ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

COVID-19 ಹಿನ್ನೆಲೆಯಲ್ಲಿ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಎಲ್ಲಾ 23 ಐಐಟಿಗಳ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ

Posted On: 01 APR 2020 5:26PM by PIB Bengaluru

COVID-19 ಹಿನ್ನೆಲೆಯಲ್ಲಿ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಎಲ್ಲಾ 23 ಐಐಟಿಗಳ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ

COVID-19 ಕುರಿತು ಹೆಚ್ಚಿನ ಸಂಶೋಧನೆ ಮಾಡಲು ಶ್ರೀ ನಿಶಾಂಕ್ ಐಐಟಿಗಳಿಗೆ ಸೂಚನೆ

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಕ್ಯಾಂಪಸ್ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅವರ ಕುಟುಂಬ ಸದಸ್ಯರು ಮತ್ತು ಗುತ್ತಿಗೆ ಸಿಬ್ಬಂದಿ ಯಾವುದೇ ಸಮಸ್ಯೆಯನ್ನು ಎದುರಿಸದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.

ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಆನ್ಲೈನ್ ಕೋರ್ಸ್ಗಳಲ್ಲಿ ಒಳಪಡಿಸುವಂತೆ ಶ್ರೀ ಪೋಖ್ರಿಯಾಲ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು. ಕೋರ್ಸ್ಗಳನ್ನು ಸ್ವಯಂ / ಸ್ವಯಂ ಪ್ರಭಾದಲ್ಲಿ ಇರಿಸಲು ಮತ್ತು ಕ್ರೆಡಿಟ್ ವರ್ಗಾವಣೆ ಕಾರ್ಯವಿಧಾನದಲ್ಲಿ ಕೆಲಸ ಮಾಡಲು ಸಂಸ್ಥೆಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಂಬಂಧಿತ ಸವಾಲುಗಳನ್ನು (ಲಾಕ್ಡೌನ್ ಅವಧಿಯಲ್ಲಿ) ಪರಿಹರಿಸಬೇಕು ಮತ್ತು ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಕಾರ್ಯಪಡೆಯನ್ನು ಪ್ರತಿ ಸಂಸ್ಥೆಯೂ ಸ್ಥಾಪಿಸಬೇಕು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವೇತನ / ಪಿಂಚಣಿ / ವಿದ್ಯಾರ್ಥಿವೇತನಗಳನ್ನು ಅವರಿಗೆ ಸಮಯಕ್ಕೆ ಸರಿಯಾಗಿ ನೀಡಬೇಕು ಮತ್ತು ವಿಷಯದಲ್ಲಿ ಯಾವುದೇ ಸಮಸ್ಯೆ ಇರಬಾರದು ಎಂದು ಅವರು ತಿಳಿಸಿದರು. ಗುತ್ತಿಗೆ ಮತ್ತು ದಿನಗೂಲಿ ನೌಕರರು ಯಾವುದೇ ತೊಂದರೆಗಳನ್ನು ಎದುರಿಸಬಾರದು ಇವರಿಗೆ ಏಪ್ರಿಲ್ 30 ರವರೆಗೆ ವೇತನವನ್ನು ಪೂರ್ಣವಾಗಿ ಪಾವತಿಸಬೇಕೆಂದು ಶ್ರೀ ನಿಶಾಂಕ್ ನಿರ್ದೇಶನ ನೀಡಿದರು.

PM-CARES ನಿಧಿಗೆ ಕೊಡುಗೆ ನೀಡುವಂತೆ ಸಚಿವರು ಎಲ್ಲಾ ಸಂಸ್ಥೆಗಳಿಗೆ ಮನವಿ ಮಾಡಿದರು. COVID-19 ಕುರಿತು ಸಕ್ರಿಯ ಸಂಶೋಧನಾ ಕಾರ್ಯಗಳನ್ನು ನಡೆಸಬೇಕೆಂದು ಸಂಸ್ಥೆಗಳಿಗೆ ಸೂಚನೆ ನೀಡಿದರು. ಈಗಾಗಲೇ ನಡೆಯುತ್ತಿರುವ ಸಂಶೋಧನಾ ಕಾರ್ಯಗಳಿಗೆ ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆಯೂ ಸಚಿವರು ತಿಳಿಸಿದರು.

ಪ್ರಸ್ತುತ ಹಾಸ್ಟೆಲ್ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವಂತೆ ಶ್ರೀ ಪೋಖ್ರಿಯಾಲ್ ಸಂಸ್ಥೆಗಳ ನಿರ್ದೇಶಕರಿಗೆ ನಿರ್ದೇಶನ ನೀಡಿದರು. ಸಾಮಾಜಿಕ ಅಂತರ, ಆಹಾರ ವಿತರಣೆಯ ಬಗ್ಗೆ  ವಿಶೇಷ ಗಮನವನ್ನು ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳು ಬೇಸಿಗೆ ಮತ್ತು ಚಳಿಗಾಲದ ಇಂಟರ್ನ್ಶಿಪ್ಗಳನ್ನು ಕಳೆದುಕೊಳ್ಳದಂತೆ ಸಂಸ್ಥೆಗಳ ಶೈಕ್ಷಣಿಕ ಕ್ಯಾಲೆಂಡರ್ ಸಿದ್ಧಪಡಿಸಬಹುದು ಎಂದು ಅವರು ನಿರ್ದೇಶಿಸಿದರು. ಸಂಸ್ಥೆಗಳಲ್ಲಿ ಕಳೆದ ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಉದ್ಯೋಗ ನಿಯೋಜನೆಯನ್ನು  ಖಚಿತಪಡಿಸಿಕೊಳ್ಳಲು ವಿವಿಧ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಲು ಕಾರ್ಯಪಡೆ  ಸ್ಥಾಪಿಸಬಹುದು ಎಂದು ಅವರು ಹೇಳಿದರು.

ಐಐಟಿ ಬಾಂಬೆ ಒದಗಿಸಿರುವ ಇನ್ಕ್ಯುಬೇಷನ್ ಸೌಲಭ್ಯಗಳನ್ನು ಬಳಸಿಕೊಳ್ಳಲು ಎಲ್ಲಾ ಐಐಟಿಗಳು ಮುಂದೆ ಬರಬೇಕು ಎಂದು ಶ್ರೀ ನಿಶಾಂಕ್ ನಿರ್ದೇಶನ ನೀಡಿದರು.

ವಿಡಿಯೋ ಕಾನ್ಫರೆನ್ಸಿಂಗ್ ಸಮಯದಲ್ಲಿ ಪ್ರತಿ ಐಐಟಿಗಳು ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಮತ್ತು  ಗುತ್ತಿಗೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಿವರಿಸಿದವು. ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಸಂಸ್ಥೆಗಳ ನಿರ್ದೇಶಕರು / ಅಧ್ಯಾಪಕರು / ಸಿಬ್ಬಂದಿ ಮೂಲಕ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅವರು ಸಂಶೋಧನಾ ಕ್ಷೇತ್ರದಲ್ಲಿನ ಪ್ರಮುಖ ಸಾಧನೆಗಳ ಬಗ್ಗೆ, ವಿಶೇಷವಾಗಿ COVID-19 ರ ವಿರುದ್ಧ ಹೋರಾಡಲು. ಮುಖಗವಸುಗಳು, ಕಡಿಮೆ ಬೆಲೆಯ ವೆಂಟಿಲೇಟರ್‌ಗಳು, ಸ್ಯಾನಿಟೈಜರ್, ಪರೀಕ್ಷಾ ಕಿಟ್‌ಗಳಂತಹ ರಕ್ಷಣಾ ಸಾಧನಗಳ ಬಗ್ಗೆ ವಿವರಿಸಿದರು. ಈ ಕ್ಷೇತ್ರದಲ್ಲಿ ಸಂಸ್ಥೆಗಳ ಪ್ರಯತ್ನವನ್ನು ಮಾನವ ಸಂಪನ್ಮೂಲ ಸಚಿವರು ಶ್ಲಾಘಿಸಿದರು. ಮತ್ತು ಸಂಸ್ಥೆಗಳಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯಗಳನ್ನು ಪ್ರೋತ್ಸಾಹಿಸುವ ಸರ್ಕಾರದ  ಇಚ್ಛೆಯನ್ನು ವ್ಯಕ್ತಪಡಿಸಿದರು.

ಐಐಟಿಗಳ ನಿರ್ದೇಶಕರು ನೀಡಿದ  ಭರವಸೆಗಳು: -

  • ಐಐಟಿಗಳ ಹೆಚ್ಚಿನ ವಿದ್ಯಾರ್ಥಿಗಳು ಸದ್ಯಕ್ಕೆ ಕ್ಯಾಂಪಸ್‌ನಲ್ಲಿಲ್ಲ. ಕ್ಯಾಂಪಸ್‌ನಲ್ಲಿರುವವರಿಗೆ ಆಹಾರ, ಸುರಕ್ಷತೆ ಮುಂತಾದ ಎಲ್ಲ ನೆರವನ್ನು ನೀಡಲಾಗುತ್ತಿದೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುತ್ತಿದೆ.
  • ಪ್ರಸ್ತುತ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಕುಟುಂಬ ಸದಸ್ಯರು ಮತ್ತು ಗುತ್ತಿಗೆ ಸಿಬ್ಬಂದಿಗಳ ಸಾಮಾಜಿಕ ಅಂತರ ಮತ್ತು ಸುರಕ್ಷತೆಯನ್ನು ಎಲ್ಲಾ ಸಂಸ್ಥೆಗಳು ಕಾಪಾಡಿಕೊಳ್ಳುತ್ತಿವೆ.
  • ನಿಯಮಿತ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಂಸ್ಥೆಗಳು ಆನ್‌ಲೈನ್ ಕೋರ್ಸ್‌ಗಳನ್ನು ನೀಡುತ್ತಿವೆ. ಪ್ರಸ್ತುತ ಇಂಟರ್ನೆಟ್ ಲಭ್ಯತೆಯನ್ನು ಹೊಂದಿರದ ವಿದ್ಯಾರ್ಥಿಗಳು ನಂತರದ ದಿನಗಳಲ್ಲಿ ಅದನ್ನು ಬಳಸುವುದಕ್ಕಾಗಿ ಆನ್‌ಲೈನ್ ಪಠ್ಯ ಸಾಮಗ್ರಿಗಳನ್ನು ತಯಾರಿಸಲು ಮತ್ತು ಸಂರಕ್ಷಿಸಲು ಅಧ್ಯಾಪಕರಿಗೆ ನಿರ್ದೇಶಿಸಲಾಗಿದೆ.
  • ಲಾಕ್‌ಡೌನ್ ಕಾರಣದಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪರಿಷ್ಕೃತ ಶೈಕ್ಷಣಿಕ ಕ್ಯಾಲೆಂಡರ್ ರೂಪಿಸಲು ಐಐಟಿಗಳು ಕಾರ್ಯನಿರ್ವಹಿಸುತ್ತಿವೆ.
  • ಉದ್ಯೋಗಗಳನ್ನು ಹಿಂಪಡೆದಿರುವ ಕ್ಯಾಂಪಸ್ ಉದ್ಯೋಗ ನಿಯೋಜನೆಯ ವಿದ್ಯಾರ್ಥಿಗಳಿಗೆ ಜುಲೈ / ಆಗಸ್ಟ್ ನಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತದೆ.
  • ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆ / ಪ್ರೇರಣೆಯಲ್ಲಿ ನಿರಂತರತೆ ಇರುತ್ತದೆ. ಕೆಲವು ಐಐಟಿಗಳು COVID-19 ಕುರಿತು ಸಂಶೋಧನೆ ಕೈಗೊಳ್ಳಲು ವಿವಿಧ ನಗದು ಪ್ರಶಸ್ತಿಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿವೆ.

(Release ID: 1610055) Visitor Counter : 194