್ಬರ ಪಿಎಸ್.ಯುನಿಂದ 27 ಕೋಟಿ ದೇಣಿಗೆ

ರಸಗೊಬ್ಬರ ಇಲಾಖೆಯಡಿಯಲ್ಲಿನ ಪಿ.ಎಸ್.ಯು.ಗಳು ಕೋವಿಡ್-19 ಮಹಾಮಾರಿ ವಿರುದ್ಧದ ಹೋರಾಟದ ಪಿಎಂಕೇರ್ಸ್ ನಿಧಿಗೆ 27 ಕೋಟಿ ರೂ.ಗೂ ಹೆಚ್ಚು ಹಣವನ್ನು ದೇಣಿಗೆ ನೀಡಿದೆ.

https://pib.gov.in/PressReleseDetail.aspx?PRID=1609827

ನೆರವಿನ ಪ್ರಯತ್ನಗಳ ಪರಾಮರ್ಶೆ ನಡೆಸಿದ ರಕ್ಷಣಾ ಸಚಿವ

ರಕ್ಷಣಾ ಸಚಿವರು ಇಂದು ವಿಡಿಯೋ ಸಂವಾದದ ಮೂಲಕ ಕೋವಿಡ್ -19ವಿರುದ್ಧದ ಹೋರಾಟದಲ್ಲಿ ರಕ್ಷಣಾ ಸಚಿವಾಲಯದ ವಿವಿಧ ಸಂಘಟನೆಗಳು ನೀಡಿರುವ ನೆರವಿನ ಕುರಿತು ಪರಾಮರ್ಶಿಸಿದರು. ಈ ನಿರ್ಣಾಯಕ ಸಮಯದಲ್ಲಿ ಕೇಂದ್ರ ಸರ್ಕಾರದ ಇತರ ಸಚಿವಾಲಯಗಳು/ಸಂಘಟನೆಗಳೊಂದಿಗೆ ಆಪ್ತ ಸಹಯೋಗದಲ್ಲಿ ತಮ್ಮ ಪ್ರಯತ್ನಗಳನ್ನು ಎರಡುಪಟ್ಟು ಮಾಡುವಂತೆ ಎಲ್ಲ ಸಂಘಟನೆಗಳಿಗೆ ಅವರು ಸೂಚಿಸಿದರು. https://pib.gov.in/PressReleseDetail.aspx?PRID=1609882

ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ಸಾಗಿಸಿದ  ಐಎಎಫ್

ಭಾರತೀಯ ವಾಯುಪಡೆ ಮಾರಕ ಕೋವಿಡ್-19 ಮಹಾಮಾರಿ ಹಬ್ಬುವುದನ್ನು ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಭಾರತದ ಪ್ರಯತ್ನಕ್ಕೆ ತನ್ನ ಪೂರ್ಣ ಬೆಂಬಲವನ್ನು ಮುಂದುವರಿಸಿದೆ. ಐ.ಎ.ಎಫ್. ಕಳೆದ ಮೂರು ದಿನಗಳಿಂದ ಸುಮಾರು 25 ಟನ್ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ದೆಹಲಿ, ಸೂರತ್, ಚಂಡೀಗಢದಿಂದ ಮಣಿಪುರ, ನಾಗಾಲ್ಯಾಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ವಾಯು ಮಾರ್ಗದ ಮೂಲಕ ರವಾನಿಸಿದೆ.

https://pib.gov.in/PressReleseDetail.aspx?PRID=1609878

ಅವಧಿ ಸಾಲಗಳ ಮೇಲೆ ನಿಷೇಧವನ್ನು ಘೋಷಿಸಲು ಬ್ಯಾಂಕುಗಳಿಗೆ ಆರ್‌ಬಿಐ ಅನುಮತಿಸುವ ಕುರಿತಂತೆ ಪದೇಪದೆ ಕೇಳಲಾಗುವ ಪ್ರಶ್ನೆಗಳು

https://pib.gov.in/PressReleseDetail.aspx?PRID=1609820

ಕೋವಿಡ್ 19 ಕುಂದುಕೊರತೆ ಕುರಿತ ರಾಷ್ಟ್ರೀಯ ನಿಗಾ ಡ್ಯಾಷ್ ಬೋರ್ಡ್

ಕೋವಿಡ್ -19 ಕುಂದುಕೊರತೆ ಕುರಿತ ಡಿ.ಎ.ಆರ್.ಪಿ.ಜಿಯ ರಾಷ್ಟ್ರೀಯ ನಿಗಾ ಡ್ಯಾಷ್ ಬೋರ್ಡ್ ಅನ್ನು ಇಂದು ಉದ್ಘಾಟಿಸಲಾಗಿದ್ದು, ಅದರಲ್ಲಿ ಸಿಪಿಜಿಆರ್.ಎ.ಎಂ.ಎಸ್.ನೊಂದಿಗೆ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಿದ ಕೋವಿಡ್ -19 ಸಂಬಂಧಿತ ಕುಂದುಕೊರತೆಗಳನ್ನು ಆದ್ಯತೆಯ ಆಧಾರದ ಮೇಲೆ ಡಿಎಆರ್.ಪಿ.ಜಿ.ಯ ತಾಂತ್ರಿಕ ತಂಡ ನಿಗಾ ವಹಿಸಲಿದೆ.

https://pib.gov.in/PressReleseDetail.aspx?PRID=1609860

ರಾಷ್ಟ್ರೀಯ ಪ್ರಯತ್ನಗಳಿಗೆ ಪೂರಕವಾಗಿ ರೈಲ್ವೆಯ ಸಿದ್ಧತೆಗಳ ಪರಿಶೀಲನೆ

ಅಗತ್ಯವಿರುವ ಜನರಿಗೆ ಆಹಾರ ಮತ್ತು ಇತರ ನೆರವು ತಲುಪಿಸಲು ಅವರ ಮಾನವ ಸಾಮರ್ಥ್ಯ ಮತ್ತು ಸಂಪನ್ಮೂಲಗಳಿಗೆ ತಕ್ಕಂತೆ ಶ್ರಮಿಸುವಂತೆ ಭಾರತೀಯ ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಸಚಿವರು ನಿರ್ದೇಶನ ನೀಡಿದ್ದಾರೆ. ಐ.ಆರ್.ಸಿ.ಟಿ.ಸಿ. ಮತ್ತು ಆರ್.ಪಿ.ಎಫ್. ಗಳು ಈಗಾಗಲೇ ಉಚಿತ ಊಟವನ್ನು ಅಗತ್ಯವಿರುವ ಜನರಿಗೆ ಪೂರೈಕೆ ಮಾಡುತ್ತಿದೆ. ರೈಲ್ವೆ ತನ್ನ ಈ ಪ್ರಯತ್ನವನ್ನು ವಿಸ್ತರಿಸಬೇಕು ಮತ್ತು ಜಿಲ್ಲಾಧಿಕಾರಿಗಳು ಮತ್ತು ಎನ್‌.ಜಿಒ ಇತ್ಯಾದಿಗಳೊಂದಿಗೆ ಸಮಾಲೋಚಿಸಿ ರೈಲ್ವೆ ನಿಲ್ದಾಣಗಳ ಸಾಮೀಪ್ಯವನ್ನು ಮೀರಿ ದೂರದ ಪ್ರದೇಶಗಳಿಗೆ ಹೋಗಬೇಕು.

https://pib.gov.in/PressReleseDetail.aspx?PRID=1609850

ಕೊರೋನಾ ವೈರಾಣುವಿನ ಬಗ್ಗೆ ಹಿರಿಯ ವಿಜ್ಞಾನಿಗಳು ಹೇಳುವುದೇನು

ಸಾಮಾಜಿಕ ಮಾಧ್ಯಮ, ವಾಟ್ಸ್ ಅಪ್ ಮೂಲಕ ಮತ್ತು ಇಂಟರ್ ನೆಟ್ ನಲ್ಲಿ ಮಾರಕ ಕೊರೋನಾ ವೈರಾಣುವಿನ ಬಗ್ಗೆ ಹಲವು ಸಂಗತಿಗಳು ಹರಿದಾಡುತ್ತಿವೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ, ನಮಗೆ ಈ ಮಾರಕ ವೈರಾಣುವಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಿದ್ದಾರೆ.

 https://pib.gov.in/PressReleseDetail.aspx?PRID=1609842

ಕೋವಿಡ್ ಕುರಿತಂತೆ ಟಿಐಎಫ್.ಆರ್. ನಿಂದ ಬಹು ಭಾಷೆಯ ವಿಡಿಯೋಗಳು

ಮೂಲಭೂತ ಸಂಶೋಧನೆಯ ಟಾಟಾ ಇನ್ ಸ್ಟಿಟ್ಯೂಟ್, ಕೋವಿಡ್ -19ರಂತಹ ವೈರಾಣವನ್ನು ನಿಭಾಯಿಸಲು ಸಾಮಾಜಿಕ ಅಂತರ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸುವ ಬಹು-ಭಾಷಾ (9 ಭಾಷೆಗಳು) ಸಂಪನ್ಮೂಲಗಳ (ಯೂಟ್ಯೂಬ್ ವೀಡಿಯೊಗಳು) ಸಂವಹನ ಸಾಮಗ್ರಿಗಳನ್ನು ಒಳಗೊಂಡ, ಅರಿವಿನ ಪ್ಯಾಕೇಜ್‌ನೊಂದಿಗೆ ಹೊರಬಂದಿದೆ.

https://pib.gov.in/PressReleseDetail.aspx?PRID=1609797

****


(Release ID: 1610125)