ಪ್ರಧಾನ ಮಂತ್ರಿಯವರ ಕಛೇರಿ

ಜರ್ಮನಿಯ ಚಾನ್ಸಲರ್ ಜೊತೆ ಗಾಂಧಿ ಸ್ಮೃತಿಗೆ ಭೇಟಿ ನೀಡಿದ ಪ್ರಧಾನಮಂತ್ರಿ

Posted On: 01 NOV 2019 6:11PM by PIB Bengaluru

ಜರ್ಮನಿಯ ಚಾನ್ಸಲರ್ ಜೊತೆ ಗಾಂಧಿ ಸ್ಮೃತಿಗೆ ಭೇಟಿ ನೀಡಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜರ್ಮನಿಯ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲಾ ಅವರೊಂದಿಗೆ ನವದೆಹಲಿಯಲ್ಲಿಂದು ಗಾಂಧಿ ಸ್ಮೃತಿಗೆ ಭೇಟಿ ನೀಡಿದ್ದರು.

ಪ್ರಧಾನಿ ಅವರು, ಹೆಸರಾಂತ ಕಲಾವಿದ ಪದ್ಮಭೂಷಣ ಶ್ರೀ ರಾಮ್ ಸುತಾರ್ ಅವರು ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಜರ್ಮನಿಯ ಚಾನ್ಸಲರ್ ಅವರನ್ನು ಬರಮಾಡಿಕೊಂಡರು.

ಸ್ಥಳದ ಮಹತ್ವವನ್ನು ಡಾ. ಮರ್ಕೆಲಾ ಅವರಿಗೆ ವಿವರಿಸಿದ ಪ್ರಧಾನಿ ಅವರು, ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವಿತಾವಧಿಯ ಕೊನೆಯ ಕೆಲವು ತಿಂಗಳುಗಳನ್ನು ಕಳೆದ ಮತ್ತು ಅವರು 1948ರ ಜನವರಿ 30ರಂದು ಹತ್ಯೆಗೀಡಾದ ಸ್ಥಳವಿರುವ ಜಾಗವೇ ‘ಸ್ಮೃತಿ’ ಎಂದು ತಿಳಿಸಿದರು.

ವಿಶ್ವ ನಾಯಕರು ನಂತರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು, ಅಲ್ಲಿ ಖ್ಯಾತ ಕಲಾವಿದ ಶ್ರೀ ಉಪೇಂದ್ರ ಮಹಾರಥಿ ಮತ್ತು ಭಾರತ – ಹಂಗೇರಿಯಾದ ಚಿತ್ರಕಾರ, ಶಾಂತಿನಿಕೇತನದ ಶ್ರೀ ನಂದಾಲಾಲ್ ಬೋಸ್ ಅವರ ವಿದ್ಯಾರ್ಥಿ ಎಲಿಜಬತ್ ಬರ್ನರ್ ಅವರುಗಳು ಬಿಡಿಸಿದ ಚಿತ್ರಗಳು ಹಾಗೂ ಕಲಾಕೃತಿಗಳನ್ನು ವೀಕ್ಷಿಸಿದರು. ಉಭಯ ನಾಯಕರು ಗಾಂಧೀಜಿಯ ಎರಡು ತತ್ವಗಳಾದ ಅಹಿಂಸಾ ಮತ್ತು ಸತ್ಯಾಗ್ರಹವನ್ನು ಆಧರಿಸಿ ಶ್ರೀ ಬಿರದ್ ರಾಜಾರಾಮ್ ಯಾಜನಿಕ್ ಅವರು ಸೃಷ್ಟಿಸಿರುವ ಡಿಜಿಟಲ್ ಗ್ಯಾಲರಿ ಮೂಲಕ ನಡೆದರು.

ಉಭಯ ನಾಯಕರು ಮ್ಯೂಸಿಯಂನಲ್ಲಿ ಆಲ್ಬರ್ಟ್ ಐನ್ ಸ್ಟೈನ್, ಗಾಂಧೀಜಿ ಅವರಿಗೆ ಕಳುಹಿಸಿದ ಧ್ವನಿ ಮುದ್ರಿಕೆ ಸೇರಿದಂತೆ ಹಲವು ಡಿಜಿಟಲ್ ಅಳವಡಿಕೆಗಳನ್ನು ವೀಕ್ಷಿಸಿ, ಆಲಿಸಿದರು. 107 ರಾಷ್ಟ್ರಗಳಲ್ಲಿ ಹಾಡಿರುವ ‘ವೈಷ್ಣವ ಜನತೋ’ ಧ್ವನಿ ಮುದ್ರಿಕೆಯನ್ನು ಆಲಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲಾ ನಂತರ ಮಹಾತ್ಮ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೇ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.



(Release ID: 1592592) Visitor Counter : 102