ಪ್ರಧಾನ ಮಂತ್ರಿಯವರ ಕಛೇರಿ

11 ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರೊಂದಿಗೆ ಪ್ರಧಾನಿ ಭೇಟಿ

Posted On: 14 NOV 2019 5:24AM by PIB Bengaluru

11 ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರೊಂದಿಗೆ ಪ್ರಧಾನಿ ಭೇಟಿ


13ನೇ ನವೆಂಬರ್ 2019 ರಂದು ಬ್ರೆಸಿಲಿಯಾದಲ್ಲಿ ನಡೆದ 11 ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಭೇಟಿಯಾದರು.

2020 ರ ಗಣರಾಜ್ಯೋತ್ಸವ ಸಮಾರಮಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಬ್ರೆಜಿಲ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದರು. ಬ್ರೆಜಿಲ್ ಅಧ್ಯಕ್ಷರು ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಉಭಯ ದೇಶಗಳು ಕಾರ್ಯತಂತ್ರದ ಸಹಭಾಗಿತ್ವವನ್ನು ಸಮಗ್ರವಾಗಿ ಹೆಚ್ಚಿಸಬಹುದು ಎಂದು ಉಭಯ ನಾಯಕರು ಒಪ್ಪಿಕೊಂಡರು. ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಕೃಷಿ ಉಪಕರಣಗಳು, ಪಶುಸಂಗೋಪನೆ, ಕಟಾವಿನ ನಂತರದ ತಂತ್ರಜ್ಞಾನಗಳು ಮತ್ತು ಜೈವಿಕ ಇಂಧನಗಳು ಸೇರಿದಂತೆ ಬ್ರೆಜಿಲ್ನಿಂದ ಸಂಭಾವ್ಯ ಹೂಡಿಕೆಯ ಕ್ಷೇತ್ರಗಳನ್ನು ಅವರುವಿವರಿಸಿದರು.

ಬ್ರೆಜಿಲ್ ಅಧ್ಯಕ್ಷರು ಇದಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು ಮತ್ತು ಉದ್ಯಮ ನಿಯೋಗವು ಅವರೊಂದಿಗೆ ಭಾರತಕ್ಕೆ ಬರಲಿದೆ ಎಂದು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಸಹಕಾರದ ಇತರ ಕ್ಷೇತ್ರಗಳ ಬಗ್ಗೆಯೂ ಅವರು ಚರ್ಚಿಸಿದರು. ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ಪ್ರಯಾಣ ನೀಡುವ ಅಧ್ಯಕ್ಷರ ನಿರ್ಧಾರವನ್ನು ಪ್ರಧಾನಿಯವರು ಸ್ವಾಗತಿಸಿದರು.



(Release ID: 1592719) Visitor Counter : 159