ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಡಾ. ಜಿತೇಂದ್ರ ಸಿಂಗ್ ರವರಿಂದ ಕೋವಿಡ್-19 ಕುಂದುಕೊರತೆಗಳಿಗಾಗಿ ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್ಬೋರ್ಡ್ ಚಾಲನೆ

Posted On: 01 APR 2020 2:11PM by PIB Bengaluru

ಡಾ. ಜಿತೇಂದ್ರ ಸಿಂಗ್ ರವರಿಂದ ಕೋವಿಡ್-19 ಕುಂದುಕೊರತೆಗಳಿಗಾಗಿ ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್ಬೋರ್ಡ್ ಚಾಲನೆ

 

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆಯ ರಾಜ್ಯ ಸಚಿವರಾದ  ಡಾ.ಜಿತೇಂದ್ರ ಸಿಂಗ್ ಅವರು ಇಂದು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ  (ಡಿಎಆರ್ ಪಿಜಿ) ಯ ಕೋವಿಡ್-19ರ ಬಗ್ಗೆ ಕುಂದುಕೊರತೆಗಳಿಗಾಗಿ ಇರುವ ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್ಬೋರ್ಡ್ ಅನ್ನು ಚಾಲನೆ ಮಾಡಿದರು. ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್ಬೋರ್ಡ್ ಅನ್ನು https://darpg.gov.in  ನಲ್ಲಿ ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಲಾಗಿದೆ, ಅದರಲ್ಲಿ ಎಲ್ಲಾ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಿಪಿಜಿಆರ್ ಎ ಎಂಎಸ್ ನಲ್ಲಿ ಕೋವಿಡ್-19 ಸಂಬಂಧಿತ ಕುಂದುಕೊರತೆಗಳನ್ನು ಡಿಎಆರ್ ಪಿಜಿ ಯ ತಾಂತ್ರಿಕ ತಂಡವು ಆದ್ಯತೆಯ ಆಧಾರದ ಮೇಲೆ ಮೇಲ್ವಿಚಾರಣೆ ಮಾಡುತ್ತದೆ.  ಕೋವಿಡ್-19 ಸಮಸ್ಯೆ ಬಗ್ಗೆ ಸ್ಪಂದಿಸುವ ಚಟುವಟಿಕೆಗಳ ಸಮಯೋಚಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಕುಂದುಕೊರತೆ ಮತ್ತು ಸಲಹೆಗಳ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ರಚಿಸಲಾದ 10  ಸಶಕ್ತ ಗುಂಪಿನ ಅಧಿಕಾರಿಗಳ ಶಿಫಾರಸುಗಳ ಅನುಸಾರವಾಗಿ ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್ ಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್ ರವರು, ಕೋವಿಡ್-19 ಸಮಸ್ಯೆಗಳನ್ನು ಸಕಾಲಿಕವಾಗಿ ಪರಿಹರಿಸುವುದು ಮೋದಿ ಸರ್ಕಾರದ ಪ್ರಯತ್ನವಾಗಿದೆ ಮತ್ತು ಈ ಕುಂದುಕೊರತೆಗಳಿಗೆ ಆದ್ಯತೆ ನೀಡಲು ಮತ್ತು 3 ದಿನಗಳ ಅವಧಿಯಲ್ಲಿ ಪರಿಹಾರವನ್ನು ಒದಗಿಸಲು ಎಲ್ಲಾ ಸಚಿವಾಲಯಗಳು / ಇಲಾಖೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ. . ಡಾ.ಜಿತೇಂದ್ರ ಸಿಂಗ್ ಅವರು ಕೇಂದ್ರ ಸರ್ಕಾರದ 262 ಕುಂದುಕೊರತೆಗಳ ಸ್ಥಿತಿಯನ್ನು ಮತ್ತು ರಾಜ್ಯ ಸರ್ಕಾರಗಳ 83 ಕುಂದುಕೊರತೆಗಳನ್ನು ಮೊದಲನೆಯ ದಿನದಂದು ವೈಯಕ್ತಿಕವಾಗಿ ಪರಿಶೀಲಿಸಲಾಗಿದೆ ಮತ್ತು ಡಿಎಆರ್ ಪಿಜಿ ಯಲ್ಲಿರುವ ಅಧಿಕಾರಿಗಳಿಗೆ ಸಂಬಂಧಪಟ್ಟ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳನ್ನು ಅನುಸರಿಸಲು ನಿರ್ದೇಶಿಸಿಸಲಾಗಿದೆ  ಎಂದು ಹೇಳಿದರು.

ಚಾಲನೆ ನೀಡಿದ ಮೊದಲ ದಿನವೇ, ರಾಷ್ಟ್ರೀಯ ಮಾನಿಟರಿಂಗ್ ಡ್ಯಾಶ್‌ ಬೋರ್ಡ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 43 ಕುಂದುಕೊರತೆಗಳನ್ನು, ವಿದೇಶಾಂಗ ಸಚಿವಾಲಯದ 31 ಕುಂದುಕೊರತೆಗಳನ್ನು ಮತ್ತು ಹಣಕಾಸು ಸಚಿವಾಲಯದ 26 ಕುಂದುಕೊರತೆಗಳನ್ನು ಸ್ವೀಕರಿಸಿದೆ. ಸಂಬಂಧಿಸಿದ ಕುಂದುಕೊರತೆಗಳ ಸ್ವರೂಪಗಳಾವುವೆಂದರೆ ಪ್ರತ್ಯೇಕತೆಯ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಲಾಕ್‌ಡೌನ್ ನ ನಿಯಮಗಳ ಪಾಲಿಸದಿರುವ ದೂರುಗಳು, ಅಗತ್ಯ ಸರಬರಾಜು ಸಂಬಂಧಿತ ದೂರುಗಳು, ಪರೀಕ್ಷೆಗೆ ಸಂಬಂಧಿಸಿದ ದೂರುಗಳು, ಸಾಲಗಳ ಮೇಲಿನ ಬಡ್ಡಿ ಮರುಪಾವತಿಯ ಮರುಹೊಂದಿಸುವಿಕೆ, ವಿದೇಶಗಳಿಂದ ಸ್ಥಳಾಂತರಿಸುವ ವಿನಂತಿಗಳು ಇತ್ಯಾದಿ. ಪ್ರತಿದಿನವೂ ಸರ್ಕಾರವು ಪೋರ್ಟಲ್ ಅನ್ನು ಹಿರಿಯ ಮಟ್ಟದಲ್ಲಿ ನವೀಕರಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ.

ನ್ಯಾಷನಲ್ ಕೋವಿಡ್-19 ಮಾನಿಟರಿಂಗ್ ಡ್ಯಾಶ್‌ ಬೋರ್ಡ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ಡಾ. ಜಿತೇಂದ್ರ ಸಿಂಗ್ ಅವರು ಡಿಎಆರ್‌ಪಿಜಿ ಕಾರ್ಯದರ್ಶಿ ಮತ್ತು ಅಧಿಕಾರಿಗಳ ತಂಡವನ್ನು ಅಭಿನಂದಿಸಿದರು, ಗರಿ ಎಂದು ಎರಡು ದಿನಗಳಲ್ಲಿ ರಾಷ್ಟ್ರೀಯ ಮಾನಿಟರ್ ಕಾರ್ಯಗತಗೊಂಡಿದೆ ಮತ್ತು 62 ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ, ಇದು ಇಲಾಖೆಗೆ ಹಿರಿಮೆಯ ಗರಿ ಎಂದು ಹೇಳಿದರು. ಕೋವಿಡ್-19 ಕುಂದುಕೊರತೆ ಪರಿಹಾರವನ್ನು ನಿರ್ವಹಿಸಲು ಡಿಎಆರ್‌ ಪಿಜಿ ತಂಡದ ಸಾಮರ್ಥ್ಯದ ಬಗ್ಗೆ ಇರುವ ಸರ್ಕಾರದ ನಂಬಿಕೆಯನ್ನು ಅವರು ಪುನರುಚ್ಚರಿಸಿದರು.

ಡಿಎಆರ್ಪಿಜಿ ಯ ಕಾರ್ಯದರ್ಶಿ ಡಾ.ಕ್ಷತ್ರಪತಿ ಶಿವಾಜಿ, ಡಿಎಆರ್ಪಿಜಿ ಯ ಹೆಚ್ಚುವರಿ ಕಾರ್ಯದರ್ಶಿ ವಿ.ಶ್ರೀನಿವಾಸ್, ಜಂಟಿ ಕಾರ್ಯದರ್ಶಿಗಳು ಶ್ರೀಮತಿ ಜಯಾ ದುಬೆ ಮತ್ತು ಎನ್.ಬಿ.ಎಸ್.ರಾಜಪುತ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


(Release ID: 1610046) Visitor Counter : 127