ರೈಲ್ವೇ ಸಚಿವಾಲಯ
ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಭಾರತೀಯ ರೈಲ್ವೆ ಸಜ್ಜು
Posted On:
29 MAR 2020 5:05PM by PIB Bengaluru
ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಭಾರತೀಯ ರೈಲ್ವೆ ಸಜ್ಜು
13 ಐಆರ್‌ಸಿಟಿಸಿಗಳ ಮೂಲ ಅಡುಗೆಮನೆಗಳನ್ನು ಅಂತಹ ವಿತರಣೆಯ ವಿತರಣಾ ಕೇಂದ್ರಗಳನ್ನಾಗಿ (ನೋಡಲ್ ಪಾಯಿಂಟ್) ಮಾರ್ಪಡಿಸಲಾಗುತ್ತದೆ.
ಇಂದು 29 ಮಾರ್ಚ್ 2020 ರಂದು ಐಆರ್‌ಸಿಟಿಸಿಗಳು ದೇಶಾದ್ಯಂತ ಅಗತ್ಯವಿರುವ ಜನರಿಗೆ ಒಟ್ಟು 11030 ಊಟವನ್ನು ಪೂರೈಸಿದೆ
ಸಂಬಂಧಿತ ವಲಯಗಳು ಮತ್ತು ವಿಭಾಗಗಳ ಹಿರಿಯ ರೈಲ್ವೆ ಅಧಿಕಾರಿಗಳು ಬೆಂಬಲ ನೀಡುವರು
ಐಆರ್ ಸಿಟಿಸಿಯ ಮೂಲ ಅಡುಗೆಮನೆಗಳನ್ನು ಹೊಂದಿರುವ ಸ್ಥಳಗಳಿಂದ ಅಗತ್ಯವಿರುವ ಜನರಿಗೆ ಕಾಗದದ ತಟ್ಟೆಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೇಯಿಸಿದ ಆಹಾರವನ್ನು ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಐಆರ್ ಸಿಟಿಸಿ ವಲಯದ ಮೂಲ ಅಡುಗೆಮನೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
1. ದಕ್ಷಿಣ ಮಧ್ಯ ರೈಲ್ವೆ: ವಿಜಯವಾಡ
2. ಪಶ್ಚಿಮ ರೈಲ್ವೆ: ಅಹಮದಾಬಾದ್, ಮುಂಬೈ ಸೆಂಟ್ರಲ್.
3. ಪೂರ್ವ ವೆಚ್ಚ ರೈಲ್ವೆ: ಖುರ್ಧಾ ರಸ್ತೆ
4. ಆಗ್ನೇಯ ರೈಲ್ವೆ: ಬಾಲಸೋರ್
5. ಉತ್ತರ ರೈಲ್ವೆ: ನವದೆಹಲಿ, ಪಹಾರ್‌ಗಂಜ್
6. ಉತ್ತರ ಮಧ್ಯ ರೈಲ್ವೆ: ಪ್ರಯಾಗರಾಜ್, ಝಾನ್ಸಿ, ಕಾನ್ಪುರ
7. ಕೇಂದ್ರ ರೈಲ್ವೆ: ಸಿಎಸ್‌ಎಂಟಿ, ಪುಣೆ, ಶೋಲಾಪುರ್, ಭೂಸಾವಲ್
8. ಪಶ್ಚಿಮ ಮಧ್ಯ ರೈಲ್ವೆ: ಇಟಾರ್ಸಿ
9. ನೈ ಋತ್ಯ ರೈಲ್ವೆ: ಬೆಂಗಳೂರು, ಹುಬ್ಬಳ್ಳಿ
10. ದಕ್ಷಿಣ ರೈಲ್ವೆ: ತಿರುವನಂತಪುರಂ, ಚೆಂಗಲ್ಪಟ್ಟು, ಕಾಟ್ಪಾಡಿ, ಮಂಗಳೂರು
11. ಪೂರ್ವ ರೈಲ್ವೆ: ಸೀಲ್ಡಾ, ಹೌರಾ
12. ಪೂರ್ವ ಮಧ್ಯ ಈಲ್ವೇ: ರಾಜೇಂದ್ರನಗರ
13. ಉತ್ತರ ಗಡಿನಾಡು ರೈಲ್ವೆ: ಕತಿಹಾರ್
ಇಂದು ಅಂದರೆ 29 ಮಾರ್ಚ್ 2020ರಂದು ಐಆರ್‌ಸಿಟಿಸಿ ಒಟ್ಟು 11030 ಊಟವನ್ನು ಅಗತ್ಯವಿರುವವರಿಗೆ, ವಲಸೆ ಕಾರ್ಮಿಕರಿಗೆ, ಕೆಲವು ವೃದ್ಧಾಶ್ರಮಗಳಿಗೆ ಮತ್ತು ಇತರರಿಗೆ ಈ ಕೆಳಗಿನ ವಿವರಗಳ ಪ್ರಕಾರ ಪೂರೈಸಿದೆ:
ಸ್ಥಳ ಊಟಗಳ ಸಂಖ್ಯೆ
1. ದೆಹಲಿ 5030
2. ಬೆಂಗಳೂರು 2000
3. ಹುಬ್ಬಳ್ಳಿ 700
4. ಬಾಂಬೆ ಸೆಂಟ್ರಲ್ 1500
5. ಹೌರಾ / ಸೀಲ್ಡಾ 500
6. ಪಾಟ್ನಾ 400
7. ಟಾಟಾ 400
8. ರಾಂಚಿ 300
9. ಕತಿಯಾರ್ 200
ಐಆರ್ ಸಿಟಿಸಿಯ ಈ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಲು ಸಂಬಂಧಪಟ್ಟ ವಲಯ ಮತ್ತು ವಿಭಾಗದ ಜಿಎಂಗಳು / ಡಿಆರ್ ಎಂಗಳು ಸಹ ತಮ್ಮ ಮಾಹಿತಿಗಳನ್ನು ಒದಗಿಸುವ ನಿರೀಕ್ಷೆಯಿದೆ. ಐಆರ್‌ಸಿಟಿಸಿಯು ಬೇಡಿಕೆಯ ಅನುಸಾರ ಆಹಾರವನ್ನು ಉತ್ಪಾದಿಸುತ್ತದೆ ಮತ್ತು ಒದಗಿಸುತ್ತದೆ. ಅಧಿಕಾರಿಗಳು ಮತ್ತು ವಿಭಾಗಗಳು ಇಂಡೆಂಟ್‌ಗಳನ್ನು ಕಳುಹಿಸುತ್ತಿವೆ. ವಿತರಣೆಯನ್ನು ಆರ್‌ಪಿಎಫ್ ಮತ್ತು / ಅಥವಾ ಇತರ ರೈಲ್ವೆ ಅಧಿಕಾರಿಗಳು ಮಾಡುತ್ತಾರೆ. ಈ ಕಾರ್ಯಕ್ಕಾಗಿ ಸೇವಾ ಸಂಸ್ಥೆಗಳು ಮತ್ತು ಸ್ವಯಂಸೇವಕರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.
ವಿವಿಧ ರೈಲ್ವೆ ವಲಯಗಳಲ್ಲಿನ ಆರ್‌ಪಿಎಫ್ ಮತ್ತು ಎನ್‌ಜಿಒಗಳೊಂದಿಗೆ ಐಆರ್‌ಸಿಟಿಸಿ ತಂಡದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಮತ್ತು ಸಿದ್ಧಪಡಿಸಿದ ಆಹಾರವನ್ನು ಕಾಗದದ ತಟ್ಟೆಗಳೊಂದಿಗೆ ಅಗತ್ಯವಿರುವ ಜನರಿಗೆ ಪೂರೈಸುತ್ತಿದೆ. ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುವಾಗ, ಸಾಮಾಜಿಕ ಅಂತರ ಮತ್ತು ನೈರ್ಮಲ್ಯವನ್ನು ಗಮನದಲ್ಲಿಡಲಾಗುತ್ತದೆ.
ಕೋವಿಡ್ ಹರಡುವುದನ್ನು ತಡೆಯಲು ವಿಧಿಸಲಾಗಿರುವ ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ಒದಗಿಸುವ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ ಸಜ್ಜಾಗುತ್ತಿರುವುದನ್ನು ಗಮನಿಸಬಹುದು. ಐಆರ್‌ಸಿಟಿಸಿ ಯಾವುದೇ ಆಕಸ್ಮಿಕಕ್ಕೆ ಸಿದ್ಧವಾಗಿದೆ ಮತ್ತು ಆಹಾರ ಧಾನ್ಯಗಳು ಮತ್ತು ಇತರ ಕಚ್ಚಾ ವಸ್ತುಗಳ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
(Release ID: 1609244)
Visitor Counter : 119