ಪ್ರಧಾನ ಮಂತ್ರಿಯವರ ಕಛೇರಿ
MyGovIndia ಮೂಲಕ ಕೋವಿಡ್-19 ಪರಿಹಾರ ಹಂಚಿಕೊಳ್ಳಲು ಜನತೆಗೆ ಪ್ರಧಾನಿ ಮನವಿ
Posted On:
16 MAR 2020 8:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19ಕ್ಕೆ ತಂತ್ರಜ್ಞಾನ ಚಾಲಿತ ಪರಿಹಾರಗಳನ್ನು ನಾಗರಿಕರು ಪಾಲ್ಗೊಳ್ಳುವ ವೇದಿಕೆಯಾದ ಭಾರತ ಸರ್ಕಾರದ ಮೈಗೌಇಂಡಿಯಾ ಮೂಲಕ ಹಂಚಿಕೊಳ್ಳುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು “ಆರೋಗ್ಯಪೂರ್ಣ ಭೂಗ್ರಹಕ್ಕಾಗಿ ನಾವಿನ್ಯತೆಯನ್ನು ಬಳಸಿಕೊಳ್ಳಲಾಗುವುದು. ಕೋವಿಡ್ 19ಕ್ಕೆ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು @Mgovindiaನಲ್ಲಿ ಹಂಚಿಕೊಳ್ಳಲು ನಾನು ಅವರಿಗೆ ಆಗ್ರಹಿಸುತ್ತೇನೆ. ಈ ಪ್ರಯತ್ನಗಳು ಅನೇಕರಿಗೆ ನೆರವಾಗುತ್ತವೆ.” ಎಂದು ತಿಳಿಸಿದ್ದಾರೆ.
(Release ID: 1606685)
Visitor Counter : 189