ಪ್ರಧಾನ ಮಂತ್ರಿಯವರ ಕಛೇರಿ
ಜರ್ಮನಿಯ ಚಾನ್ಸಲರ್ ಭಾರತ ಭೇಟಿ ವೇಳೆ ಮಾಡಿದ ಜಂಟಿ ಹೇಳಿಕೆ
Posted On:
01 NOV 2019 3:20PM by PIB Bengaluru
ಜರ್ಮನಿಯ ಚಾನ್ಸಲರ್ ಭಾರತ ಭೇಟಿ ವೇಳೆ ಮಾಡಿದ ಜಂಟಿ ಹೇಳಿಕೆ
1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಜರ್ಮನಿ ಒಕ್ಕೂಟದ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಅವರು ಐದನೇ ಸುತ್ತಿನ ಅಂತರ ಸರ್ಕಾರ ಸಮಾಲೋಚನೆ (ಐಜಿಸಿ) ಸಲುವಾಗಿ ಅಕ್ಟೋಬರ್ 31ರಿಂದ ನವೆಂಬರ್ 1, 2019ರ ವರೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಮರ್ಕೆಲ್ ಅವರ ಜೊತೆ ವಿದೇಶಾಂಗ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ಮತ್ತು ಕೃಷಿ ಸಚಿವರುಗಳ ಹಾಗೂ ಅಧಿಕೃತ ನಿಯೋಗವಿತ್ತು. ಅಲ್ಲದೆ ಚಾನ್ಸಲರ್ ಮರ್ಕೆಲ್ ಅವರ ಜತೆ ಜರ್ಮನಿಯ ವಾಣಿಜ್ಯ ನಾಯಕರನ್ನೊಳಗೊಂಡ ನಿಯೋಗವೂ ಇತ್ತು. ಭಾರತ ಭೇಟಿಯ ವೇಳೆ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಅವರು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
2. ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾನ್ಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ನಿಯಮಗಳು, ಮುಕ್ತ ಹಾಗೂ ನ್ಯಾಯಯುತ ವ್ಯಾಪಾರ ಮತ್ತು ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ, ಪರಸ್ಪರ ವಿಶ್ವಾಸ ಮತ್ತು ಗೌರವ ನೀಡುವಂತಹ ಭಾರತ ಮತ್ತು ಜರ್ಮನಿ ಕಾರ್ಯತಂತ್ರ ಪಾಲುದಾರಿಕೆಯನ್ನು ಹೊಂದಲಿವೆ ಎಂದು ಪುನರುಚ್ಚರಿಸಿದರು. ಆವಿಷ್ಕಾರ ಮತ್ತು ಸರಹದ್ದು ತಂತ್ರಜ್ಞಾನದ ಮೂಲಕ ಡಿಜಿಟಲ್ ಪರಿವರ್ತನೆಗೆ ಜಂಟಿಯಾಗಿ ಮುನ್ನಡೆಯುವುದು, ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಹವಾಮಾನ ವೈಪರೀತ್ಯಕ್ಕೆ ಸಹಕಾರ ನೀಡುವ ಮೂಲಕ ಸುಸ್ಥಿರ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿ, ಕೌಶಲ್ಯ ಹೊಂದಿದ ಕಾರ್ಮಿಕರ ಕಾನೂನುಬದ್ಧ ಸಂಚಾರದ ಮೂಲಕ ಜನರ ನಡುವೆ ಸಂವಹನ ಸೃಷ್ಟಿಸುವುದು ಮತ್ತು ಬಹು ವಿಧದ ಸಂಸ್ಥೆಗಳ ಸಾಮರ್ಥ್ಯವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಮೂಲಕ ವಿಶ್ವಾಸಾರ್ಹ ಅಂತಾರಾಷ್ಟ್ರೀಯ ವ್ಯವಸ್ಥೆ ರೂಪಿಸಲು ನೆರವು ನೀಡುವುದು ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಸಮಾಲೋಚನೆಗಳು ನಡೆದವು.
(Release ID: 1592590)
Visitor Counter : 151