ರಕ್ಷಣಾ ಸಚಿವಾಲಯ

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಐ ಎ ಎಫ್ ಬೆಂಬಲ ಮುಂದುವರಿಕೆ

Posted On: 01 APR 2020 3:21PM by PIB Bengaluru

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಐ ಎ ಎಫ್ ಬೆಂಬಲ ಮುಂದುವರಿಕೆ

 

ನೊವೆಲ್ ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮತ್ತು ಕೋವಿಡ್ – 19 ನಿರ್ವಹಣೆಗೆ ದೇಶದ ಎಲ್ಲೆಡೆ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತೀಯ ವಾಯುಪಡೆ  ತನ್ನ ಸಂಪೂರ್ಣ ಸಹಕಾರ ಒದಗಿಸುವುದನ್ನು ಮುಂದುವರಿಸಿದೆ.

ಕಳೆದ 3 ದಿನಗಳಿಂದ ದೆಹಲಿ, ಸೂರತ್ ಮತ್ತು ಚಂಡೀಗಡದಿಂದ ಮಣಿಪುರ, ನಾಗಾಲ್ಯಾಂಡ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಗೆ ಭಾರತೀಯ ವಾಯುಪಡೆ ಸುಮಾರು 20 ಟನ್ ಗಳಷ್ಟು ಆರೋಗ್ಯ ಸಾಮಗ್ರಿಗಳನ್ನು ವಿಮಾನಗಳ ಮೂಲಕ ತಲುಪಿಸಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ವೈಯಕ್ತಿಕ ರಕ್ಷಣಾ ಸಾಮಗ್ರಗಳು, ಹ್ಯಾಂಡ್ ಸ್ಯಾನಿಟೈಸರ್ ಗಳು, ಸರ್ಜಿಕಲ್ ಗ್ಲೌಸ್ ಮತ್ತು ಥರ್ಮಲ್ ಸ್ಕ್ಯಾನರ್ ಗಳನ್ನು ರವಾನಿಸಲಾಗಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದಿಂದ ದೆಹಲಿಗೆ ಕೋವಿಡ್ ಪರೀಕ್ಷಾ ಮಾದರಿಗಳನ್ನು ವಿಮಾನದ ಮೂಲಕ ನಿರಂತರ ಸಾಗಿಸಲಾಗುತ್ತಿದೆ. ಇದಕ್ಕಾಗಿ ಸಿ – 17, ಸಿ – 130, ಎ ಎನ್ – 32, ಎ ವಿ ಆರ್ ಒ ಮತ್ತು ಡಾರ್ನಿಯರ್ ವಾಯುಪಡೆ ವಿಮಾನಗಳನ್ನು ಅವಶ್ಯಕತೆಗೆ ತಕ್ಕಂತೆ ನಿಯೋಜಿಸಲಾಗುತ್ತಿದೆ ಮತ್ತು ಹೆಚ್ಚುವ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಭಾರತೀಯ ವಾಯುಪಡೆ ಸಮರ್ಪಕವಾಗಿ ಸಜ್ಜಾಗಿದೆ.

ಇದರ ಜೊತೆಗೆ, ದೇಶದ ವಿವಿಧೆಡೆ ಭಾರತೀಯ ವಾಯುಪಡೆ ನೆಲೆಗಳಲ್ಲಿ ಸ್ಥಾಪಿಸಲಾದ ಹಲವಾರು ಕ್ವಾರೆಂಟೈನ್ ಸೌಲಭ್ಯಗಳು ನಿರಂತರ ಸೇವೆಯನ್ನು ಮುಂದುವರೆಸಿವೆ. ಇರಾನ್ ಮತ್ತು ಮಲೇಷ್ಯಾದಿಂದ ಸ್ಥಳಾಂತರಿಸಿದ ಭಾರತೀಯ ನಾಗರಿಕರಿಗೆ ಪ್ರಸ್ತುತ ಹಿಂದನ್ ಮತ್ತು ತಾಂಬರಂ ವಾಯು ನೆಲೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರಿನ ಕಮಾಂಡ್ ವಾಯು ಸೇನಾ ಆಸ್ಪತ್ರೆಯಲ್ಲಿ ಕೋವಿಡ್ – 19 ಪರೀಕ್ಷಾ ಪ್ರಯೋಗಾಲಯವು ಪರೀಕ್ಷೆಗಳ ಕಾರ್ಯ ನಿರ್ವಹಿಸುತ್ತಿದೆ.

ಇದೇ ವೇಳೆ, ಐ ಎ ಎಫ್ ನ ಎಲ್ಲ ನೆಲೆಗಳಲ್ಲಿ ಈ ರೋಗದ ಹರಡುವಿಕೆ ನಿಯಂತ್ರಿಸಲು  ಸಮಗ್ರ ಕ್ರಮಗಳನ್ನು  ಕೈಗೊಳ್ಳಲಾಗಿದೆ. ಭಾರತ ಸರ್ಕಾರ ಹೊರಡಿಸಿದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ರಾಷ್ಟ್ರೀಯ ಪ್ರಯತ್ನಕ್ಕೆ ಸಹಕರ ನೀಡಲು ಐ ಎ ಎಫ್ ನ ಎಲ್ಲ ಸ್ವತ್ತುಗಳು ಮತ್ತು ವಾಯು ನೆಲೆಗಳು ಸಿದ್ಧವಾಗಿವೆ. ತಮ್ಮ ನೆರೆಯಲ್ಲಿ ವಾಸಿಸುತ್ತಿರುವ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನರಿಗೆ ಆಹಾರ ಮತ್ತು ಅವಶ್ಯಕ ಸಹಕಾರ ನೀಡುವುದನ್ನು ಐ ಎ ಎಫ್ ನೆಲೆಗಳು ಮುಂದುವರೆಸಿವೆ.    

 

****

 


(Release ID: 1610057) Visitor Counter : 171