ಪ್ರಧಾನ ಮಂತ್ರಿಯವರ ಕಛೇರಿ

ವಿಯೆಟ್ನಾಂನ ಪ್ರಧಾನ ಮಂತ್ರಿಯವರೊಂದಿಗೆ ಪ್ರಧಾನಿ ಮೋದಿ ಸಭೆ

Posted On: 04 NOV 2019 6:43PM by PIB Bengaluru

ವಿಯೆಟ್ನಾಂನ ಪ್ರಧಾನ ಮಂತ್ರಿಯವರೊಂದಿಗೆ ಪ್ರಧಾನಿ ಮೋದಿ ಸಭೆ
 

1. ಬ್ಯಾಂಕಾಕ್ನಲ್ಲಿ ನಡೆದ ಭಾರತ-ಏಷಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ 2019 ರ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 04 ರಂದು ವಿಯೆಟ್ನಾಂ ಪ್ರಧಾನ ಮಂತ್ರಿ ಶ್ರೀ ನ್ಗುಯೆನ್ ಕ್ಸುವಾನ್ ಫುಕ್ ಅವರನ್ನು ಭೇಟಿಯಾದರು.

2. ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸ್ನೇಹ ಸಂಬಂಧಗಳನ್ನು ಪುನರುಚ್ಚರಿಸಿದರು. ಭಾರತ-ವಿಯೆಟ್ನಾಂ ಸಂಬಂಧಗಳನ್ನು ಸಾಂಸ್ಕೃತಿಕ ಮತ್ತು ನಾಗರರೀಕತೆಯ ಬೆಸುಗೆಯ ದೃಢವಾದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಇವು ಪರಸ್ಪರ ವಿಶ್ವಾಸ ಮತ್ತು ತಿಳುವಳಿಕೆಯಿಂದ ಗುರುತಿಸಲ್ಪಟ್ಟಿವೆ ಮತ್ತು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬಲವಾದ ಸಹಕಾರದಿಂದ ಗುರುತಿಸಲಾಗಿದೆ.

3. ಉಭಯ ದೇಶಗಳ ನಡುವಿನ ಇತ್ತೀಚಿನ ಉನ್ನತ ಮಟ್ಟದ ವಿನಿಮಯವು ಹಲವಾರು ಕ್ಷೇತ್ರಗಳಲ್ಲಿ ದೃಢವಾದ ಸಹಕಾರ, ರಕ್ಷಣೆ ಮತ್ತು ಭದ್ರತಾ ಸಂಬಂಧಗಳ ವಿಸ್ತರಣೆ, ನಿಕಟ ಆರ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳನ್ನು ರೂಪಿಸುವುದು ಮತ್ತು ಜನರು-ಜನರ ನಡುವಿನ ಸಂಬಂಧಗಳನ್ನು ಗಾಢವಾಗಿಸಿದೆ ಎಂದು ಸಭೆಯಲ್ಲಿ ಪ್ರಮುಖವಾಗಿ ಹೇಳಲಾಯಿತು.

4. ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ವೃದ್ಧಿಸಿರುವ ಮಾತುಕತೆಗಳನ್ನು ಗಮನಿಸಿ, ಸಾಗರ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಉಭಯ ನಾಯಕರು ಉಗ್ರವಾದ ಮತ್ತು ಭಯೋತ್ಪಾದನೆಯ ಬಗ್ಗೆ ಚರ್ಚಿಸಿದರು. ಈ ಭೀತಿಯನ್ನು ನಿಭಾಯಿಸಲು ನಿಕಟವಾಗಿ ಕೆಲಸ ಮಾಡಲು ಒಪ್ಪಿದರು.

5. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಇಚ್ಛಾಶಕ್ತಿಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಸಾಗರ ಕಾನೂನು (ಯುಎನ್ಸಿಎಲ್ಒಎಸ್) ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಆಧರಿಸಿದ ನಿಯಮ ಆಧಾರಿತ ಆದೇಶವನ್ನು ನಿರ್ವಹಿಸಲು ಇಬ್ಬರೂ ನಾಯಕರು ಬದ್ಧರಾಗಿದ್ದಾರೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಣೆ, ಓವರ್ಫ್ಲೈಟ್ ಮತ್ತು ನಿಯಮ ಆಧಾರಿತ ವ್ಯಾಪಾರದ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ.

6. 2020 ರ ಆಸಿಯಾನ್ನ ಅಧ್ಯಕ್ಷನಾಗಿ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 2020-2021ರ ಅವಧಿಯ ಖಾಯಂ ಅಲ್ಲದ ಸದಸ್ಯನಾಗಿ ವಿಯೆಟ್ನಾಂನೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸಿದ್ಧವಿರುವುದಾಗಿ ಪ್ರಧಾನಿ ಮೋದಿ ಅವರು ತಿಳಿಸಿದರು



(Release ID: 1592623) Visitor Counter : 89