ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ರಫ್ತು ಉತ್ತೇಜನ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶ್ರೀ ಪಿಯೂಷ್ ಗೋಯಲ್ ವಿಡಿಯೋ ಕಾನ್ಫರೆನ್ಸ್
Posted On:
27 MAR 2020 5:07PM by PIB Bengaluru
ರಫ್ತು ಉತ್ತೇಜನ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶ್ರೀ ಪಿಯೂಷ್ ಗೋಯಲ್ ವಿಡಿಯೋ ಕಾನ್ಫರೆನ್ಸ್
ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರವರು ದೇಶಾದ್ಯಂತವಿರುವ ವಿವಿಧ ರಫ್ತು ಉತ್ತೇಜನ ಮಂಡಳಿಗಳ (ಇಪಿಸಿ) ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ದೇಶದಲ್ಲಿ ಕೋವಿಡ್-19 ಮತ್ತು ಲಾಕ್ ಡೌನ್‌ನ ಪರಿಣಾಮವನ್ನು ನಿರ್ಣಯಿಸಲು ಮತ್ತು ಅವರ ಮಾಹಿತಿ ಮತ್ತು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಲಹೆಗಳನ್ನು ಕೇಳಲು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತುಕತೆ ನಡೆಸಿದರು. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ, ವಾಣಿಜ್ಯ ಕಾರ್ಯದರ್ಶಿ ಡಾ.ಅನುಪ್ ವಾಧವಾನ್, ಡಿಜಿಎಫ್ ಟಿ ಮಹಾನಿರ್ದೇಶಕ ಶ್ರೀ ಅಮಿತ್ ಯಾದವ್ ಉಪಸ್ಥಿತರಿದ್ದರು. ಸಾಂಕ್ರಾಮಿಕ ರೋಗವು ತಮ್ಮ ಚಟುವಟಿಕೆಗಳು ಮತ್ತು ವ್ಯವಹಾರಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ರಫ್ತು ಉತ್ತೇಜನ ಮಂಡಳಿಗಳ (ಇಪಿಸಿ) ಪ್ರತಿನಿಧಿಗಳು ತಿಳಿಸಿದರು ಮತ್ತು ಈ ಕಷ್ಟಗಳನ್ನು ನಿವಾರಿಸಲು ಹಲವಾರು ಸಲಹೆಗಳನ್ನು ನೀಡಿದರು.
ರಫ್ತು-ಆಮದು ದೇಶದ ಪ್ರಮುಖ ಚಟುವಟಿಕೆಯಾಗಿದ್ದು, ಅದೇ ಸಮಯದಲ್ಲಿ 130 ಕೋಟಿ ಭಾರತೀಯರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಲಾಕ್‌ಡೌನ್ ಅಗತ್ಯವಾಗಿದೆ ಎಂದು ಶ್ರೀ ಪಿಯೂಷ್ ಗೋಯಲ್ ಸಭೆಯಲ್ಲಿ ಹೇಳಿದರು. ಆದ್ದರಿಂದ, ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಮತ್ತು ತೊಂದರೆಗಳನ್ನು ಕಡಿಮೆ ಮಾಡಲು ಪರಿಹಾರಗಳನ್ನು ಕಂಡುಹಿಡಿಯಬೇಕು. ಕೇಂದ್ರ ಹಣಕಾಸು ಸಚಿವರು ಮತ್ತು ಆರ್‌ಬಿಐನ ಗವರ್ನರ್ ಇತ್ತೀಚೆಗೆ ಮಾಡಿದ ಪ್ರಕಟಣೆಗಳಲ್ಲಿ ಗಮನಿಸಿದಂತೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಪ್ರಸ್ತುತ ಪ್ರವೃತ್ತಿಗಳಿಗಿಂತ ಮುಂದಿದೆ ಎಂದು ಅವರು ಹೇಳಿದರು. ಆದರೆ ಅಂತಹ ಕಷ್ಟದ ಸಮಯದಲ್ಲಿ, ಒಬ್ಬರು ಇತರರ ಅನುಭವಗಳಿಂದ ಕಲಿಯಬಹುದು ಮತ್ತು ಭವಿಷ್ಯದ ಬಗ್ಗೆ ಯೋಜಿಸಬಹುದು. ಸಮ್ಮೇಳನದಲ್ಲಿ ನೀಡಿದ ಸಲಹೆಗಳನ್ನು ಶ್ರದ್ಧೆಯಿಂದ ಕೈಗೆತ್ತಿಕೊಳ್ಳಲಾಗುವುದು ಮತ್ತು ಶೀಘ್ರದಲ್ಲೇ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀ ಗೋಯಲ್ ಹೇಳಿದರು. ರಫ್ತು ಮತ್ತು ಆಮದು ಸಂಸ್ಥೆಗಳಿಗೆ ಸರ್ಕಾರವು ಅವರ ಸಮಂಜಸವಾದ ಬೇಡಿಕೆಗಳಿಗೆ ಅನುಗುಣವಾಗಿರಲು ಪ್ರಯತ್ನಿಸುತ್ತದೆ ಮತ್ತು ವ್ಯಾವಹಾರಿಕವಾದ ಫಲಿತಾಂಶಗಳೊಂದಿಗೆ ಹೊರಬರುತ್ತದೆ ಎಂದು ಅವರು ಭರವಸೆ ನೀಡಿದರು.
ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಸಂಸ್ಥೆಗಳಲ್ಲಿ ಎಫ್‌ಐಇಒ, ಎಇಪಿಸಿ, ಎಸ್‌ಆರ್‌ಟಿಇಪಿಸಿ, ಜಿಜೆಇಪಿಸಿ, ಸಿಎಲ್ಇ, ಸಿಇಪಿಸಿ, ಶೆಫೆಕ್ಸಿಲ್, ಫಾರ್ಮೆಕ್ಸಿಲ್, ಎಲೆಕ್ಟ್ರಾನಿಕ್ ಮತ್ತು ಸಾಫ್ಟ್‌ವೇರ್ ಇಪಿಸಿ, ಸೇವೆಗಳ ಇಪಿಸಿ, ಸಿಲ್ಕ್ ಇಪಿಸಿ, ಇಇಪಿಸಿ, ಇಪಿಸಿಎಚ್, ಪ್ರಾಜೆಕ್ಟ್ ಇಪಿಸಿ, ಟೆಕ್ಸ್‌ಪ್ರೊಸಿಲ್, ಟೆಲಿಕಾಂ ಇಪಿಸಿ, ಗೋಡಂಬಿ ಇಪಿಸಿ, ಪ್ಲಾಸ್ಟಿಕ್ ಇಪಿಸಿ, ಕ್ರೀಡಾ ಸಾಮಾಗ್ರಿಗಳ ಇಪಿಸಿ, ಕ್ಯಾಪೆಕ್ಸಿಲ್, ಚೆಮೆಕ್ಸ್ಸಿಲ್, ಇಪಿಸಿ ಫಾರ್ ಇಒಉ ಮತ್ತು ಎಸ್ ಇ ಝೆಡ್, ಉಣ್ಣೆ ಮತ್ತು ಉಣ್ಣೆಯ ಇಪಿಸಿ, ಎಚ್‌ಇಪಿಸಿ ಮತ್ತು ಐಒಪಿಇಸಿ ಸಂಸ್ಥೆಗಳು ಭಾಗವಹಿಸಿದ್ದವು.
(Release ID: 1608638)
Visitor Counter : 98