ಸಂಪುಟ

ಭಾರತ ಸರ್ಕಾರದ ಎಂ.ಇ.ಐ.ಟಿ.ವೈ ಅಡಿಯಲ್ಲಿ ಬಿ.ಐ.ಎಸ್.ಎ.ಜಿ.ಯನ್ನು ಬಿ.ಐ.ಎಸ್.ಎ.ಜಿ. (ಎನ್) ಎಂದು ಮೇಲ್ದರ್ಜೆಗೇರಿಸಲು ಸಂಪುಟದ ಅನುಮೋದನೆ

Posted On: 19 FEB 2020 4:32PM by PIB Bengaluru

ಭಾರತ ಸರ್ಕಾರದ ಎಂ.ಇ.ಐ.ಟಿ.ವೈ ಅಡಿಯಲ್ಲಿ ಬಿ.ಐ.ಎಸ್.ಎ.ಜಿ.ಯನ್ನು ಬಿ.ಐ.ಎಸ್.ಎ.ಜಿ. (ಎನ್) ಎಂದು ಮೇಲ್ದರ್ಜೆಗೇರಿಸಲು ಸಂಪುಟದ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಸರ್ಕಾರದ ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ) ಅಡಿಯಲ್ಲಿ ಬರುವ ಗುಜರಾತ್ ನ ಭಾಸ್ಕರಾಚಾರ್ಯ ಬಾಹ್ಯಾಕಾಶ ಆನ್ವಯಿಕಗಳು ಮತ್ತು ಭೂಮಾಹಿತಿ ಸಂಸ್ಥೆ (ಬಿ.ಐ.ಎಸ್.ಎ.ಜಿ.)ಯನ್ನು ಭಾಸ್ಕರಾಚಾರ್ಯ ಬಾಹ್ಯಾಕಾಶ ಆನ್ವಯಿಕಗಳು ಮತ್ತು ಭೂ ಮಾಹಿತಿಯ ರಾಷ್ಟ್ರೀಯ ಸಂಸ್ಥೆ (ಬಿಐಎಸ್.ಎ.ಜಿ. (ಎನ್)) ಆಗಿ ಮೇಲ್ದರ್ಜೆಗೇರಿಸಲು ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು

ಸೇವೆಗಳ ದಕ್ಷತೆ ಮತ್ತು ನಾವೀನ್ಯತೆಯನ್ನು ಕಾಪಾಡಿಕೊಳ್ಳಲು, ಬಿ.ಐ.ಎಸ್.ಎ.ಜಿ.ಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನುರಿತ ಮಾನವಸಂಪನ್ಮೂಲವನ್ನು ಎಲ್ಲಿ ಹೇಗಿದೆಯೋ ಹಾಗೆ ಆಧಾರದಲ್ಲಿ ರಾಷ್ಟ್ರಮಟ್ಟದ ಸಂಸ್ಥೆಗೆ ಸೇರಬಹುದು.

ವಿಸ್ತೃತ ಸ್ವರೂಪದ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡಲು

ವಿಸ್ತೃತ ಸ್ವರೂಪದ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮತ್ತು ಜಿಐಎಸ್ ಯೋಜನೆಯನ್ನು ಸಮರ್ಥವಾಗಿ ಜಾರಿ ಮಾಡಲು ಅವಕಾಶ ನೀಡಲು

ವಿಸ್ತೃತ ಸ್ವರೂಪದ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ನೆರವು ನೀಡಲು

ಪ್ರಾದೇಶಿಕವಾಗಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯ ಬೆಂಬಲದ ಮೂಲಕ ಉತ್ತಮ ಆಡಳಿತ ಮತ್ತು ಯೋಜನೆಯ ಅಭಿವೃದ್ಧಿಗೆ ಅವಕಾಶ ನೀಡುವುದು. ಹಿನ್ನೆಲೆ

ಪ್ರಸ್ತುತ ಬಿಐಎಸ್ಎಜಿ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಜ್ಯ ಸಂಸ್ಥೆಯಾಗಿದ್ದು, ಗುಜರಾತ್ ನ ಗಾಂಧೀನಗರದಲ್ಲಿದೆ. ಇದು ಅಹಮದಾಬಾದ್ ನ ದತ್ತಿ ಆಯುಕ್ತರನ್ನೊಳಗೊಂಡ ಸೊಸೈಟಿ ಮತ್ತು ಟ್ರಸ್ಟ್ ಎಂದು ನೋಂದಾವಣೆಯಾಗಿದೆ. ಇದರ ಆಡಳಿತ ಮಂಡಳಿಯ ಅಧ್ಯಕ್ಷತೆಯನ್ನು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಹಿಸುತ್ತಾರೆ. ಸಮಗ್ರ ಅಭಿವೃದ್ಧಿಗಾಗಿ ಆಧುನಿಕ ದಿನಮಾನದ ಯೋಜನೆಯನ್ನು ಪಾರದರ್ಶಕವಾಗಿ, ಪರಿಣಾಮಕಾರಿ ಮತ್ತು ಕಡಿಮೆ-ವೆಚ್ಚದಲ್ಲಿ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಗಳಿಗೆ ಕರೆ ನೀಡುವ ಸಿದ್ಧಾಂತವನ್ನು ಸಂಸ್ಥೆಯ ಚಾರ್ಟರ್ ಆಧರಿಸಿದೆ. ಇದು ಸಮಾನ ಅಭಿವೃದ್ಧಿ ಖಾತ್ರಿಪಡಿಸುವ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಬಹು ಮಾದರಿಯ ಮಾಹಿತಿಯನ್ನು ಒಳಗೊಂಡಿದೆ. ಬಾಹ್ಯಾಕಾಶ ತಂತ್ರಜ್ಞಾನ ಆನ್ವಯಿಕಗಳು (ಅದರಲ್ಲೂ ಬಾಹ್ಯಾಕಾಶ ಆಧಾರಿತ ದೂರಸಂವೇದಿ ತಂತ್ರಜ್ಞಾನ), ಬಾಹ್ಯಾಕಾಶ ಸಂವಹನ ಮತ್ತು ಭೂ ಮಾಹಿತಿಗಳು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿವೆ.

ಇದು ಹೊಸ ಸಂಸ್ಥೆಯಲ್ಲದ ಕಾರಣ, ಹಾಲಿ ಸಂಸ್ಥೆಯನ್ನು ರಾಜ್ಯ ಸರ್ಕಾರದ ಬದಲಾಗಿ ಕೇಂದ್ರ ಸರ್ಕಾರದಡಿಯಲ್ಲಿ ಸ್ವಾಯತ್ತ ವೈಜ್ಞಾನಿಕ ಸೊಸೈಟಿಯಾಗಿ ಮೇಲ್ದರ್ಜೆಗೇರಿಸಲು ಎಂ.ಇ.ಐ.ಟಿ.ವೈ ಈ ಕೆಳಕಂಡ ಪ್ರಮುಖ ಕ್ರಮಗಳನ್ನು ಈ ಪ್ರಸ್ತಾಪದ ಪರಿಗಣನೆಗೆ ಕೈಗೊಂಡಿದೆ: -

ಈ ಪ್ರಸ್ತಾವನೆಯನ್ನು ಪರಾಮರ್ಶಿಸಲು ಎಂ.ಇ.ಐ.ಟಿ.ವೈ. ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಗಣಿ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳು ಮತ್ತು ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ತಜ್ಞರ ಸಮಿತಿ 2019ರ ಜನವರಿ 28ರಂದು ನಡೆದ ಸಭೆಯ ವೇಳೆ ಈ ಪ್ರಸ್ತಾವನೆಗೆ ಶಿಫಾರಸು ಮಾಡಿತ್ತು.

ಸಿಇಇಯ ಪ್ರಸ್ತಾವನೆಯನ್ನು ಪರಾಮರ್ಶನಾ ಸಮಿತಿಯ ಅಂದರೆ ಸ್ಥಾಪನೆಯ ವೆಚ್ಚದ ಸಮಿತಿ (ಸಿಇಇ) ಪರಿಗಣನೆಗೆ ಸಲ್ಲಿಸಲಾಗಿತ್ತು. ಸಿಇಇಯ ಸಭೆ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗ, ಹಣಕಾಸು ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರತಿನಿಧಿಗಳೊಂದಿಗೆ 2019ರ ಆಗಸ್ಟ್ 6ರಂದು ನಡೆದಿತ್ತು. ಪ್ರಸ್ತಾವನೆಗೆ ಸಿಇಇ ಶಿಫಾರಸು ಮಾಡಿತ್ತು.

 

***



(Release ID: 1603671) Visitor Counter : 134