ಪ್ರಧಾನ ಮಂತ್ರಿಯವರ ಕಛೇರಿ

ಮಾರಿಷಸ್‌ನ ಪ್ರಧಾನ ಮಂತ್ರಿ ಜುಗ್ನೌಥ್ ಅವರಿಗೆ ಪ್ರಧಾನ ಮಂತ್ರಿ ಮೋದಿಯವರ ಅಭಿನಂದನಾ ದೂರವಾಣಿ ಕರೆ

Posted On: 09 NOV 2019 7:28PM by PIB Bengaluru

ಮಾರಿಷಸ್‌ನ ಪ್ರಧಾನ ಮಂತ್ರಿ ಜುಗ್ನೌಥ್ ಅವರಿಗೆ ಪ್ರಧಾನ ಮಂತ್ರಿ ಮೋದಿಯವರ ಅಭಿನಂದನಾ ದೂರವಾಣಿ ಕರೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್‌ನ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನೌಥ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಅವರು ಜಯಗಳಿಸಿದ್ದಕ್ಕಾಗಿ ಅಭಿನಂದಿಸಿದರು.

ಮಾರಿಷಸ್ ಜನರು ಪ್ರಧಾನಿ ಜುಗ್ನೌಥ್ ಅವರ ನಾಯಕತ್ವದಲ್ಲಿ ತಮ್ಮ ನಂಬಿಕೆಯನ್ನು ಪುನರಾವರ್ತಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು. ಇದು ಅವರ ಮಾರಿಷಿಯನ್ ಸರ್ಕಾರದ ಅಭಿವೃದ್ಧಿ ಆಧಾರಿತ ನೀತಿಗಳಿಗೆ ಜನರ ಬೆಂಬಲವನ್ನು ಧೃಡ ಪಡಿಸಿದೆ. ಪರಸ್ಪರ ಲಾಭಕ್ಕಾಗಿ ಉಭಯ ದೇಶಗಳ ನಡುವೆ ನಿಕಟ ಮತ್ತು ವ್ಯಾಪಕವಾದ ಸಹಕಾರವನ್ನು ಮುಂದುವರೆಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಪ್ರಧಾನಿ ಜುಗ್ನೌಥ್ ಅವರು ಪ್ರಧಾನ ಮಂತ್ರಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದೊಂದಿಗಿನ ಈ ವಿಶೇಷ ಸಂಬಂಧವನ್ನು ಮತ್ತು ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಆಪ್ರವಾಸಿ ದಿವಸ್ ಸಂಭ್ರಮಾಚರಣೆಯಲ್ಲಿ ಉತ್ತರಪ್ರದೇಶದ ರಾಜ್ಯಪಾಲರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದವನ್ನು ಅರ್ಪಿಸಿದರು.

ಪ್ರಧಾನ ಮಂತ್ರಿ ಜುಗ್ನಾಥ್ ಅವರು ಆದಷ್ಟು ಬೇಗ ಅವರ ಅನುಕೂಲಕ್ಕೆ ತಕ್ಕಂತೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿದರು.



(Release ID: 1592686) Visitor Counter : 66