ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎಂ.ಎಚ್.ಆರ್.ಡಿ. ವ್ಯಾಪ್ತಿಯ ಯು.ಜಿ.ಸಿ., ಎ.ಐ.ಸಿ.ಟಿ.ಇ., ಎನ್.ಟಿ.ಎ.,ಎನ್.ಐ.ಒ.ಎಸ್.  ಎನ್.ಐ.ಒ.ಎಸ್., ಸಿ.ಬಿ.ಎಸ್.ಇ. , ಎನ್.ಸಿ.ಟಿ.ಇ. ಮತ್ತು ಎಲ್ಲಾ ಸ್ವಾಯತ್ತ ಸಂಸ್ಥೆಗಳಿಗೆ ನೊವೆಲ್ ಕೊರೋನಾವೈರಸ್ (ಕೋವಿಡ್ -19) ಬಾಧೆಯ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಎಲ್ಲಾ ಪರೀಕ್ಷೆಗಳನ್ನು 2020 ರ ಮಾರ್ಚ್ 31 ರವರೆಗೆ ಮುಂದೂಡಲು ನಿರ್ದೇಶನ

Posted On: 18 MAR 2020 11:30PM by PIB Bengaluru

ಎಂ.ಎಚ್.ಆರ್.ಡಿವ್ಯಾಪ್ತಿ ಯು.ಜಿ.ಸಿ...ಸಿ.ಟಿ..ಎನ್.ಟಿ..,ಎನ್...ಎಸ್.  ಎನ್...ಎಸ್.ಸಿ.ಬಿ.ಎಸ್.ಎನ್.ಸಿ.ಟಿ.ಮತ್ತು ಎಲ್ಲಾ ಸ್ವಾಯತ್ತ ಸಂಸ್ಥೆಗಳಿಗೆ ನೊವೆಲ್ ಕೊರೋನಾವೈರಸ್ (ಕೋವಿಡ್ -19) ಬಾಧೆಯ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಎಲ್ಲಾ ಪರೀಕ್ಷೆಗಳನ್ನು 2020  ಮಾರ್ಚ್ 31 ರವರೆಗೆ ಮುಂದೂಡಲು ನಿರ್ದೇಶನ
 

ಶೈಕ್ಷಣಿಕ ಕ್ಯಾಲೆಂಡರ್ (ವೇಳಾಪಟ್ಟಿನಿರ್ವಹಣೆಯ ಜೊತೆಗೆ ವಿದ್ಯಾರ್ಥಿಗಳ ಸುರಕ್ಷೆ ಖಾತ್ರಿಪಡಿಸಲು ಎಂ.ಎಚ್.ಆರ್.ಡಿ.ಯು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆಮತ್ತು ಪೋಷಕರಿಗೆ ಭೀತಿ ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

 

ಎಚ್.ಆರ್.ಡಿ ಸಚಿವಾಲಯವು ತನ್ನ ವ್ಯಾಪ್ತಿಗೆ ಬರುವ ಯು.ಜಿ.ಸಿ..ಸಿ.ಟಿ..ಎನ್.ಟಿ..ಎನ್...ಎಸ್.ಸಿ.ಬಿ.ಎಸ್..ಎನ್.ಸಿ.ಟಿ. ಮತ್ತು ಎಲ್ಲಾ ಸ್ವಾಯತ್ತ ಸಂಸ್ಥೆಗಳಿಗೆ ನೊವೆಲ್ಲಾ ಕೊರೋನಾವೈರಸ್ (ಕೋವಿಡ್ -19) ಭೀತಿ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ 2020  ಮಾರ್ಚ್ 31 ರವರೆಗೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ನಿರ್ದೇಶನಗಳನ್ನು ನೀಡಿದೆವಿವಿಧ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲು ಮತ್ತು ಅವರ ಶಿಕ್ಷಕರ ಹಾಗು ಪೋಷಕರ ಸುರಕ್ಷೆಗಾಗಿ  ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆದುದರಿಂದ ಎಂ.ಎಚ್.ಆರ್.ಡಿ.ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಪರೀಕ್ಷಾ ಮಂಡಳಿಗಳು  ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ.

1.      ಈಗ ನಡೆಯುತ್ತಿರುವ ಎಲ್ಲಾ ಪರೀಕ್ಷೆಗಳನ್ನು 2020  ಮಾರ್ಚ್ 31  ಬಳಿಕ ನಡೆಸಬಹುದುಇದು ಸಿ.ಬಿ.ಎಸ್..ಎನ್...ಎಸ್ಸಹಿತ ವಿಶ್ವವಿದ್ಯಾಲಯದ ಪರೀಕ್ಷೆಗಳಿಗೂ ಅನ್ವಯಿಸುತ್ತದೆ.

2.      ಎಲ್ಲಾ ಮೌಲ್ಯಮಾಪನ ಕಾರ್ಯಗಳನ್ನು ಮಾರ್ಚ್ 31  ಬಳಿಕ ಮರುವೇಳಾಪಟ್ಟಿ ಮೂಲಕ ನಿಗದಿ ಮಾಡಬಹುದುಇದು ಸಿ.ಬಿ.ಎಸ್..ಎನ್...ಎಸ್ಸಹಿತ ವಿಶ್ವವಿದ್ಯಾಲಯದ ಪರೀಕ್ಷೆಗಳಿಗೂ ಅನ್ವಯಿಸುತ್ತದೆ. 

3.      ಜೆ..ಮುಖ್ಯ ಪರೀಕ್ಷೆಗಾಗಿ ಪರೀಕ್ಷಾರ್ಥಿಗಳು ಬೇರೆ ಬೇರೆ ಪಟ್ಟಣಗಳಿಗೆ ತೆರಳಬೇಕಾಗುವುದರಿಂದ  ದಿನಾಂಕಗಳು ಮರುವೇಳಾಪಟ್ಟಿ ನಿಗದಿ ಮಾಡಿದ ಸಿ.ಬಿ.ಎಸ್. ಮತ್ತು ಇತರ ಪರೀಕ್ಷಾ ಮಂಡಳಿಗಳ ಪರೀಕ್ಷೆಯ ಜೊತೆ ಹೊಂದಾಣಿಕೆಯಾಗಬೇಕಾಗಿರುವುದರಿಂದ ಜೆ... ಹೊಸ ದಿನಾಂಕಗಳನ್ನು ಪರಿಸ್ಥಿತಿಯ ಮರುಮೌಲ್ಯಮಾಪನ ಬಳಿಕ ಮಾರ್ಚ್ 31  ನಂತರ ಘೋಷಿಸಲಾಗುವುದು.

ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಪರೀಕ್ಷಾ ಮಂಡಳಿಗಳು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜೊತೆ ಇಲೆಕ್ಟಾನಿಕ್ ಮಾಧ್ಯಮದ ಮೂಲಕ ನಿಯಮಿತ ಸಂಪರ್ಕ ಇಟ್ಟುಕೊಳ್ಳುವಂತೆ ಕೋರಲಾಗಿದೆ ಮತ್ತು ವಿದ್ಯಾರ್ಥಿಗಳಲ್ಲಿಶಿಕ್ಷಕರಲ್ಲಿ ಹಾಗು ಪೋಷಕರಲ್ಲಿ ಆತಂಕಕ್ಕೆ ಅವಕಾಶವಾಗದಂತೆ  ಅವರಿಗೆ ಪೂರ್ಣ ಪ್ರಮಾಣದ ಮಾಹಿತಿ ಒದಗಿಸುತ್ತಿರುವಂತೆಯೂ ಕೋರಲಾಗಿದೆ.

ವಿದ್ಯಾರ್ಥಿಗಳಿಗೆ  ಅವರ ಸಂಶಯಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ಸಂಸ್ಥೆಗಳೂ ಸಹಾಯವಾಣಿ ಸಂಖ್ಯೆಗಳನ್ನು-ಮೇಲ್ ಗಳನ್ನು ಪ್ರಕಟಿಸುವಂತೆ ಕೋರಲಾಗಿದೆ.

***


(Release ID: 1607060) Visitor Counter : 321