ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರ ಸಂಪುಟ ಕಾರ್ಯದರ್ಶಿಗಳಿಂದ ವಾಯು ಮಾಲಿನ್ಯ ಪರಿಸ್ಥಿತಿ ಕುರಿತು ಅವಲೋಕನ

Posted On: 05 NOV 2019 7:58PM by PIB Bengaluru

ಕೇಂದ್ರ ಸಂಪುಟ ಕಾರ್ಯದರ್ಶಿಗಳಿಂದ ವಾಯು ಮಾಲಿನ್ಯ ಪರಿಸ್ಥಿತಿ ಕುರಿತು ಅವಲೋಕನ
 

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಭಾನುವಾರದ ವರೆಗೆ ಕೈಗೊಳ್ಳಲಾದ ಕ್ರಮಗಳ ಕುರಿತು ಇಂದು ಸಂಪುಟ ಕಾರ್ಯದರ್ಶಿಗಳು ಅವಲೋಕನಗೈದರು.

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದು ಮುಂದುವರಿದಿದ್ದು ಕಂಡು ಬಂದಿದೆ ಮತ್ತು ಇದರ ಹತೋಟಿಗೆ ಇನ್ನಷ್ಟು ತೀವ್ರ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ

ಈ ರಾಜ್ಯಗಳಲ್ಲಿ ಈಗ ಕಾನೂನು ಉಲ್ಲಂಘಿಸಿದವ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೂಕ್ತ ದಂಡ ವಿಧಿಸಲು ಹೆಚ್ಚೆಚ್ಚು ನಿಗಾ ತಂಡಗಳನ್ನು ನೇಮಿಸ ಬೇಕು ಎಂದು ನಿರ್ದೇಶಿಸಲಾಗಿದೆ.

ರಾಜಧಾನಿಯಲ್ಲಿ ಪರಿಸ್ಥಿತಿ ನಿರ್ವಹಣೆಗೆ ಶ್ರಮಿಸುತ್ತಿರುವ ವಿವಿಧ ಸಂಘಟನೆಗಳ ಜೊತೆಗೂ ಚರ್ಚಿಸಲಾಯಿತು ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪ್ರಯತ್ನಗಳ ಅವಶ್ಯಕತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಉಭಯ ರಾಜ್ಯಗಳಿಗೆ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿರುವ ಕುರಿತು ಖಚಿತ ಪಡಿಸುವಂತೆ ನಿರ್ದೇಶಿಸಲಾಗಿದೆ.



(Release ID: 1592634) Visitor Counter : 61