ರೈಲ್ವೇ ಸಚಿವಾಲಯ

ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳ ಸಾಗಣೆ ಕೆಲಸವನ್ನು ಭಾರತೀಯ ರೈಲ್ವೇ ಅತ್ಯಂತ ವೇಗದಿಂದ ಮುಂದುವರಿಸಿದೆ

Posted On: 30 MAR 2020 4:30PM by PIB Bengaluru

ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳ ಸಾಗಣೆ ಕೆಲಸವನ್ನು ಭಾರತೀಯ ರೈಲ್ವೇ ಅತ್ಯಂತ ವೇಗದಿಂದ ಮುಂದುವರಿಸಿದೆ

ಕಳೆದ 2 ದಿನಗಳಲ್ಲಿ ಭಾರತೀಯ ರೈಲ್ವೇಯಿಂದ 71261  ವ್ಯಾಗನ್ ಸರಕು ಸಾಗಣೆ

 

ಇದರಲ್ಲಿ  48614 ವ್ಯಾಗನ್ ಅವಶ್ಯಕ ವಸ್ತುಗಳಾಗಿದ್ದರೆ 22647 ವ್ಯಾಗನ್ ನಷ್ಟು ಇತರ ಪ್ರಮುಖ ಸಾಮಗ್ರಿಗಳಾಗಿದ್ದವು.     

ಸಾಂಕ್ರಾಮಿಕ ರೋಗ ಕರೋನಾ ವೈರಸ್ ನಿಂದ ಸಂಪೂರ್ಣ ರಾಷ್ಟ್ರ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ತನ್ನ ಅಬಾಧಿತ ಸರಕು ಸಾಗಣೆ ಸೇವೆಯ ಮೂಲಕ  ಅವಶ್ಯಕ ವಸ್ತುಗಳ ಲಭ್ಯತೆಯನ್ನು ಖಾತರಿಪಡಿಸಲು ಭಾರತೀಯ ರೈಲ್ವೇ 24 ಗಂಟೆಯೂ  ಕೆಲಸ ಮಾಡುತ್ತಿದೆ. 

28 ಮಾರ್ಚ್ 2020 ರಂದು ಒಟ್ಟು 695 ರಾಕ್ ಗಳು/35942 ವ್ಯಾಗನ್ ಗಳಷ್ಟು ಲೋಡ್ ಮಾಡಲಾಗಿದ್ದು ಅವುಗಳಲ್ಲಿ 442  ರಾಕ್/ 24412 ವ್ಯಾಗನ್ ಗಳಷ್ಟು ಅವಶ್ಯಕ ವಸ್ತುಗಳನ್ನು ಲೋಡ್ ಮಾಡಲಾಗಿತ್ತು (ಒಂದು ವ್ಯಾಗನ್ ನಲ್ಲಿ 58 ರಿಂದ 60 ಟನ್ ಸರಕು ಇರುತ್ತದೆ). ಇದು 54 ರಾಕ್ ಗಳು/2405 ವ್ಯಾಗನ್ ಗಳಷ್ಟು ಆಹಾರ ಧಾನ್ಯ,  3 ರಾಕ್ ಗಳು/126 ವ್ಯಾಗನ್ ಗಳಷ್ಟು ಸಕ್ಕರೆ, 1 ರಾಕ್ ಗಳು/42 ವ್ಯಾಗನ್ ಗಳಷ್ಟು ಉಪ್ಪು, 1 ರಾಕ್ ಗಳು/50 ವ್ಯಾಗನ್ ಗಳಷ್ಟು ಖಾದ್ಯ ತೈಲ, 356 ರಾಕ್ ಗಳು/20519 ವ್ಯಾಗನ್ ಗಳಷ್ಟು ಇದ್ದಿಲು ಮತ್ತು 27 ರಾಕ್ ಗಳು/1270 ವ್ಯಾಗನ್ ಗಳಷ್ಟು ಪೆಟ್ರೋಲ್ ಉತ್ಪನ್ನಗಳನ್ನು ಹೊಂದಿರುತ್ತದೆ.       

29 ಮಾರ್ಚ್ 2020 ರಂದು 684 ರಾಕ್ ಗಳು/35319 ವ್ಯಾಗನ್ ಗಳಷ್ಟು ಲೋಡ್ ಮಾಡಲಾಗಿತ್ತು ಅವುಗಳಲ್ಲಿ  437 ರಾಕ್ ಗಳು/24202 ವ್ಯಾಗನ್ ಗಳಷ್ಟು ಅವಶ್ಯಕ ವಸ್ತುಗಳನ್ನು ಲೋಡ್ ಮಾಡಲಾಗಿತ್ತು. ಅವುಗಳಲ್ಲಿ 40 ರಾಕ್ ಗಳು/1727 ವ್ಯಾಗನ್ ಗಳಷ್ಟು ಆಹಾರ ಧಾನ್ಯ, 5 ರಾಕ್ ಗಳು/210 ವ್ಯಾಗನ್ ಗಳಷ್ಟು ಸಕ್ಕರೆ, 1 ರಾಕ್ ಗಳು/42  ವ್ಯಾಗನ್ ಗಳಷ್ಟು ಖಾದ್ಯ ತೈಲ, 363 ರಾಕ್ ಗಳು/20904 ವ್ಯಾಗನ್ ಗಳಷ್ಟು ಇದ್ದಿಲು, ಮತ್ತು 27 ರಾಕ್ ಗಳು/1277 ವ್ಯಾಗನ್ ಗಳಷ್ಟು ಪೆಟ್ರೋಲ್ ಉತ್ಪನ್ನಗಳನ್ನು ಹೊಂದಿರುತ್ತದೆ.       

ಸರಬರಾಜು ಸರಪಳಿ ಸಂಪೂರ್ಣ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಲು ಗೃಹಸಚಿವಾಲಯ ದೇಶಾದ್ಯಂತ ಸರಕು ರವಾನೆಗೆ ಅನುಮತಿಸಿದೆ ಎಂಬುದನ್ನು ಗಮನಿಸಬೇಕು. ನಿಲ್ದಾಣಗಳಲ್ಲಿನ ಕಾರ್ಯಾಚರಣೆ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸುಗಮವಾಗಿ ನಿರ್ವಹಿಸಲು ರೈಲ್ವೇ ಸಚಿವಾಲಯ ಮತ್ತು ಗೃಹಸಚಿವಾಲಯ ಸಿಬ್ಬಂದಿ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ.
    

****


(Release ID: 1609557) Visitor Counter : 141