ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಔಷಧೋತ್ಪನ್ನಗಳು ಮತ್ತು ಆಸ್ಪತ್ರೆ ಸಲಕರಣೆ ಸೇರಿ ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ 280ಕ್ಕೂ ಅಧಿಕ ವಿಶೇಷ ವಿತ್ತ ವಲಯ (ಎಸ್ಇಝಡ್) ಗಳ ಕಾರ್ಯನಿರ್ವಹಣೆ ಮುಂದುವರಿಕೆ
Posted On:
31 MAR 2020 10:40AM by PIB Bengaluru
ಔಷಧೋತ್ಪನ್ನಗಳು ಮತ್ತು ಆಸ್ಪತ್ರೆ ಸಲಕರಣೆ ಸೇರಿ ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ 280ಕ್ಕೂ ಅಧಿಕ ವಿಶೇಷ ವಿತ್ತ ವಲಯ (ಎಸ್ಇಝಡ್) ಗಳ ಕಾರ್ಯನಿರ್ವಹಣೆ ಮುಂದುವರಿಕೆ
ವಿಶೇಷ ವಿತ್ತ ವಲಯಗಳು(ಎಸ್ಇಝಡ್), ಭಾರತದ ರಫ್ತು ವಲಯಕ್ಕೆ ಮಹತ್ವದ ಕೊಡುಗೆಗಳನ್ನು ಇತ್ತೀಚಿನ ವರ್ಷಗಳಲ್ಲಿ ನೀಡುತ್ತಿದ್ದು, ಅವು ಭಾರತದ ಒಟ್ಟಾರೆ ವಹಿವಾಟಿನ ಸುಮಾರು ಶೇ. 18ರಷ್ಟು ಕೊಡುಗೆಯನ್ನು ನೀಡುತ್ತಿವೆ. 2019-20ನೇ ಸಾಲಿನ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್ಇಝಡ್ ಗಳ ರಫ್ತು ವಹಿವಾಟು ಈಗಾಗಲೇ 110 ಮಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಿರುವ ಪ್ರಸಕ್ತ ಸಂದರ್ಭದಲ್ಲಿಯೂ ಎಸ್ಇಝಡ್ ಗಳು ಔಷಧಿಗಳು, ಔಷಧೋತ್ಪನ್ನಗಳು ಅಥವಾ ಆಸ್ಪತ್ರೆ ಸಲಕರಣೆಗಳು ಸೇರಿದಂತೆ ಅತ್ಯಂತ ಅವಶ್ಯಕ ವಸ್ತುಗಳ ಉತ್ಪಾದನೆಯ ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ.
ಔಷಧೋತ್ಪನ್ನಗಳು ಸೇರಿ ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ 280ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿವೆ, ಅಲ್ಲದೆ 1900ಕ್ಕೂ ಅಧಿಕ ಐಟಿ/ಐಟಿಇಎಸ್ ಘಟಕಗಳು, ತಮ್ಮ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿವೆ.
ಎಸ್ಇಝಡ್ ಗಳ ಅಭಿವೃದ್ಧಿ ಆಯುಕ್ತರು, ಡೆವಲಪರ್ ಗಳು/ಕೊ ಡೆವಲಪರ್ ಗಳು ಮತ್ತು ಘಟಕಗಳು ಯಾವುದೇ ರೀತಿಯ ತೊಂದರೆಗಳಿಗೆ ಒಳಗಾಗದಂತೆ ಮನವಿ ಮಾಡಿದ್ದಾರೆ ಮತ್ತು 2020ರ ಮಾರ್ಚ್ 31ರೊಳಗೆ ಐಟಿ/ಐಟಿಇಎಸ್ ಘಟಕಗಳು ಹಾಗೂ ಮತ್ತಿತರವುಗಳು ಸಲ್ಲಿಸಬೇಕಾದ ಕ್ಯೂಪಿಆರ್, ಎಪಿಆರ್, ಸಾಫ್ ಟೆಕ್ಸ್ ಮತ್ತಿತರವುಗಳನ್ನು ಸಲ್ಲಿಸದಿರುವವರ ವಿರುದ್ಧ ಯಾವುದೇ ದಂಡನಾ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸೂಚಿಸಿದೆ. ಅಲ್ಲದೆ ಕಾಲಮಿತಿಯಲ್ಲಿ ವಿದ್ಯುನ್ಮಾನ ವಿಧಾನದ ಮೂಲಕ ಸಾಲ ಮರುಪಾವತಿಗೆ ಅಗತ್ಯ ಸಮಯಾವಕಾಶ ಸೇರಿದಂತೆ ಅಗತ್ಯ ಅನುಕೂಲಗಳನ್ನು ಮಾಡಿಕೊಡಬೇಕು. ಒಂದು ವೇಳೆ ವಿದ್ಯುನ್ಮಾನ ವಿಧಾನದಲ್ಲಿ ವಿಸ್ತರಣೆ ಸಾಧ್ಯವಿಲ್ಲ ಎಂದಾದರೆ ವೈಯಕ್ತಿಕವಾಗಿ ಭೇಟಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಡೆವಲಪರ್/ಕೊ-ಡೆವಲಪರ್/ಘಟಕಗಳು, ಅವಧಿ ಮುಗಿದಿದ್ದರೂ ಯಾವುದೇ ತೊಂದರೆ ಎದುರಿಸಬೇಕಾಗಿಲ್ಲ. ಯಾವುದೇ ಪೂರ್ವಾಗ್ರಹವಿಲ್ಲದೆ 2020 ಜೂನ್ 30ರ ವರೆಗೆ ಮಧ್ಯಂತರ ವಿಸ್ತರಣೆ/ಅವಧಿ ಮುಂದೂಡಿಕೆಗೆ ಅವಕಾಶ ನೀಡಲಾಗುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಮತ್ತಷ್ಟು ನಿರ್ದೇಶನಗಳನ್ನು ನೀಡಲಿದೆ. ಅವುಗಳಲ್ಲಿ ಯಾವುದು ಮೊದಲೋ ಅದನ್ನು ಪಾಲಿಸಬೇಕು.
ಎಲ್ಲಾ ಅಭಿವೃದ್ಧಿ ಆಯುಕ್ತರುಗಳು ತಮ್ಮ ವ್ಯಾಪ್ತಿಗೆ ಒಳಪಡುವ ಘಟಕಗಳ ಜೊತೆ ನಿಕಟ ಸಮನ್ವಯ ಸಾಧಿಸಿ, ಅವುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ದುಡಿಯುವ ಸ್ಥಳದಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ, ಸುಗಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು.
*****
(Release ID: 1609653)