ಉಪರಾಷ್ಟ್ರಪತಿಗಳ ಕಾರ್ಯಾಲಯ

ಉಪರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ನೀಡಿದ್ದಾರೆ

Posted On: 27 MAR 2020 6:24PM by PIB Bengaluru

ಉಪರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ನೀಡಿದ್ದಾರೆ

 

ದೇಶದಲ್ಲಿ ಕೋವಿಡ್-19ರ ಹರಡುವಿಕೆಯನ್ನು ಎದುರಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಬಲಪಡಿಸಲು ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಎಂ ವೆಂಕಯ್ಯ ನಾಯ್ಡುರವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್‌ಆರ್‌ಎಫ್) ಒಂದು ತಿಂಗಳ ಸಂಬಳಕ್ಕೆ ಸಮನಾದ ಮೊತ್ತದ ದೇಣಿಗೆ ನೀಡಿದರು.

ಪ್ರಧಾನ ಮಂತ್ರಿಯವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಉಪರಾಷ್ಟ್ರಪತಿಗಳು ಕೋವಿಡ್-19 ನ್ನು ಅತ್ಯಂತ ತೀವ್ರವಾದ ಸ್ವರೂಪದ ವಿಪತ್ತು ಮತ್ತು ಇದು ಜಗತ್ತಿನಾದ್ಯಂತ ಭಾರೀ ಪ್ರಮಾಣದ ಜೀವವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ,  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಾಲಕಾಲಕ್ಕೆ ಭಾರತವು ಸಮಯೋಚಿತ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ಕೆ ಇದು ನನ್ನ ಸಣ್ಣ ಕೊಡುಗೆಯಾಗಿದೆ ಎಂದು ಶ್ರೀ ನಾಯ್ಡುರವರು ಹೇಳಿದ್ದಾರೆ.


(Release ID: 1608721) Visitor Counter : 147