ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 11 ಮತ್ತು 12, 2020 ರಂದು ಕೋಲ್ಕತ್ತಾಗೆ ಪ್ರಧಾನ ಮಂತ್ರಿ ಎರಡು ದಿನಗಳ ಅಧಿಕೃತ ಭೇಟಿ ನವೀಕರಿಸಲಾದ 4 ಪಾರಂಪರಿಕ ಕಟ್ಟಡಗಳ ರಾಷ್ಟ್ರಕ್ಕೆ ಸಮರ್ಪಣೆ, ಕೋಲ್ಕತಾ ಬಂದರು ನ್ಯಾಸದ 150ನೇ ವರ್ಷಾಚರಣೆ ಕಾರ್ಯಕ್ರಮ , ಕೋಲ್ಕತಾ ಬಂದರು ಟ್ರಸ್ಟ್ ನಿವೃತ್ತ ಮತ್ತು ಹಾಲಿ ಉದ್ಯೋಗಿಗಳ ಪಿಂಚಣಿ ಸೇವಾ ಅಗತ್ಯತೆ, ಬಂದರು ಟ್ರಸ್ಟ್ ನ ಇಬ್ಬರು ಹಿರಿಯ ಶತಾಯುಷಿ ನೌಕರರ ಸನ್ಮಾನ ಕಾರ್ಯಕ್ರಮ

Posted On: 10 JAN 2020 12:13PM by PIB Bengaluru

ಜನವರಿ 11 ಮತ್ತು 12, 2020 ರಂದು ಕೋಲ್ಕತ್ತಾಗೆ ಪ್ರಧಾನ ಮಂತ್ರಿ ಎರಡು ದಿನಗಳ ಅಧಿಕೃತ ಭೇಟಿ

ನವೀಕರಿಸಲಾದ 4 ಪಾರಂಪರಿಕ ಕಟ್ಟಡಗಳ ರಾಷ್ಟ್ರಕ್ಕೆ ಸಮರ್ಪಣೆ, ಕೋಲ್ಕತಾ ಬಂದರು ನ್ಯಾಸದ 150ನೇ ವರ್ಷಾಚರಣೆ ಕಾರ್ಯಕ್ರಮ , ಕೋಲ್ಕತಾ ಬಂದರು ಟ್ರಸ್ಟ್ ನಿವೃತ್ತ ಮತ್ತು ಹಾಲಿ ಉದ್ಯೋಗಿಗಳ ಪಿಂಚಣಿ ಸೇವಾ ಅಗತ್ಯತೆ, ಬಂದರು ಟ್ರಸ್ಟ್ ನ ಇಬ್ಬರು ಹಿರಿಯ ಶತಾಯುಷಿ ನೌಕರರ ಸನ್ಮಾನ ಕಾರ್ಯಕ್ರಮ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 11 ಮತ್ತು 12, 2020ರ ಎರಡು ದಿನಗಳ ಅಧಿಕೃತ ಭೇಟಿಗಾಗಿ ಕೋಲ್ಕತ್ತಾಗೆ ತೆರಳುತ್ತಿದ್ದಾರೆ.

ದೇಶಕ್ಕೆ ಪಾರಂಪರಿಕ ಕಟ್ಟಡಗಳ ಸಮರ್ಪಣೆ

ಜನವರಿ 11ರಂದು ಪ್ರಧಾನಮಂತ್ರಿಯವರು ಕೋಲ್ಕತ್ತಾದಲ್ಲಿ ನಾಲ್ಕು ಪುನರ್ ನವೀಕರಣಗೊಂಡ 4 ಪಾರಂಪರಿಕ ಕಟ್ಟಡಗಳ ರಾಷ್ಟ್ರಕ್ಕೆ ಸಮರ್ಪಣೆ,.

ಇವು ಓಲ್ಡ್ ಕರೆನ್ಸಿ ಕಟ್ಟಡ, ಬೆಲ್ವೆಡೆರೆ ಹೌಸ್, ಮೆಟ್ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಗಳಾಗಿವೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ನಾಲ್ಕು ಪಾರಂಪರಿಕ ಗ್ಯಾಲರಿಗಳ ಕಟ್ಟಡಗಳನ್ನು ನವೀಕರಿಸಿದ್ದು, ಅವುಗಳಲ್ಲಿ ಹಳೆಯ ಪ್ರದರ್ಶನ ಶಾಲೆಯ ವಸ್ತುಗಳನ್ನು ಒಪ್ಪ ಓವರಣವಾಗಿ ಜೋಡಿಸಿ, ಹೊಸ ವಸ್ತು ಪ್ರದರ್ಶನದಂತೆ ನವೀಕರಿಸಿದ್ದಾರೆ.

ಸಂಸ್ಕೃತಿ ಸಚಿವಾಲಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಅಡಿಯಲ್ಲಿ, ದೇಶದ ವಿವಿಧ ಬೃಹನ್ ನಗರಗಳಲ್ಲಿನ ವಿವಿಧ ಅಪ್ರತಿಮ ಕಟ್ಟಡಗಳ ಸುತ್ತ ಸಾಂಸ್ಕೃತಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೋಲ್ಕತ್ತಾ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ವಾರಾಣಸಿಯಲ್ಲಿ ಈ ಯೋಜನೆಯನ್ನು ಆರಂಭಿಕವಾಗಿ ಕೈಗೆತ್ತಿಕೊಳ್ಳಲಾಗಿದೆ.

ಕೋಲ್ಕತ್ತಾ ಬಂದರು ಟ್ರಸ್ಟ್ (ಕೆ.ಓ.ಪಿ.ಟಿ) 150ನೇ ವಾರ್ಷಿಕೋತ್ಸವ

ಪ್ರಧಾನಮಂತ್ರಿಯವರು ಕೋಲ್ಕತ್ತಾ ಬಂದರು ಟ್ರಸ್ಟ್ 150ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ 2020ರ ಜನವರಿ 11 ಮತ್ತು 12ರಂದು ಭಾಗಿಯಾಗಲಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಕೋಲ್ಕತ್ತಾ ಬಂದರು ಟ್ರಸ್ಟ್ ನಿವೃತ್ತ ಮತ್ತು ಹಾಲಿ ಉದ್ಯೋಗಿಗಳ ಪಿಂಚಣಿಯ ಸೇವಾ ಯೋಜನೆ ಸರಿದೂಗಿಸಲು ಅಂತಿಮ ಕಂತಿನ 501 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಲಿದ್ದಾರೆ.

ಸ್ಮರಣಾರ್ಹವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಕೋಲ್ಕತ್ತಾ ಬಂದರು ಟ್ರಸ್ಟ್ ಇಬ್ಬರು ಹಿರಿಯ ಪಿಂಚಣಿದಾರರಾದ (ಅನುಕ್ರಮವಾಗಿ 105 ಮತ್ತು 100 ವರ್ಷದ) ಶಅರೀ ನಗೀನಾ ಭಗತ್ ಮತ್ತು ಶ್ರೀ ನರೇಶ್ ಚಂದ್ರ ಚಕ್ರಬೋರ್ತಿ ಅವರನ್ನು ಸನ್ಮಾನಿಸಲಿದ್ದಾರೆ.

ಈ ಸಮಾರಂಭದ ವೇಳೆ ಪ್ರಧಾನಮಂತ್ರಿಯವರು ಬಂದರಿನ ಗೀತೆಗೆ ಚಾಲನೆ ನೀಡಲಿದ್ದಾರೆ.

ಶ್ರೀ ಮೋದಿ ಅವರು ಮೂಲ ಬಂದರು ಜಟ್ಟಿಗಳ ತಾಣದಲ್ಲಿ 150ನೇ ವರ್ಷದ ಸ್ಮಾರಕದ ಅಂಗವಾಗಿ ಫಲಕ ಅನಾವರಣ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಕೋಚಿನ್ ಕೋಲ್ಕತ್ತಾ ಹಡಗು ರಿಪೇರಿ ಘಟಕದ ಮೇಲ್ದರ್ಜೆಗೇರಿಸಲಾದ ಹಡಗು ದುರಸ್ತಿ ವ್ಯವಸ್ಥೆಯನ್ನು ನೇತಾಜಿ ಸುಭಾಷ್ ಡ್ರೈ ಡಾಕ್ ನಲ್ಲಿ ಉದ್ಘಾಟಿಸಲಿದ್ದಾರೆ

ಶ್ರೀ ನರೇಂದ್ರ ಮೋದಿ ಅವರು ಪೂರ್ಣ ರೇಕ್ ಹ್ಯಾಂಡ್ಲಿಂಗ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಮತ್ತು ಸುಗಮ ಸರಕು ಸಾಗಣೆಗಾಗಿ ಮತ್ತು ನಿಗದಿತ ಸಮಯದಲ್ಲಿನ ಕಾರ್ಯಪಾಲನೆಗಾಗಿ ಕೋಲ್ಕತ್ತಾ ಬಂದರು ಟ್ರಸ್ಟ್ ಕೋಲ್ಕತಾ ಡಾಕ್ ವ್ಯವಸ್ಥೆಯ ನವೀಕೃತ ರೈಲ್ವೆ ಮೂಲಸೌಕರ್ಯವನ್ನು ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಕೋಲ್ಕತ್ತಾ ಬಂದರು ಟ್ರಸ್ಟ್ ಹಾಲ್ಡಿಯಾ ಡಾಕ್ ಸಮುಚ್ಛಯದ ನಂ.3ರಲ್ಲಿ ರೇವಿನ ಯಾಂತ್ರೀಕರಣಕ್ಕೆ ಮತ್ತು ಉದ್ದೇಶಿತ ನದಿಯ ಮುಂಭಾಗದ ಅಭಿವೃದ್ಧಿ ಯೋಜನೆಗೂ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ಕೌಶಲ ವಿಕಾಸ ಕೇಂದ್ರ ಮತ್ತು ಸುಂದರ ಬನದ 200 ಬುಡಕಟ್ಟು ಶಾಲಾ ಬಾಲಕಿಯರಿಗಾಗಿ ಪ್ರೀತಿಲತಾ ಛತ್ರಿ ವಸತಿ ಗೃಹವನ್ನು ಉದ್ಘಾಟಿಸಲಿದ್ದಾರೆ. ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಅಂಗಸಂಸ್ಥೆಯಾದ ಗೋಸಾಬಾದ ಪೂರ್ವಾಂಚಲ ಕಲ್ಯಾಣ ಆಶ್ರಮ, ಗೋಸಾಬಾ, ಸುಂದರ್ ಬನ್ಸ್ ನೊಂದಿಗೆ ಕೋಲ್ತತ್ತಾ ಬಂದರು ಟ್ರಸ್ಟ್ ಈ ಯೋಜನೆ ಕೈಗೊಂಡಿತ್ತು.

****



(Release ID: 1599029) Visitor Counter : 115