ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ಲಕ್ನೋದಲ್ಲಿ ಡಿಫೆನ್ಸ್ ಎಕ್ಸ್ ಪೊ ಉದ್ಘಾಟನೆ

Posted On: 05 FEB 2020 5:42PM by PIB Bengaluru

ಪ್ರಧಾನಮಂತ್ರಿ ಅವರಿಂದ ಲಕ್ನೋದಲ್ಲಿ ಡಿಫೆನ್ಸ್ ಎಕ್ಸ್ ಪೊ ಉದ್ಘಾಟನೆ

 

ಭಾರತ ಕೇವಲ ಮಾರುಕಟ್ಟೆಯಲ್ಲಇಡೀ ವಿಶ್ವಕ್ಕೆ ವಿಫುಲ ಅವಕಾಶಗಳನ್ನು ಒದಗಿಸುತ್ತಿದೆಪ್ರಧಾನಮಂತ್ರಿ

ರಕ್ಷಣಾ ವಲಯದಲ್ಲಿನ ಡಿಜಿಟಲ್ ಪರಿವರ್ತನೆ ನಾಳಿನ ಸವಾಲುಗಳನ್ನು ಪ್ರತಿಬಿಂಬಿಸುತ್ತದೆರಕ್ಷಣಾ ಉತ್ಪಾದನೆಯನ್ನು ದೇಶೀಕರಣಗೊಳಿಸುವ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸಾಗುತ್ತಿದೆ: ಪ್ರಧಾನಮಂತ್ರಿ

ನವ ಭಾರತಕ್ಕೆ ನವ ಸವಾಲುಗಳುಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಉತ್ತರ ಪ್ರದೇಶದ ಲಕ್ನೋದಲ್ಲಿಂದು 11ನೇ ಆವೃತ್ತಿಯ ರಕ್ಷಣಾ ಉತ್ಪನ್ನಗಳ ಪ್ರದರ್ಶನ ಡಿಫೆನ್ಸ್ ಎಕ್ಸ್ ಪೊ ಉದ್ಘಾಟಿಸಿದರುಭಾರತದ ದ್ವೈವಾರ್ಷಿಕ ಈ ಮಿಲಿಟರಿ ಉತ್ಪನ್ನಗಳ ಪ್ರದರ್ಶನ ದೇಶದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ರಕ್ಷಣಾ ಉತ್ಪಾದನಾ ತಾಣವನ್ನಾಗಿ ಬಿಂಬಿಸುವ ಉದ್ದೇಶದ್ದು, ಡಿಫೆನ್ಸ್ ಎಕ್ಸ್ ಪೊ 2020 ಕೇವಲ ಭಾರತದ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಪ್ರದರ್ಶನ ವೇದಿಕೆಯಲ್ಲಇದು ವಿಶ್ವದ ಅತಿದೊಡ್ಡ ಡಿಫೆನ್ಸ್ ಎಕ್ಸ್ ಪೊಗಳಲ್ಲಿ ಒಂದಾಗಿದೆಈ ಬಾರಿ ಒಂದು ಸಾವಿರಕ್ಕೂ ಅಧಿಕ ರಕ್ಷಣಾ ಉತ್ಪನ್ನಗಳ ಉತ್ಪಾದಕರು ಮತ್ತು ಜಗತ್ತಿನ 150 ಕಂಪನಿಗಳು ಈ ಪ್ರದರ್ಶನದ ಭಾಗವಾಗಿವೆ.

11ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ ಪೊಗೆ ಎಲ್ಲರನ್ನೂ ಸ್ವಾಗತಿಸಲು ನನಗೆ ಎರಡು ಕಾರಣಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರುಒಂದು ತಾವು ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಂದು ಉತ್ತರ ಪ್ರದೇಶದ ಸಂಸದನಾಗಿ ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದರು. “ಭಾರತದ ಜನರಿಗೆ ಹಾಗೂ ಯುವ ಜನತೆಗೆ ಇದು ಅತಿದೊಡ್ಡ ಅವಕಾಶವಾಗಿದೆಮೇಕ್ ಇನ್ ಇಂಡಿಯಾ ಯೋಜನೆ ಭಾರತದ ಭದ್ರತೆಯನ್ನಷ್ಟೇ ಹೆಚ್ಚಿಸಿಲ್ಲರಕ್ಷಣಾ ವಲಯದಲ್ಲಿ  ಸಾಕಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆಇದು ಭವಿಷ್ಯದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತ ಇಡೀ ವಿಶ್ವಕ್ಕೆ ಕೇವಲ ಮಾರುಕಟ್ಟೆ ಮಾತ್ರವಲ್ಲವಿಫುಲ ಅವಕಾಶಗಳ ತಾಣ

ಇಂದಿನ ಡಿಫೆನ್ಸ್ ಎಕ್ಸ್ ಪೊ ಭಾರತದ ವೈಶಾಲ್ಯತೆಹಿಡಿದ ಕೆಲಸವನ್ನು ಛಲ ಬಿಡದೆ ಸಾಧಿಸುವುದು ಮತ್ತು ವಿಭನ್ನತೆ ಬಿಂಬಿಸುವ ಜೀವಂತ ಸಾಕ್ಷಿಯಾಗಿದೆ ಹಾಗೂ ಅಗಾಧ ಭಾಗವಹಿಸುವಿಕೆ ಹೊಂದಿದೆಇದು ರಕ್ಷಣಾ ಮತ್ತು ಭದ್ರತಾ ವಲಯದಲ್ಲಿ ಭಾರತ ಅತ್ಯಂತ ಬಲಿಷ್ಠ ಪಾತ್ರದೊಂದಿಗೆ ಮುನ್ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆಈ ಎಕ್ಸ್ ಪೊ ಕೇವಲ ರಕ್ಷಣೆಗೆ ಸಂಬಂಧಿಸಿದ ಉದ್ಯಮಗಳಿಗೆ ಮಾತ್ರ ಸೀಮಿತವಾದುದಲ್ಲಇದು ಒಟ್ಟಾರೆ ಭಾರತದ ಬಗೆಗೆ ವಿಶ್ವದ ನಂಬಿಕೆಯನ್ನು ತೋರಿಸುತ್ತದೆ ಎಂದರುಯಾರಿಗೆ ರಕ್ಷಣೆ ಮತ್ತು ಆರ್ಥಿಕತೆಯ ಬಗ್ಗೆ ಚೆನ್ನಾಗಿ ತಿಳಿದಿದೆಯೋ ಅವರಿಗೆ ಖಂಡಿತವಾಗಿಯೂ ಅರ್ಥವಾಗುತ್ತದೆಭಾರತ ಕೇವಲ ಮಾರುಕಟ್ಟೆಯಲ್ಲಭಾರತ ಇಡೀ ವಿಶ್ವಕ್ಕೆ ವಿಪುಲ ಅವಕಾಶಗಳನ್ನು ಸೃಷ್ಟಿಸುವ ತಾಣ ಎಂಬುದು

ರಕ್ಷಣಾ ವಲಯದಲ್ಲಿ ಡಿಜಿಟಲ್ ಪರಿವರ್ತನೆಯಿಂದ ನಾಳಿನ ಸವಾಲುಗಳ ಪ್ರತಿಫಲನ

ಪ್ರಧಾನಮಂತ್ರಿ ಅವರು ಡಿಫೆನ್ಸ್ ಎಕ್ಸ್ ಪೋ ದ ಉಪ ಘೋಷ ರಕ್ಷಣಾ ವಲಯದ ಡಿಜಿಟಲ್ ಪರಿವರ್ತನೆ’ ಭವಿಷ್ಯದ ಸವಾಲುಗಳು ಮತ್ತು ಆತಂಕಗಳನ್ನು ಬಿಂಬಿಸುತ್ತದೆ ಎಂದು ಹೇಳಿದರುಜೀವನ ತಂತ್ರಜ್ಞಾನ ಆಧಾರಿತವಾಗುತ್ತಿರುವಂತೆಯೇ ಭದ್ರತಾ ಕಳಕಳಿ ಮತ್ತು ಸವಾಲುಗಳು ಅತ್ಯಂತ ಹೆಚ್ಚು ಗಂಭೀರವಾಗತೊಡಗಿವೆಇದು ಇಂದಿಗೆ ಮಾತ್ರ ಅತ್ಯಂತ ಪ್ರಮುಖವಲ್ಲಆದರೆ ಇದು ನಮ್ಮ ಭವಿಷ್ಯಕ್ಕೂ ಅತ್ಯಂತ ಪ್ರಮುಖವಾದುದುಜಾಗತಿಕವಾಗಿ ರಕ್ಷಣಾ ಪಡೆಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿವೆಭಾರತವೂ ಕೂಡ ವಿಶ್ವದ ವೇಗಕ್ಕೆ ಸರಿ ಸಮಾನತೆಯನ್ನು ಕಾಯ್ದುಕೊಳ್ಳುತ್ತಿದೆಹಲವು ಪ್ರೋಟೋಟೈಪ್ (ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆನಮ್ಮ ಗುರಿ ಎಂದರೆ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ವಲಯದಲ್ಲಿ ಕನಿಷ್ಠ 25 ಕೃತಕ ಬುದ್ಧಿ ಮತ್ತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು.

ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸು

ಪ್ರಧಾನಮಂತ್ರಿ ಅವರುಲಕ್ನೋದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ ಪೊ ಇನ್ನೊಂದು ಕಾರಣಕ್ಕೆ ಅತ್ಯಂತ ಪ್ರಮುಖವಾದುದು ಎಂದು ಹೇಳಿದರುಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರುರಕ್ಷಣಾ ಉತ್ಪಾದನಾ ವಲಯವನ್ನು ಸ್ವದೇಶಿಗೊಳಿಸುವ ಕನಸು ಕಂಡಿದ್ದರು ಮತ್ತು ಅದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು ಎಂದರು.

ಅವರ ದೂರದೃಷ್ಟಿಯನ್ನು ಅನುಸರಿಸುತ್ತಾ ನಾವು ಹಲವು ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ವೇಗ ನೀಡಿದ್ದೇವೆನಾವು 2014ರ ಒಂದೇ ವರ್ಷದಲ್ಲಿ 217 ರಕ್ಷಣಾ ಲೈಸೆನ್ಸ್ ಗಳನ್ನು ವಿತರಿಸಿದ್ದೇವೆಕಳೆದ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆ 460ಕ್ಕೆ ಏರಿಕೆಯಾಗಿದೆಭಾರತ ಇಂದು ಪಿರಂಗಿ ತೂಪುಗಳು, ಬಂದೂಕುಗಳುಯುದ್ಧ ವಿಮಾನದಿಂದ ಫ್ರೈಗೇಟ್ ಸಬ್ ಮೆರಿನ್ ವರೆಗೆ ಹಲವು ಉತ್ಪನ್ನಗಳನ್ನು ಉತ್ಪಾದಿಸುತ್ತಿದೆಜಾಗತಿಕ ರಕ್ಷಣಾ ಉತ್ಪನ್ನಗಳ ರಫ್ತಿನಲ್ಲಿ ಭಾರತದ ಪಾಲು ಸಾಕಷ್ಟು ಹೆಚ್ಚಾಗಿದೆಕಳೆದ ಎರಡು ವರ್ಷದಲ್ಲಿ ಭಾರತ ಸುಮಾರು 17 ಸಾವಿರ ಕೋಟಿ ಮೊತ್ತದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆನಮ್ಮ ಗುರಿ ಏನೆಂದರೆ ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣವನ್ನು ಬಿಲಿಯನ್ ಡಾಲರ್ ಗೆ ಏರಿಸುವುದು” ಎಂದು ಪ್ರಧಾನಮಂತ್ರಿ ಹೇಳಿದರು.

ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ – ರಾಷ್ಟ್ರದ ನೀತಿಯ ಪ್ರಮುಖ ಭಾಗ

ಕಳೆದ ಐದಾರು ವರ್ಷಗಳಲ್ಲಿ ನಮ್ಮ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಮ್ಮ ದೇಶದ ನೀತಿಯ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿದೆರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಗೆ ದೇಶದಲ್ಲಿ ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆಇತರೆ ರಾಷ್ಟ್ರಗಳೊಂದಿಗೆ ಜಂಟಿ ಸಹಭಾಗಿತ್ವವನ್ನು ಹೊಂದಲಾಗುತ್ತಿದೆಆದ್ಯತಾ ಮನೋಭಾವದೊಂದಿಗೆ ಸಂಗ್ರಹಾಗಾರಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳೂ ನಡೆದಿವೆಇದರಿಂದಾಗಿ ದೇಶಬಂಡವಾಳ ಹೂಡಿಕೆ ಮತ್ತು ನಾವಿನ್ಯತೆಗೆ ಅಗತ್ಯ ವಾತಾವರಣ ಸೃಷ್ಟಿಯಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಬಳಕೆದಾರರು ಮತ್ತು ಉತ್ಪಾದಕರ ನಡುವೆ ಸಹಭಾಗಿತ್ವ

ಪ್ರಧಾನಮಂತ್ರಿ ಅವರುಬಳಕೆದಾರರು ಮತ್ತು ಉತ್ಪಾದಕರ ನಡುವೆ ಪಾಲುದಾರಿಕೆಯ ಮೂಲಕ ನಮ್ಮ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸಬಹುದು ಎಂದು ಹೇಳಿದರು.

ರಕ್ಷಣಾ ಉತ್ಪನ್ನಗಳ ಉತ್ಪಾದನೆ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಬಾರದುಖಾಸಗಿ ವಲಯದಿಂದಲೂ ಸಹ ಸಮಾನ ಭಾಗೀದಾರಿಕೆ ಮತ್ತು ಪಾಲುದಾರಿಕೆ ಅಗತ್ಯವಿದೆ” ಎಂದು ಅವರು ಹೇಳಿದರು.

ನವ ಭಾರತಕ್ಕೆ ನವ ಗುರಿಗಳು

ಪ್ರಧಾನಮಂತ್ರಿ ಅವರುಭಾರತದಲ್ಲಿ ಎರಡು ಬೃಹತ್ ರಕ್ಷಣಾ ಉತ್ಪನ್ನಗಳ ಉತ್ಪಾದನಾ ಕಾರಿಡಾರ್ ಗಳನ್ನು ಸ್ಥಾಪಿಸಲಾಗುತ್ತಿದೆಒಂದು ತಮಿಳುನಾಡಿನಲ್ಲಿ ಮತ್ತೊಂದು ಉತ್ತರ ಪ್ರದೇಶದಲ್ಲಿಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ಗೆ ಲಕ್ನೋ ಮಾತ್ರವಲ್ಲದೆಆಲಿಗಢ್ಆಗ್ರಾಝಾನ್ಸಿಚಿತ್ರಕೂಟ್ ಮತ್ತು ಕಾನ್ಪುರಗಳಲ್ಲಿ ಕೇಂದ್ರಗಳು ಸ್ಥಾಪನೆಯಾಗಲಿವೆಭಾರತದಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಹೊಸ ಗುರಿಗಳನ್ನು ನಿಗದಿಪಡಿಸಲಾಗಿದೆ.

ಮುಂದಿನ ವರ್ಷಗಳಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನಾ ವಲಯದಲ್ಲಿರುವ ಎಂಎಸ್ಎಂಇಗಳ ಸಂಖ್ಯೆಯನ್ನು 15 ಸಾವಿರಕ್ಕಿಂತಲೂ ಹೆಚ್ಚು ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ-ಡೆಕ್ಸ್ಚಿಂತನೆಯನ್ನು ವಿಸ್ತರಣೆ ಮಾಡಲು ಬಯಸಿದ್ದುಅದಕ್ಕೆ ಮತ್ತಷ್ಟು ಒತ್ತು ನೀಡಲು 200 ಹೊಸ ರಕ್ಷಣಾ ನವೋದ್ಯಮಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆಜೊತೆಗೆ ಕನಿಷ್ಠ 50 ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆದಿವೆದೇಶದ ಪ್ರಮುಖ ಉದ್ಯಮ ಸಂಸ್ಥೆಗಳಿಗೆ ನಾನು ನೀಡುವ ಸಲಹೆ ಎಂದರೆ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ದೇಶದಲ್ಲಿ ಒಂದು ಸಮಾನ ವೇದಿಕೆಯನ್ನು ಸೃಷ್ಟಿಸಬೇಕು ಎಂದುಆ ಮೂಲಕ ರಕ್ಷಣಾ ವಲಯದಲ್ಲಿ ತಂತ್ರಜ್ಞಾನ ಉತ್ಪಾದನೆ ಮತ್ತು ಅಭಿವೃದ್ಧಿಯ ಎರಡು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು” ಎಂದು ಪ್ರಧಾನಮಂತ್ರಿ ಹೇಳಿದರು.


******

 

(Release ID: 1602228) Visitor Counter : 182