ಪ್ರಧಾನ ಮಂತ್ರಿಯವರ ಕಛೇರಿ

5ನೇ ಪೂರ್ವ ಆರ್ಥಿಕ ವೇದಿಕೆಯ ಮಹಾಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಭಾಷಾಂತರ (ಸೆಪ್ಟೆಂಬರ್ 05, 2019)

Posted On: 05 SEP 2019 7:48PM by PIB Bengaluru

5ನೇ ಪೂರ್ವ ಆರ್ಥಿಕ ವೇದಿಕೆಯ ಮಹಾಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಭಾಷಾಂತರ (ಸೆಪ್ಟೆಂಬರ್ 05, 2019)

 

ಘನತೆವೆತ್ತ ಅಧ್ಯಕ್ಷ ಪುಟಿನ್ ಅವರೇ,

ಅಧ್ಯಕ್ಷರಾದ ಬಟುಲ್ಗಾ ಅವರೇ,

ಪ್ರಧಾನಮಂತ್ರಿ ಅಬೆ ಅವರೇ,

ಪ್ರಧಾನಮಂತ್ರಿ ಮಹಾಥೀರ್ ಅವರೇ,

 

ಸ್ನೇಹಿತರೆ,

ನಮಸ್ಕಾರ,

ದೋಬ್ರೆ ದೆನ್! 

 

ವ್ಲಾಡಿವೋಸ್ಟಾಕ್‌ನ ಶಾಂತ ಮತ್ತು ಪ್ರಕಾಶಮಾನವಾದ ವಾತಾವರಣದಲ್ಲಿ ನಿಮ್ಮೊಂದಿಗೆ ಮಾತುಕತೆ ನಡೆಸುತ್ತಿರುವುದು ಆಹ್ಲಾದಕರ ಅನುಭವ ನೀಡಿದೆ. ಮುಂಜಾನೆಯ ಬೆಳಕು ಇಲ್ಲಿಂದ ಪಸರಿಸಿ ಇಡೀ ಜಗತ್ತನ್ನು ಚೈತನ್ಯಶೀಲಗೊಳಿಸುತ್ತದೆ. ಇಂದು ನಮ್ಮ ಬುದ್ಧಿಮತ್ತೆ ಹೊಸ ಶಕ್ತಿಯನ್ನು ಮತ್ತು ಹೊಸ ಆವೇಗವನ್ನು ಫಾರ್ ಈಸ್ಟ್ ಗೆ ಮಾತ್ರವಲ್ಲದೆ ಇಡೀ ಮಾನವ ಕುಲದ ಕಲ್ಯಾಣಕ್ಕಾಗಿ ಮಾಡುತ್ತಿರುವ ಪ್ರಯತ್ನಗಳಿಗೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ನನ್ನನ್ನು ಈ ಮಹತ್ವದ ಸಂದರ್ಭದಲ್ಲಿ ಭಾಗಿಯಾಗುವಂತೆ ಮಾಡಿದ, ನನ್ನ ಶ್ರೇಷ್ಠ ಮಿತ್ರ ಅಧ್ಯಕ್ಷ ಪುಟಿನ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷರು ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ನನಗೆ ಈ ಆಹ್ವಾನವನ್ನು ನೀಡಿದ್ದರು. 130 ಕೋಟಿ ಭಾರತೀಯರು ನನ್ನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ನಿಮ್ಮ ಆಹ್ವಾನಕ್ಕೆ ಅಂಚೆ ಮುದ್ರೆ ಒತ್ತಿ ಲಕೋಟೆ ಭದ್ರಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ, ಅಧ್ಯಕ್ಷ ಪುಟಿನ್ ಅವರು ನನ್ನನ್ನು ಸೇಂಟ್ ಪೀಟರ್ಸ್ ಬರ್ಗ್ ಆರ್ಥಿಕ ವೇದಿಕೆಗೆ ಆಹ್ವಾನಿಸಿದ್ದರು. ಯುರೋಪಿನ ಗಡಿನಾಡಿನಿಂದ  ಪೆಸಿಫಿಕ್‌ ಹೆಬ್ಬಾಗಿಲವರೆಗೆ, ಒಂದು ರೀತಿಯಲ್ಲಿ ನಾನು ಸಂಪೂರ್ಣ ಟ್ರಾನ್ಸ್-ಸೈಬೀರಿಯನ್ ಪ್ರಯಾಣವನ್ನು ಪೂರ್ಣಗೊಳಿಸಿದ್ದೇನೆ. ವ್ಲಾದಿವೋಸ್ಟಾಕ್ ಯುರೇಷಿಯಾ ಮತ್ತು ಪೆಸಿಫಿಕ್ ನ ಸಂಗಮವಾಗಿದೆ. ಇದು ಆರ್ಕೆಟಿಕ್ ಮತ್ತು ಉತ್ತರ ಸಮುದ್ರದ ಮಾರ್ಗಗಳಿಗೆ ಅವಕಾಶಗಳನ್ನು ಒದಗಿಸುತ್ತದೆ. ರಷ್ಯಾದ ಮುಕ್ಕಾಲು ಭಾಗ ಭೂಮಿ ಏಷ್ಯಾ ಆಗಿದೆ. ಫಾರ್ ಈಸ್ಟ್ ಈ ದೇಶದಲ್ಲಿ ಏಷ್ಯಾದ ಗುರುತುಗಳನ್ನು ಪುನಶ್ಚೇತನಗೊಳಿಸುತ್ತದೆ. ಕಾರಣ ಏನೆಂದರೆ, ಈ ವಲಯ ಕೇವಲ 6 ದಶಲಕ್ಷ ಜನಸಂಖ್ಯೆಯೊಂದಿಗೆ ಅಂದಾಜು ಭಾರತದ ದುಪ್ಪಟ್ಟು ಗಾತ್ರದಲ್ಲಿದೆ, ಆದರೆ ಈ ವಲಯ ಸ್ವಾಭಾವಿಕ ಸಂಪನ್ಮೂಲಗಳು ಅಂದರೆ ಖನಿಜ ಮತ್ತು ತೈಲ ಹಾಗೂ ಅನಿಲದಿಂದ ಕೂಡಿ ಶ್ರೀಮಂತವಾಗಿದೆ. ಇಲ್ಲಿನ ಜನರು ತಮ್ಮ ಕಠಿಣ ಪರಿಶ್ರಮ, ನಾವಿನ್ಯತೆ ಮತ್ತು ಧೈರ್ಯದಿಂದ ಪ್ರಕೃತಿಯ ಸವಾಲನ್ನು ಎದುರಿಸಿ ಹೊರಬಂದಿದ್ದಾರೆ. ಇದಷ್ಟೇ ಅಲ್ಲ, ವ್ಲಾದಿವೋಸ್ಟೋಕ್ ನ ನಿವಾಸಿಗಳು, ಫಾರ್ ಈಸ್ಟ್ ಜನತೆ ಕಲೆ, ವಿಜ್ಞಾನ, ಸಾಹಿತ್ಯ, ಕ್ರೀಡೆ, ಕೈಗಾರಿಕೆ ಮತ್ತು ಸಾಹನ ಚಟುವಟಿಕೆ ಸೇರಿ ಯಶಸ್ಸು ಸಾಧಿಸದ ಕ್ಷೇತ್ರವೇ ಇಲ್ಲ.  ಅದೇ ವೇಳೆ ಅವರು ರಷ್ಯಾ ಮತ್ತು ತಮ್ಮ ಇತರ ಸ್ನೇಹಿತರಿಗಾಗಿ ಹಲವು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಹೆಪ್ಪುಗಟ್ಟಿದ ಭೂಮಿಯನ್ನು ಹೂವಿನ ಹಾಸಿಗೆಯನ್ನಾಗಿ ಪರಿವರ್ತಿಸುವ ಮೂಲಕ ಸುವರ್ಣ ಭವಿಷ್ಯದ ಆಧಾರವನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಿನ್ನೆ, ಅಧ್ಯಕ್ಷ ಪುಟಿನ್ ಅವರೊಂದಿಗೆ ನಾನು 'ಫಾರ್ ಈಸ್ಟ್ ರಸ್ತೆಗಳು' ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದೆ. ಜನರಲ್ಲಿರುವ ಪ್ರತಿಭೆ, ವೈವಿಧ್ಯತೆ ಮತ್ತು ತಂತ್ರಜ್ಞಾನದ ಅಭಿವೃದ್ಧಿ ನನ್ನನ್ನು ತುಂಬಾ ಪ್ರಭಾವಿತಗೊಳಿಸಿದವು. ಇಲ್ಲಿ ಪ್ರಗತಿ ಮತ್ತು ಸಹಾರಕ್ಕೆ ವಿಪುಲ ಅವಕಾಶವಿದೆ ಎನಿಸಿತು.

 

ಸ್ನೇಹಿತರೆ,

ಭಾರತ ಮತ್ತು ಫಾರ್ ಈಸ್ಟ್ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ, ಅದು ಬಹಳ ಪುರಾತನವಾದ್ದು. ವ್ಲಾದಿವೋಸ್ಟಾಕ್ ನಲ್ಲಿ ತನ್ನ ರಾಜಭಾರ ಕಚೇರಿ ತೆರೆದ ಪ್ರಥಮ ರಾಷ್ಟ್ರ ಭಾರತ. ಆ ಸಮಯದಲ್ಲಿ ಮತ್ತು ಅದಕ್ಕಿಂತಲೂ ಹಿಂದೆ, ಭಾರತ ಮತ್ತು ರಷ್ಯಾ ನಡುವೆ ವಿಶ್ವಾಸ ಮೂಡಿತ್ತು. ಸೋವಿಯತ್ ರಷ್ಯಾದ ಕಾಲದಲ್ಲಿ ಅಲ್ಲಿಗೆ ಭೇಟಿ ನೀಡುವ ಇತರ ವಿದೇಶಿಯರಿಗೆ ನಿರ್ಬಂಧಗಳಿದ್ದಾಗಲೂ, ವ್ಲಾದಿವೋಸ್ಟಾಕ್ ಭಾರತೀಯ ನಾಗರಿಕರಿಗೆ ಮುಕ್ತವಾಗಿತ್ತು. ವ್ಲಾದಿವೋಸ್ಟಾಕ್ ಮೂಲಕ ಸಾಕಷ್ಟು ರಕ್ಷಣಾ ಮತ್ತು ಅಭಿವೃದ್ಧಿ ಸಾಧನಗಳು ಭಾರತವನ್ನು ತಲುಪುತ್ತಿದ್ದವು ಮತ್ತು ಇಂದು ಈ ಪಾಲುದಾರಿಕೆಯ ವೃಕ್ಷ ಆಳವಾಗಿ ಬೇರು ಬಿಟ್ಟಿದೆ. ಇದು ಎರಡೂ ದೇಶಗಳ ಜನರ ಪ್ರಗತಿಯ ಆಧಾರ ಸ್ತಂಭಗಳಾಗಿವೆ. ಭಾರತವು ಇಂಧನ ವಲಯ ಮತ್ತು ಇತರ ಸ್ವಾಭಾವಿಕ ಸಂಪನ್ಮೂಲ ಅಂದರೆ ವಜ್ರದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಮಾಡಿದೆ. ಶಖಾಲಿನ್ ತೈಲ ಕ್ಷೇತ್ರ ಭಾರತೀಯ ಹೂಡಿಕೆಯ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ.

 

ಸ್ನೇಹಿತರೆ,

ಅಧ್ಯಕ್ಷ ಪುಟಿನ್  ಫಾರ್ ಈಸ್ಟ್ ನೊಂದಿಗೆ ಹೊಂದಿರುವ ಒಲವು ಮತ್ತು ಅವರ ದೃಷ್ಟಿಕೋನವು ಈ ಪ್ರದೇಶಕ್ಕೆ ಮಾತ್ರವಲ್ಲದೆ ಭಾರತದಂತಹ ಪಾಲುದಾರರಿಗೂ ಅಭೂತಪೂರ್ವ ಅವಕಾಶಗಳನ್ನು ತಂದಿದೆ. ಅವರು ರಷ್ಯಾದ ಫಾರ್ ಈಸ್ಟ್ ಅಬಿವೃದ್ಧಿ 21ನೇ ಶತಮಾನದಲ್ಲಿ ರಾಷ್ಟ್ರೀಯ ಆದ್ಯತೆ ಎಂದು ಈಗಾಗಲೇ ಘೋಷಿಸಿದ್ದಾರೆ. ಆರ್ಥಿಕತೆ ಅಥವಾ ಶಿಕ್ಷಣ, ಆರೋಗ್ಯ ಅಥವಾ ಕ್ರೀಡೆ, ಸಂಸ್ಕೃತಿ ಅಥವಾ ಸಂವಹನ, ವ್ಯಾಪಾರ ಅಥವಾ ಸಂಪ್ರದಾಯ ಯಾವುದೇ ಇರಲಿ, ಜೀವನದ ಪ್ರತಿಯೊಂದು ಅಂಶವನ್ನು ಉತ್ತಮಗೊಳಿಸಲು ಪ್ರೇರೇಪಿಸುವ ಪ್ರಯತ್ನವೇ ಇಲ್ಲಿ ಅವರ ಸಮಗ್ರ ವಿಧಾನವಾಗಿದೆ. ಒಂದೆಡೆ ಹೂಡಿಕೆಗೆ ಬಾಗಿಲು ತೆರೆದಿದ್ದಾರೆ ಮತ್ತೊಂದೆಡೆ ಸಾಮಾಜಿಕ ವಲಯಗಳಿಗೆ ಸಮಾನವಾದ ಆದ್ಯತೆ ಮತ್ತು ಮಹತ್ವ ನೀಡಿದ್ದಾರೆ. ನಾನು ಸ್ವಯಂ ಅವರ ಮುನ್ನೋಟದಿಂದ ಸಂತುಷ್ಟನಾಗಿದ್ದೇನೆ ಮತ್ತು ಅದನ್ನು ವ್ಯಕ್ತಪಡಿಸಿಯೂ ಇದ್ದೇನೆ. ಭಾರತವು ಈ ನಿಟ್ಟಿನಲ್ಲಿ ರಷ್ಯಾದ ಹೆಜ್ಜೆಯೊಂದಿಗೆ ಹೆಜ್ಜೆಯಿಟ್ಟು ನಡೆಯಲು ಇಚ್ಛಿಸುತ್ತದೆ. ನನ್ನ ಅನುಭವದಲ್ಲಿ,   ಫಾರ್ ಈಸ್ಟ್ ಮತ್ತು ವ್ಲಾದಿವೋಸ್ಟಾಕ್‌ನ ತ್ವರಿತ, ಸಮತೋಲಿತ ಮತ್ತು ಅಂತರ್ಗತ ಅಭಿವೃದ್ಧಿಯ ಕುರಿತ ಅಧ್ಯಕ್ಷ ಪುಟಿನ್ ಅವರ ದೃಷ್ಟಿಕೋನವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಏಕೆಂದರೆ ಅದು ವಾಸ್ತವಿಕವಾಗಿದೆ ಮತ್ತು ಅದರ ಅಮೂಲ್ಯವಾದ ಸಂಪನ್ಮೂಲಗಳು ಮತ್ತು ಇಲ್ಲಿನ ಜನರ ಅಪಾರ ಪ್ರತಿಭೆಗಳಿಂದ ಬೆಂಬಲಿತವಾಗಿದೆ. ಅವರ ದೃಷ್ಟಿ ಈ ಪ್ರದೇಶದ ಬಗ್ಗೆ ಮತ್ತು ಇಲ್ಲಿನ ಜನರ ಮೇಲೆ ಅವರಿಗಿರುವ ಗೌರವ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿಯೂ ನಾವು ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ಮಂತ್ರದೊಂದಿಗೆ ನವ ಭಾರತವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದೇವೆ. 2024 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ನಮ್ಮ ಸಂಕಲ್ಪವನ್ನು ಈಡೇರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಸಹಭಾಗಿತ್ವ ಮತ್ತು ಈ ಪ್ರದೇಶದೊಂದಿಗಿನ ಅದರ ಪ್ರತಿಭೆ ಒಂದು ಐತಿಹಾಸಿಕವಾಗಿದ್ದು ‘ಒಂದು ಪ್ಲಸ್ ಒಂದು ಹನ್ನೊಂದು’ಎಂಬ ಅವಕಾಶಕ್ಕೆ ಸಮನಾಗಿರುತ್ತದೆ.

 

ಸ್ನೇಹಿತರೆ,

ಈ ಪ್ರೇರಣೆಯೊಂದಿಗೆ, ಪೂರ್ವ ಆರ್ಥಿಕ ವೇದಿಕೆಯಲ್ಲಿ ನಮ್ಮ ಭಾಗವಹಿಸುವಿಕೆಗಾಗಿ ನಾವು ಅಭೂತಪೂರ್ವ ಸಿದ್ಧತೆಗಳನ್ನು ಮಾಡಿದ್ದೇವೆ. ಹಲವು ಸಚಿವರುಗಳು, ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 150 ವಾಣಿಜ್ಯ ನಾಯಕರು ಇಲ್ಲಿಗೆ ಆಗಮಿಸಿದ್ದಾರೆ. ಅವರು ಫಾರ್ ಈಸ್ಟ್ ನ ಅಧ್ಯಕ್ಷರ ವಿಶೇಷ ಪ್ರತಿನಿಧಿ, ಅದರ ಎಲ್ಲ 11 ಗೌರ್ನರ್ ಗಳು ಮತ್ತು ವಾಣಿಜ್ಯ ನಾಯಕರುಗಳನ್ನು  ಭೇಟಿ ಮಾಡಿದ್ದಾರೆ. ರಷ್ಯಾದ ಸಚಿವರು ಮತ್ತು ಫಾರ್ ಈಸ್ಟ್ ವಾಣಿಜ್ಯ ನಾಯಕರು ಸಹ ಭಾರತಕ್ಕೆ ಭೇಟಿ ನೀಡಿದ್ದರು. ಈ ಎಲ್ಲ ಪ್ರಯತ್ನಗಳೂ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಇಂಧನದಿಂದ ಆರೋಗ್ಯದವರೆಗೆ, ಶಿಕ್ಷಣದಿಂದ ಕೌಶಲ ಅಭಿವೃದ್ಧಿವರೆಗೆ, ಗಣಿಯಿಂದ ಮರದವೆಗೆ, ಹಲವು ಕ್ಷೇತ್ರಗಳಲ್ಲಿ ಸುಮಾರು 50 ವಾಣಿಜ್ಯ ಒಪ್ಪಂದಗಳನ್ನು ಮಾಡಲಾಗಿದೆ. ಅವರು ಹಲವು ಶತಕೋಟಿ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆ ಇದೆ.

 

ಸ್ನೇಹಿತರೆ,

ಫಾರ್ ಈಸ್ಟ್ ನ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲು ಭಾರತವು 1 ಶತಕೋಟಿ ಡಾಲರ್ ಸಾಲವನ್ನು (ಲೈನ್ ಆಫ್ ಕ್ರೆಡಿಟ್) ಒದಗಿಸಲಿದೆ. ಇದೇ ಮೊದಲ ಬಾರಿಗೆ ನಾವು ಒಂದು ದೇಶದ ನಿರ್ದಿಷ್ಟ ವಲಯಕ್ಕೆ ಲೈನ್ ಆಫ್ ಕ್ರೆಡಿಟ್ ನೀಡುತ್ತಿದ್ದೇವೆ. ನನ್ನ ಸರ್ಕಾರದ ಪೂರ್ವದತ್ತ ಕ್ರಮದ ನೀತಿ,ವಾಸ್ತವವಾಗಿ ಪೂರ್ವ ಏಷ್ಯಾದೊಂದಿಗೆ ಕಾರ್ಯಕ್ರಮಗಳನ್ನು ಹೊಂದಿದೆ. ಇಂದಿನ ಈ ಪ್ರಕಟಣೆ ನಮ್ಮ ಟೇಕ್ ಆಫ್ ಪಾಯಿಂಟ್ ಆಕ್ಟ್ ಫಾರ್ ಈಸ್ಟ್ ನೀತಿಯಾಗಿದೆ ಮತ್ತು ಈ ಹೆಜ್ಜೆ ನಮ್ಮ ಆರ್ಥಿಕ ಶಿಷ್ಟಾಚಾರಕ್ಕೆ ಹೊಸ ಆಯಾಮ ಒದಗಿಸುತ್ತದೆ ಎಂಬುದು ನನ್ನ ಬಲವಾದ ವಿಶ್ವಾಸವಾಗಿದೆ. ನಮ್ಮ ಸ್ನೇಹಪರ ದೇಶಗಳ ಪ್ರದೇಶಗಳ ಅಭಿವೃದ್ಧಿಗೆ ನಾವು ಅವರ ಆದ್ಯತೆಗಳಿಗೆ ಅನುಗುಣವಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ. 

 

ಸ್ನೇಹಿತರೆ, 

ನಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಪ್ರಕೃತಿಯಿಂದ ನಾವು ತೆಗೆದುಕೊಳ್ಳಬೇಕು ಎಂಬುದನ್ನು ಪ್ರಾಚೀನ ಭಾರತೀಯ ನಾಗರಿಕತೆಯ ಮೌಲ್ಯಗಳು ನಮಗೆ ಕಲಿಸಿವೆ, ನೈಸರ್ಗಿಕ ಸಂಪನ್ಮೂಲಗಳ ಉತ್ತೇಜನದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಶತಮಾನಗಳಿಂದ ಪ್ರಕೃತಿಯೊಂದಿಗಿನ ಈ ಒಡನಾಟವು ನಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ.

 

ಸ್ನೇಹಿತರೇ,  

ಭಾರತೀಯರು ವಲಸೆ ಹೋಗಿ ನೆಲೆಸಿರುವ ದೇಶಗಳ ನಾಯಕರು ನಾನು ಅವರನ್ನು ಭೇಟಿಯಾದಾಗಲೆಲ್ಲಾ ಭಾರತೀಯರ ಶ್ರಮ, ಪ್ರಾಮಾಣಿಕತೆ, ಶಿಸ್ತು ಮತ್ತು ನಿಷ್ಠೆಯನ್ನು ಹೊಗಳುತ್ತಾರೆ. ಭಾರತೀಯ ಕಂಪನಿಗಳು, ವಾಣಜ್ಯೋದ್ಯಮಿಗಳು, ವಿಶ್ವದಾದ್ಯಂತ ಹಲವು ವಲಯಗಳಲ್ಲಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಆಸ್ತಿಯ ಸೃಷ್ಟಿಯಲ್ಲಿ ನೆರವಾಗಿದ್ದಾರೆ. ಭಾರತೀಯರು ಮತ್ತು ನಮ್ಮ ಕಂಪನಿಗಳು ಸದಾ ಸ್ಥಳೀಯ ಸೂಕ್ಷ್ಮತೆಗಳಿಗೆ ಗೌರವ ನೀಡಿದ್ದಾರೆ ಮತ್ತು ಅದು ನಮ್ಮ ಸಂಸ್ಕೃತಿ ಕೂಡ. ಭಾರತೀಯರ ಹಣ, ಬೆವರು, ಪ್ರತಿಭೆ ಮತ್ತು ವೃತ್ತಿಪರತೆ ಫಾರ್ ಈಸ್ಟ್ ನಲ್ಲಿ ತ್ವರಿತ ಅಭಿವೃದ್ಧಿಯನ್ನು ತರಲಿದೆ. ಭಾರತವು ಪೂರ್ವ ಆರ್ಥಿಕ ವೇದಿಕೆಯಲ್ಲಿ ಸಾಧಿಸಿರುವ ಅದ್ಭುತ ಫಲಿತಾಂಶವನ್ನು ಮುನ್ನಡೆಸಿಕೊಂಡು ಹೋಗಲು ನಾನು ಫಾರ್ ಈಸ್ಟ್ ನ ಎಲ್ಲ 11 ಗೌರ್ನರ್ ಗಳನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತೇನೆ

 

ಸ್ನೇಹಿತರೇ,

ನಾನು ಮತ್ತು ಅಧ್ಯಕ್ಷ ಪುಟಿನ್  ಇಬ್ಬರೂ ಭಾರತ – ರಷ್ಯಾ ಸಹಕಾರಕ್ಕೆ ಮಹತ್ವಾಕಾಂಕ್ಷೆಯ ಗುರಿಯನ್ನು ಹಾಕಿಕೊಂಡಿದ್ದೇವೆ. ನಾವು ನಮ್ಮ ಬಾಂಧವ್ಯಕ್ಕೆ ಹೊಸ ಆಯಾಮ ನೀಡಿದ್ದೇವೆ ಮತ್ತು ಅವುಗಳನ್ನು ವೈವಿಧ್ಯಮಯಗೊಳಿಸಿದ್ದೇವೆ.  ಸರ್ಕಾರದ ಡೊಮೈನ್ ಹೊರಗಿನ ಡೊಮೈನ್ ನಲ್ಲಿ ಬಾಂಧವ್ಯವನ್ನು ತಂದಿರುವುದು ಖಾಸಗಿ ಕೈಗಾರಿಕೆಗಳ ನಡುವೆ ಬಲಿಷ್ಠ ಸಹಕಾರಕ್ಕೆ ಇಂಬು ನೀಡಿದೆ. ನಾವು ರಾಜ್ಯಗಳು ಮತ್ತು ಪ್ರದೇಶಗಳಿಗೆ ತಂದ ಬಂಡವಾಳ ಸಂಬಂಧಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ವಿಶೇಷ ಮತ್ತು ಸವಲತ್ತು ಪಡೆದ ವ್ಯೂಹಾತ್ಮಕ ಸಹಭಾಗಿತ್ವದ ಚೌಕಟ್ಟಿನ ರೀತ್ಯ ನಾವು ಪ್ರತಿ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸಿದ್ದೇವೆ ಮತ್ತು ರೂಪಿಸಿದ್ದೇವೆ. ಒಟ್ಟಾಗಿ ನಾವು ಆಗಸದ ಅಂತರವನ್ನು ದಾಟುತ್ತೇವೆ ಮತ್ತು ಸಮುದ್ರದ ಆಳದಿಂದ ಸಮೃದ್ಧಿಯನ್ನು ಹೊರತರುತ್ತೇವೆ.

 

ಸ್ನೇಹಿತರೇ, 

ನಾವು ಭಾರತ – ಪೆಸಿಫಿಕ್ ವಲಯದಲ್ಲಿ ಹೊಸ ಸಹಕಾರದ ಯುಗವನ್ನು ಆರಂಭಿಸುವ ಹೊಸ್ತಿಲಲ್ಲಿದ್ದೇವೆ. ವ್ಲಾದಿವೋಸ್ಟಾಕ್ ಮತ್ತು ಚೆನ್ನೈ ನಡುವೆ ಹಡಗುಗಳು ಸಂಚಾರ ಆರಂಭಿಸಿದಾಗ ಮತ್ತು ವ್ಲಾದಿವೋಸ್ಟಾಕ್ ಈಶಾನ್ಯ ಏಷ್ಯಾ ಮಾರುಕಟ್ಟೆಗೆ ಭಾರತಕ್ಕೆ ಚಿಮ್ಮುವ ವೇದಿಕೆಯಾದಾಗ, ಭಾರತ-ರಷ್ಯಾ ಪಾಲುದಾರೆ ಮತ್ತಷ್ಟು ಬಲವಾಗಿ ಅರಳಿದಾಗ ಅಭಿವೃದ್ಧಿ ಕಾಣುತ್ತದೆ.  ಆಗ ಫಾರ್ ಈಸ್ಟ್ ಒಂದೆಡೆ ಯುರೇಷಿಯಾ ಒಕ್ಕೂಟದ ಸಂಗಮನವಾಗಲಿದೆ ಇನ್ನೊಂದೆಡೆ ಭಾರತ- ಪೆಸಿಫಿಕ್ ಗೆ ಮುಕ್ತ ಮತ್ತು ಸಮಗ್ರವೂ ಆಗಲಿದೆ.  ವಲಯದಲ್ಲಿನ ನಮ್ಮ ಬಾಂಧವ್ಯ ನಿಯಮಾಧಾರಿತ ಶ್ರೇಣಿಯದಾಗಿದ್ದು, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿರ್ಬಂಧಿಸುತ್ತದೆ.

 

ಸ್ನೇಹಿತರೇ, 

ಖ್ಯಾತ ತತ್ವಜ್ಞಾನಿ ಮತ್ತು ಲೇಖಕ ಟಾಲ್ ಸ್ತಾಯ್ ಭಾರತದ ವೇದಗಳ ವಿಪುಲ ಜ್ಞಾನದಿಂದ  ಪ್ರಭಾವಿತರಾಗಿದ್ದರು ಮತ್ತು ಅವರು ಈ ವಾಕ್ಯವನ್ನು ಬಹುವಾಗಿ ಇಷ್ಟಪಟ್ಟಿದ್ದರು. एकम सत विप्रःबहुधा वदन्ति।। ಅವರದೇ ಪದಗಳಲ್ಲಿ ಅವರು ಇದನ್ನು ಈ ರೀತಿ ವಿವರಿಸಿದ್ದಾರೆ.

"ಅಸ್ತಿತ್ವದಲ್ಲಿರುವುದೆಲ್ಲವೂ ಒಂದೇ. ಜನರು ಅದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ."

 

ಈ ವರ್ಷ ಇಡೀ ವಿಶ್ವವೇ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ಆಚರಿಸಲಿದೆ. ಟಾಲ್ ಸ್ತಾಯ್ ಮತ್ತು ಗಾಂಧಿಜೀ ಪರಸ್ಪರರ ಮೇಲೆ ಅಳಿಸಲಾಗದ ಪ್ರಭಾವ ಬಿಟ್ಟುಹೋಗಿದ್ದಾರೆ. ಭಾರತ ಮತ್ತು ರಷ್ಯಾದ ಈ ಹಂಚಿಕೆಯ ಸ್ಫೂರ್ತಿಯನ್ನು ನಾವು ಬಲಪಡಿಸೋಣ ಮತ್ತು ಪರಸ್ಪರರ ಪ್ರಗತಿಯಲ್ಲಿ ಹೆಚ್ಚಿನ ಪಾಲುದಾರರಾಗೋಣ. ನಮ್ಮ ಹಂಚಿಕೆಯ ನಿಲುವು ಮತ್ತು ಪ್ರಪಂಚದ ಸ್ಥಿರ ಮತ್ತು ಸುಭದ್ರ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಶ್ರಮಿಸೋಣ. ಇದು ನಮ್ಮ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ. ನಾನು ರಷ್ಯಾಗೆ ಬಂದಾಗಲೆಲ್ಲಾ, ನಾನು ಇಲ್ಲಿ ಭಾರತದ ಬಗ್ಗೆ ಇರುವ ಗೌರವ, ಪ್ರೀತಿ ಮತ್ತು ಸ್ನೇಹವನ್ನು ಕಾಣುತ್ತೇನೆ. ಇಂದಿಗೂ ಕೂಡ, ನಾನು ಈ ಅಮೂಲ್ಯ ಅನುಭವದ ಮತ್ತು ಆಳವಾದ ಸಹಕಾರ ಸಂಕಲ್ಪದ ಉಡುಗೊರೆಯೊಂದಿಗೆ ಹೋಗುತ್ತೇನೆ.  ನಾನು ನನ್ನ ಗೆಳೆಯ ಅಧ್ಯಕ್ಷ ಪುಟಿನ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ. ನಾವು ಭೇಟಿ ಆದಾಗಲೆಲ್ಲಾ, ನಾವು ಮುಕ್ತ ಮನಸ್ಸಿನಿಂದ ಭೇಟಿಯಾಗುತ್ತೇವೆ ಮತ್ತು ಹೆಚ್ಚು ಸಮಯವನ್ನು ಸಮರ್ಪಿಸುತ್ತೇವೆ. ನಿನ್ನೆ ಈ ಎಲ್ಲ ಕಾರ್ಯಕ್ರಮಗಳ ನಡುವೆಯೂ ಅವರು ನನ್ನೊಂದಿಗೆ ವಿವಿಧ ಕಡೆಗಳಲ್ಲಿ ಹಲವು ಗಂಟೆಗಳ ಕಾಲ ಕಳೆದರು ಮತ್ತು ರಾತ್ರಿ ಒಂದು ಗಂಟೆಯವರೆಗೂ ನಾವು ಜೊತೆಯಲ್ಲಿದ್ದೆವು. ಅದು ಅವರು ನನ್ನ ಬಗ್ಗೆ ಅಷ್ಟೇ ಅಲ್ಲ, ಭಾರತದ ಬಗ್ಗೆ ಇಟ್ಟಿರುವ ಪ್ರೀತಿಯನ್ನೂ ತೋರಿಸುತ್ತದೆ. ನಾನು ಭಾರತದಲ್ಲಿ ಮತ್ತು ಇಲ್ಲಿ ಸಾಂಸ್ಕೃತಿಕ ಸಾಮ್ಯತೆಯನ್ನು ಕಾಣುತ್ತೇನೆ. ನನ್ನ ತವರು ರಾಜ್ಯ ಗುಜರಾತ್ ನಲ್ಲಿ ನಾವು ಬಾಯ್ ಬಾಯ್ ಹೇಳುವ ಬದಲು ಅವಾಜೋ ಎಂದು ಹೇಳುತ್ತೇವೆ. ಇದರ ಅರ್ಥ ಶೀಘ್ರ ಮರಳಿ ಬನ್ನಿ ಎಂದು. ಇಲ್ಲಿ ನೀವು ಅದನ್ನು ದಸ್ವಿದಾನಿಯಾ ಎನ್ನುತ್ತೀರಿ.

 

ಹೀಗಾಗಿ ನಾನು ಪ್ರತಿಯೊಬ್ಬರಿಗೂ ಹೇಳುತ್ತೇನೆ – ಅವಾಜೋ – ದಸ್ವಿದಾನಿಯ.

 

ತುಂಬಾ ಧನ್ಯವಾದಗಳು! 

ಸ್ಪಸಿಬೋ ಬೋಲ್ಸೋಯ್ !



(Release ID: 1588012) Visitor Counter : 78