ಸಂಪುಟ

15ನೇ ಹಣಕಾಸು ಆಯೋಗದ ವ್ಯಾಪ್ತಿ ಮತ್ತು ಅವಧಿ ವಿಸ್ತರಣೆ ಹಾಗೂ ಹಣಕಾಸು ಆಯೋಗದಿಂದ ಎರಡು ವರದಿಗಳ ಸಲ್ಲಿಕೆ ಅವಧಿ ವಿಸ್ತರಣೆಗೆ ಸಂಪುಟದ ಅನುಮೋದನೆ

Posted On: 27 NOV 2019 11:15AM by PIB Bengaluru

15ನೇ ಹಣಕಾಸು ಆಯೋಗದ ವ್ಯಾಪ್ತಿ ಮತ್ತು ಅವಧಿ ವಿಸ್ತರಣೆ ಹಾಗೂ ಹಣಕಾಸು ಆಯೋಗದಿಂದ ಎರಡು ವರದಿಗಳ ಸಲ್ಲಿಕೆ ಅವಧಿ ವಿಸ್ತರಣೆಗೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 15ನೇ ಹಣಕಾಸು ಆಯೋಗಕ್ಕೆ ತನ್ನ ಮೊದಲ ಹಣಕಾಸು ವರ್ಷದ ಅಂದರೆ 2020-21ನೇ ಸಾಲಿನ ಮೊದಲ ವರದಿ ಸಲ್ಲಿಸಲು ಹಾಗೂ 2021-22ರಿಂದ 2025-26 ಒಳಗೊಂಡಂತೆ ಅಂತಿಮ ವರದಿಯನ್ನು ಸಲ್ಲಿಸಲು 2020ರ ಅಕ್ಟೋಬರ್ 30ರ ವರೆಗೆ ವಿಸ್ತರಿಸಲು 15ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.

ಈ ಅವಧಿ ವಿಸ್ತರಣೆಯಿಂದ ಆಯೋಗವು ಹಲವು ಹಣಕಾಸು ಯೋಜನೆಗಳ ಅಂದಾಜುಗಳನ್ನು ಪರಿಶೀಲಿಸಲು ಮತ್ತು ಸುಧಾರಣೆಗಳನ್ನು ತರಲು ಮತ್ತು 2020ರಿಂದ 2026ರ ನಡುವಿನ ಅವಧಿಗೆ ಹಲವು ಶಿಫಾರಸ್ಸುಗಳನ್ನು ಅಂತಿಮಗೊಳಿಸಲು ನೆರವಾಗಲಿದೆ.

ಹಣಕಾಸು ಆಯೋಗ, ಚುನಾವಣಾ ನೀತಿ ಸಂಹಿತೆ ನಿರ್ಬಂಧದಿಂದಾಗಿ ಇತ್ತೀಚೆಗಷ್ಟೇ ರಾಜ್ಯಗಳ ಭೇಟಿಯನ್ನು ಪೂರ್ಣಗೊಳಿಸಿದೆ. ಆ ಅವಧಿಯಲ್ಲಿ ರಾಜ್ಯಗಳ ಬೇಡಿಕೆಗಳ ಬಗ್ಗೆ ವಿಸ್ತೃತ ಅಂದಾಜು ಕಾರ್ಯವನ್ನು ಆಯೋಗ ಕೈಗೊಂಡಿದೆ.

ಆಯೋಗದ ನಿಯಮ ಮತ್ತು ಉಲ್ಲೇಖಗಳು ಅತ್ಯಂತ ವಿಸ್ತೃತ ಸ್ವರೂಪದ್ದಾಗಿವೆ, ರಾಜ್ಯಗಳ ಅಗತ್ಯತೆಗಳನ್ನು ಪಟ್ಟಿಮಾಡಲು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಾಲಾವಧಿ ಅಗತ್ಯವಿದೆ.

ಆಯೋಗದ ಅವಧಿಯ ವ್ಯಾಪ್ತಿ ಹೆಚ್ಚಳ ಉದ್ದೇಶದಿಂದ ಆಯೋಗದ ಶಿಫಾರಸ್ಸುಗಳಿಗೂ ಅನ್ವಯವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಧ್ಯಮಾವಧಿಯ ಸಂಪನ್ಮೂಲ ಬಳಕೆ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ. ಏಪ್ರಿಲ್ 1, 2021ರ ನಂತರವೂ 5 ವರ್ಷಗಳ ಕಾಲ ಆಯೋಗದ ಲಭ್ಯತೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಧ್ಯಮಾವಧಿಯಿಂದ ದೀರ್ಘಾವಧಿಯ ಹಣಕಾಸು ಯೋಜನೆಗಳನ್ನು ರೂಪಿಸಲು ಮತ್ತು ಮಧ್ಯ ಅವಧಿಯಲ್ಲಿ ಯೋಜನೆಗಳ ಮೌಲ್ಯಮಾಪನ ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಲು ಸಮಯಾವಕಾಶ ಮತ್ತು ಸಹಾಯವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮ 2020-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಯ ವೇಳೆಗೆ ಅಗತ್ಯ ದತ್ತಾಂಶ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 

*****



(Release ID: 1593731) Visitor Counter : 116