ಪ್ರಧಾನ ಮಂತ್ರಿಯವರ ಕಛೇರಿ

ಮ್ಯಾನ್ಮಾರ್ ಕೌನ್ಸಿಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಮಾತುಕತೆ

Posted On: 03 NOV 2019 6:40PM by PIB Bengaluru

ಮ್ಯಾನ್ಮಾರ್ ಕೌನ್ಸಿಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಮಾತುಕತೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ನವೆಂಬರ್ 03 ರಂದು ನಡೆದ ಆಸಿಯಾನ್-ಇಂಡಿಯಾ ಶೃಂಗಸಭೆಯ ಅಂಚಿನಲ್ಲಿ ಮ್ಯಾನ್ಮಾರ್‌ನ ಕೌನ್ಸಿಲರ್ (ಅಧ್ಯಕ್ಷ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾದರು. ಸೆಪ್ಟೆಂಬರ್ 2017 ರಲ್ಲಿ ಮ್ಯಾನ್ಮಾರ್‌ಗೆ ಅವರು ಮಾಡಿದ ಕೊನೆಯ ಭೇಟಿಯನ್ನು ಮತ್ತು ಕೌನ್ಸಿಲರ್ ರವರು ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡರು. 2018 ರ ಜನವರಿಯಲ್ಲಿ ನಡೆದ ಆಸಿಯಾನ್-ಇಂಡಿಯಾ ಸ್ಮರಣಾರ್ಥ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ಪ್ರಮುಖ ಪಾಲುದಾರಿಕೆಯ ಪ್ರಗತಿಯ ಬಗ್ಗೆ ಇಬ್ಬರು ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ಭಾರತದ ‘ಲುಕ್ ಈಸ್ಟ್ ಪಾಲಿಸಿ’ ಮತ್ತು ನೈಬರ್ ಫರ್ಸ್ಟ್ ಪಾಲಿಸಿ (ನೆರೆಹೊರೆಯವರು ಮೊದಲು ನೀತಿ)ಗಳ ನಿರ್ಣಾಯಕ ಘಟ್ಟದಲ್ಲಿ ಮುಖ್ಯಪಾಲುದಾರರಾಗಿ ಭಾರತ ಮ್ಯಾನ್ಮಾರ್‌ಗೆ ನೀಡುವ ಆದ್ಯತೆಯನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಮ್ಯಾನ್ಮಾರ್‌ಗೆ ಮತ್ತು ಆಗ್ನೇಯ ಏಷ್ಯಾಕ್ಕೆ ಭೌತಿಕ ಸಂಪರ್ಕವನ್ನು ಸುಧಾರಿಸುವ ಭಾರತದ ನಿರಂತರ ಬದ್ಧತೆಯನ್ನು ಅವರು ಒತ್ತಿ ಹೇಳಿದರು, ರಸ್ತೆ, ಬಂದರು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸುವುದು ಸೇರಿದಂತೆ. ಮ್ಯಾನ್ಮಾರ್‌ನ ಪೊಲೀಸ್, ಮಿಲಿಟರಿ ಮತ್ತು ಪೌರಕಾರ್ಮಿಕರಿಗೆ ಹಾಗೂ ಅದರ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಾಮರ್ಥ್ಯ ವಿಸ್ತರಣೆಯನ್ನು ಭಾರತ ಬಲವಾಗಿ ಬೆಂಬಲಿಸುತ್ತಲೇ ಇತ್ತು. ಜನರ ಸಂಪರ್ಕವು ಜನರ ಸಹಭಾಗಿತ್ವವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎನ್ನುವುದು ನಾಯಕರ ಒಮ್ಮತ ಅಭಿಪ್ರಾಯವಾಗಿತ್ತು, ಹಾಗೆಯೇ ಉಭಯ ದೇಶಗಳ ನಡುವೆ ವಾಯು ಸಂಪರ್ಕದ ವಿಸ್ತರಣೆಯನ್ನು ಸ್ವಾಗತಿಸಿದರು ಮತ್ತು ನವೆಂಬರ್ 2019 ರ ಕೊನೆಯಲ್ಲಿ ಯಾಂಗೊನ್‌ನಲ್ಲಿ ಸಿಎಲ್‌ಎಂವಿ ದೇಶಗಳಿಗೆ (ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ) ಭಾರತ ಸರ್ಕಾರ ವ್ಯಾಪಾರ ಕಾರ್ಯಕ್ರಮದ ಆತಿಥ್ಯ ವಹಿಸುವ ಯೋಜನೆಗಳು ಸೇರಿದಂತೆ ಮ್ಯಾನ್ಮಾರ್‌ನಲ್ಲಿ ವ್ಯಾಪಾರಕ್ಕಾಗಿ ಇರುವ ಭಾರತದ ಹೆಚ್ಚುತ್ತಿರುವ ಆಸಕ್ತಿಯನ್ನು ಸ್ವಾಗತಿಸಿದರು.

ಕೌನ್ಸಿಲರ್ ದಾವ್ ಸೂಕಿ ಅವರು ಭಾರತದೊಂದಿಗಿನ ಸಹಭಾಗಿತ್ವಕ್ಕೆ ತಮ್ಮ ಸರ್ಕಾರವು ನೀಡಿರುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು ಮತ್ತು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ವಿಸ್ತರಣೆ ಮತ್ತು ಅಭಿವೃದ್ಧಿಯ ಆಳಕ್ಕೆ ಭಾರತದ ಸ್ಥಿರ ಮತ್ತು ನಿರಂತರ ಬೆಂಬಲವನ್ನು ಅವರು ಮೆಚ್ಚಿದರು.

ನಮ್ಮ ಪಾಲುದಾರಿಕೆಯ ನಿರಂತರ ವಿಸ್ತರಣೆಗೆ ಸ್ಥಿರ ಮತ್ತು ಶಾಂತಿಯುತ ಗಡಿ ಪ್ರಮುಖ ಆಧಾರವಾಗಿದೆ ಎಂದು ಇಬ್ಬರು ನಾಯಕರು ಒಪ್ಪಿಕೊಂಡರು. ಭಾರತ-ಮ್ಯಾನ್ಮಾರ್ ಗಡಿಯುದ್ದಕ್ಕೂ ದಂಗೆಕೋರ ಗುಂಪುಗಳು ಕಾರ್ಯನಿರ್ವಹಿಸಲು ಅವಕಾಶ ಸಿಗದಂತೆ ನೋಡಿಕೊಳ್ಳುವಲ್ಲಿ ಮ್ಯಾನ್ಮಾರ್‌ನ ಸಹಕಾರವು ಭಾರತಕ್ಕೆ ಅಮೂಲ್ಯ ಎಂದು ಪ್ರಧಾನಿ ಒತ್ತಿ ಹೇಳಿದರು.

ರಾಖೈನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, ಈ ಜುಲೈನಲ್ಲಿ ಮ್ಯಾನ್ಮಾರ್ ಸರ್ಕಾರಕ್ಕೆ ಹಸ್ತಾಂತರಿಸಲಾದ 250 ಪೂರ್ವನಿರ್ಮಿತ ಮನೆಗಳನ್ನು ನಿರ್ಮಿಸುವ ಮೊದಲ ಭಾರತೀಯ ಯೋಜನೆ ಪೂರ್ಣಗೊಂಡ ನಂತರ - ಈ ರಾಜ್ಯದಲ್ಲಿ ಹೆಚ್ಚಿನ ಸಾಮಾಜಿಕ-ಆರ್ಥಿಕ ಯೋಜನೆಗಳನ್ನು ಕೈಗೊಳ್ಳಲು ಭಾರತದ ಸಿದ್ಧತೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. ಸ್ಥಳಾಂತರಗೊಂಡ ಜನರ ಬಾಂಗ್ಲಾದೇಶದಿಂದ ರಾಖೈನ್ ರಾಜ್ಯದಲ್ಲಿರುವ ತಮ್ಮ ಮನೆಗಳಿಗೆ ತ್ವರಿತ, ಸುರಕ್ಷಿತ ಮತ್ತು ಸುಸ್ಥಿರ ಮರಳುವಿಕೆಯಲ್ಲಿ ಈ ಪ್ರದೇಶ, ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ಎಲ್ಲಾ ನೆರೆಯ ರಾಜ್ಯಗಳಾದ ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಹಿತಾಸಕ್ತಿಯಿದೆ ಎಂದು ಪ್ರಧಾನ ಮಂತ್ರಿ ಒತ್ತಿ ಹೇಳಿದರು.

ಮುಂದಿನ ವರ್ಷದಲ್ಲಿ ಉನ್ನತ ಮಟ್ಟದ ಸಂವಹನಗಳನ್ನು ಕಾಪಾಡಿಕೊಳ್ಳಲು ಉಭಯ ನಾಯಕರು ಒಪ್ಪಿಕೊಂಡರು, ಸಹಕಾರದ ಎಲ್ಲಾ ಸ್ತಂಭಗಳಾದ್ಯಂತ ಬಲವಾದ ಸಂಬಂಧಗಳು ಎರಡೂ ದೇಶಗಳ ಮೂಲಭೂತ ಹಿತಾಸಕ್ತಿಗಳಲ್ಲಿದೆ ಎಂದು ಹೇಳಿದರು.



(Release ID: 1592614) Visitor Counter : 81