ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 7, 2020ರಂದು ಜನ ಔಷಧ ದಿವಸದ ಅಂಗವಾಗಿ ಜನ ಔಷಧಿ ಪರಿಯೋಜನಾ ಕೇಂದ್ರದೊಂದಿಗೆ ಪ್ರಧಾನಿ ಚರ್ಚೆ

Posted On: 05 MAR 2020 5:56PM by PIB Bengaluru

ಮಾರ್ಚ್ 7, 2020ರಂದು ಜನ ಔಷಧ ದಿವಸದ ಅಂಗವಾಗಿ ಜನ ಔಷಧಿ ಪರಿಯೋಜನಾ ಕೇಂದ್ರದೊಂದಿಗೆ ಪ್ರಧಾನಿ ಚರ್ಚೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ರ ಮಾರ್ಚ್ 7 ರಂದು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜನೌಷಧ ದಿವಸ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಶ್ರೀ ನರೇಂದ್ರ ಮೋದಿಯವರು ಏಳು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಯೋಜನೆಯ ಸಾಧನೆಗಳನ್ನು ಆಚರಿಸಲು ಮತ್ತು ಮತ್ತಷ್ಟು ಪ್ರೇರಣೆಯನ್ನು ನೀಡುವ ಸಲುವಾಗಿ, ಮಾರ್ಚ್ 7ನ್ನು ಭಾರತದಾದ್ಯಂತ “ಜನೌಷಧ ದಿವಾಸ್” ಎಂದು ಆಚರಿಸಲು ಉದ್ದೇಶಿಸಲಾಗಿದೆ. ಆಯ್ದ ಮಳಿಗೆಗಳಲ್ಲಿ ಅಂಗಡಿ ಮಾಲೀಕರು ಮತ್ತು ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಅವರು ಸಂವಹನ ನಡೆಸಲಿದ್ದಾರೆ. ಪ್ರತಿ ಜನೌಷಧ ಮಳಿಗೆಗಳು ದೂರದರ್ಶನದ ಮೂಲಕ ಪ್ರಧಾನಮಂತ್ರಿಯವರ ಸಂದೇಶವನ್ನು ಪ್ರಸಾರ ಮಾಡಲಿವೆ. ಆಯ್ದ ಅಂಗಡಿಗಳಲ್ಲಿ, ಈ ಔಷಧಿಗಳ ಬಗ್ಗೆ ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ಔಷಧಿಕಾರರು ಮತ್ತು ಫಲಾನುಭವಿಗಳೊಂದಿಗೆ ಚರ್ಚೆಯನ್ನು ಆಯೋಜಿಸಲಾಗುವುದು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಉತ್ತರಪ್ರದೇಶದ ವಾರಣಾಸಿಯಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಕೇಂದ್ರದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಶಿಪ್ಪಿಂಗ್ ರಾಜ್ಯ ಸಚಿವ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಲಕ್ಷ್ಮನ್‌ಭಾಯ್ ಮಾಂಡವಿಯಾ ಅವರು ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರದಲ್ಲಿ ಭಾಗವಹಿಸಲಿದ್ದಾರೆ.

700 ಜಿಲ್ಲೆಗಳಲ್ಲಿ ಸುಮಾರು 6200 ಮಳಿಗೆಗಳನ್ನು ಹೊಂದಿರುವ ಜನೌಷಧಿ ಕೇಂದ್ರಗಳನ್ನು ವಿಶ್ವದ ಅತಿದೊಡ್ಡ ಚಿಲ್ಲರೆ ಔಷಧ ಸರಪಳಿ ಎಂದು ಪರಿಗಣಿಸಲಾಗಿದೆ. 2019-20 ರ ಆರ್ಥಿಕ ವರ್ಷದಲ್ಲಿ ಒಟ್ಟು 390 ಕೋಟಿ ರೂ. ಮಾರಾಟವಾಗುತ್ತದೆ. ಸಾಮಾನ್ಯ ನಾಗರಿಕರಿಗೆ ಒಟ್ಟು 2200 ಕೋಟಿ ರೂ. ಉಳಿತಾಯಕ್ಕೆ ಕಾರಣವಾಗುತ್ತದೆ. ಈ ಯೋಜನೆಯು ಸುಸ್ಥಿರ ಮತ್ತು ನಿಯಮಿತ ಗಳಿಕೆಯೊಂದಿಗೆ ಸ್ವಯಂ ಉದ್ಯೋಗದ ಉತ್ತಮ ಮೂಲವನ್ನು ಸಹ ಒದಗಿಸುತ್ತದೆ.



(Release ID: 1605864) Visitor Counter : 82