ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ -2019

Posted On: 19 DEC 2019 12:35PM by PIB Bengaluru

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ -2019

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಿಂದ ಸಮನ್ವಯ, ಪ್ರಮಾಣದಲ್ಲಿ ಹೆಚ್ಚಳ, ಆಕಾಂಕ್ಷೆಗಳ ಈಡೇರಿಕೆ ಮತ್ತು ಗುಣಮಟ್ಟದಲ್ಲಿ ಸುಧಾರಣೆಗಳಿಗೆ ಒತ್ತು ನೀಡಲು ಹಲವಾರು ಉಪಕ್ರಮಗಳು

 

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ದೇಶಾದ್ಯಂತದ ಎಲ್ಲ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳ ಸಮನ್ವಯ, ಕುಶಲ ಮಾನವಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ತೆಗೆದುಹಾಕುವುದು, ವೃತ್ತಿಪರ ಮತ್ತು ತಾಂತ್ರಿಕ ತರಬೇತಿ ಚೌಕಟ್ಟನ್ನು ನಿರ್ಮಿಸುವುದು, ಕೌಶಲ್ಯವನ್ನು ಹೆಚ್ಚಿಸುವಿಕೆ, ಹೊಸ ಕೌಶಲ್ಯಗಳ ಸೃಷ್ಟಿಯ ಜವಾಬ್ದಾರಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳಿಗೆ ಮಾತ್ರವಲ್ಲದೆ ಭವಿಷ್ಯದ ಉದ್ಯೋಗಗಳಿಗೂ ನಾವೀನ್ಯ ಚಿಂತನೆ. 'ಕೌಶಲ್ಯ ಭಾರತ' ದ ದೃಷ್ಟಿಕೋನವನ್ನು ಸಾಧಿಸುವ ಸಲುವಾಗಿ ವೇಗ ಮತ್ತು ಉನ್ನತ ಮಾನದಂಡಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಸಾಧಿಸುವ ಉದ್ದೇಶವನ್ನು ಸಚಿವಾಲಯವು ಹೊಂದಿದೆ.

"ದೇಶದಲ್ಲಿ ಉನ್ನತ ಗುಣಮಟ್ಟದೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೌಶಲ್ಯವನ್ನು ಒದಗಿಸುವ ಮೂಲಕ ಸಬಲೀಕರಣದ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಎಲ್ಲಾ ನಾಗರಿಕರಿಗೆ ಸುಸ್ಥಿರ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಸಂಪತ್ತು ಮತ್ತು ಉದ್ಯೋಗವನ್ನು ಉತ್ಪಾದಿಸಬಲ್ಲ ನಾವೀನ್ಯತೆ ಆಧಾರಿತ ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುವುದು." ಸಚಿವಾಲಯದ ದೃಷ್ಟಿಕೋನದ ಹೇಳಿಕೆಯಾಗಿದೆ.

ಈ ದೃಷ್ಟಿಕೋನದ ನಿಟ್ಟಿನಲ್ಲಿ ಸಮನ್ವಯ, ಪ್ರಮಾಣದ ಹೆಚ್ಚಳ, ಆಕಾಂಕ್ಷೆಗಳ ಈಡೇರಿಕೆ ಮತ್ತು ಸುಧಾರಿತ ಗುಣಮಟ್ಟಕ್ಕೆ 2019 ರಲ್ಲಿ ವಿಶೇಷ ಒತ್ತು ನೀಡುವ ಮೂಲಕ ಸಚಿವಾಲಯವು ಶ್ರಮಿಸಿದೆ. ಇದು ದೇಶದಲ್ಲಿ ಕೌಶಲ್ಯ ಅವಕಾಶಗಳು ಮತ್ತು ತರಬೇತಿ ಪಡೆದ ಉದ್ಯೋಗಿಗಳ ಹೆಚ್ಚಳಕ್ಕೆ ಮತ್ತು ಜನರಲ್ಲಿ ಉದ್ಯಮಶೀಲತಾ ಮನೋಭಾವವನ್ನು ಬೆಳೆಸಲು ಮತ್ತು ಬೆಂಬಲಿಸಲು ಕಾರಣವಾಗಿದೆ.

ಸಚಿವಾಲಯದ ಉಪಕ್ರಮಗಳು ಹೀಗಿವೆ:

ಸಮನ್ವಯ

1. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ (ಎನ್‌ಎಸ್‌ಡಿಎಂ): ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್‌ಡಿಇ) 2014 ರಲ್ಲಿ ರಚನೆಯಾಗಿದ್ದು, ದೇಶದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಪ್ರಯತ್ನಗಳಿಗೆ ಗಮನ ಹರಿಸಿದೆ. ಎನ್‌ಎಸ್‌ಡಿಎಂ ಅಡಿಯಲ್ಲಿನ ಪ್ರಯತ್ನಗಳಿಂದಾಗಿ, ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಾರ್ಷಿಕವಾಗಿ ಒಂದು ಕೋಟಿಗೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

2. ಸ್ಕಿಲ್ ಇಂಡಿಯಾ ಪೋರ್ಟಲ್: ಕೇಂದ್ರದ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಖಾಸಗಿ ತರಬೇತಿ ನೀಡುವವರು ಮತ್ತು ಕಾರ್ಪೊರೇಟ್‌ಗಳ ಸ್ಕಿಲ್ಲಿಂಗ್ ಡೇಟಾವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಸ್ಕಿಲ್ ಇಂಡಿಯಾ ಪೋರ್ಟಲ್ ಎಂಬ ಪ್ರಬಲ ಐಟಿ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಇದು ಈಗ ನೀತಿ ನಿರೂಪಕರು ಡೇಟಾ ಚಾಲಿತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸ್ಕಿಲ್ಲಿಂಗ್ ಪರಿಸರ ವ್ಯವಸ್ಥೆಯಲ್ಲಿ ಮಾಹಿತಿ ಅಸಮಾನತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಭಾರತದ ನಾಗರಿಕರಿಗೆ ಸ್ಕಿಲ್ಲಿಂಗ್ ಅವಕಾಶಗಳನ್ನು ಪ್ರವೇಶಿಸಲು ಮತ್ತು ಸಂಬಂಧಿತ ಸೇವೆಗಳನ್ನು ಪಡೆಯುವ ಕೇಂದ್ರವಾಗಿದೆ.

ಪ್ರಮಾಣದ ಹೆಚ್ಚಳ

3. ಕೈಗಾರಿಕಾ ತರಬೇತಿ ಕೇಂದ್ರಗಳು (ಐಟಿಐಗಳು): ಭಾರತದಲ್ಲಿ ಅಸ್ತಿತ್ವದಲ್ಲಿರುವ ದೀರ್ಘಕಾಲೀನ ತರಬೇತಿ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ ಮತ್ತು ಆಧುನೀಕರಿಸಲಾಗಿದೆ. ಒಟ್ಟು ಕೈಗಾರಿಕಾ ತರಬೇತಿ ಕೇಂದ್ರಗಳ (ಐಟಿಐ) ಸಂಖ್ಯೆ 2014 ರಲ್ಲಿದ್ದ 11964 ರಿಂದ 2018-19ರಲ್ಲಿ 14939ಕ್ಕೆ (ಶೇ.12) ಹೆಚ್ಚಾಗಿದೆ. ಈ ಅವಧಿಯಲ್ಲಿ ತರಬೇತಿ ದಾಖಲಾತಿ 16.90 ಲಕ್ಷದಿಂದ 23.08 ಲಕ್ಷಕ್ಕೆ (ಶೇ.37) ಹೆಚ್ಚಾಗಿದೆ.

4. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ): ಭಾರತದ ಯುವಜನರಿಗೆ ಉಚಿತ ಕೌಶಲ್ಯ ತರಬೇತಿ ಮಾರ್ಗಗಳನ್ನು ಒದಗಿಸಲು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (1.0 ಮತ್ತು 2.0) ಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಡಿಯಲ್ಲಿ ಸುಮಾರು 87 ಲಕ್ಷ ಯುವಜನರಿಗೆ ಇಲ್ಲಿಯವರೆಗೆ ತರಬೇತಿ ನೀಡಲಾಗಿದೆ. ಪಿಎಂಕೆವಿವೈ 2016-19ರ ಅವಧಿಯಲ್ಲಿ ಉದ್ಯೋಗಾಧಾರಿತ ಕಾರ್ಯಕ್ರಮದಡಿಯಲ್ಲಿ, ಶೇ.54 ಕ್ಕಿಂತ ಹೆಚ್ಚು ಜನರು ಉದ್ಯೋಗಗಳೊಂದಿಗೆ ಸಂಪರ್ಕ ಪಡೆದಿದ್ದಾರೆ.

5. ಪ್ರಧಾನ್ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ): ಹಂಚಿಕೆಯಾದ 812 ಪಿಎಂಕೆಕೆಗಳಲ್ಲಿ 681 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಪಿಎಂಕೆವಿವೈ ಯೋಜನೆಯಡಿ 18 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ನೀಡಲಾಗಿದ್ದು, ಅದರಲ್ಲಿ 9,89,936 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. 8,85,822 ಮೌಲ್ಯಮಾಪನ ಮಾಡಿ, 7,40,146 ಪ್ರಮಾಣೀಕರಿಸಲಾಗಿದೆ ಮತ್ತು 4,35,022 ಅಭ್ಯರ್ಥಿಗಳು ಯಶಸ್ವಿಯಾಗಿ ಉದ್ಯೋಗ ಪಡೆದಿದ್ದಾರೆ. 501 ಕೇಂದ್ರಗಳನ್ನು ಆಯಾ ಸಂಸದೀಯ ಕ್ಷೇತ್ರಗಳ ಮಾನ್ಯ ಸಂಸತ್ ಸದಸ್ಯರು ಮತ್ತು / ಅಥವಾ ಆಯಾ ಕ್ಷೇತ್ರದ ಇತರ ಪ್ರತಿನಿಧಿಗಳು ಉದ್ಘಾಟಿಸಿದರು.

6. ಪೂರ್ವ ಕಲಿಕೆಯ ಗುರುತಿಸುವಿಕೆ: ಪೂರ್ವ ಕಲಿಕೆಯ ಗುರುತಿಸುವಿಕೆ (ಆರ್‌ಪಿಎಲ್) ಆಳವಾಗುತ್ತಿದೆ. ವ್ಯಕ್ತಿಗಳು ಸ್ವಾಧೀನಪಡಿಸಿಕೊಂಡ ಪೂರ್ವ ಕೌಶಲ್ಯಗಳನ್ನು ಗುರುತಿಸಲು ಪಿಎಂಕೆವಿವೈ 2016-19ರ ಅಡಿಯಲ್ಲಿ ಆರ್‌ಪಿಎಲ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ, ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಯ ಆರ್‌ಪಿಎಲ್ ಕಾರ್ಯಕ್ರಮದಡಿ 26 ಲಕ್ಷಕ್ಕೂ ಹೆಚ್ಚು ಜನರಿಗೆ ಓರಿಯಂಟೇಷನ್ ನೀಡಲಾಗಿದೆ. ಆರ್‌ಪಿಎಲ್‌ನ ಬೆಸ್ಟ್ ಇನ್ ಕ್ಲಾಸ್ ಎಂಪ್ಲಾಯರ್ ವಿಭಾಗದಲ್ಲಿ, 11 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಂಪನಿಗಳ ನೆರವಿನೊಂದಿಗೆ ಔಪಚಾರಿಕ ಕೌಶಲ್ಯಕ್ಕೆ ಒಳಪಡಿಸಲಾಗಿದೆ.

7. ಸುಪ್ರೀಂ ಕೋರ್ಟ್‌ನಲ್ಲಿ ಆರ್‌ಪಿಎಲ್: ಪೂರ್ವ ಕಲಿಕೆಯ ಗುರುತಿಸುವಿಕೆ ಕಾರ್ಯಕ್ರಮ (ಆರ್‌ಪಿಎಲ್) ದಡಿಯಲ್ಲಿ ಸುಪ್ರೀಂ ಕೋರ್ಟ್‌, ಟಾಟಾ ಸ್ಟ್ರೈವ್ ಮತ್ತು ಮಾರುತಿ ಸುಜುಕಿ ಒಂದು ಬ್ಯಾಚ್ ಅಡುಗೆಯವರಿಗೆ ಮತ್ತು ಚಾಲಕರಿಗೆ ತರಬೇತಿ ನೀಡಿವೆ. ಎರಡು ದಿನಗಳ ತರಬೇತಿಯಲ್ಲಿ ಸುರಕ್ಷತಾ ಅಂಶಗಳು, ವೈಯಕ್ತಿಕ ಅಂದಗೊಳಿಸುವಿಕೆ, ಮೃದು ಕೌಶಲ್ಯಗಳು ಮತ್ತು ಕೆಲವು ತಾಂತ್ರಿಕ ಅಂಶಗಳನ್ನು ಒಳಗೊಂಡಿದ್ದವು.

8. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನೊಂದಿಗೆ ಒಪ್ಪಂದ: ಎಂಎಸ್‌ಡಿಇ ಅಡಿಯಲ್ಲಿ ಬಿಎಫ್‌ಎಸ್‌ಐ (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ) ಸೆಕ್ಟರ್ ಸ್ಕಿಲ್ ಕೌನ್ಸಿಲ್ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಆರ್‌ಪಿಎಲ್ ಅಡಿಯಲ್ಲಿ 1,70,000 ಗ್ರಾಮೀಣ ಡಾಕ್ ಸೇವಕ್‌ಗಳನ್ನು ಪ್ರಮಾಣೀಕರಿಸಲು ಒಪ್ಪಂದ ಮಾಡಿಕೊಂಡಿದೆ. ಇಂದಿನವರೆಗೆ ಒಟ್ಟು 9,046 ಅಭ್ಯರ್ಥಿಗಳು ಇದರ ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ.

9. ಕೇಂದ್ರ ಮಾನ್ಯತೆ: ಕೇಂದ್ರದ ಅಕ್ರಿಡಿಟೇಷನ್ ಮತ್ತು ಅಫಿಲಿಯೇಷನ್ ಪೋರ್ಟಲ್ –SMART-ಮೂಲಕ ಅಲ್ಪಾವಧಿಯ ಪ್ರಮಾಣೀಕೃತ ಸ್ಕಿಲ್ಲಿಂಗ್ ಸಾಮರ್ಥ್ಯದ ಗಮನಾರ್ಹ ರಚನೆ. 11,977 ಕೇಂದ್ರಗಳು ಇಲ್ಲಿಯವರೆಗೆ ಮಾನ್ಯತೆ ಪಡೆದಿವೆ ಮತ್ತು ಅಂಗಸಂಸ್ಥೆಗಳಾಗಿವೆ. ಇವು ವಾರ್ಷಿಕ ಸುಮಾರು 50 ಲಕ್ಷ ತರಬೇತಿ ಸಾಮರ್ಥ್ಯವನ್ನು ಹೊಂದಿದೆ.

10. ಜಮ್ಮು ಮತ್ತು ಕಾಶ್ಮೀರದಲ್ಲಿ ಕೌಶಲ್ಯ ಅಭಿವೃದ್ಧಿ: ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಎಂಎಸ್‌ಡಿಇ ಅಧಿಕಾರಿಗಳು ಮತ್ತು ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್ (ಜೆಕೆಎಸ್ಎಸ್ಡಿಎಂ) ನಡುವೆ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಅರ್ಹವಾದ ಎಲ್ಲಾ ಫಲಾನುಭವಿಗಳ ಶೇ.100 ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳು ಮತ್ತು ಅದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಎನ್‌ಎಸ್‌ಡಿಸಿ, ಡಿಜೆಎಸ್‌ಎಸ್ ಮತ್ತು ವಿವಿಧ ವಲಯ ಕೌಶಲ್ಯ ಮಂಡಳಿಗಳು (ಎಸ್‌ಎಸ್‌ಸಿ) ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ದೀರ್ಘಕಾಲೀನ ಕೌಶಲ್ಯವನ್ನು ಉತ್ತೇಜಿಸಲು, ಎನ್‌ಎಸ್‌ಟಿಐ ಜಮ್ಮು ಕಾರ್ಯರೂಪಕ್ಕೆ ಬಂದಿದೆ. ತರಬೇತುದಾರರಿಗೆ ಎನ್‌ಎಸ್‌ಕ್ಯೂಎಫ್ ಲೆವೆಲ್ -6 ತರಬೇತಿ ನೀಡಲಾಗುತ್ತಿದೆ.

11. ಲೇಹ್‌ನಲ್ಲಿ ಕೌಶಲ್ಯ ಅಭಿವೃದ್ಧಿ: ದೇಶದ ಎಲ್ಲಾ ಭಾಗಗಳಿಗೆ ಕೌಶಲ್ಯ ತರಬೇತಿಯನ್ನು ಉತ್ತಮವಾಗಿ ತಲುಪಿಸಲು, ಲೇಹ್‌ನಲ್ಲಿ ಎನ್‌ಎಸ್‌ಟಿಐ ವಿಸ್ತರಣಾ ಕೇಂದ್ರವನ್ನು ತೆರೆಯಲಾಗಿದೆ. ರಾಷ್ಟ್ರದಲ್ಲಿ ನಿಖರ ತರಬೇತಿ ಪಡೆದ ಕಾರ್ಯಪಡೆ ರಚಿಸಲು ಸಚಿವಾಲಯ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

12. ಸಂಕಲ್ಪ: ನಾಗಾಲ್ಯಾಂಡ್, ಮಧ್ಯಪ್ರದೇಶ, ಕರ್ನಾಟಕ, ಜಾರ್ಖಂಡ್, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳು ಭಾಗವಹಿಸಿದ ಸಂಕಲ್ಪದ ಪ್ರಾದೇಶಿಕ ಕಾರ್ಯಾಗಾರವನ್ನು ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ನಡೆಸಲಾಯಿತು. ಪ್ರಾದೇಶಿಕ ಕಾರ್ಯಾಗಾರದ ಜೊತೆಗೆ ಜಿಲ್ಲಾ ಅಧಿಕಾರಿಗಳು ಮತ್ತು ತರಬೇತುದಾರರೊಂದಿಗೆ ಕಾರ್ಯಾಗಾರಗಳು ನಡೆದವು. ಇದರ ಹೊರತಾಗಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸಂಕಲ್ಪದ ಅಡಿಯಲ್ಲಿ ಕಾರ್ಯಾಗಾರವೂ ನಡೆಯಿತು. ಇದಲ್ಲದೆ, ಕೊರಿಯಾದ ಸಿಯೋಲ್ ಗೆ ನಿಯೋಗದ ಭೇಟಿಯನ್ನು ಕೈಗೊಳ್ಳಲಾಯಿತು. ಇದನ್ನು ವಿಶ್ವಬ್ಯಾಂಕ್ ಆಯೋಜಿಸಿತ್ತು ಮತ್ತು ರಾಜ್ಯ ಪ್ರೋತ್ಸಾಹಕ ಅನುದಾನ (ಎಸ್‌ಐಜಿ) ಬೇಸ್‌ಲೈನ್‌ನ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಸಂಕಲ್ಪ್ ಅಡಿಯಲ್ಲಿ ರಾಜ್ಯ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೆಶಗಳೊಂದಿಗೆ ವೀಡಿಯೊ ಸಮಾವೇಶಗಳನ್ನು ನಡೆಸಲಾಯಿತು.

13. STRIVE (ಶ್ರಮಾಧಾರಿತ ತರಬೇತಿ): ಐಟಿಐಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಯೋಜನೆಯ ಮುಖ್ಯ ಗಮನ. ಮೊದಲ ಹಂತದಲ್ಲಿ, 314 ಐಟಿಐಗಳನ್ನು ಆಯ್ಕೆ ಮಾಡಲಾಗಿದೆ ಮತ್ತು 198 ಕಾರ್ಯಕ್ಷಮತೆ ಆಧಾರಿತ ಅನುದಾನ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಐಟಿಐ ಮತ್ತು ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಬೆಂಬಲಿಸಲು ರಾಜ್ಯ ಸರ್ಕಾರಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯನಿರ್ವಹಿಸುತ್ತದೆ. ಇಲ್ಲಿಯವರೆಗೆ, 31 ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಅಂದರೆ ಕಾರ್ಯಕ್ಷಮತೆ ಆಧಾರಿತ ಧನಸಹಾಯ ಒಪ್ಪಂದ (ಪಿಬಿಎಫ್‌ಎ). ಬೋಧನೆ ಮತ್ತು ಕಲಿಕೆಯ ತಂತ್ರಗಳನ್ನು ಸುಧಾರಿಸಲು, ಎನ್ಎಸ್ಕ್ಯೂಎಫ್ ತರಬೇತಿಗಾಗಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿ ಅಧಿಕಾರಿಗಳು, ಪ್ರಾಂಶುಪಾಲರು ಮತ್ತು ಬೋಧಕರಿಗೆ ಎನ್ಎಸ್ಕ್ಯೂಎಫ್ ತರಬೇತಿಗಳನ್ನು ನೀಡಲಾಗುತ್ತಿದೆ.

14. ಅಂತರರಾಷ್ಟ್ರೀಯ ಸಹಯೋಗ: ದೇಶದಲ್ಲಿ ನುರಿತ ಉದ್ಯೋಗಿಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು, ಜಂಟಿಯಾಗಿ ದೇಶೀಯ ಮಾನದಂಡಗಳ ಮೇಲೆ ಕೆಲಸ ಮಾಡಲು ಮತ್ತು ತರಬೇತಿ ಪಡೆದ ವೃತ್ತಿಪರರನ್ನು ಪೂರೈಸಲು ಸಿಂಗಪುರ, ಯುಎಇ, ಜಪಾನ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿಯಲ್ಲಿ ಕೆಲಸ ಮಾಡುವ ಸಹವರ್ತಿ ಅಧಿಕಾರಿಗಳನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು ಭೇಟಿ ಮಾಡಿದರು.

15. ಪಿಎಂ-ಯುವ ಯೋಜನೆ (ಪ್ರಧಾನ ಮಂತ್ರಿ ಯುವ ಉದ್ಯಮಿತಾ ವಿಕಾಸ ಅಭಿಯಾನ) ಯು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ಪುದುಚೇರಿ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಮೇಘಾಲಯ, ಉತ್ತರಾಖಂಡ, ಮಹಾರಾಷ್ಟ್ರ) 300 ಸಂಸ್ಥೆಗಳು (200 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) / ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು (ಎನ್‌ಎಸ್‌ಟಿಐ), 50 ಪಾಲಿಟೆಕ್ನಿಕ್ಸ್, 25 ಪಿಎಂಕೆಕೆಗಳು / ಪಿಎಂಕೆವಿವೈ ಮತ್ತು 25 ಜನ ಶಿಕ್ಷಣ ಸಂಸ್ಥಾನ (ಜೆಎಸ್‌ಎಸ್)) ಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಉದ್ಯಮಶೀಲತೆಯನ್ನು ಪರ್ಯಾಯ ವೃತ್ತಿ ಆಯ್ಕೆಯಾಗಿ ಉತ್ತೇಜಿಸಲು ಮತ್ತು ಸಂಭಾವ್ಯ ಮತ್ತು ಆರಂಭಿಕ ಹಂತದ ಉದ್ಯಮಿಗಳಿಗೆ ಉದ್ಯಮಶೀಲತೆ ಶಿಕ್ಷಣವನ್ನು ನೀಡುವ ಮೂಲಕ ಮತ್ತು ಕೌಶಲ್ಯಪೂರ್ಣ ಪರಿಸರ ವ್ಯವಸ್ಥೆಯಿಂದ ತರಬೇತಿ ಪಡೆಯುವವರಿಗೆ / ಫಲಾನುಭವಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಿರಂತರ ದೀರ್ಘಕಾಲೀನ ಮಾರ್ಗದರ್ಶನ ಬೆಂಬಲವನ್ನು ಒದಗಿಸಲು ಈ ಯೋಜನೆಯು ಉದ್ದೇಶಿಸಿದೆ. ಪೈಲಟ್ ಯೋಜನೆಯು ಉದ್ಯಮಶೀಲತೆ ಜಾಗೃತಿ ಮತ್ತು ಶಿಕ್ಷಣ ಅವಧಿಗಳ ಮೂಲಕ ಸುಮಾರು 70,000 ಯುವಕರನ್ನು ತಲುಪುವ ನಿರೀಕ್ಷೆಯಿದೆ. ಈ ಯೋಜನೆಯು 2020 ರ ಮಾರ್ಚ್ ವೇಳೆಗೆ 600 ಹೊಸ ಮತ್ತು 1000 ಸ್ಕೇಲ್-ಅಪ್ ಉದ್ಯಮಗಳನ್ನು ರಚಿಸುವ ಸಾಧ್ಯತೆಯಿದೆ. ಪ್ರಾಯೋಗಿಕ ಯೋಜನೆಗೆ ಅನುಮೋದಿತ ಬಜೆಟ್ 12 ಕೋಟಿ ರೂ.

16. ರಿಲಯನ್ಸ್ ಜಿಯೋ ಜತೆ ಸಹಯೋಗ: ಉದ್ಯಮದ ಸಂಪರ್ಕವನ್ನು ಬಲಪಡಿಸಲು, ಡಿಜಿಟಿ ಮತ್ತು ಎಂಎಸ್‌ಡಿಇ ತಮ್ಮ ಸಂಪರ್ಕ ವಿಭಾಗಕ್ಕಾಗಿ 6 ಎನ್‌ಎಸ್‌ಟಿಐಗಳಲ್ಲಿ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ರಿಲಯನ್ಸ್ ಜಿಯೋ ಜೊತೆ ಕೈ ಜೋಡಿಸಿವೆ. ಎನ್‌ಎಸ್‌ಟಿಐ ಚೆನ್ನೈ, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತಾ ಜೊತೆಗೆ ಸರ್ಕಾರಿ ಐಟಿಐ ಪೂಸಾ ನವದೆಹಲಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ತರಬೇತಿಗಾಗಿ 4OO ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

17. ಸಿಸ್ಕೋ, ಕ್ವೆಸ್ಟ್ ಅಲೈಯನ್ಸ್ ಮತ್ತು ಅಕ್ಸೆಂಚರ್‌ನೊಂದಿಗೆ ಒಪ್ಪಂದ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್‌ಡಿಇ) ಮತ್ತು ಸಿಸ್ಕೋ, ಕ್ವೆಸ್ಟ್ ಅಲೈಯನ್ಸ್ ಮತ್ತು ಅಕ್ಸೆಂಚರ್ ಸಹಯೋಗದಲ್ಲಿ 6 ಎನ್‌ಎಸ್‌ಟಿಐಗಳಲ್ಲಿ ಸ್ಕಿಲ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ದಾಖಲಾದ ಭಾರತದಾದ್ಯಂತದ ಯುವಕರಿಗೆ ಡಿಜಿಟಲ್ ಸಾಕ್ಷರತೆ, ವೃತ್ತಿ ಸಿದ್ಧತೆ, ಉದ್ಯೋಗ ಕೌಶಲ್ಯ ಮತ್ತು ಡೇಟಾ ವಿಶ್ಲೇಷಣೆಯಂತಹ ಸುಧಾರಿತ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು.

ಆಕಾಂಕ್ಷೆಗಳ ಈಡೇರಿಕೆ

18. ಕೌಶಲ್ಯಾಚಾರ್ಯ ಪ್ರಶಸ್ತಿಗಳು: ತರಬೇತುದಾರರು ಮಾಡಿದ ಉತ್ತಮ ಕಾರ್ಯಗಳನ್ನು ಗುರುತಿಸಲು ಮತ್ತು ಪ್ರಶಂಸಿಸಲು, ಭವಿಷ್ಯದ ಸಿದ್ಧ ಮತ್ತು ನುರಿತ ಕಾರ್ಯಪಡೆಯೊಂದನ್ನು ರಚಿಸುವಲ್ಲಿನ ಅಸಾಧಾರಣ ಕೊಡುಗೆಗಾಗಿ ವಿವಿಧ ಕ್ಷೇತ್ರಗಳ 53 ತರಬೇತುದಾರರನ್ನು ಸನ್ಮಾನಿಸಲು ಕೌಶಲಾಚಾರ್ಯ ಪ್ರಶಸ್ತಿ 2019 ಸಮಾರಂಭವನ್ನು ಸೆಪ್ಟೆಂಬರ್ 5, 2019 ರಂದು ಆಯೋಜಿಸಲಾಗಿತ್ತು.

19. ರಾಷ್ಟ್ರೀಯ ಉದ್ಯಮಶೀಲತೆ ಪ್ರಶಸ್ತಿಗಳು 2019: ಎಂಎಸ್‌ಡಿಇಯು ಎನ್‌ಇಎ 2019 ಪ್ರಶಸ್ತಿಯನ್ನು 30 ಯುವ ಉದ್ಯಮಿಗಳು ಮತ್ತು 6 ಸಂಸ್ಥೆಗಳು / ವ್ಯಕ್ತಿಗಳಿಗೆ ನೀಡಿ, ದೇಶದಲ್ಲಿ ಉದ್ಯಮಶೀಲತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗೌರವಿಸಲು ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿಯಲ್ಲಿ ಟ್ರೋಫಿ, ಪ್ರಮಾಣಪತ್ರ ಮತ್ತು 10 ಲಕ್ಷ ರೂ. ಒಳಗೊಂಡಿದೆ. ಇದು ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ರಾಷ್ಟ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗಿಂತ ಹೆಚ್ಚಿನ ಉದ್ಯೋಗದಾತರನ್ನು ಸೃಷ್ಟಿಸುತ್ತದೆ.

20. ಕೌಶಲ್ಯ ಸಾಥಿ ಕೌನ್ಸೆಲಿಂಗ್ ಕಾರ್ಯಕ್ರಮ: ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ದೇಶದ ಯುವಜನರನ್ನು ವಿವಿಧ ಮಾರ್ಗಗಳಲ್ಲಿ ಸಂವೇದನಾಶೀಲಗೊಳಿಸಲು ಮತ್ತು ಕೌಶಲ್ಯ ಅಭಿವೃದ್ಧಿಯ ಆಕಾಂಕ್ಷೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಕಿಲ್ ಸಾಥಿ ಕಾರ್ಯಕ್ರಮವನ್ನು ಎಂಎಸ್‌ಡಿಇ ಪ್ರಾರಂಭಿಸಿದೆ. ಈ ಕಾರ್ಯಕ್ರಮದಡಿ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ.

21. ವೃತ್ತಿಪರ ಕೋರ್ಸ್‌ಗಳನ್ನು ನೀಡಲು ನೀತಿ: ಇದರ ಅಡಿಯಲ್ಲಿ, ಶಾಲೆಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ನೀಡುವ ಬಗ್ಗೆ ಮತ್ತು ಸ್ನಾತಕ ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ ವೃತ್ತಿಪರ ಕೋರ್ಸ್‌ಗಳಿಗೆ ಸಮಾನ ನೀತಿಯನ್ನು ರಚಿಸಲು ಎಂಎಸ್‌ಡಿಇ ಚಾಲನೆ ನೀಡಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಯೊಂದಿಗೆ ಸಮಾಲೋಚಿಸಿ ಇದರ ಚೌಕಟ್ಟನ್ನು ಅಂತಿಮಗೊಳಿಸಲಾಗುತ್ತಿದೆ.

22. ಸರ್ಕಾರಿ ಶಾಲೆಗಳಲ್ಲಿ 500 ಕೌಶಲ್ಯ ಕೇಂದ್ರಗಳು: ಸರ್ಕಾರಿ ಶಾಲೆಗಳಲ್ಲಿ 500 ಕೌಶಲ್ಯ ಕೇಂದ್ರಗಳು ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಎಂಎಸ್‌ಡಿಇ ಅಂತಿಮಗೊಳಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ “ಹಬ್ಸ್ ಆಫ್ ಎಕ್ಸಲೆನ್ಸ್ ಇನ್ ಸ್ಕಿಲ್ಸ್” ಅನ್ನು ಅಭಿವೃದ್ಧಿಪಡಿಸಲು ಸಿಬಿಎಸ್‌ಇಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಎಂಎಸ್‌ಡಿಇ ಶಾಲೆಗಳಿಗೆ ಉತ್ತಮ ಗುಣಮಟ್ಟದ, ತಂತ್ರಜ್ಞಾನ ಆಧಾರಿತ ಕೌಶಲ್ಯ ಕಾರ್ಯಕ್ರಮಗಳನ್ನು ಪರಿಚಯಿಸುತ್ತದೆ. ಸ್ಕಿಲ್ ಇಂಡಿಯಾ ಪ್ರಸ್ತುತ 9100ಕ್ಕೂ ಹೆಚ್ಚು ಶಾಲೆಗಳೊಂದಿಗೆ ತೊಡಗಿಸಿಕೊಂಡಿದೆ ಮತ್ತು 20 ವಲಯಗಳಿಂದ ಸಂಯೋಜಿತ ಕೌಶಲ್ಯಗಳನ್ನು ಹೊಂದಿದೆ. ಇಲ್ಲಿಯವರೆಗೆ 7.5 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಈ ಉಪಕ್ರಮಗಳನ್ನು ರಾಜ್ಯಗಳ ಜೊತೆಯಲ್ಲಿ ಯೋಜಿಸಲಾಗುತ್ತಿದೆ.

23. ಎಂಬೆಡೆಡ್ ಅಪ್ರೆಂಟಿಸ್‌ಶಿಪ್ ಪದವಿ ಕಾರ್ಯಕ್ರಮ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಿಎ / ಬಿಎಸ್ಸಿ / ಬಿಕಾಂ (ಪ್ರೊಫೆಷನಲ್) ಕೋರ್ಸ್‌ಗಳಂತಹ ಪದವಿ ಕಾರ್ಯಕ್ರಮಗಳಲ್ಲಿ ಚಿಲ್ಲರೆ ವ್ಯಾಪಾರ, ಮಾಧ್ಯಮ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಅಪ್ರೆಂಟಿಸ್‌ಶಿಪ್ ಪದವಿ ಕಾರ್ಯಕ್ರಮಗಳನ್ನು ಅಳವಡಿಸಲಾಗಿರುವ ಶ್ರೇಯಸ್ ಕಾರ್ಯಕ್ರಮವನ್ನು ಎಂಎಸ್‌ಡಿಇ ಮತ್ತು ಎಂಹೆಚ್‌ಆರ್‌ಡಿ ಒಟ್ಟಾಗಿ ರೂಪಿಸಿವೆ. ಇಲ್ಲಿಯವರೆಗೆ, 643 ವಿದ್ಯಾರ್ಥಿಗಳೊಂದಿಗೆ 25 ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಸೇರಿಸಲಾಗಿದೆ.

24. ಅಪ್ರೆಂಟಿಸ್‌ಶಿಪ್ ಪಖ್ವಾಡಾ ಮೂಲಕ ಅಪ್ರೆಂಟಿಸ್‌ಶಿಪ್ ಅನ್ನು ಉತ್ತೇಜಿಸುವ ಮೂಲಕ ಔಪಚಾರಿಕ ಕೌಶಲ್ಯಗಳ ಬೇಡಿಕೆಯನ್ನು ಉತ್ತೇಜಿಸುವುದು: ಎಂಎಸ್‌ಡಿಇ ಅಪ್ರೆಂಟಿಸ್‌ಶಿಪ್ ಪಖ್ವಾಡವನ್ನು ನಡೆಸಿತು. ಇದನ್ನು ದೇಶಾದ್ಯಂತ ಆಚರಿಸಲಾಯಿತು. ಈ ಆರ್ಥಿಕ ವರ್ಷದಲ್ಲಿ ಕೈಗಾರಿಕೆಗಳು ಮತ್ತು ರಾಜ್ಯ ಸರ್ಕಾರಗಳು 7 ಲಕ್ಷ ಅಪ್ರೆಂಟಿಸ್‌ಗಳ ತರಬೇತಿಗೆ ಬದ್ಧವಾಗಿವೆ. ಇದು 1961 ರ ಅಪ್ರೆಂಟಿಸ್‌ಶಿಪ್ ಕಾಯ್ದೆಗೆ ಮಾಡಿದ ಕೊನೆಯ ತಿದ್ದುಪಡಿಯ ನಂತರ ತರಬೇತಿ ಪಡೆದ ಅಪ್ರೆಂಟಿಸ್‌ಗಳ ಸಂಖ್ಯೆಯ ದ್ವಿಗುಣವಾಗುತ್ತದೆ. ಕೌಶಲ್ಯ ಅಭಿವೃದ್ಧಿಯ ಅತ್ಯಂತ ಸುಸ್ಥಿರ ರೂಪಗಳಲ್ಲಿ ಒಂದಾದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಉತ್ತೇಜಿಸಲು ಪ್ರಮುಖ ವೇಗವರ್ಧಕಗಳಾಗಿರುವ ಥರ್ಡ್ ಪಾರ್ಟಿ ಅಗ್ರಿಗೇಟರ್‌ಗಳನ್ನು (ಟಿಪಿಎ) ಎಂಎಸ್‌ಡಿಇ ಉತ್ತೇಜಿಸುತ್ತಿದೆ.

25. ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್): ಕೌಶಲ್ಯ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಗುಣಮಟ್ಟ ಮತ್ತು ನಿಲುವನ್ನು ತರುವ ಸಲುವಾಗಿ, ದೇಶದ ಐಐಎಂಗಳು ಮತ್ತು ಐಐಟಿಗಳಂತೆ ಮುಂಬಯಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಸ್ಥಾಪಿಸುವುದಾಗಿ ಎಂಎಸ್‌ಡಿಇ ಇತ್ತೀಚೆಗೆ ಘೋಷಿಸಿತು. ಈ ಯೋಜನೆಯು ಟಾಟಾ ಸಮೂಹದ ಸಹಭಾಗಿತ್ವದಲ್ಲಿದ್ದು, ಸರ್ಕಾರವು 4.5 ಎಕರೆ ಭೂಮಿಯನ್ನು ಒದಗಿಸಿದೆ. ಟಾಟಾ ಗ್ರೂಪ್ ಸುಮಾರು ರೂ. 300 ಕೋಟಿ ಹೂಡಿಕೆ ಮಾಡಲಿದ್ದು ಪೂರ್ಣಗೊಂಡ ನಂತರ, ಐಐಎಸ್ ಪ್ರತಿವರ್ಷ 5,000 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

26. ಎಸ್‌ಬಿಐ ಜೊತೆಗಿನ ಒಪ್ಪಂದ: ಪಾಲುದಾರಿಕೆಗಳನ್ನು ಪ್ರಾರಂಭಿಸುವ ಪ್ರಯತ್ನದ ಭಾಗವಾಗಿ, ಹಣಕಾಸು ಕ್ಷೇತ್ರದಲ್ಲಿ ಅಪ್ರೆಂಟಿಸ್‌ಶಿಪ್ ಪ್ರೋತ್ಸಾಹಕ್ಕಾಗಿ ಪ್ರಸಕ್ತ 2019-20ರ ಆರ್ಥಿಕ ವರ್ಷದಲ್ಲಿ ಬ್ಯಾಂಕಿಂಗ್ ಫ್ರಂಟ್ ಆಫೀಸ್ ಕಾರ್ಯನಿರ್ವಾಹಕ ಮತ್ತು ಟೆಲಿ-ಕರೆ ಮಾಡುವವರಾಗಿ 5000 ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳಲು ಎಂಎಸ್‌ಡಿಇ ಎಸ್‌ಬಿಐ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

27. ಕೌಶಲ್ಯ ಚೀಟಿಗಳು: ಕಾರ್ಯಕ್ರಮಗಳ ವಿತರಣೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ನಿಬಂಧನೆಯ ಮಾದರಿಯಾಗಿ ಎಂಎಸ್‌ಡಿಇ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಕೌಶಲ್ಯ ಚೀಟಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದೆ. ಕಲಿಯುವವರಿಗೆ ಮತ್ತು ಉದ್ಯಮಿಗಳಿಗೆ ಹೆಚ್ಚಿನ ಮೌಲ್ಯವನ್ನು ಕಾಣುವ ತರಬೇತಿ ಕಾರ್ಯಕ್ರಮದ ಕಡೆಗೆ ಚೀಟಿಗಳನ್ನು ಒದಗಿಸುವ ನಿರೀಕ್ಷೆಯಿದೆ.

28. ವರ್ಲ್ಡ್ ಸ್ಕಿಲ್ಸ್ ಇಂಟರ್ ನ್ಯಾಷನಲ್ ಕಜಾನ್ 2019: ಇಂಡಿಯಾ ಸ್ಕಿಲ್ಸ್ 2018 ರ 22 ವಿಜೇತರು ಮತ್ತು ಅವರ ತಜ್ಞರು ರಷ್ಯಾದ ಕಜಾನ್ ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಇಂಟರ್ನ್ಯಾಷನಲ್ 2019 (ಡಬ್ಲ್ಯುಎಸ್ಕೆ) ಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ದೇಶವನ್ನು ಪ್ರತಿನಿಧಿಸಿದ್ದರು. ಕೌಶಲ್ಯಕ್ಕಾಗಿ ನಡೆದ ದೊಡ್ಡ ಸ್ಪರ್ಧೆಯಲ್ಲಿ ಭಾರತವು ಒಂದು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಮತ್ತು 15 ಮೆಡಾಲಿಯನ್ ಆಫ್ ಎಕ್ಸಲೆನ್ಸ್ ಗೆದ್ದಿದೆ. ವರ್ಲ್ಡ್ ಸ್ಕಿಲ್ಸ್ ಇಂಟರ್ನ್ಯಾಷನಲ್ 2019 ರಲ್ಲಿ ಭಾಗವಹಿಸಿದ 63 ದೇಶಗಳಲ್ಲಿ ಭಾರತ 13 ನೇ ಸ್ಥಾನದಲ್ಲಿದೆ. ಇದು ಕೌಶಲ್ಯ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಅತ್ಯುತ್ತಮ ಸ್ಥಾನವಾಗಿದೆ. ಅವರ ಗಮನಾರ್ಹ ಸಾಧನೆಗಾಗಿ ಪ್ರಮಾಣಪತ್ರಗಳು ಮತ್ತು ನಗದು ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು.

ಸುಧಾರಿತ ಗುಣಮಟ್ಟ

29. 1961 ರ ಅಪ್ರೆಂಟಿಸ್‌ಶಿಪ್ ಕಾಯ್ದೆಗೆ ಸುಧಾರಣೆಗಳು: ಉದ್ಯಮವು ಹೆಚ್ಚು ಅಗತ್ಯವಿರುವ ಅಪ್ರೆಂಟಿಸ್‌ಗಳನ್ನು ತೆಗೆದುಕೊಳ್ಳುವುದನ್ನು ಗಮನಾರ್ಹವಾಗಿ ಸುಲಭಗೊಳಿಸಲು ಸಚಿವಾಲಯವು 1961 ರ ಅಪ್ರೆಂಟಿಸ್‌ಶಿಪ್ ಕಾಯ್ದೆಗೆ ವ್ಯಾಪಕವಾದ ಸುಧಾರಣೆಗಳನ್ನು ತಂದಿತು. ಅಪ್ರೆಂಟಿಸ್‌ಶಿಪ್ ನಿಯಮಗಳು 1962 ರ ಅಡಿಯಲ್ಲಿ ಬರುವ ಸಮಗ್ರ ಸುಧಾರಣೆಗಳು:

· ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳಲು ಗರಿಷ್ಠ ಮಿತಿಯನ್ನು ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವುದು.

· ಅಪ್ರೆಂಟಿಸ್‌ಗಳನ್ನು 40 ರಿಂದ 30 ಕ್ಕೆ ತೊಡಗಿಸಿಕೊಳ್ಳುವ ಕಡ್ಡಾಯ ಬಾಧ್ಯತೆಯೊಂದಿಗೆ ಉದ್ಯಮದ ಗಾತ್ರದ ಮಿತಿಯನ್ನು ಕಡಿಮೆ ಮಾಡುವುದು.

· ಕನಿಷ್ಠ ವೇತನಕ್ಕೆ ಲಿಂಕ್ ಮಾಡುವ ಬದಲು 1 ನೇ ವರ್ಷದ ಸ್ಟೈಫಂಡ್ ಪಾವತಿ ನಿಗದಿ.

· ಅಪ್ರೆಂಟಿಸ್‌ಗೆ 2 ಮತ್ತು 3 ನೇ ವರ್ಷದ ಸ್ಟೈಫಂಡ್‌ನಲ್ಲಿ ಶೇ.10 ರಿಂದ ಶೇ.15ಕ್ಕೆ ಹೆಚ್ಚಳ.

· ಐಚ್ಛಿಕ ವ್ಯಾಪಾರಕ್ಕಾಗಿ ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿ 6 ತಿಂಗಳಿಂದ 36 ತಿಂಗಳವರೆಗೆ ಇರಬಹುದು.

30. ದ್ವಿಪದ್ಧತಿಯ ತರಬೇತಿ (ಡ್ಯುಯಲ್ ಸಿಸ್ಟಮ್ ಆಫ್ ಟ್ರೈನಿಂಗ್): ಎಂಎಸ್‌ಡಿಇ ಐಟಿಐಗಳ ದ್ವಿಪದ್ಧತಿಯ ತರಬೇತಿ (ಡಿಎಸ್‌ಟಿ) ಯೋಜನೆಯನ್ನು ಕನಿಷ್ಠ 1000 ಐಟಿಐಗಳಿಗೆ ಹೆಚ್ಚಿಸುತ್ತಿದೆ. ಡಿಎಸ್‌ಟಿ ಜರ್ಮನ್ ವಿಧಾನದಿಂದ ಪ್ರೇರಿತವಾದ ತರಬೇತಿಯ ಒಂದು ಮಾದರಿಯಾಗಿದೆ ಮತ್ತು ವಿವಿಧ ಐಟಿಐಗಳ ವಿದ್ಯಾರ್ಥಿಗಳಿಗೆ ಉದ್ಯಮ ನೇತೃತ್ವದ ತರಬೇತಿಗಳ ಮೂಲಕ ಉದ್ಯಮಕ್ಕೆ ಒಡ್ಡಿಕೊಳ್ಳುತ್ತದೆ. ಮೊದಲ 100 ದಿನಗಳಲ್ಲಿ, 40 ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು (ಎನ್‌ಎಸ್‌ಟಿಐ) ಸಹಭಾಗಿತ್ವ ಒಪ್ಪಂದಗಳಿಗೆ ಸಹಿ ಹಾಕಿದ್ದು, 739 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕೋರ್ಸ್‌ನ ಪ್ರಾಯೋಗಿಕ ತರಬೇತಿ ಭಾಗದ ಅವಧಿಯನ್ನು ಸಹ ಉದ್ಯಮದ ವೇಳಾಪಟ್ಟಿಗೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಸಿಟಿಎಸ್ ಅಡಿಯಲ್ಲಿರುವ ಎಲ್ಲಾ 138 ಪ್ಲಸ್ ಕೋರ್ಸ್‌ಗಳನ್ನು ಡಿಎಸ್‌ಟಿಯ ವ್ಯಾಪ್ತಿಗೆ ತರಲಾಗಿದೆ, ಈ ಮೊದಲು ಕೇವಲ 17 ಕೋರ್ಸ್‌ಗಳು ಇದ್ದವು. 3 ನೇ ಶಿಫ್ಟ್‌ನಲ್ಲಿ ಡಿಟಿಡಿ ಅಂಗಸಂಸ್ಥೆಯೊಂದಿಗೆ ಡಿಎಸ್‌ಟಿ ಅಡಿಯಲ್ಲಿ ತರಬೇತಿ ನೀಡಲು ಐಟಿಐಗಳಿಗೆ ಪ್ರತ್ಯೇಕವಾಗಿ ಅನುಮತಿ ಇದೆ.

31. ನವ ಯುಗದ ಕೌಶಲ್ಯಗಳು: ಸಮಯ ಹೊಂದಾಣಿಕೆಯ ಪ್ರಯತ್ನದಲ್ಲಿ, ಎಂಎಸ್‌ಡಿಇ 12 ಎನ್‌ಎಸ್‌ಟಿಐಗಳಲ್ಲಿ ನವ ಯುಗದ ಕೋರ್ಸ್‌ಗಳನ್ನು ಸಹ ಪ್ರಾರಂಭಿಸಿದೆ. ಇವುಗಳಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ - ಸ್ಮಾರ್ಟ್ ಹೆಲ್ತ್‌ಕೇರ್; ಇಂಟರ್ನೆಟ್ ಆಫ್ ಥಿಂಗ್ಸ್ - ಸ್ಮಾರ್ಟ್ ಸಿಟಿಗಳು; 3 ಡಿ ಮುದ್ರಣ; ಡ್ರೋನ್ ಪೈಲಟ್‌ಗಳು; ಸೌರ ತಂತ್ರಜ್ಞರು ಮತ್ತು ಜಿಯೋ ಇನ್ಫಾರ್ಮ್ಯಾಟಿಕ್ಸ್ ಸೇರಿವೆ.

32. ಜಿಲ್ಲಾ ಕೌಶಲ್ಯ ಸಮಿತಿಗಳ ರಚನೆ: ಅದರ ವಿವಿಧ ಸುಧಾರಣೆಗಳೊಂದಿಗೆ ದೇಶದ ತಳಮಟ್ಟವನ್ನು ತಲುಪಲು ಮತ್ತು ಪ್ರತಿಯೊಬ್ಬರನ್ನು ಸಬಲೀಕರಣಗೊಳಿಸುವ ಸಲುವಾಗಿ, ಸಚಿವಾಲಯವು ತನ್ನ ಮಹತ್ವಾಕಾಂಕ್ಷೆಯ ಕೌಶಲ್ಯ ಅಭಿಯಾನದ ಅಂಗವಾಗಿ ವಿಶ್ವ ಬ್ಯಾಂಕ್‌ನಿಂದ ಧನಸಹಾಯ ಪಡೆದ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕೌಶಲ್ಯ ಸಮಿತಿಗಳನ್ನು (ಡಿಎಸ್‌ಸಿ) ರಚಿಸಿದೆ. ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಅಂತರವನ್ನು ಮತ್ತಷ್ಟು ಗುರುತಿಸಲು ಮತ್ತು ನಂತರ ಸ್ಥಳೀಯ ಮಾರುಕಟ್ಟೆ ಚಾಲಿತ ಕೌಶಲ್ಯ ಅಭಿವೃದ್ಧಿ ಅವಕಾಶಗಳಿಗಾಗಿ ವ್ಯವಸ್ಥೆಯನ್ನು ಬಲಪಡಿಸಲು ಎಂಎಸ್‌ಡಿಇ ಈ ಜಿಲ್ಲಾ ಕೌಶಲ್ಯ ಸಮಿತಿಗಳನ್ನು ತರಬೇತಿ ನಿರ್ದೇಶನಾಲಯದ (ಡಿಜಿಟಿ) ಮೂಲಕ ನಿರ್ವಹಿಸುತ್ತಿದೆ.

33. ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್ (ಎಂಎನ್‌ಜಿಎಫ್): ಎಂಎಸ್‌ಡಿಇ 6 ರಾಜ್ಯಗಳ 75 ಜಿಲ್ಲೆಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್ (ಎಂಎನ್‌ಜಿಎಫ್) ಅನ್ನು ಸ್ಫಾಪಿಸಿದೆ. ಇದರಡಿಯಲ್ಲಿ 75 ಯುವ ವೃತ್ತಿಪರರನ್ನು ಆಯ್ಕೆ ಮಾಡಲಾಗುವುದು ಮತ್ತು ಕೌಶಲ್ಯ / ದತ್ತಾಂಶ / ಮಾಹಿತಿಯ ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳ ಮೇಲ್ವಿಚಾರಣೆ, ಜಿಲ್ಲಾ ಕೌಶಲ್ಯಕ್ಕೆ ಜಿಲ್ಲೆಗಳ ಸಹಾಯದಲ್ಲಿ ವಿವಿಧ ಪಾಲುದಾರರ ನಡುವೆ ಸಮನ್ವಯ, ಅಭಿವೃದ್ಧಿ ಸಮಿತಿಯ ಜಿಲ್ಲಾ ಮಟ್ಟದ ಯೋಜನೆಯಲ್ಲಿ ಜಿಲ್ಲಾ ಅಧಿಕಾರಿಗಳಿಗೆ ನೆರವಾಗಲು ಗುರುತಿಸಲಾದ 75 ಜಿಲ್ಲೆಗಳಲ್ಲಿ ಇವರನ್ನು ನಿಯೋಜಿಸಲಾಗುವುದು.

34. ಭಾರತೀಯ ಕೌಶಲ್ಯ ಅಭಿವೃದ್ಧಿ ಸೇವೆಗಳು (ಐಎಸ್‌ಡಿಎಸ್): ದೇಶದ ಯುವಕರ ಕೌಶಲ್ಯವು ಅರ್ಹವಾದ ಪ್ರಾಮುಖ್ಯತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಭಾರತೀಯ ಕಂದಾಯ ಸೇವೆ ಅಥವಾ ಪೋಸ್ಟ್ ಮತ್ತು ಟೆಲಿಗ್ರಾಫ್ ಸೇವೆಯಂತಹ ಹೊಸ ಆಡಳಿತಾತ್ಮಕ ಸೇವೆಯನ್ನು ರೂಪಿಸಿದೆ. ಎಂಎಸ್‌ಡಿಇ ಅಧಿಸೂಚನೆಯ ಮೂಲಕ ಭಾರತೀಯ ಕೌಶಲ್ಯ ಅಭಿವೃದ್ಧಿ ಸೇವೆಗಳನ್ನು (ಐಎಸ್‌ಡಿಎಸ್) ರಚಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ತರಬೇತಿ ನಿರ್ದೇಶನಾಲಯಕ್ಕೆ ಈ ಸೇವೆಯನ್ನು ಸ್ಥಾಪಿಸಲಾಗಿದೆ. ಐಎಸ್‌ಡಿಎಸ್ ಯುಪಿಎಸ್ಸಿ ನಡೆಸುವ ಭಾರತೀಯ ಎಂಜಿನಿಯರಿಂಗ್ ಸೇವಾ ಪರೀಕ್ಷೆಯ ಮೂಲಕ ಇಂಡಕ್ಷನ್ ನಡೆಯುವ ಗುಂಪು ‘ಎ’ ಸೇವೆಯಾಗಲಿದೆ. ಕೇಂದ್ರ ಸರ್ಕಾರದ ನೂತನ ಸೇವೆಗಳ ಹೊಸ ತಂಡವು, ಭಾರತೀಯ ಕೌಶಲ್ಯ ಅಭಿವೃದ್ಧಿ ಸೇವೆಗಳು ತಮ್ಮ ತರಬೇತಿ ಕಾರ್ಯಕ್ರಮವನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ) ಸೆಪ್ಟೆಂಬರ್ 9, 2019 ರಂದು ಪ್ರಾರಂಭಿಸಿದೆ. ಭಾರತೀಯ ಕೌಶಲ್ಯ ಅಭಿವೃದ್ಧಿ ಸೇವೆ (ಐಎಸ್‌ಡಿಎಸ್) 263 ಅಖಿಲ ಭಾರತ ಹುದ್ದೆಗಳನ್ನು ಹೊಂದಿದೆ. ಕೇಡರ್ ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಗ್ರೇಡ್‌ನಲ್ಲಿ 3, ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಗ್ರೇಡ್‌ನಲ್ಲಿ 28 ಹುದ್ದೆಗಳು, ಸೀನಿಯರ್ ಟೈಮ್ ಸ್ಕೇಲ್‌ನಲ್ಲಿ 120 ಹುದ್ದೆಗಳು ಮತ್ತು ಜೂನಿಯರ್ ಟೈಮ್ ಸ್ಕೇಲ್‌ನಲ್ಲಿ 112 ಹುದ್ದೆಗಳನ್ನು ಒಳಗೊಂಡಿದೆ.

35. ವ್ಯವಹಾರ ಸಖಿಯರು ಎಂಬ ಸಮುದಾಯ ಮಾರ್ಗದರ್ಶಕರು: ಮಹಿಳಾ ಉದ್ಯಮಶೀಲತೆ ಪ್ರೋತ್ಸಾಹಕ್ಕಾಗಿ ಪರಿಚಯಿಸಲಾದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕಲಿಕೆಯ ಆಧಾರದ ಮೇಲೆ, 2018 ರಲ್ಲಿ, ಯುಎನ್‌ಡಿಪಿ, ಎನ್‌ಐಆರ್‌ಡಿಪಿಆರ್ ಮತ್ತು ಟಿಐಎಸ್ಎಸ್ ಸಹಯೋಗದೊಂದಿಗೆ ಎನ್‌ಐಇಎಸ್‌ಬಿಯುಡಿ ಹೊಸ ಪರಿಕಲ್ಪನೆ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ವ್ಯವಹಾರ ಸಖಿಯರು (ಬಿಜ್-ಸಖೀಸ್) ಎಂಬ ಸಮುದಾಯ ಮಾರ್ಗದರ್ಶಕರ ಕೇಡರ್ ಮೂಲಕ ಅದು ಮಾನಸಿಕ-ಸಾಮಾಜಿಕ ಮತ್ತು ವ್ಯವಹಾರ ಮಾರ್ಗದರ್ಶನ ಬೆಂಬಲ ಸೇವೆಗಳನ್ನು ಒದಗಿಸುತ್ತಿದೆ. ಇನ್ಇಎ ಸಮಾರಂಭದ ಸಂದರ್ಭದಲ್ಲಿ ನವೆಂಬರ್ 9, 2019 ರಂದು ಪಠ್ಯಕ್ರಮವನ್ನು ಬಿಡುಗಡೆ ಮಾಡಲಾಯಿತು. ಈ ಮಾರ್ಗದರ್ಶಕರು ಹಿಂದುಳಿದ (ಉದಾಹರಣೆಗೆ ಹಣಕಾಸು ಸಂಸ್ಥೆಗಳೊಂದಿಗೆ) ಮತ್ತು ಮುಂದುವರೆದ(ಹೆಚ್ಚು ಲಾಭದಾಯಕ ವ್ಯಾಪಾರ ಕಲ್ಪನೆಗಳು ಮತ್ತು ಮಾರುಕಟ್ಟೆಯೊಂದಿಗೆ) ಸಂಪರ್ಕಗಳನ್ನು ಒದಗಿಸುತ್ತಾರೆ. ಮಹಿಳೆ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಉಳಿಸಿಕೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮದರ್ಭದಲ್ಲಿ ಮಾರ್ಗದರ್ಶಿಯು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಹೆಚ್ಚು ಅಗತ್ಯವಾದ ಮಾನಸಿಕ ಬೆಂಬಲವನ್ನು ಒದಗಿಸುತ್ತಾರೆ. ಅವರು ಉದ್ಯಮ ಅಭಿವೃದ್ಧಿಗೆ ಸಮುದಾಯ ಆಧಾರಿತ ವ್ಯವಹಾರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.

36. ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ: ಐಟಿಐ ಅಧ್ಯಾಪಕರಿಗೆ ಐದು ದಿನಗಳ ಟಿಒಟಿ ಕಾರ್ಯಕ್ರಮಗಳ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಉದ್ಯೋಗಿಗಳ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ತರಬೇತುದಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಪಿಎಂಕೆವಿವೈನ 4068 ತರಬೇತುದಾರರಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಆಯೋಜಿಸಲಾಗಿದೆ. ಈ ಸಂಸ್ಥೆ ಒಬಿಸಿ / ಎಸ್‌ಸಿ / ಎಸ್‌ಟಿ / ಪೌರ ಕಾರ್ಮಿಕರು ಮತ್ತು ಮಹಿಳೆಯರಿಂದ ಹೆಚ್ಚು ಅಗತ್ಯವಿರುವ ನುರಿತ ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

37. ಜನಶಿಕ್ಷಣ ಸಂಸ್ಥಾನ್ ಗೆ ಎಂಐಎಸ್ ಪೋರ್ಟಲ್ ಆರಂಭ: ಜನಶಿಕ್ಷಣ ಸಂಸ್ಥಾನ್ (ಜೆಎಸ್ಎಸ್) ಗಳಿಗಾಗಿ ಎಂಐಎಸ್ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಸ್ಕೀಮ್ ಕಾರ್ಯಾಚರಣೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಹಾರದ ಅಳವಡಿಕೆ ಮತ್ತು ಅನುಷ್ಠಾನದ ಪ್ರಯೋಜನಗಳನ್ನು ಮೇಲ್ವಿಚಾರಣೆ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಲಾಗಿದೆ. ಸಚಿವಾಲಯವು ಈಗ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಜೆಎಸ್ಎಸ್ ವ್ಯವಸ್ಥೆ ಸ್ಥಾಪಿಸಲು ಯೋಜಿಸಿದೆ.

38. ಇ-ಸ್ಕಿಲ್ ಇಂಡಿಯಾ ಪ್ಲಾಟ್‌ಫಾರ್ಮ್: ತಂತ್ರಜ್ಞಾನ ಚಾಲಿತ ವಾತಾವರಣದಲ್ಲಿ, ಭಾರತೀಯ ಯುವಕರಿಗೆ ಕೌಶಲ್ಯಗಳ ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಇ-ಲರ್ನಿಂಗ್ ಪ್ರಮುಖವಾಗಿದೆ. ಎನ್‌ಎಸ್‌ಡಿಸಿಯು ಬಹುಭಾಷಾ ಇ-ಲರ್ನಿಂಗ್ ಅಗ್ರಿಗೇಟರ್ ಪೋರ್ಟಲ್, ಇ-ಸ್ಕಿಲ್ ಇಂಡಿಯಾವನ್ನು ಸ್ಥಾಪಿಸಿದೆ. ಇದು ಭಾರತೀಯ ಯುವಕರಿಗೆ ಇ-ಸ್ಕಿಲ್ಲಿಂಗ್ ಅವಕಾಶಗಳನ್ನು ಒದಗಿಸುತ್ತದೆ. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಎನ್‌ಎಸ್‌ಡಿಸಿಯ ಬದ್ಧತೆಯನ್ನು ಹಂಚಿಕೊಳ್ಳುವ ಪ್ರಮುಖ ಜ್ಞಾನ ಸಂಸ್ಥೆಗಳಿಂದ ಆನ್‌ಲೈನ್ ಕೋರ್ಸ್‌ಗಳನ್ನು ಕ್ರೋಢೀಕರಿಸುವ ಮೂಲಕ ಆನ್‌ಲೈನ್ ಕಲಿಕೆಯಲ್ಲಿ ಭಾರತೀಯ ಮತ್ತು ಜಾಗತಿಕ ನಾಯಕರ ಕೌಶಲ್ಯ ಅವಕಾಶಗಳನ್ನು ಇ-ಸ್ಕಿಲ್ ಇಂಡಿಯಾ ಬಳಸಿಕೊಳ್ಳುತ್ತದೆ. ಇ-ಸ್ಕಿಲ್ ಇಂಡಿಯಾ ಸ್ಥಳ ಮತ್ತು ಸಮಯದ ಗಡಿಯನ್ನು ಮೀರಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಕೌಶಲ್ಯವನ್ನು ಒದಗಿಸುತ್ತದೆ. ಇಂದು, ಇ-ಸ್ಕಿಲ್ ಇಂಡಿಯಾವು ಆನ್‌ಬೋರ್ಡ್‌ ಸಂಸ್ಥೆಗಳಾದ ಟಿಸಿಎಸ್, ಬೆಟರ್ ಯು, ಐಬಿಎಂ, ಎಸ್‌ಎಎಸ್, ಬಿಎಸ್‌ಇ, ಅಪೊಲೊ ಮೆಡ್‌ವಾರ್ಸಿಟಿ, ಎಂಗುರು, ಅಮೃತ ಟೆಕ್ನಾಲಜೀಸ್, ಐಪ್ರೀಮ್ಡ್, ವಾಧ್ವಾನಿ ಫೌಂಡೇಶನ್, ಇಂಗ್ಲಿಷ್ ಎಡ್ಜ್, ಫೇರ್ ಮತ್ತು ಲವ್ಲಿ, ಎಐಎಫ್‌ಎಂಬಿ, ಇತ್ಯಾದಿಗಳು ಕೃಷಿ, ಆರೋಗ್ಯ ರಕ್ಷಣೆ, ಟೆಲಿಕಾಂ, ಉದ್ಯೋಗ, ನಿರ್ವಹಣೆ, ಚಿಲ್ಲರೆ ವ್ಯಾಪಾರ, ಫಾರ್ಮಾ, ಬ್ಯಾಂಕಿಂಗ್ ಮತ್ತು ಹಣಕಾಸು, ದತ್ತಾಂಶ ವಿಜ್ಞಾನ, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಕೋರ್ಸ್ ಗಳನ್ನು ಆರಂಭಿಸಿವೆ. ಕೋರ್ಸ್‌ಗಳು ಇಂಗ್ಲಿಷ್, ಹಿಂದಿ ಮತ್ತು 9 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿವೆ. ಕಲಿಯುವವರಿಗೆ ಸ್ವಯಂ-ಗತಿಯ ಸಂವಾದಾತ್ಮಕ ವೀಡಿಯೊಗಳು ಮತ್ತು ರಸಪ್ರಶ್ನೆಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ.(Release ID: 1597322) Visitor Counter : 97