ಪ್ರಧಾನ ಮಂತ್ರಿಯವರ ಕಛೇರಿ

’ಜಟಿರ್ ಪಿತಾ’ ಬಂಗಬಂಧು, ಶೇಖ್ ಮುಜಿಬುರ್ ರಹಮಾನ್ ಜನ್ಮಶತಾಬ್ದಿ ಆಚರಣೆಯಲ್ಲಿ ಪ್ರಧಾನ ಮಂತ್ರಿ

Posted On: 17 MAR 2020 8:24PM by PIB Bengaluru

ಜಟಿರ್ ಪಿತಾ’ ಬಂಗಬಂಧುಶೇಖ್ ಮುಜಿಬುರ್ ರಹಮಾನ್ ಜನ್ಮಶತಾಬ್ದಿ ಆಚರಣೆಯಲ್ಲಿ ಪ್ರಧಾನ ಮಂತ್ರಿ

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಆಳವಾದ ಬಾಂಧವ್ಯಗಳು ಬಂಗಬಂಧು ಅವರ ಪರಂಪರೆ ಮತ್ತು ಆಡಳಿತ ಹಾಗು ಪ್ರೇರಣೆಯನ್ನು ಹಂಚಿಕೊಂಡಿವೆ ಎಂದಿದ್ದಾರೆ ಪ್ರಧಾನ ಮಂತ್ರಿ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಸಂದೇಶದ ಮೂಲಕ ಇಂದು ಜಟಿರ್ ಪಿತಾ” ಬಂಗಬಂಧುಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶೇಖ್ ಮುಜಿಬುರ್ ರಹಮಾನ್ ಅವರನ್ನು ಕಳೆದ ಶತಮಾನದ ಅತ್ಯಂತ ಶ್ರೇಷ್ಟ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು “ ಅವರ ಇಡೀ ಜೀವನ ನಮ್ಮೆಲ್ಲರಿಗೂ ಭಾರೀ ಸ್ಪೂರ್ತಿದಾಯಕ “ ಎಂದೂ ಹೇಳಿದರು.

ಬಂಗಬಂಧುವನ್ನು ಧೈರ್ಯಶಾಲೀಬದ್ದತೆಯ  ಮನುಷ್ಯ ಶಾಂತಿಯ ಸಂತ ಎಂದು ಬಣ್ಣಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಬಾಂಗ್ಲಾ ದೇಶದ ಜಟಿರ್ ಪಿತಾ” ಅವರು  ಕಾಲದ ಯುವ ಜನತೆಗೆ ದೇಶ ವಿಮೋಚನೆಯ ಸವಾಲುಗಳನ್ನು ಎದುರಿಸಲು ಪ್ರೇರಣೆ ಒದಗಿಸಿದರು ಎಂದೂ ಹೇಳಿದರು.

ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ದಮನಕಾರಿ ಹಾಗು ಕ್ರೂರ ಆಡಳಿತ ಬಾಂಗ್ಲಾ ಭೂಮಿ”  ಮೇಲೆ ಅನ್ಯಾಯ ಎಸಗಿತು ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಬಂಗಬಂಧು ಅವರು ಹೇಗೆ ತಮ್ಮ ಜೀವನದ ಪ್ರತೀ ಕ್ಷಣಗಳನ್ನು ಬಾಂಗ್ಲಾ ದೇಶವನ್ನು ಅಂತಹ ಮಾರಣ ಹೋಮದ ಹಂತದಿಂದ ಹೊರಗೆ ತರಲು ಮುಡಿಪಾಗಿಟ್ಟರು ಮತ್ತು ಅದನ್ನು ಧನಾತ್ಮಕ ಹಾಗು ಪ್ರಗತಿಪರ ಸಮಾಜವಾಗಿ ರೂಪಿಸಿದರು ಎಂಬುದನ್ನೂ ಸ್ಮರಿಸಿಕೊಂಡರು.

ಬಂಗಬಂಧು ಅವರು ನಕಾರಾತ್ಮಕತೆ ಮತ್ತು ದ್ವೇಷ ಯಾವ ಕಾಲಕ್ಕೂ ದೇಶದ ಅಭಿವೃದ್ದಿಗೆ ಅಸ್ತಿಭಾರ ಆಗಲಾರದು ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದರುಆದರೆ ಬಂಗಬಂಧು ಅವರ ಚಿಂತನೆಗಳು ಮತ್ತು ಪ್ರಯತ್ನಗಳನ್ನು ಕೆಲವು ಜನರು ಮೆಚ್ಚುತ್ತಿರಲಿಲ್ಲಅವರು ಅವರನ್ನು ನಮ್ಮಿಂದ ದೂರ ಕೊಂಡೊಯ್ದರು” ಎಂದು ಪ್ರಧಾನ ಮಂತ್ರಿ ಹೇಳಿದರು.

“ ಭಯೋತ್ಪಾದನೆ ಮತ್ತು ರಾಜಕೀಯದ ಹಾಗು ರಾಜತಾಂತ್ರಿಕತೆಯ ಹಿಂಸಾ ಆಯುಧಗಳು  ಸಮಾಜ ಮತ್ತು ರಾಷ್ಟ್ರವನ್ನು ನಿರ್ನಾಮ ಮಾಡುತ್ತವೆ ಹೇಗೆಂಬುದಕ್ಕೆ ನಾವೆಲ್ಲಾ ಸಾಕ್ಷೀಭೂತರಾಗಿದ್ದೇವೆ ಎಂದು ನುಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾ ದೇಶ ಹೊಸ ಎತ್ತರಕ್ಕೆ ಬೆಳೆಯುತ್ತಿರುವಾಗ ಭಯೋತ್ಪಾದನೆಯ ಮತ್ತು ಹಿಂಸೆಯ ಬೆಂಬಲಿಗರನ್ನು ಈಗ ಎಲ್ಲಿ ಇಡಲಾಗಿದೆ ಮತ್ತು ಅವರು ಎಂತಹ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ವಿಶ್ವ ಗಮನಿಸುತ್ತಿದೆ ಎಂದೂ ಹೇಳಿದರು.

ಶೇಖ್ ಮುಜಿಬುರ್ ರಹಮಾನ್ ಕಂಡ ಕನಸಿನಂತೆ ಶೋನಾರ್ ಬಾಂಗ್ಲಾ” ರಾಷ್ಟ್ರ ನಿರ್ಮಾಣದಲ್ಲಿ ಹಗಲು ರಾತ್ರಿ ಅರ್ಪಣಾ ಭಾವದಿಂದ ತೊಡಗಿಕೊಂಡಿರುವ ಬಾಂಗ್ಲಾ ದೇಶದ ಜನತೆಯನ್ನು ನೋಡಿರುವುದಕ್ಕೆ ಪ್ರಧಾನ ಮಂತ್ರಿ ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು

ಬಂಗಬಂಧು ಅವರ ಪ್ರೇರಣೆಯಿಂದ ಗೌರವಾನ್ವಿತ ಶೇಖ್ ಹಸೀನಾ ನಾಯಕತ್ವದಲ್ಲಿ ಬಾಂಗ್ಲಾ ದೇಶ ಒಳಗೊಳ್ಳುವಿಕೆ ಮತ್ತು ಅಭಿವೃದ್ಧಿ ಆಧಾರಿತ ನೀತಿಗಳ ಮೂಲಕ ಸಾಧಿಸಿದ  ಪ್ರಗತಿಯನ್ನು ಪ್ರಧಾನ ಮಂತ್ರಿ ಅವರು ಶ್ಲಾಘಿಸಿದರುಆರ್ಥಿಕತೆ ಮತ್ತು ಇತರ ಸಾಮಾಜಿಕ ಅಥವಾ ಕ್ರೀಡಾ ಮಾನದಂಡಗಳನ್ವಯ ಬಾಂಗ್ಲಾ ದೇಶವು ಹೊಸ ಗುಣ ಮಾನದಂಡಗಳನ್ನು ರೂಪಿಸುತ್ತಿದೆ ಎಂದ ಪ್ರಧಾನ ಮಂತ್ರಿ ಅವರು ಕೌಶಲ್ಯಶಿಕ್ಷಣಆರೋಗ್ಯಮಹಿಳಾ ಸಶಕ್ತೀಕರಣ ಮತ್ತು ಕಿರು  ಹಣಕಾಸು ಕ್ಷೇತ್ರ ಸಹಿತ ಅನೇಕ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭೂತಪೂರ್ವ ಪ್ರಗತಿಯನ್ನು ಕೊಂಡಾಡಿದರು.

ಕಳೆದ ಕೆಲವು ವರ್ಷಗಳಲ್ಲಿಭಾರತ ಮತ್ತು ಬಾಂಗ್ಲಾ ದೇಶಗಳು ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಸುವರ್ಣ ಅಧ್ಯಾಯವನ್ನು ಬರೆದಿವೆ ಮತ್ತು ನಮ್ಮ ಸಹಭಾಗಿತ್ವಕ್ಕೆ ಹೊಸ ಆಯಾಮ ಮತ್ತು ದಿಕ್ಕನ್ನು ನೀಡಿವೆ “ ಎಂದು ಹೇಳಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವೆ ನಂಬಿಕೆ ವೃದ್ಧಿಸಿದ್ದರಿಂದ ಸಂಕೀರ್ಣ ಗಡಿ ವಿಷಯಗಳನ್ನು ಪರಸ್ಪರ ಸ್ನೇಹದಿಂದ ಪರಿಹರಿಸುವುದಕ್ಕೆ ಸಾಧ್ಯವಾಗಿದೆ ಎಂದೂ ನುಡಿದರು.

ದಕ್ಷಿಣ ಏಷ್ಯಾದಲ್ಲಿ ಭಾರತವು ಬಾಂಗ್ಲಾದೇಶದ ಅತ್ಯಂತ  ದೊಡ್ದ ವ್ಯಾಪಾರೀ ಸಹಭಾಗಿಯಾಗಿರುವುದು ಮಾತ್ರವಲ್ಲಅದು ಅಭಿವೃದ್ದಿಯ ಸಹಭಾಗಿಯೂ ಆಗಿದೆ ಎಂದರುವಿದ್ಯುತ್ ವಿತರಣೆಸ್ನೇಹಾಚಾರದ ಮೂಲಕ ಕೊಳವೆ ಮಾರ್ಗರೈಲುರಸ್ತೆಅಂತರ್ಜಾಲಆಕಾಶ ಮಾರ್ಗಜಲಮಾರ್ಗ ಸಹಿತ  ಹಲವು ಸಂಪರ್ಕ ವೃದ್ದಿಯ ವಲಯಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಪಟ್ಟಿ ಮಾಡಿದ ಅವರು ಇವುಗಳಿಂದ ಉಭಯದೇಶಗಳ ಬಹಳಷ್ಟು ಜನತೆಗೆ ಸಂಪರ್ಕ ಲಭ್ಯವಾಗಿದೆ ಎಂದರು.

ಟ್ಯಾಗೋರ್ಖ್ವಾಜಿ ನಜ್ರುಲ್ ಇಸ್ಲಾಂಉಸ್ತಾದ್ ಅಲ್ಲಾವುದ್ದೀನ್ ಖಾನ್ ಲಾಲೋನ್ ಶಾಜಿಬಾನಂದ ದಾಸ್ ಮತ್ತು ಈಶ್ವರ್ ಚಂದ್ರ ವಿದ್ಯಾಸಾಗರ ಅವರಂತಹ ಬುದ್ದಿಜೀವಿಗಳಿಂದ ಉಭಯ ದೇಶಗಳ ಪರಂಪರೆ ರೂಪುಗೊಂಡಿತು ಎಂಬುದನ್ನು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.

ಬಂಗಬಂಧು ಅವರ ಪ್ರೇರಣೆ ಮತ್ತು ಆಡಳಿತ ಉಭಯದೇಶಗಳ ಪರಂಪರೆಯನ್ನು ಹೆಚ್ಚು ಸಮಗ್ರಗೊಳಿಸಿದೆ ಬಲವಾಗಿ ಬೇರೂರುವಂತೆ ಮಾಡಿದೆ ಮತ್ತು ಬಂಗಬಂಧು ಅವರು ತೋರಿಸಿದ ಹಾದಿ ಕಳೆದ ದಶಕಗಳಲ್ಲಿ ಉಭಯದೇಶಗಳ ಸಹಭಾಗಿತ್ವಪ್ರಗತಿಮತ್ತು ಸಮೃದ್ದಿಗೆ ಬಲವಾದ ಅಸ್ತಿಭಾರ ಹಾಕಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಉಭಯದೇಶಗಳ ಮುಂದಿನ ಮೈಲಿಗಲ್ಲುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರುಮುಂದಿನ ವರ್ಷ ಬಾಂಗ್ಲಾ ದೇಶ ವಿಮೋಚನೆಯ 50 ನೇ ವಾರ್ಷಿಕೋತ್ಸವ ಮತ್ತು 2022 ರಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಗಳು ನಡೆಯಲಿವೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು  ಎರಡೂ ಪ್ರಮುಖ ಘಟನೆಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಅಭಿವೃದ್ದಿಯ ಶಕೆಯನ್ನು ತರುವುದು ಮಾತ್ರವಲ್ಲ ಉಭಯ ದೇಶಗಳ ನಡುವಣ ಗೆಳೆತನದ ಬಾಂಧವ್ಯವನ್ನು ಬಲಪಡಿಸಲಿವೆ ಎಂಬ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದರು

***



(Release ID: 1606863) Visitor Counter : 97