ಸಂಪುಟ
ಪ್ರಸ್ತುತ ಈಗಿರುವ ನಿಯಮಗಳು ಮತ್ತು ಷರತ್ತುಗಳೊಂದಿಗೆ ಅಸ್ತಿತ್ವದಲ್ಲಿರುವ ಔಷಧಿ ಖರೀದಿ ನೀತಿ (ಪಿಪಿಪಿ) ಯ ವಿಸ್ತರಣೆ / ನವೀಕರಣವನ್ನು ಒಂದು ಹೆಚ್ಚುವರಿ ಉತ್ಪನ್ನವನ್ನು ಸೇರಿಸಿ ಕ್ಯಾಬಿನೆಟ್ ಅನುಮೋದಿಸಿತು. ಆಲ್ಕೊಹಾಲಿಕ್ ಹ್ಯಾಂಡ್ ಡಿಸ್ಇನ್ಫೆಕ್ಟಂಟ್ (ಸೋಂಕುನಿವಾರಕ ) (ಎಎಚ್ಡಿ) ಅಸ್ತಿತ್ವದಲ್ಲಿರುವ 103 ಔಷಧಿಗಳ ಪಟ್ಟಿಗೆ ಸೇರಿಸಲಾಗಿದ್ದು , ಇದು ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳ ಅಂತಿಮ ಮುಚ್ಚುವಿಕೆ / ಬಂಡವಾಳ ಹಿಂತೆಗೆತದವರೆವಿಗೂ ಇರುತ್ತದೆ
Posted On:
20 NOV 2019 10:46PM by PIB Bengaluru
ಪ್ರಸ್ತುತ ಈಗಿರುವ ನಿಯಮಗಳು ಮತ್ತು ಷರತ್ತುಗಳೊಂದಿಗೆ ಅಸ್ತಿತ್ವದಲ್ಲಿರುವ ಔಷಧಿ ಖರೀದಿ ನೀತಿ (ಪಿಪಿಪಿ) ಯ ವಿಸ್ತರಣೆ / ನವೀಕರಣವನ್ನು ಒಂದು ಹೆಚ್ಚುವರಿ ಉತ್ಪನ್ನವನ್ನು ಸೇರಿಸಿ ಕ್ಯಾಬಿನೆಟ್ ಅನುಮೋದಿಸಿತು. ಆಲ್ಕೊಹಾಲಿಕ್ ಹ್ಯಾಂಡ್ ಡಿಸ್ಇನ್ಫೆಕ್ಟಂಟ್ (ಸೋಂಕುನಿವಾರಕ ) (ಎಎಚ್ಡಿ) ಅಸ್ತಿತ್ವದಲ್ಲಿರುವ 103 ಔಷಧಿಗಳ ಪಟ್ಟಿಗೆ ಸೇರಿಸಲಾಗಿದ್ದು , ಇದು ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳ ಅಂತಿಮ ಮುಚ್ಚುವಿಕೆ / ಬಂಡವಾಳ ಹಿಂತೆಗೆತದವರೆವಿಗೂ ಇರುತ್ತದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಸಾರ್ವಜನಿಕವಲಯದ ಉದ್ಯಮಗಳ ಮುಚ್ಚುವ / ಬಂಡವಾಳ ಹಿಂತೆಗೆತ ಮಾಡುವವರೆಗೆ ಕೇಂದ್ರ ಸಾರ್ವಜನಿಕ ವಲಯದ ಔಷಧೀಯ ಉದ್ಯಮಗಳಿಗೆ (ಸಿಪಿಎಸ್ಯು) ಔಷಧಿ ಖರೀದಿ ನೀತಿ (ಪಿಪಿಪಿ) ವಿಸ್ತರಣೆ / ನವೀಕರಣಕ್ಕೆ ಅನುಮೋದನೆ ನೀಡಿದೆ.
ಪ್ರಮುಖ ಪರಿಣಾಮ
ಕಾರ್ಯನೀತಿಯ ವಿಸ್ತರಣೆ / ನವೀಕರಣವು ಕೇಂದ್ರದ ಸಾರ್ವಜನಿಕ ವಲಯದ ಔಷಧಿ ಉದ್ಯಮಗಳಿಗೆ ತಮ್ಮಲ್ಲಿರುವ ಸೌಲಭ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ, ತಮ್ಮ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸುವ ಸಲುವಾಗಿ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ, ದುಬಾರಿ, ಅತ್ಯಾಧುನಿಕ ಯಂತ್ರೋಪಕರಣಗಳನ್ನು ಚಾಲನೆಯಲ್ಲಿರುವ ಸ್ಥಿತಿಯಲ್ಲಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಆ ಸಮಯದಲ್ಲಿ ಹೆಚ್ಚಿನ ಲಾಭ ಬರುತ್ತದೆ ಉದ್ಯಮಗಳ ಮುಚ್ಚುವ / ಬಂಡವಾಳ ಹಿಂತೆಗೆತ ಮಾಡುವ ಸಂದರ್ಭದಲ್ಲಿ ಉತ್ತಮ ಮೌಲ್ಯವು ಇರುತ್ತದೆ.
ಹಿನ್ನೆಲೆ
- ಸಾರ್ವಜನಿಕ ವಲಯದ ಔಷಧಿ ಉದ್ಯಮಗಳು ಮತ್ತು ಅವುಗಳ ಅಂಗಸಂಸ್ಥೆಗಳು ತಯಾರಿಸಿದ 103 ಔಷಧಿಗಳಿಗೆ ಸಂಬಂಧಿಸಿದಂತೆ ಐದು ವರ್ಷಗಳ ಅವಧಿಗೆ ಔಷಧಿ ಖರೀದಿ ನೀತಿ (ಪಿಪಿಪಿ) ಯನ್ನು 30.10.2013 ರಂದು ಕ್ಯಾಬಿನೆಟ್ ಅನುಮೋದಿಸಿತು. ಈ ನೀತಿಯು ಕೇಂದ್ರ / ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಅವುಗಳ ಸಾರ್ವಜನಿಕ ವಲಯದ ಸಂಸ್ಥೆಗಳು ಮಾಡುವ ಖರೀದಿಗೆ ಅನ್ವಯಿಸುತ್ತದೆ. ಉತ್ಪನ್ನಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್ಪಿಪಿಎ)ವು ನಿಗದಿ ಮಾಡುತ್ತದೆ. ಕೇಂದ್ರದ ಸಾರ್ವಜನಿಕ ವಲಯದ ಔಷಧಿ ಉದ್ಯಮಗಳು ಮತ್ತು ಅವರ ಅಂಗಸಂಸ್ಥೆಗಳಿಂದ ಘಟಕ / ಸಂಸ್ಥೆಯು ಖರೀದಿಸಬಹುದು. ಇದು ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳ ವೇಳಾಪಟ್ಟಿ ‘ಎಂ’ ಪ್ರಕಾರ ಅವರ ಉತ್ತಮ ಉತ್ಪಾದನಾ ಅಭ್ಯಾಸಗಳ (ಜಿಎಂಪಿ) ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಈ ಕಾರ್ಯನೀತಿಯ ಅವಧಿಯು 09.12.2018 ರಂದು ಮುಕ್ತಾಯಗೊಂಡಿದೆ.
- ನಡುವೆ, ಇಂಡಿಯನ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ ಲಿಮಿಟೆಡ್ (ಐಡಿಪಿಎಲ್) ಮತ್ತು ರಾಜಸ್ಥಾನ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಆರ್ಡಿಪಿಎಲ್) ಅನ್ನು ಮುಚ್ಚಲು ಮತ್ತು ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮತ್ತು ಬೆಂಗಾಲ್ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ ಲಿಮಿಟೆಡ್ (ಬಿಸಿಪಿಎಲ್) ಗಳನ್ನು ಅವುಗಳ ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಿ ಬರುವ ಆದಾಯದಿಂದ ಬಾಧ್ಯತೆಗಳನ್ನು ಪೂರೈಸಿದ ನಂತರ ಮಾರಾಟ ಮಾಡಲು ಸಚಿವ ಸಂಪುಟ 28.12.2016 ರಂದು ನಿರ್ಧರಿಸಿತು. ತರುವಾಯ, 14.06.2018 ರ ಪರಿಷ್ಕೃತ ಸಾರ್ವಜನಿಕ ಉದ್ಯಮಗಳ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಲು ಅನುಮತಿ ನೀಡುವ ತನ್ನ ನಿರ್ಧಾರವನ್ನು 17.07.2019 ರಂದು ಸಂಪುಟವು ಮಾರ್ಪಡಿಸಿತು. ಪ್ರತ್ಯೇಕವಾಗಿ, ಐದನೆಯ ಕೇಂದ್ರದ ಸಾರ್ವಜನಿಕ ಉದ್ಯಮವಾದ ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಕೆಎಪಿಎಲ್) ನಲ್ಲಿನ 100% ಹೂಡಿಕೆಯನ್ನು ಹಿಂತೆಗೆಯಲು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಪ್ರತ್ಯೇಕವಾಗಿ 01.11.2017 ರಂದು ನಿರ್ಧರಿಸಿತು.
ಕೇಂದ್ರದ ಸಾರ್ವಜನಿಕ ವಲಯದ ಔಷಧಿ ಉದ್ಯಮಗಳ ಅಂತಿಮ ಮುಚ್ಚುವಿಕೆ / ಮಾರಾಟದವರೆಗೆ ಕಾರ್ಯನೀತಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
(Release ID: 1593078)
Visitor Counter : 135